ಒಂದನೇ ಅರಸು 4:1-34

  • ಸೊಲೊಮೋನನ ಆಡಳಿತ (1-19)

  • ಸೊಲೊಮೋನನ ಆಳ್ವಿಕೆಯಲ್ಲಿ ಸುಖನೆಮ್ಮದಿ (20-28)

    • ದ್ರಾಕ್ಷಿಯ ತೋಟದಲ್ಲಿ ಮತ್ತು ಅಂಜೂರದ ಮರದ ಕೆಳಗೆ ಸಂರಕ್ಷಣೆ (25)

  • ಸೊಲೊಮೋನನ ವಿವೇಕ ಮತ್ತು ನಾಣ್ಣುಡಿಗಳು (29-34)

4  ರಾಜ ಸೊಲೊಮೋನ ಇಡೀ ಇಸ್ರಾಯೇಲನ್ನ ಆಳಿದ.+  ಅವನ ಅಧಿಕಾರಿಗಳು ಯಾರಂದ್ರೆ: ಚಾದೋಕನ+ ಮಗ ಅಜರ್ಯ. ಇವನು ಪುರೋಹಿತನಾಗಿದ್ದ.  ಶೀಷನ ಮಕ್ಕಳು ಎಲೀಹೋರೆಫ್‌ ಮತ್ತು ಅಹೀಯ. ಇವರು ಕಾರ್ಯದರ್ಶಿಗಳು.+ ಅಹೀಲೂದನ ಮಗ ಯೆಹೋಷಾಫಾಟ.+ ಇವನು ದಾಖಲೆಗಾರ.  ಯೆಹೋಯಾದನ ಮಗ ಬೆನಾಯ.+ ಇವನು ಸೇನಾಪತಿ. ಪುರೋಹಿತರಾದ ಚಾದೋಕ್‌ ಮತ್ತು ಎಬ್ಯಾತಾರ್‌.+  ನಾತಾನನ+ ಮಗ ಅಜರ್ಯ. ಇವನು ಪ್ರದೇಶಾಧಿಪತಿಗಳ ಮೇಲ್ವಿಚಾರಕ. ನಾತಾನನ ಮಗ ಜಾಬೂದ್‌. ಇವನು ಪುರೋಹಿತ ಮತ್ತು ರಾಜನ ಸ್ನೇಹಿತ.+  ಅಹೀಷಾರ ಅರಮನೆಯ ಮೇಲ್ವಿಚಾರಕ. ಅಬ್ದನ ಮಗ ಅದೋನೀರಾಮ+ ಬಿಟ್ಟಿ ಕೆಲಸ ಮಾಡ್ತಿದ್ದವರ+ ಮೇಲ್ವಿಚಾರಕ.  ಸೊಲೊಮೋನನಿಗೂ ಅವನ ಎಲ್ಲಾ ಕುಟುಂಬದವ್ರಿಗೂ ಆಹಾರ ಕೊಡೋಕೆ ಇಡೀ ಇಸ್ರಾಯೇಲಿನಲ್ಲಿ 12 ಪ್ರದೇಶಾಧಿಪತಿಗಳು ಇದ್ರು. ಅವ್ರಲ್ಲಿ ಒಬ್ಬೊಬ್ಬರಿಗೂ ವರ್ಷದಲ್ಲಿ ಒಂದೊಂದು ತಿಂಗಳು ಆಹಾರ ಕೊಡೋ ಜವಾಬ್ದಾರಿ ಇತ್ತು.+  ಅವರು ಯಾರಂದ್ರೆ, ಎಫ್ರಾಯೀಮ್‌ ಬೆಟ್ಟ ಪ್ರದೇಶದ ಮೇಲೆ ಅಧಿಕಾರ ಇದ್ದ ಹೂರನ ಮಗ.  ಮಾಕಚ್‌, ಶಾಲ್ಬೀಮ್‌,+ ಬೇತ್‌-ಷೆಮೆಷ್‌ ಮತ್ತು ಏಲೋನ್‌-ಬೇತ್‌-ಹಾನಾನಿನ ಮೇಲೆ ಅಧಿಕಾರ ಇದ್ದ ದೆಕೆರನ ಮಗ. 10  ಅರುಬ್ಬೋತಿನ ಮೇಲೆ ಅಧಿಕಾರ ಇದ್ದ ಹೆಸೆದನ ಮಗ. (ಅವನಿಗೆ ಸೋಕೋವಿನ ಮೇಲೆ ಮತ್ತು ಹೇಫೆರಿನ ಎಲ್ಲ ಪ್ರದೇಶಗಳ ಮೇಲೆ ಅಧಿಕಾರ ಇತ್ತು.) 11  ದೋರಿನ ಎಲ್ಲ ಇಳಿಜಾರು ಪ್ರದೇಶಗಳ ಮೇಲೆ ಅಧಿಕಾರ ಇದ್ದ ಅಬೀನಾದಾಬನ ಮಗ. (ಮುಂದೆ ಇವನು ಸೊಲೊಮೋನನ ಮಗಳಾದ ಟಾಫತ್‌ನ ಮದುವೆಯಾದ.) 12  ತಾನಕ್‌, ಮೆಗಿದ್ದೋ+ ಮತ್ತು ಬೇತ್‌-ಷೆಯಾನಿನ+ ಮೇಲೆ ಅಧಿಕಾರ ಇದ್ದ ಅಲ್ಲದೆ ಬೇತ್‌-ಷೆಯಾನಿನಿಂದ ಆಬೇಲ್‌-ಮೆಹೋಲಾ ತನಕ ಮತ್ತು ಯೊಕ್ಮೆಯಾಮ್‌+ ಪ್ರದೇಶದ ತನಕ ಅಧಿಕಾರ ಇದ್ದ ಅಹೀಲೂದನ ಮಗ ಬಾಣಾ. ಈ ಬೇತ್‌-ಷೆಯಾನ್‌ ಚಾರೆತಾನ್‌ ಹತ್ರ ಇತ್ತು, ಇಜ್ರೆಯೇಲ್‌ ಪ್ರದೇಶದ ಕೆಳಗಿತ್ತು. 13  ರಾಮೋತ್‌-ಗಿಲ್ಯಾದಿನ+ ಮೇಲೆ ಅಧಿಕಾರ ಇದ್ದ ಗೆಬೆರನ ಮಗ. (ಗಿಲ್ಯಾದಿನಲ್ಲಿದ್ದ+ ಮನಸ್ಸೆಯ ಮಗ ಯಾಯೀರನ+ ಡೇರೆಗಳಿರೋ ಎಲ್ಲ ಗ್ರಾಮಗಳು ಇವನ ಅಧಿಕಾರದ ಕೆಳಗೆ ಇದ್ವು. ಅಷ್ಟೇ ಅಲ್ಲ, ಬಾಷಾನಿನ+ ಅರ್ಗೋಬ್‌+ ಪ್ರದೇಶನೂ ಅವನ ಅಧಿಕಾರದ ಕೆಳಗಿತ್ತು. ಅದ್ರಲ್ಲಿ ಭದ್ರ ಗೋಡೆಗಳಿದ್ದ ಮತ್ತು ತಾಮ್ರದ ಕಂಬಿಗಳಿದ್ದ 60 ದೊಡ್ಡ ಪಟ್ಟಣಗಳು ಸೇರಿದ್ದವು.) 14  ಮಹನಯಿಮಿನ+ ಮೇಲೆ ಅಧಿಕಾರ ಇದ್ದ ಇದ್ದೋವನ ಮಗ ಅಹೀನಾದಾಬ. 15  ನಫ್ತಾಲಿ ಪ್ರಾಂತ್ಯದ ಮೇಲೆ ಅಧಿಕಾರ ಇದ್ದ ಅಹೀಮಾಚ. (ಇವನು ಸೊಲೊಮೋನನ ಇನ್ನೊಬ್ಬ ಮಗಳಾದ ಬಾಸೆಮತ್‌ನ ಮದುವೆಯಾದ.) 16  ಅಶೇರ್‌ ಪ್ರಾಂತ್ಯ ಮತ್ತು ಬೆಯಾಲೋತಿನ ಮೇಲೆ ಅಧಿಕಾರ ಇದ್ದ ಹೂಷೈಯ ಮಗ ಬಾಣ. 17  ಇಸ್ಸಾಕಾರ್‌ ಪ್ರಾಂತ್ಯದ ಮೇಲೆ ಅಧಿಕಾರ ಇದ್ದ ಫಾರೂಹನ ಮಗ ಯೆಹೋಷಾಫಾಟ. 18  ಬೆನ್ಯಾಮೀನ್‌+ ಪ್ರಾಂತ್ಯದ ಮೇಲೆ ಅಧಿಕಾರ ಇದ್ದ ಏಲನ ಮಗ ಶಿಮ್ಮಿ.+ 19  ಅಮೋರಿಯರ ರಾಜನಾಗಿರೋ ಸೀಹೋನನ+ ಮತ್ತು ಬಾಷಾನಿನ ರಾಜನಾಗಿರೋ ಓಗನ+ ಪ್ರದೇಶವಾಗಿದ್ದ ಗಿಲ್ಯಾದಿನ+ ಮೇಲೆ ಅಧಿಕಾರ ಇದ್ದ ಉರೀಯ ಮಗ ಗೆಬೆರ್‌. ಇಸ್ರಾಯೇಲ್‌ ದೇಶದ ಈ ಎಲ್ಲ ಪ್ರದೇಶಾಧಿಪತಿಗಳ ಮೇಲಿಚ್ವಾರಕನಾಗಿ ಇನ್ನೊಬ್ಬ ಪ್ರದೇಶಾಧಿಪತಿನೂ ಇದ್ದ. 20  ಯೆಹೂದದ ಮತ್ತು ಇಸ್ರಾಯೇಲಿನ ಜನ್ರು ಸಮುದ್ರದ ಮರಳಿನ ಕಣಗಳ ತರ ಲೆಕ್ಕ ಮಾಡೋಕೆ ಆಗದಷ್ಟು ಇದ್ರು.+ ಅವ್ರಿಗೆ ತಿನ್ನೋಕೆ ಕುಡಿಯೋಕೆ ಏನೂ ಕಡಿಮೆ ಇರಲಿಲ್ಲ, ಸಂತೋಷವಾಗಿದ್ರು.+ 21  ಸೊಲೊಮೋನ ಯೂಫ್ರೆಟಿಸ್‌ ನದಿಯಿಂದ+ ಫಿಲಿಷ್ಟಿಯರ ದೇಶದ ತನಕ ಮತ್ತು ಈಜಿಪ್ಟಿನ ಗಡಿಯ ತನಕ ಇದ್ದ ಎಲ್ಲ ರಾಜ್ಯಗಳನ್ನ ಆಳಿದ. ಆ ಪ್ರದೇಶಗಳಲ್ಲಿ ಇದ್ದವ್ರೆಲ್ಲ ಸೊಲೊಮೋನ ಬದುಕಿರೋ ತನಕ ಅವನಿಗೆ ಕಪ್ಪ ಕೊಟ್ಟು ಅವನ ಸೇವೆಮಾಡಿದ್ರು.+ 22  ಸೊಲೊಮೋನನ ಅರಮನೆಯಲ್ಲಿ ಒಂದು ದಿನದ ಆಹಾರಕ್ಕೆ 30 ಕೋರ್‌ ಅಳತೆಯ ನುಣ್ಣಗಿನ ಹಿಟ್ಟು, 60 ಕೋರ್‌ ಅಳತೆಯ ಹಿಟ್ಟು* ಬೇಕಾಗ್ತಿತ್ತು. 23  ಅಷ್ಟೇ ಅಲ್ಲ ಕೊಬ್ಬಿದ 10 ದನ, ಹುಲ್ಲುಗಾವಲಿನಲ್ಲಿ ಮೇಯಿಸಿದ 20 ದನ, 100 ಕುರಿ, ಕೆಲವು ಸಾರಂಗ, ಜಿಂಕೆ, ಕಡವೆ ಮತ್ತು ಕೊಬ್ಬಿದ ಕೋಗಿಲೆಗಳು ಬೇಕಾಗ್ತಿತ್ತು. 24  ತಿಪ್ಸಹುವಿನಿಂದ ಹಿಡಿದು ಗಾಜಾ+ ತನಕ ನದಿಯ+ ಈ ಕಡೆಯಿರೋ* ಎಲ್ಲದ್ರ ಮೇಲೆ, ಎಲ್ಲ ರಾಜರ ಮೇಲೆ ಸೊಲೊಮೋನನಿಗೆ ಅಧಿಕಾರ ಇತ್ತು. ಅವನ ರಾಜ್ಯದ ಸುತ್ತ ಇದ್ದ ಎಲ್ಲ ಪ್ರದೇಶಗಳಲ್ಲೂ ಶಾಂತಿ ಸಮಾಧಾನ ಇತ್ತು.+ 25  ಸೊಲೊಮೋನ ಆಳಿದ ಕಾಲದಲ್ಲೆಲ್ಲ ದಾನಿನಿಂದ ಹಿಡಿದು ಬೇರ್ಷೆಬದ ತನಕ ಯೆಹೂದದಲ್ಲಿದ್ದ ಮತ್ತು ಇಸ್ರಾಯೇಲಿನಲ್ಲಿದ್ದ ಜನ್ರು ಸುರಕ್ಷಿತವಾಗಿದ್ರು. ಅವರು ತಮ್ಮತಮ್ಮ ದ್ರಾಕ್ಷಿ ತೋಟದ ಮತ್ತು ಅಂಜೂರದ ಮರದ ನೆರಳಲ್ಲಿ ಚಿಂತೆ ಇಲ್ಲದೆ ವಾಸ ಮಾಡ್ತಿದ್ರು. 26  ಸೊಲೊಮೋನನ ರಥಗಳನ್ನ ಎಳೆಯೋ ಕುದುರೆಗಳನ್ನ ಕಟ್ಟೋಕೆ 4,000* ತಾಣಗಳು ಇದ್ವು. ಅವನ ಹತ್ರ 12,000 ಕುದುರೆಗಳು ಇದ್ವು.*+ 27  ಈ ಪ್ರದೇಶಾಧಿಪತಿಗಳು ರಾಜ ಸೊಲೊಮೋನನಿಗೆ, ಅವನ ಮೇಜಲ್ಲಿ ಅವನ ಜೊತೆ ಊಟಮಾಡ್ತಿದ್ದ ಎಲ್ರಿಗೆ ಊಟ ಕೊಡ್ತಿದ್ರು. ಒಂದೊಂದು ತಿಂಗಳು ಒಬ್ಬೊಬ್ಬ ಪ್ರದೇಶಾಧಿಪತಿ ಆಹಾರ ಕೊಡಬೇಕಿತ್ತು. ಯಾವುದೇ ಕಾರಣಕ್ಕೂ ತಾವು ಕೊಡಬೇಕಾಗಿದ್ದ ತಿಂಗಳಲ್ಲಿ ಆಹಾರದ ಕೊರತೆ ಆಗದೆ ಇರೋ ತರ ನೋಡ್ಕೊಳ್ಳೋ ಜವಾಬ್ದಾರಿ ಅವರಿಗಿತ್ತು.+ 28  ಅಷ್ಟೇ ಅಲ್ಲ, ಕುದುರೆಗಳಿಗೆ ಮತ್ತು ರಥಗಳನ್ನ ಎಳೀತಿದ್ದ ಕುದುರೆಗಳಿಗೆ ಬಾರ್ಲಿ,* ಹುಲ್ಲಿನ ಅಗತ್ಯ ಇದ್ದಾಗೆಲ್ಲ ಅಲ್ಲಿಗೆ ಇವರು ಎಷ್ಟು ಮೇವು ಕೊಡಬೇಕಿತ್ತೋ ಅಷ್ಟನ್ನ ತಂದ್ಕೊಡ್ತಿದ್ರು. 29  ದೇವರು ಸೊಲೊಮೋನನಿಗೆ ತುಂಬ ವಿವೇಕ ಮತ್ತು ತಿಳುವಳಿಕೆ ಕೊಟ್ಟನು. ಅಷ್ಟೇ ಅಲ್ಲ ಸಮುದ್ರದ ತೀರದಲ್ಲಿ ಇರೋ ಮರಳಿನ ತರ ವಿಶಾಲವಾದ* ಹೃದಯ ಕೊಟ್ಟನು.+ 30  ಸೊಲೊಮೋನನ ವಿವೇಕ ಪೂರ್ವ ದೇಶಗಳಲ್ಲಿದ್ದ ಮತ್ತು ಈಜಿಪ್ಟಲ್ಲಿದ್ದ ಎಲ್ಲರ ವಿವೇಕವನ್ನ ಮೀರಿಸ್ತು.+ 31  ಅವನು ಎಲ್ರಿಗಿಂತ ವಿವೇಕಿಯಾಗಿದ್ದ. ಅವನು ಜೆರಹ್ಯನಾದ ಏತಾನನಿಗಿಂತ,+ ಮಾಹೋಲನ ಮಕ್ಕಳಾದ ಹೇಮಾನ್‌,+ ಕಲ್ಕೋಲ್‌+ ಮತ್ತು ದರ್ದನಿಗಿಂತ ಹೆಚ್ಚು ವಿವೇಕಿಯಾಗಿದ್ದ. ಅವನ ಖ್ಯಾತಿಯ ಬಗ್ಗೆ ಸುತ್ತ ಇರೋ ಎಲ್ಲ ದೇಶಗಳಿಗೆ ಗೊತ್ತಾಯ್ತು.+ 32  ಅವನು 3,000 ನಾಣ್ಣುಡಿಗಳನ್ನ+ ಹೇಳಿದ. 1,005 ಹಾಡುಗಳನ್ನ+ ರಚಿಸಿದ. 33  ಸೊಲೊಮೋನ ಲೆಬನೋನಿನ ದೇವದಾರು ವೃಕ್ಷದಿಂದ ಹಿಡಿದು ಗೋಡೆಯ ಮೇಲೆ ಬೆಳೆಯೋ ಹಿಸ್ಸೋಪಿನ+ ತನಕ* ಎಲ್ಲ ಗಿಡಮರಗಳ ಬಗ್ಗೆ ಮಾತಾಡ್ತಿದ್ದ. ಅವನು ಪ್ರಾಣಿಗಳ ಬಗ್ಗೆ,+ ಪಕ್ಷಿಗಳ ಬಗ್ಗೆ,+ ಹರಿದಾಡೋ ಜೀವಿಗಳ* ಬಗ್ಗೆ+ ಮತ್ತು ಮೀನುಗಳ ಬಗ್ಗೆನೂ ಮಾತಾಡ್ತಿದ್ದ. 34  ದೇಶ ದೇಶಗಳಿಂದ ಜನ್ರು ಸೊಲೊಮೋನನ ವಿವೇಕದ ಮಾತುಗಳನ್ನ ಕೇಳಿಸ್ಕೊಳ್ಳೋಕೆ ಬರ್ತಿದ್ರು. ಅಷ್ಟೇ ಅಲ್ಲ ಅವನ ವಿವೇಕದ ಬಗ್ಗೆ ಜನ ಮಾತಾಡೋದನ್ನ ಕೇಳಿ ಭೂಮಿಯ ಮೂಲೆ ಮೂಲೆಯಿಂದ ರಾಜರೂ ಬರ್ತಿದ್ರು.+

ಪಾದಟಿಪ್ಪಣಿ

ಒಂದು ಕೋರ್‌ ಅಳತೆಯ ಹಿಟ್ಟು ಸುಮಾರು 130 ಕೆಜಿ. ಪರಿಶಿಷ್ಟ ಬಿ14 ನೋಡಿ.
ಅದು, ಯೂಫ್ರೆಟಿಸ್‌ ನದಿಯ ಪಶ್ಚಿಮಕ್ಕೆ.
ಕೆಲವು ಹಸ್ತಪ್ರತಿಗಳಲ್ಲಿ ಮತ್ತು 2 ಪೂರ್ವ 9:25ರಲ್ಲಿ ಈ ಸಂಖ್ಯೆ ಕೊಡಲಾಗಿದೆ. ಬೇರೆ ಹಸ್ತಪ್ರತಿಗಳಲ್ಲಿ 40,000 ಅಂತ ಇದೆ.
ಅಥವಾ “ಕುದುರೆ ಸವಾರರು ಇದ್ರು.”
ಅಥವಾ “ಜವೆಗೋದಿ.”
ಅಥವಾ “ಅರ್ಥ ಮಾಡ್ಕೊಳ್ಳೋ.”
ಬಹುಶಃ ಇದ್ರಲ್ಲಿ ಸರೀಸೃಪಗಳು ಮತ್ತು ಕ್ರಿಮಿಕೀಟಗಳು ಸೇರಿವೆ.