ಒಂದನೇ ಅರಸು 9:1-28

  • ಯೆಹೋವ ಸೊಲೊಮೋನನಿಗೆ ಮತ್ತೊಮ್ಮೆ ಕಾಣಿಸ್ಕೊಂಡ (1-9)

  • ಸೊಲೊಮೋನ ರಾಜ ಹೀರಾಮನಿಗೆ ಉಡುಗೊರೆ ಕೊಟ್ಟ (10-14)

  • ಸೊಲೊಮೋನನ ನಿರ್ಮಾಣ ಕೆಲಸಗಳು (15-28)

9  ಸೊಲೊಮೋನ ಯೆಹೋವನ ಆಲಯವನ್ನ, ತನ್ನ ಅರಮನೆಯನ್ನ+ ಮತ್ತು ಅವನು ಬಯಸಿದ್ದೆಲ್ಲವನ್ನ ಕಟ್ಟಿ ಮುಗಿಸಿದ+ ತಕ್ಷಣ,  ಯೆಹೋವ ಗಿಬ್ಯೋನಿನಲ್ಲಿ ಕಾಣಿಸ್ಕೊಂಡ ಹಾಗೇ ಎರಡನೇ ಸಲ ಅವನಿಗೆ ಕಾಣಿಸ್ಕೊಂಡನು.+  ಯೆಹೋವ ಅವನಿಗೆ “ನೀನು ಮಾಡಿದ ಪ್ರಾರ್ಥನೆ, ನನ್ನ ಕೃಪೆಗಾಗಿ ಮಾಡಿದ ಬಿನ್ನಹ ಕೇಳಿದ್ದೀನಿ. ನೀನು ಕಟ್ಟಿದ ಈ ಆಲಯನ ನಾನು ಪವಿತ್ರ ಮಾಡಿದ್ದೀನಿ ಮತ್ತು ಅದ್ರಲ್ಲಿ ನನ್ನ ಹೆಸ್ರು ಶಾಶ್ವತವಾಗಿರುತ್ತೆ.+ ನಾನು ಈ ಆಲಯವನ್ನ ಯಾವಾಗ್ಲೂ ನೋಡ್ಕೊಳ್ತೀನಿ ಮತ್ತು ಜೋಪಾನ ಮಾಡ್ತೀನಿ.+  ನಾನು ನಿನಗೆ ಕೊಟ್ಟ ಎಲ್ಲ ಆಜ್ಞೆನ ಪಾಲಿಸ್ತಾ,+ ನನ್ನ ನಿಯಮಗಳನ್ನ, ನನ್ನ ತೀರ್ಪುಗಳನ್ನ ಕೇಳಿ+ ನಿನ್ನ ಅಪ್ಪ ದಾವೀದ ನಡೆದ ಹಾಗೆ+ ಪೂರ್ಣ ಹೃದಯದಿಂದ+ ಮತ್ತು ನೀತಿಯಿಂದ+ ನಡೆದ್ರೆ  ನಿನ್ನ ರಾಜ್ಯದ ಸಿಂಹಾಸನವನ್ನ ನಾನು ಇಸ್ರಾಯೇಲ್ಯರ ಮೇಲೆ ಶಾಶ್ವತವಾಗಿ ಇರೋ ತರ ಮಾಡ್ತೀನಿ. ನಾನು ನಿನ್ನ ಅಪ್ಪ ದಾವೀದಗೆ ‘ಇಸ್ರಾಯೇಲಿನ ಸಿಂಹಾಸನದ ಮೇಲೆ ಕೂತ್ಕೊಳ್ಳೋಕೆ ನಿನ್ನ ವಂಶದವ್ರಲ್ಲಿ ಯಾವಾಗ್ಲೂ ಒಬ್ಬ ಇದ್ದೇ ಇರ್ತಾನೆ’+ ಅಂತ ಮಾತುಕೊಟ್ಟಿದ್ದೆ. ಅದನ್ನ ನಿಜ ಮಾಡ್ತೀನಿ.  ಒಂದುವೇಳೆ ನೀವಾಗಲಿ, ನಿಮ್ಮ ಮಕ್ಕಳಾಗಲಿ ನನ್ನನ್ನ ಬಿಟ್ಟು, ನಾನು ನಿಮಗೆ ಕೊಟ್ಟಿರೋ ನನ್ನ ಆಜ್ಞೆಗಳನ್ನ, ನಿಯಮಗಳನ್ನ ಪಾಲಿಸದೆ ಬೇರೆ ದೇವರುಗಳನ್ನ ಆರಾಧಿಸಿದ್ರೆ, ಅವುಗಳಿಗೆ ಅಡ್ಡಬಿದ್ರೆ,+  ನಾನು ಇಸ್ರಾಯೇಲ್ಯರಿಗೆ ಕೊಟ್ಟ ದೇಶದಿಂದ ಅವ್ರನ್ನ ಅಳಿಸಿಹಾಕ್ತೀನಿ.+ ನನ್ನ ಹೆಸ್ರಿಗಾಗಿ ನಾನು ಪವಿತ್ರ ಮಾಡಿದ ಆಲಯನ ನನ್ನ ಕಣ್ಮುಂದಿನಿಂದ ದೂರ ತಳ್ಳಿಬಿಡ್ತೀನಿ.+ ಆಗ ಇಸ್ರಾಯೇಲ್ಯರನ್ನ ಬೇರೆ ಜನ್ರು ತಮಾಷೆ* ಮಾಡ್ತಾರೆ, ಅವರು ನಾಶ ಆಗೋದನ್ನ ನೋಡಿ ನಗ್ತಾರೆ.+  ಈ ಆಲಯ ಹಾಳು ಕುಪ್ಪೆ ಆಗುತ್ತೆ.+ ಇದ್ರ ಮುಂದೆ ಹಾದು ಹೋಗೋರೆಲ್ಲ ಹುಬ್ಬೇರಿಸಿ ಇದ್ರ ಕಡೆಗೆ ನೋಡಿ* ‘ಯೆಹೋವ ಈ ದೇಶಕ್ಕೂ, ಈ ಆಲಯಕ್ಕೂ ಎಂಥ ಗತಿ ಬರೋ ತರ ಮಾಡಿದ್ದಾನೆ’ ಅಂತ ಅಣಕಿಸ್ತಾರೆ.+  ಆಮೇಲೆ ಅವರು ‘ಈ ಇಸ್ರಾಯೇಲ್ಯರು ಈಜಿಪ್ಟಿಂದ ತಮ್ಮ ಪೂರ್ವಜರನ್ನ ಬಿಡಿಸ್ಕೊಂಡು ಬಂದ ತಮ್ಮ ದೇವರಾದ ಯೆಹೋವನನ್ನ ಬಿಟ್ಟು ಬೇರೆ ದೇವರುಗಳನ್ನ ಮಾಡ್ಕೊಂಡ್ರು, ಅಡ್ಡಬಿದ್ರು, ಅವನ್ನ ಆರಾಧಿಸಿದ್ರು. ಹಾಗಾಗಿ ಯೆಹೋವ ಅವ್ರ ಮೇಲೆ ಈ ಕಷ್ಟವನ್ನ ತಂದನು’”+ ಅಂತಾರೆ. 10  ಯೆಹೋವನ ಆಲಯ ಮತ್ತು ತನ್ನ ಅರಮನೆಯನ್ನ ಕಟ್ಟಿ ಮುಗಿಸೋಕೆ ಸೊಲೊಮೋನನಿಗೆ 20 ವರ್ಷ ಹಿಡಿತು.+ 11  ತೂರಿನ ರಾಜ ಹೀರಾಮ+ ಸೊಲೊಮೋನನಿಗೆ ದೇವದಾರು ಮರಗಳನ್ನ, ಜುನಿಪರ್‌ ಮರಗಳನ್ನ ಮತ್ತು ಸೊಲೊಮೋನ ಬಯಸಿದಷ್ಟು ಚಿನ್ನವನ್ನ ಕಳಿಸ್ಕೊಟ್ಟ.+ ಹಾಗಾಗಿ ಸೊಲೊಮೋನ ಹೀರಾಮನಿಗೆ ಗಲಿಲಾಯ ದೇಶದಲ್ಲಿ 20 ಪಟ್ಟಣಗಳನ್ನ ಕೊಟ್ಟ. 12  ಹೀರಾಮ ಅವನ ಪಟ್ಟಣ ತೂರಿನಿಂದ ಸೊಲೊಮೋನ ಕೊಟ್ಟ ಪಟ್ಟಣಗಳನ್ನ ನೋಡೋಕೆ ಹೋದ. ಆದ್ರೆ ಆ ಪಟ್ಟಣಗಳು ಅವನಿಗೆ ಇಷ್ಟ ಆಗಲಿಲ್ಲ. 13  ಅವನು ಸೊಲೊಮೋನನಿಗೆ “ನನ್ನ ಸಹೋದರನೇ, ನೀನು ನನಗೆ ಎಂಥ ಪಟ್ಟಣಗಳನ್ನ ಕೊಟ್ಟಿದ್ದೀಯಾ?” ಅಂದ. ಹಾಗಾಗಿ ಆ ಪಟ್ಟಣಗಳನ್ನ ಇವತ್ತಿನ ತನಕ ಕಾಬೂಲ್‌ ದೇಶ* ಅಂತ ಕರೀತಾರೆ. 14  ಹೀರಾಮ ರಾಜನಿಗೆ 120 ತಲಾಂತು* ಚಿನ್ನ ಕಳಿಸ್ಕೊಟ್ಟಿದ್ದ.+ 15  ರಾಜ ಸೊಲೊಮೋನ ಬಿಟ್ಟಿ ಕೆಲಸ ಮಾಡೋರ+ ಹತ್ರ ಮಾಡಿಸಿದ ಕೆಲಸಗಳು ಯಾವೆಂದ್ರೆ: ಅವರು ಯೆಹೋವನ ಆಲಯ,+ ಸೊಲೊಮೋನನ ಅರಮನೆ, ಮಿಲ್ಲೋ ಕೋಟೆ,*+ ಯೆರೂಸಲೇಮಿನ ಗೋಡೆ, ಹಾಚೋರ,+ ಮೆಗಿದ್ದೋ+ ಮತ್ತು ಗೆಜೆರನ್ನ+ ಕಟ್ಟಿದ್ರು. 16  (ಈ ಮುಂಚೆ ಈಜಿಪ್ಟ್‌ ರಾಜ ಫರೋಹ ಗೆಜೆರಿಗೆ ಬಂದು ಅದನ್ನ ವಶ ಮಾಡ್ಕೊಂಡು ಅದನ್ನ ಸುಟ್ಟು ಹಾಕಿದ್ದ. ಅಷ್ಟೇ ಅಲ್ಲ ಆ ಪಟ್ಟಣದಲ್ಲಿ ಇದ್ದ ಕಾನಾನ್ಯರನ್ನ+ ಸಾಯಿಸಿದ್ದ. ಅದೇ ಪಟ್ಟಣವನ್ನ ಫರೋಹ ತನ್ನ ಮಗಳಿಗೆ ಅಂದ್ರೆ ಸೊಲೊಮೋನನ ಹೆಂಡತಿಗೆ ಮದುವೆಯ ಉಡುಗೊರೆಯಾಗಿ* ಕೊಟ್ಟಿದ್ದ.)+ 17  ಸೊಲೊಮೋನ ಗೆಜೆರ್‌, ಕೆಳಗಿನ ಬೇತ್‌ಹೋರೋನ್‌,+ 18  ಬಾಲತ್‌+ ಮತ್ತು ಇಸ್ರಾಯೇಲ್‌ ದೇಶದ ಒಳಗೆ ಕಾಡಲ್ಲಿದ್ದ ತಾಮಾರ್‌ ಪಟ್ಟಣ ಕಟ್ಟಿಸಿದ. 19  ಅದ್ರ ಜೊತೆಗೆ ಸೊಲೊಮೋನ ಕಣಜಗಳಿದ್ದ ಪಟ್ಟಣ, ರಥಗಳ ಪಟ್ಟಣ,+ ಕುದುರೆ ಸವಾರರಿಗಾಗಿ ಪಟ್ಟಣಗಳನ್ನ ಕಟ್ಟಿಸಿದ. ಯೆರೂಸಲೇಮಲ್ಲಿ, ಲೆಬನೋನಿನಲ್ಲಿ ಮತ್ತು ಅವನ ಅಧಿಕಾರದ ಕೆಳಗಿದ್ದ ಎಲ್ಲ ಪ್ರದೇಶಗಳಲ್ಲಿ ಅವನು ಕಟ್ಟಬೇಕು ಅಂತ ಅಂದ್ಕೊಂಡಿದ್ದ ಎಲ್ಲವನ್ನ ಕಟ್ಟಿಸಿದ. 20  ಇಸ್ರಾಯೇಲಿನ ಪ್ರಜೆಗಳಲ್ಲದ ಅಮೋರಿಯರು, ಹಿತ್ತಿಯರು, ಪೆರಿಜೀಯರು, ಹಿವ್ವಿಯರು ಮತ್ತು ಯೆಬೂಸಿಯರಲ್ಲಿ+ ಉಳಿದಿದ್ದ ಜನ್ರ ವಂಶದವರು+ 21  ಮತ್ತು ಯಾರನ್ನ ಇಸ್ರಾಯೇಲ್ಯರು ನಾಶ ಮಾಡಿರಲಿಲ್ವೋ ಅವ್ರ ವಂಶದವರು ಇಸ್ರಾಯೇಲ್‌ ದೇಶದಲ್ಲಿ ವಾಸಿಸ್ತಿದ್ರು. ಈ ಜನ್ರನ್ನ ಸೊಲೊಮೋನ ಗುಲಾಮರಾಗಿ ಮಾಡ್ಕೊಂಡು ಬಿಟ್ಟಿ ಕೆಲಸಕ್ಕೆ ಹಾಕಿದ. ಅವರು ಇವತ್ತಿನ ತನಕ ಅದೇ ಕೆಲಸ ಮಾಡ್ತಿದ್ದಾರೆ.+ 22  ಆದ್ರೆ ಸೊಲೊಮೋನ ಇಸ್ರಾಯೇಲ್ಯರಲ್ಲಿ ಯಾರನ್ನೂ ಗುಲಾಮರಾಗಿ ಮಾಡ್ಕೊಳ್ಳಿಲ್ಲ.+ ಅವರು ಅವನ ಸೈನಿಕರಾಗಿ, ಸಹಾಯಕರಾಗಿ, ದೊಡ್ಡ ದೊಡ್ಡ ಅಧಿಕಾರಿಗಳಾಗಿ, ಮುಖ್ಯಸ್ಥರಾಗಿ, ಅವನ ಸಾರಥಿಗಳ ಮತ್ತು ಕುದುರೆ ಸವಾರರ ಅಧಿಪತಿಗಳಾಗಿ ಕೆಲಸಮಾಡ್ತಿದ್ರು. 23  ಸೊಲೊಮೋನನ ಕೆಲಸಗಳನ್ನ ನೋಡ್ಕೊಳ್ಳೋಕೆ 550 ಪ್ರದೇಶಾಧಿಪತಿಗಳಿದ್ರು. ಕೆಲಸಗಾರರ ಮೇಲೆ ಇವ್ರಿಗೆ ಅಧಿಕಾರ ಇತ್ತು.+ 24  ಫರೋಹನ ಮಗಳು+ ದಾವೀದಪಟ್ಟಣದಿಂದ+ ಸೊಲೊಮೋನ ತನಗಾಗಿ ಕಟ್ಟಿಸಿದ್ದ ಅರಮನೆಗೆ ಬಂದಳು. ಆಮೇಲೆ ಸೊಲೊಮೋನ ಮಿಲ್ಲೋಕೋಟೆಯನ್ನ* ಕಟ್ಟಿಸಿದ.+ 25  ಸೊಲೊಮೋನ ಯೆಹೋವನಿಗಾಗಿ ತಾನು ಕಟ್ಟಿಸಿದ್ದ ಯಜ್ಞವೇದಿ ಮೇಲೆ ಸರ್ವಾಂಗಹೋಮ ಬಲಿಗಳನ್ನ, ಸಮಾಧಾನ ಬಲಿಗಳನ್ನ ವರ್ಷಕ್ಕೆ ಮೂರು ಸಲ+ ಕೊಡ್ತಿದ್ದ.+ ಅಷ್ಟೇ ಅಲ್ಲ ಯೆಹೋವನ ಮುಂದಿದ್ದ ಯಜ್ಞವೇದಿ ಮೇಲೆ ಬಲಿ ಕೊಟ್ಟು ಹೊಗೆ ಏರೋ ತರ ಮಾಡ್ತಿದ್ದ. ಹೀಗೆ ಅವನು ಆಲಯದ ಕೆಲಸ ಮುಗಿಸಿದ.+ 26  ರಾಜ ಸೊಲೊಮೋನ ಎಚ್ಯೋನ್‌-ಗೆಬೆರಿನಲ್ಲಿ+ ಹಡಗುಪಡೆಯನ್ನ ಕಟ್ಟಿಸಿದ. ಅದು ಎದೋಮ್‌ ದೇಶದ ಕೆಂಪು ಸಮುದ್ರದ ದಡದಲ್ಲಿದ್ದ ಏಲೋತಿನ ಹತ್ರ ಇತ್ತು.+ 27  ಸೊಲೊಮೋನನ ಸೇವಕರ ಜೊತೆ ಸೇರಿ ಕೆಲಸ ಮಾಡೋಕೆ ಹೀರಾಮ ಹಡಗುಪಡೆ ಜೊತೆಗೆ ಅನುಭವಸ್ಥ ನಾವಿಕರಾಗಿದ್ದ ತನ್ನ ಸೇವಕರನ್ನ ಕಳಿಸಿದ.+ 28  ಅವರು ಓಫೀರಿಗೆ+ ಹೋಗಿ ಅಲ್ಲಿಂದ 420 ತಲಾಂತು ಚಿನ್ನ ತಂದು ರಾಜ ಸೊಲೊಮೋನನಿಗೆ ಕೊಟ್ರು.

ಪಾದಟಿಪ್ಪಣಿ

ಅಕ್ಷ. “ಗಾದೆ.”
ಅಕ್ಷ. “ಸೀಟಿ ಹೊಡಿತಾ.”
ಬಹುಶಃ, “ಯಾವುದಕ್ಕೂ ಪ್ರಯೋಜನ ಇಲ್ಲದ ದೇಶ.”
ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.
ಅಥವಾ “ಮಿಲ್ಲೋ.” ಹೀಬ್ರು ಪದದ ಅರ್ಥ ‘ಭರ್ತಿಮಾಡು.’
ಅಥವಾ “ವರದಕ್ಷಿಣೆಯಾಗಿ.”
ಅಥವಾ “ಮಿಲ್ಲೋವನ್ನ.” ಹೀಬ್ರು ಪದದ ಅರ್ಥ ಭರ್ತಿಮಾಡು ಎಂದಾಗಿದೆ.