ತಿಮೊತಿಗೆ ಬರೆದ ಮೊದಲನೇ ಪತ್ರ 2:1-15
2 ಹಾಗಾಗಿ ನಾನು ಮೊದ್ಲು ನಿಮ್ಮ ಹತ್ರ ಕೇಳ್ಕೊಳ್ಳೋದು ಏನಂದ್ರೆ, ಎಲ್ಲ ತರದ ಜನ್ರಿಗಾಗಿ ದೇವರ ಹತ್ರ ಅಂಗಲಾಚಿ ಬೇಡಿ, ಪ್ರಾರ್ಥಿಸಿ, ಮನವಿ ಮಾಡಿ, ಧನ್ಯವಾದ ಹೇಳಿ.
2 ರಾಜರಿಗೂ, ಎಲ್ಲ ದೊಡ್ಡ ಅಧಿಕಾರಿಗಳಿಗೂ*+ ಹೀಗೆ ಮಾಡಿ. ನಾವು ದೇವರಿಗೆ ಪೂರ್ಣ ಹೃದಯದ ಭಕ್ತಿ ತೋರಿಸ್ತಾ ಶ್ರದ್ಧೆಯಿಂದ* ತೊಂದ್ರೆ ಇಲ್ದೆ ಶಾಂತಿಯಿಂದ ಜೀವನ ನಡಿಸೋಕೆ ಇದನ್ನ ಮಾಡಿ.+
3 ಆ ತರ ಬೇಡೋದು ನಮ್ಮ ರಕ್ಷಕನಾದ ದೇವರ ದೃಷ್ಟಿಯಲ್ಲಿ ಸರಿಯಾಗಿದೆ, ಆತನು ಇದನ್ನ ಮೆಚ್ತಾನೆ.+
4 ಎಲ್ಲ ತರದ ಜನ್ರು ರಕ್ಷಣೆ ಪಡಿಬೇಕು,+ ಸತ್ಯದ ಬಗ್ಗೆ ಸರಿಯಾದ ಜ್ಞಾನ ಪಡ್ಕೊಬೇಕು ಅನ್ನೋದೇ ಆತನ ಇಷ್ಟ.
5 ದೇವರು ಒಬ್ಬನೇ.+ ದೇವರಿಗೂ ಮನುಷ್ಯರಿಗೂ+ ಮಧ್ಯಸ್ಥ+ ಒಬ್ಬನೇ, ಆತನು ಮನುಷ್ಯನಾದ ಕ್ರಿಸ್ತ ಯೇಸುನೇ.+
6 ಯೇಸು ನಮಗೋಸ್ಕರ ತನ್ನ ಜೀವ ಕೊಟ್ಟನು. ಹೀಗೆ ಎಲ್ರನ್ನ* ಪಾಪದಿಂದ ಬಿಡಿಸೋಕಂತ ಸರಿಸಮವಾದ ಬಿಡುಗಡೆ ಬೆಲೆ ಕೊಟ್ಟನು.+ ಅದ್ರ ಬಗ್ಗೆ ಸರಿಯಾದ ಸಮಯಕ್ಕೆ ಸಾಕ್ಷಿ ಕೊಟ್ಟೇ ಕೊಡಲಾಗುತ್ತೆ.
7 ಈ ಸಾಕ್ಷಿ ಕೊಡೋಕಂತಾನೇ+ ನಾನು ಪ್ರಚಾರಕನಾಗಿ, ಅಪೊಸ್ತಲನಾಗಿ+ ಅಂದ್ರೆ ನಂಬಿಕೆ, ಸತ್ಯದ ಬಗ್ಗೆ ಬೇರೆ ಜನ್ರಿಗೆ ಕಲಿಸೋಕೆ ಶಿಕ್ಷಕನಾಗಿ+ ನೇಮಕ ಪಡಿದಿದ್ದೀನಿ. ನಾನು ಹೇಳ್ತಿರೋದು ಸುಳ್ಳಲ್ಲ, ಸತ್ಯ.
8 ಹಾಗಾಗಿ ನೀವು ಸೇರಿಬರೋ ಎಲ್ಲ ಜಾಗಗಳಲ್ಲಿ ಗಂಡಸ್ರು ಕೋಪಿಸ್ಕೊಳ್ಳದೆ,+ ವಾದ ಮಾಡದೆ+ ನಿಷ್ಠೆಯಿಂದ ಕೈಗಳನ್ನೆತ್ತಿ ಯಾವಾಗ್ಲೂ ಪ್ರಾರ್ಥಿಸ್ಲಿ+ ಅಂತ ನಾನು ಇಷ್ಟ ಪಡ್ತೀನಿ.
9 ಅಷ್ಟೆ ಅಲ್ಲ, ಸ್ತ್ರೀಯರು ಗೌರವ ತರುವಂಥ ಬಟ್ಟೆ ಹಾಕಬೇಕು. ಕೂದಲನ್ನ ಬೇರೆ ಬೇರೆ ತರ ಬಾಚ್ಕೊಳ್ಳೋದು, ಚಿನ್ನ ಮುತ್ತು ಹಾಕೊಳ್ಳೋದು, ದುಬಾರಿ ಬಟ್ಟೆ ಹಾಕೋದು ಇದೇ ಅವ್ರ ಸೌಂದರ್ಯವಾಗಿ ಇರಬಾರದು. ಅವರು ಹಾಕೋ ಬಟ್ಟೆಯಿಂದ ಅವ್ರಿಗೆ ಬುದ್ಧಿ ಇದೆ,* ತೋರಿಸ್ಕೊಳ್ಳೋರಲ್ಲ ಅಂತ ಗೊತ್ತಾಗಬೇಕು.+
10 ಅವರು ಮಾಡೋ ಒಳ್ಳೇ ಕೆಲಸಗಳೇ ಅವ್ರ ಸೌಂದರ್ಯ ಆಗಿರಬೇಕು. ದೇವರ ಮೇಲೆ ಭಕ್ತಿಯಿರೋ ಸ್ತ್ರೀಯರು ಈ ತರಾನೇ ಇರಬೇಕು.+
11 ಸ್ತ್ರೀಯರು ಸುಮ್ನಿದ್ದು* ಪೂರ್ತಿ ಅಧೀನತೆ ತೋರಿಸೋಕೆ ಕಲೀಬೇಕು.+
12 ಬೋಧನೆ ಮಾಡೋಕೆ, ಪುರುಷನ ಮೇಲೆ ಅಧಿಕಾರ ನಡಿಸೋಕೆ ನಾನು ಸ್ತ್ರೀಗೆ ಅನುಮತಿ ಕೊಡಲ್ಲ. ಅವಳು ಸುಮ್ನೆ ಇರಬೇಕು.+
13 ಯಾಕಂದ್ರೆ ಮೊದ್ಲು ಸೃಷ್ಟಿಯಾಗಿದ್ದು ಆದಾಮ, ಆಮೇಲೆ ಹವ್ವ.+
14 ಅದ್ರಲ್ಲೂ ಆದಾಮ ಮೋಸ ಹೋಗ್ಲಿಲ್ಲ, ಸ್ತ್ರೀ ಪೂರ್ತಿ ಮೋಸ ಹೋದಳು,+ ಪಾಪ ಮಾಡಿದಳು.
15 ಸ್ತ್ರೀಯರು ವಿವೇಚನೆ ತೋರಿಸ್ತಾ* ನಂಬಿಕೆಯಿಂದ, ಪ್ರೀತಿಯಿಂದ, ಪವಿತ್ರವಾಗಿ ನಡ್ಕೊಳ್ತಾ ಇದ್ರೆ+ ಮಕ್ಕಳನ್ನ ಹೆರೋದ್ರಿಂದ ಅವರು ಸುರಕ್ಷಿತವಾಗಿ ಇರ್ತಾರೆ.+
ಪಾದಟಿಪ್ಪಣಿ
^ ಅಥವಾ “ಉನ್ನತ ಸ್ಥಾನದಲ್ಲಿ ಇರುವವ್ರಿಗೂ.”
^ ಅಥವಾ “ಗಂಭೀರತೆಯಿಂದ.”
^ ಅಥವಾ “ಎಲ್ಲ ತರದ ಜನ್ರನ್ನ.”
^ ಅಥವಾ “ಒಳ್ಳೇ ನಿರ್ಧಾರ ತಗೊಳ್ತಾರೆ.”
^ ಅಥವಾ “ಶಾಂತವಾಗಿದ್ದು.”
^ ಅಥವಾ “ಒಳ್ಳೇ ನಿರ್ಧಾರ ತಗೊಳ್ತಾ.”