ಒಂದನೇ ಪೂರ್ವಕಾಲವೃತ್ತಾಂತ 10:1-14

  • ಸೌಲನ ಮತ್ತು ಅವನ ಗಂಡು ಮಕ್ಕಳ ಮರಣ (1-14)

10  ಫಿಲಿಷ್ಟಿಯರು ಇಸ್ರಾಯೇಲ್ಯರ ವಿರುದ್ಧ ಯುದ್ಧ ಮಾಡ್ತಿದ್ರು. ಇಸ್ರಾಯೇಲ್‌ ಗಂಡಸ್ರು ಸೋತು ಓಡಿಹೋದ್ರು. ತುಂಬ ಜನ್ರನ್ನ ಗಿಲ್ಬೋವ ಬೆಟ್ಟದಲ್ಲಿ ಕೊಂದುಹಾಕಿದ್ರು.+  ಫಿಲಿಷ್ಟಿಯರು ಸೌಲನನ್ನ, ಅವನ ಮಕ್ಕಳನ್ನ ಅಟ್ಟಿಸ್ಕೊಂಡು ತುಂಬ ಹತ್ರ ಬಂದ್ರು. ಸೌಲನ ಮಕ್ಕಳಾದ ಯೋನಾತಾನ, ಅಬೀನಾದಾಬ, ಮಲ್ಕೀಷೂವನನ್ನ+ ಫಿಲಿಷ್ಟಿಯರು ಕೊಂದ್ರು.  ಸೌಲನ ವಿರುದ್ಧ ನಡೆದ ಯುದ್ಧ ತುಂಬ ಭಯಂಕರವಾಗಿತ್ತು. ಬಿಲ್ಲುಗಾರರು ಅವನನ್ನ ನೋಡಿದಾಗ ಅವನಿಗೆ ತುಂಬ ಗಾಯ ಮಾಡಿಬಿಟ್ರು.+  ಆಗ ಸೌಲ ತನ್ನ ಆಯುಧಗಳನ್ನ ಹೊರುವವನಿಗೆ “ನಿನ್ನ ಕತ್ತಿ ತೆಗೆದು ನನ್ನನ್ನ ಕೊಂದುಬಿಡು. ಇಲ್ಲಾಂದ್ರೆ ಸುನ್ನತಿಯಾಗದ ಈ ಗಂಡಸ್ರು ನನಗೆ ಒಂಚೂರೂ ದಯೆ ತೋರಿಸದೆ ಕೊಂದುಬಿಡ್ತಾರೆ”+ ಅಂದ. ಆದ್ರೆ ಆಯುಧ ಹೊರುವವನು ಭಯಪಟ್ಟು ಹಾಗೆ ಮಾಡಲಿಲ್ಲ. ಹಾಗಾಗಿ ಸೌಲ ಕತ್ತಿ ತಗೊಂಡು ತಾನೇ ಅದ್ರ ಮೇಲೆ ಬಿದ್ದ.+  ಸೌಲ ಸತ್ತದ್ದನ್ನ ಆಯುಧ ಹೊರುವವನು ನೋಡಿ, ಅವನೂ ತನ್ನ ಕತ್ತಿ ಮೇಲೆ ಬಿದ್ದು ಸತ್ತುಹೋದ.  ಹೀಗೆ ಸೌಲ, ಅವನ ಮೂರು ಗಂಡು ಮಕ್ಕಳು, ಅವನ ಮನೆತನದವ್ರೆಲ್ಲ ಅವತ್ತೇ ಸತ್ತುಹೋದ್ರು.+  ಇಸ್ರಾಯೇಲಿನ ಗಂಡಸ್ರು ಓಡಿ ಹೋಗಿದ್ದಾರೆ, ಸೌಲ, ಅವನ ಮಕ್ಕಳು ಸತ್ತು ಹೋಗಿದ್ದಾರೆ ಅಂತ ಗೊತ್ತಾದಾಗ ಕಣಿವೆ ಪ್ರದೇಶದಲ್ಲಿದ್ದ ಇಸ್ರಾಯೇಲ್‌ ಜನ್ರೆಲ್ಲ ತಮ್ಮತಮ್ಮ ಪಟ್ಟಣಗಳನ್ನ ಬಿಟ್ಟು ಓಡಿಹೋದ್ರು. ಆಗ ಫಿಲಿಷ್ಟಿಯರು ಬಂದು ಅವುಗಳನ್ನ ವಶ ಮಾಡ್ಕೊಂಡ್ರು.  ಮಾರನೇ ದಿನ ಫಿಲಿಷ್ಟಿಯರು ಸತ್ತು ಬಿದ್ದವ್ರ ಬಟ್ಟೆಗಳನ್ನ, ಆಯುಧಗಳನ್ನ ತಗೊಂಡು ಹೋಗೋಕೆ ಬಂದಾಗ ಸೌಲ, ಅವನ ಗಂಡು ಮಕ್ಕಳು ಗಿಲ್ಬೋವ+ ಬೆಟ್ಟದಲ್ಲಿ ಸತ್ತುಬಿದ್ದಿರೋದನ್ನ ನೋಡಿದ್ರು.  ಆಗ ಅವರು ಸೌಲನನ್ನ ದೋಚಿ ಅವನ ತಲೆ ಕಡಿದು ಅವನ ಆಯುಧಗಳನ್ನ ತಗೊಂಡ್ರು. ಈ ಸುದ್ದಿ ಎಲ್ಲ ಜನ್ರಿಗೆ, ಮೂರ್ತಿಗಳಿರೋ ಅವ್ರ ದೇವಸ್ಥಾನಗಳಿಗೆ ಹಬ್ಬಿಸಿ+ ಅಂತ ಫಿಲಿಷ್ಟಿಯರ ದೇಶದ ಮೂಲೆಮೂಲೆಗೂ ಸಂದೇಶ ಕಳಿಸಿದ್ರು. 10  ಆಮೇಲೆ ಅವರು ಸೌಲನ ಆಯುಧಗಳನ್ನ ತಮ್ಮ ದೇವರ ಆಲಯದಲ್ಲಿ ಇಟ್ರು. ಅವನ ಬುರುಡೆಯನ್ನ ದಾಗೋನನ+ ಆಲಯದಲ್ಲಿ ನೇತು ಹಾಕಿದ್ರು. 11  ಫಿಲಿಷ್ಟಿಯರು ಸೌಲನಿಗೆ ಏನು ಮಾಡಿದ್ರು ಅಂತ ಗಿಲ್ಯಾದಿನ ಯಾಬೆಷಿನಲ್ಲಿ+ ಇರೋ ಜನ್ರಿಗೆಲ್ಲ ಗೊತ್ತಾಯ್ತು.+ 12  ಆಗ ಅವ್ರಲ್ಲಿದ್ದ ವೀರ ಸೈನಿಕರೆಲ್ಲ ಹೋಗಿ ಸೌಲನ, ಅವನ ಮಕ್ಕಳ ಶವಗಳನ್ನ ತಗೊಂಡು ಯಾಬೇಷಿಗೆ ಬಂದ್ರು. ಆಮೇಲೆ ಅವ್ರ ಮೂಳೆಗಳನ್ನ ಯಾಬೇಷಿನ ದೊಡ್ಡ ಮರದ ಕೆಳಗೆ ಸಮಾಧಿ ಮಾಡಿ+ ಏಳು ದಿನ ಉಪವಾಸ ಮಾಡಿದ್ರು. 13  ಸೌಲ ಯೆಹೋವನ ಮಾತು ಕೇಳದೆ ಯೆಹೋವನಿಗೆ ನಂಬಿಕೆದ್ರೋಹ ಮಾಡಿದ್ರಿಂದ ಸತ್ತುಹೋದ.+ ಸತ್ತವ್ರನ್ನ ಮಾತಾಡಿಸ್ತಾ ಇದ್ದೀವಿ+ ಅಂತ ಹೇಳ್ಕೊಳ್ತಿದ್ದ ಸ್ತ್ರೀ ಹತ್ರ ಅವನು ಹೋಗಿದ್ದ. 14  ಅದ್ರ ಬದ್ಲು ಅವನು ಯೆಹೋವನ ಹತ್ರ ಕೇಳಬಹುದಿತ್ತು. ಹಾಗಾಗಿ ದೇವರು ಅವನನ್ನ ಕೊಂದು ಅವನ ಅಧಿಕಾರವನ್ನ ಇಷಯನ ಮಗ ದಾವೀದನಿಗೆ ಕೊಟ್ಟನು.+

ಪಾದಟಿಪ್ಪಣಿ