ಒಂದನೇ ಪೂರ್ವಕಾಲವೃತ್ತಾಂತ 12:1-40

  • ದಾವೀದನ ಆಡಳಿತದ ಬೆಂಬಲಿಗರು (1-40)

12  ಕೀಷನ ಮಗನಾದ ಸೌಲನಿಗೆ ದಾವೀದ ಭಯಪಟ್ಟು ಚಿಕ್ಲಗ್‌ನಲ್ಲಿ+ ಅವಿತಿದ್ದ. ಎಲ್ಲಿ ಬೇಕೋ ಅಲ್ಲಿ ಆರಾಮವಾಗಿ ತಿರುಗಾಡೋಕೆ ಆಗ್ತಿರಲಿಲ್ಲ.+ ಈ ಮುಂಚೆ ದಾವೀದನಿಗೆ ಯುದ್ಧದಲ್ಲಿ ಬೆಂಬಲಿಸಿದ ವೀರ ಸೈನಿಕರಲ್ಲಿ ಕೆಲವರು ಅವನಿದ್ದಲ್ಲಿಗೆ ಬಂದ್ರು.+  ಅವ್ರ ಹತ್ರ ಬಿಲ್ಲುಗಳು ಇತ್ತು. ಅಷ್ಟೇ ಅಲ್ಲ ತಮ್ಮ ಎರಡೂ ಕೈಗಳಿಂದ+ ಕವಣೆ+ ಬೀಸ್ತಿದ್ರು, ಬಾಣ ಬಿಡ್ತಿದ್ರು. ಅವರು ಬೆನ್ಯಾಮೀನ್‌+ ಕುಲದವರೂ ಸೌಲನ ಸಹೋದರರೂ ಆಗಿದ್ರು.  ಅವರು ಯಾರಂದ್ರೆ: ಅಧಿಪತಿಯಾಗಿದ್ದ ಅಹೀಗೆಜೆರ್‌, ಅವನ ಜೊತೆ ಯೋವಾಷ. ಇವ್ರಿಬ್ರೂ ಗಿಬೆಯದವನಾದ+ ಷೆಮಾಹನ ಮಕ್ಕಳು. ಅಜ್ಮಾವೇತನ+ ಗಂಡು ಮಕ್ಕಳಾದ ಯೆಜೀಯೇಲ್‌, ಪೆಲೆಟ್‌. ಅನಾತೋತಿನವನಾದ ಯೇಹು, ಬೆರಾಕ,  ಗಿಬ್ಯೋನ್ಯನಾದ+ ಇಷ್ಮಾಯ. ಇವನು 30 ವೀರ ಸೈನಿಕರಲ್ಲಿ+ ಒಬ್ಬ, 30 ಜನ್ರಿಗೆ ಅಧಿಪತಿ. ಅಷ್ಟೇ ಅಲ್ಲ ಯೆರೆಮೀಯ, ಯಹಜೀಯೇಲ, ಯೋಹಾನಾನ್‌, ಗೆದೇರಾ ಊರಿನವನಾದ ಯೋಜಾಬಾದ,  ಎಲ್ಲೂಜೈ, ಯೆರೀಮೋತ್‌, ಬೆಯಲ್ಯ, ಶೆಮರ್ಯ, ಹರೀಫ್ಯನಾದ ಶೆಫಟ್ಯ,  ಕೋರಹಿಯರಾದ ಎಲ್ಕಾನ, ಇಷ್ಷೀಯ, ಅಜರೇಲ್‌, ಯೋವೆಜೆರ್‌, ಯಾಷೊಬ್ಬಾಮ,+  ಗೆದೋರಿನ ಯೆರೋಹಾಮನ ಗಂಡು ಮಕ್ಕಳಾದ ಯೋವೆಲ, ಜೆಬದ್ಯ.  ಕೆಲವು ಗಾದ್ಯರು ಕಾಡಿನ ಭದ್ರ ಕೋಟೆಯಲ್ಲಿದ್ದ+ ದಾವೀದನ ಪಕ್ಷಕ್ಕೆ ಸೇರಿದ್ರು. ಅವರು ವೀರ ಸೈನಿಕರು. ಅವರು ಯುದ್ಧಕ್ಕಾಗಿ ತರಬೇತಿ ಪಡೆದ ಸೈನಿಕರು. ದೊಡ್ಡ ಗುರಾಣಿ, ಈಟಿ ಹಿಡಿದು ಯಾವಾಗ್ಲೂ ಸಿದ್ಧರಾಗಿ ಇರ್ತಿದ್ರು. ಅವ್ರ ಮುಖ ಸಿಂಹದ ಮುಖದ ತರ ಇತ್ತು. ಅವರು ಬೆಟ್ಟದಲ್ಲಿರೋ ಜಿಂಕೆ ತರ ವೇಗವಾಗಿ ಓಡ್ತಿದ್ರು.  ಅವ್ರ ಅಧಿಪತಿಯಾಗಿದ್ದ ಏಚೆರ, ಎರಡನೆಯವನು ಓಬದ್ಯ, ಮೂರನೆಯವನು ಎಲೀಯಾಬ್‌, 10  ನಾಲ್ಕನೆಯವನು ಮಷ್ಮನ್ನ, ಐದನೆಯವನು ಯೆರೆಮೀಯ, 11  ಆರನೆಯವನು ಅತೈ, ಏಳನೆಯವನು ಎಲೀಯೇಲ್‌, 12  ಎಂಟನೆಯವನು ಯೋಹಾನಾನ್‌, ಒಂಬತ್ತನೆಯವನು ಎಲ್ಜಾಬಾದ್‌, 13  ಹತ್ತನೆಯವನು ಯೆರೆಮೀಯ, ಹನ್ನೊಂದನೆಯವನು ಮಕ್ಬನೈ. 14  ಸೈನ್ಯದ ಅಧಿಪತಿಗಳಾಗಿದ್ದ ಇವರು ಗಾದ್ಯರಾಗಿದ್ರು.+ ಅವ್ರಲ್ಲಿ ಅತ್ಯಂತ ಬಲಹೀನ 100 ಜನ್ರಿಗೆ ಸಮ, ಅತ್ಯಂತ ಬಲಶಾಲಿ 1,000 ಜನ್ರಿಗೆ ಸಮ.+ 15  ಮೊದಲ್ನೇ ತಿಂಗಳಲ್ಲಿ ಯೋರ್ದನ್‌ ನದಿ ಉಕ್ಕಿ ಹರಿತಿದ್ದಾಗ ಅದನ್ನ ದಾಟಿದವರು ಇವರೇ. ಇವರು ತಗ್ಗು ಪ್ರದೇಶದಲ್ಲಿದ್ದ ಜನ್ರನ್ನೆಲ್ಲ ಪೂರ್ವದ ಕಡೆಗೆ ಪಶ್ಚಿಮದ ಕಡೆಗೆ ಓಡಿಸಿಬಿಟ್ರು. 16  ಬೆನ್ಯಾಮೀನ್‌, ಯೆಹೂದ ಕುಲದ ಕೆಲವು ಗಂಡಸ್ರು ಸಹ ಭದ್ರ ಕೋಟೆಯಲ್ಲಿದ್ದ ದಾವೀದನ ಹತ್ರ ಬಂದ್ರು.+ 17  ಆಗ ದಾವೀದ ಹೊರಗೆ ಬಂದು “ನೀವು ಒಳ್ಳೇ ಉದ್ದೇಶದಿಂದ ನನಗೆ ಸಹಾಯ ಮಾಡೋಕೆ ಬಂದ್ರೆ ನಾವು ಸ್ನೇಹಿತರಾಗ್ತೀವಿ. ಆದ್ರೆ ಏನೂ ತಪ್ಪುಮಾಡದಿರೋ ನನಗೆ ಮೋಸಮಾಡಿ ಶತ್ರುಗಳ ಕೈಗೆ ನನ್ನನ್ನ ಒಪ್ಪಿಸೋ ಉದ್ದೇಶದಿಂದ ಬಂದ್ರೆ ನಮ್ಮ ಪೂರ್ವಜರ ದೇವರು ಅದನ್ನ ನೋಡಿ ಶಿಕ್ಷೆ ಕೊಡ್ಲಿ”+ ಅಂದ. 18  ಆಗ 30 ಜನ್ರ ಅಧಿಪತಿಯಾಗಿದ್ದ ಅಮಾಸೈಯ+ ಮೇಲೆ ದೇವರ ಪವಿತ್ರಶಕ್ತಿ ಬಂತು. ಆಗ ಅವನು: “ದಾವೀದನೇ ನಾವು ನಿನ್ನವರು, ಇಷಯನ ಮಗನೇ, ನಾವು ನಿನ್ನ ಪಕ್ಷದಲ್ಲಿ ಇದ್ದೀವಿ.+ ನಿನಗೆ ಶಾಂತಿ-ಸಮಾಧಾನ ಇರಲಿ. ನಿನಗೆ ಸಹಾಯ ಮಾಡುವವರು ಕೂಡ ಸಮಾಧಾನವಾಗಿ ಇರಲಿ. ಯಾಕಂದ್ರೆ ನಿನ್ನ ದೇವರು ನಿಂಗೆ ಸಹಾಯ ಮಾಡ್ತಾ ಇದ್ದಾನೆ”+ ಅಂದ. ಈ ಮಾತು ಕೇಳಿ ದಾವೀದ ಅವ್ರನ್ನ ಸೇರಿಸ್ಕೊಂಡ, ಅವ್ರನ್ನ ಸಹ ಸೈನಿಕರ ಗುಂಪುಗಳ ಮೇಲೆ ಅಧಿಪತಿಗಳಾಗಿ ಮಾಡಿದ. 19  ಮನಸ್ಸೆ ಕುಲದ ಕೆಲವು ಜನ್ರು ಸಹ ಸೌಲನ ಸೈನ್ಯ ಬಿಟ್ಟು ದಾವೀದನ ಹತ್ರ ಬಂದ್ರು. ಆ ಸಮಯದಲ್ಲಿ ದಾವೀದ ಫಿಲಿಷ್ಟಿಯರ ಜೊತೆ ಸೇರಿ ಸೌಲನ ಮೇಲೆ ಯುದ್ಧಕ್ಕೆ ಹೋಗಿದ್ದ. ಆದ್ರೆ ದಾವೀದ ಫಿಲಿಷ್ಟಿಯರಿಗೆ ಸಹಾಯ ಮಾಡಲಿಲ್ಲ. ಯಾಕಂದ್ರೆ ಫಿಲಿಷ್ಟಿಯರ ಪ್ರಭುಗಳು+ ಒಬ್ರಿಗೊಬ್ರು “ಇವನು ತನ್ನ ಒಡೆಯನಾಗಿರೋ ಸೌಲನ ಜೊತೆ ಸೇರಿಕೊಂಡ್ರೆ ನಮ್ಮ ಪ್ರಾಣಕ್ಕೆ ಅಪಾಯ” ಅಂತ ಮಾತಾಡ್ಕೊಂಡು ದಾವೀದನನ್ನ ಕಳಿಸಿಬಿಟ್ಟಿದ್ರು.+ 20  ದಾವೀದ ಚಿಕ್ಲಗಿಗೆ+ ಹೋದಾಗ ಅವನ ಹತ್ರ ಮನಸ್ಸೆ ಕುಲದಿಂದ ಬಂದು ಸೇರಿಕೊಂಡ ಜನ್ರು ಯಾರಂದ್ರೆ ಆದ್ಣ, ಯೋಜಾಬಾದ, ಯೆದೀಯಯೇಲ್‌, ಮೀಕಾಯೇಲ, ಯೋಜಾಬಾದ, ಎಲೀಹೂ, ಚಿಲ್ಲೆತೈ. ಇವರು ಮನಸ್ಸೆಯ ಸೈನ್ಯದಲ್ಲಿದ್ದ ಸಾವಿರ ಸಾವಿರ ಸೈನಿಕರ ಮೇಲೆ ಮುಖ್ಯಸ್ಥರಾಗಿದ್ರು.+ 21  ಅವರು ಲೂಟಿಗಾರರ ಗುಂಪಿನ ವಿರುದ್ಧ ಹೋರಾಡೋಕೆ ದಾವೀದನಿಗೆ ಸಹಾಯ ಮಾಡಿದ್ರು. ಯಾಕಂದ್ರೆ ಅವ್ರೆಲ್ಲ ವೀರ ಸೈನಿಕರೂ ಧೀರರೂ ಆಗಿದ್ರು.+ ಅವರು ಸೈನ್ಯದ ಮುಖ್ಯಸ್ಥರಾದ್ರು. 22  ದಾವೀದನಿಗೆ ಸಹಾಯ ಮಾಡೋಕೆ ಬರ್ತಿದ್ದ ಜನ್ರ ಸಂಖ್ಯೆ ದಿನೇ ದಿನೇ ಜಾಸ್ತಿ ಆಯ್ತು.+ ಕೊನೆಗೆ ಅವನ ಸೈನ್ಯ ದೇವರ ಸೈನ್ಯದಷ್ಟು ದೊಡ್ಡದಾಯ್ತು.+ 23  ಯೆಹೋವನ ಆಜ್ಞೆ ಪ್ರಕಾರ ಸೌಲನ ರಾಜ್ಯಾಧಿಕಾರವನ್ನ ದಾವೀದನಿಗೆ ಒಪ್ಪಿಸೋಕೆ ಆಯುಧ ಹಿಡ್ಕೊಂಡು ಹೆಬ್ರೋನಿಗೆ+ ಬಂದ ಮುಖ್ಯಸ್ಥರ ಸಂಖ್ಯೆ ಹೀಗಿದೆ:+ 24  ದೊಡ್ಡ ಗುರಾಣಿ, ಈಟಿ ಹಿಡಿದಿದ್ದ ಯೆಹೂದದ ಗಂಡಸ್ರು 6,800. 25  ವೀರ ಸೈನಿಕರು ಧೀರರು ಆಗಿದ್ದ ಸಿಮೆಯೋನ್‌ ಕುಲದ ಸೈನಿಕರ ಸಂಖ್ಯೆ 7,100. 26  ಲೇವಿ ಕುಲದಿಂದ 4,600 ಜನ. 27  ಯೆಹೋಯಾದ+ ಆರೋನನ ವಂಶದವರ+ ನಾಯಕ. ಅವನ ಜೊತೆ 3,700 ಜನ ಇದ್ರು. 28  ಧೈರ್ಯಶಾಲಿ, ವೀರ ಸೈನಿಕ ಚಾದೋಕ,+ ಅವನ ಕುಲದವರಾದ 22 ಜನ ಮುಖ್ಯಸ್ಥರು ಇದ್ರು. 29  ಸೌಲನ+ ಸಹೋದರರಾದ ಬೆನ್ಯಾಮೀನ್‌ ಕುಲದವ್ರಿಂದ 3,000 ಜನ ಬಂದಿದ್ರು. ಇವ್ರಲ್ಲಿ ಅನೇಕರು ಅಲ್ಲಿ ತನಕ ಸೌಲನಿಗೆ, ಅವನ ಕುಟುಂಬಕ್ಕೆ ನಿಷ್ಠಾವಂತರಾಗಿದ್ರು. 30  ಎಫ್ರಾಯೀಮ್ಯರಿಂದ 20,800 ಜನ ವೀರ ಸೈನಿಕರು, ಧೀರರು ಬಂದಿದ್ರು. ಅವರು ತಮ್ಮತಮ್ಮ ತಂದೆ ಮನೆತನದಲ್ಲಿ ಪ್ರಸಿದ್ಧರಾಗಿದ್ರು. 31  ಮನಸ್ಸೆಯ ಅರ್ಧ ಕುಲದ ಜನ್ರಿಂದ ದಾವೀದನನ್ನ ರಾಜನಾಗಿ ಮಾಡೋಕೆ ಹೆಸ್ರು ಕರೆದು ಆರಿಸಿದ್ದ 18,000 ಗಂಡಸ್ರು ಬಂದಿದ್ರು. 32  ಇಸ್ಸಾಕಾರ್‌ ಕುಲದಿಂದ 200 ಮುಖ್ಯಸ್ಥರು ಬಂದಿದ್ರು. ಇವರು ಜಾಣರಾಗಿದ್ರು, ಸಮಯ ಸಂದರ್ಭ ನೋಡಿ ಏನು ಮಾಡಬೇಕು ಅಂತ ಇಸ್ರಾಯೇಲ್ಯರಿಗೆ ಹೇಳ್ತಿದ್ರು. ಇವ್ರ ಎಲ್ಲ ಸಹೋದರರು ಇವರು ಹೇಳಿದ ಹಾಗೇ ಕೇಳ್ತಿದ್ರು. 33  ಜೆಬುಲೂನ್‌ ಕುಲದಿಂದ 50,000 ಗಂಡಸ್ರು ಸೈನ್ಯ ಕಟ್ಕೊಂಡು ಬಂದಿದ್ರು. ಅವ್ರ ಹತ್ರ ಎಲ್ಲ ರೀತಿಯ ಆಯುಧ ಇತ್ತು. ಇವರು ದಾವೀದನಿಗೆ ನಿಷ್ಠಾವಂತರಾಗಿದ್ರು.* 34  ನಫ್ತಾಲಿ ಕುಲದಿಂದ 1,000 ಮುಖ್ಯಸ್ಥರು ಬಂದಿದ್ರು. ಅವ್ರ ಜೊತೆ ದೊಡ್ಡ ದೊಡ್ಡ ಗುರಾಣಿ, ಈಟಿಗಳನ್ನ ಹಿಡಿದಿದ್ದ 37,000 ಗಂಡಸ್ರು ಇದ್ರು. 35  ದಾನ್‌ ಕುಲದಿಂದ ಸೈನ್ಯ ಕಟ್ಕೊಂಡು 28,600 ಜನ ಬಂದಿದ್ರು. 36  ಅಶೇರ್‌ ಕುಲದಿಂದ 40,000 ಗಂಡಸರು ಆಯುಧ ಹಿಡ್ಕೊಂಡು ಸೈನ್ಯವಾಗಿ ಬಂದಿದ್ರು. 37  ಯೋರ್ದನಿನ ಆ ಕಡೆಯಿದ್ದ+ ರೂಬೇನ್ಯರಿಂದ, ಗಾದ್ಯರಿಂದ, ಮನಸ್ಸೆಯ ಅರ್ಧ ಕುಲದ ಜನ್ರಿಂದ 1,20,000 ಸೈನಿಕರು ಬಂದಿದ್ರು. ಇವ್ರ ಹತ್ರ ಯುದ್ಧಕ್ಕಾಗಿ ಬೇಕಾಗಿರೋ ಎಲ್ಲ ರೀತಿಯ ಆಯುಧ ಇತ್ತು. 38  ವೀರ ಸೈನಿಕರಾಗಿದ್ದ ಇವ್ರಿಗೆ ಸೈನ್ಯ ಕಟ್ಕೊಂಡು ಯುದ್ಧಕ್ಕೆ ಹೋಗೋ ಸಾಮರ್ಥ್ಯ ಇತ್ತು. ಇವರು ದಾವೀದನನ್ನ ಇಸ್ರಾಯೇಲಿನ ಮೇಲೆ ರಾಜನಾಗಿ ಮಾಡೋಕೆ ಒಂದೇ ಮನಸ್ಸಿಂದ ಹೆಬ್ರೋನಿಗೆ ಬಂದಿದ್ರು. ಉಳಿದ ಇಸ್ರಾಯೇಲ್ಯರು ಸಹ ಒಗ್ಗಟ್ಟಿಂದ* ದಾವೀದನನ್ನ ರಾಜನಾಗಿ ಮಾಡೋಕೆ ಅವ್ರನ್ನ ಬೆಂಬಲಿಸಿದ್ರು.+ 39  ಅವರು ಅಲ್ಲಿ ಮೂರು ದಿನ ದಾವೀದನ ಜೊತೆ ಉಳ್ಕೊಂಡ್ರು. ಅವ್ರ ಸಹೋದರರು ಅವ್ರಿಗೆ ಎಲ್ಲ ಏರ್ಪಾಡುಗಳನ್ನ ಮಾಡಿದ್ರಿಂದ ಅವರು ಅಲ್ಲಿ ತಿಂದು ಕುಡಿದ್ರು. 40  ಅವ್ರ ಪಕ್ಕದಲ್ಲಿ ವಾಸ ಇದ್ದ ಜನ್ರು, ಅಷ್ಟೇ ಅಲ್ಲ ಅವ್ರಿಂದ ತುಂಬ ದೂರ ಇದ್ದ ಇಸ್ಸಾಕಾರ್‌, ಜೆಬುಲೂನ್‌, ನಫ್ತಾಲಿ ಕುಲಗಳ ಜನ್ರು ಕತ್ತೆ, ಒಂಟೆ, ಹೇಸರಗತ್ತೆ, ದನಕುರಿಗಳ ಮೇಲೆ ಆಹಾರ ಹೇರ್ಕೊಂಡು ತರ್ತಿದ್ರು. ಅವರು ಹಿಟ್ಟು, ಅಂಜೂರ ಒಣದ್ರಾಕ್ಷಿಯ ಬಿಲ್ಲೆಗಳು, ದ್ರಾಕ್ಷಾಮದ್ಯ, ಎಣ್ಣೆ, ಕುರಿದನಗಳನ್ನ ಬೇಕಾದಷ್ಟು ತಂದ್ರು. ಯಾಕಂದ್ರೆ ಇಸ್ರಾಯೇಲಲ್ಲಿ ಸಂಭ್ರಮದ ವಾತಾವರಣ ಇತ್ತು.

ಪಾದಟಿಪ್ಪಣಿ

ಅಥವಾ “ದಾವೀದನ ಜೊತೆ ಸೇರಿದವ್ರಲ್ಲಿ ಯಾರು ಕೂಡ ಎರಡು ಮನಸ್ಸಿನವರು ಆಗಿರಲಿಲ್ಲ.”
ಅಕ್ಷ. “ಒಂದೇ ಹೃದಯದಿಂದ.”