ಒಂದನೇ ಪೂರ್ವಕಾಲವೃತ್ತಾಂತ 17:1-27

  • ದಾವೀದ ದೇವಾಲಯ ಕಟ್ಟಲ್ಲ (1-6)

  • ರಾಜ್ಯಕ್ಕಾಗಿ ದಾವೀದನ ಜೊತೆ ಒಪ್ಪಂದ (7-15)

  • ದಾವೀದ ಧನ್ಯವಾದ ಹೇಳ್ತಾ ಮಾಡಿದ ಪ್ರಾರ್ಥನೆ (16-27)

17  ದಾವೀದ ತನ್ನ ಸ್ವಂತ ಅರಮನೆಯಲ್ಲಿ ವಾಸ ಮಾಡೋಕೆ ಶುರುಮಾಡಿದ ಕೂಡ್ಲೇ ಅವನು ಪ್ರವಾದಿ ನಾತಾನನಿಗೆ+ “ಯೆಹೋವನ ಒಪ್ಪಂದದ ಮಂಜೂಷ ಬಟ್ಟೆಯಿಂದ ಮಾಡಿದ ಡೇರೆಯಲ್ಲಿದೆ.+ ಆದ್ರೆ ನಾನು ದೇವದಾರು ಮರದಿಂದ+ ಮಾಡಿದ ಮನೇಲಿ ಇದ್ದೀನಿ” ಅಂದ.  ಅದಕ್ಕೆ ನಾತಾನ “ನಿನಗೆ ಏನು ಆಸೆನೋ ಅದನ್ನೇ ಮಾಡು. ಯಾಕಂದ್ರೆ ದೇವರು ನಿನ್ನ ಜೊತೆ ಇದ್ದಾನೆ” ಅಂದ.  ಆ ರಾತ್ರಿನೇ ನಾತಾನನಿಗೆ ದೇವರ ಈ ಸಂದೇಶ ಬಂತು:  “ಹೋಗಿ ನನ್ನ ಸೇವಕನಾದ ದಾವೀದನಿಗೆ ಹೀಗೆ ಹೇಳು: ‘ಯೆಹೋವ ಹೇಳೋದು ಏನಂದ್ರೆ “ನಾನು ವಾಸ ಮಾಡೋ ಮನೆಯನ್ನ ನೀನು ಕಟ್ಟಲ್ಲ.+  ಇಸ್ರಾಯೇಲನ್ನ ಈಜಿಪ್ಟಿಂದ ಕರ್ಕೊಂಡು ಬಂದ ದಿನದಿಂದ ಇವತ್ತಿನ ತನಕ ನಾನು ಆಲಯದಲ್ಲಿ ಇರಲಿಲ್ಲ. ನಾನು ಯಾವಾಗ್ಲೂ ಒಂದು ಡೇರೆಯಿಂದ ಇನ್ನೊಂದು ಡೇರೆಗೆ, ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ* ಹೋಗ್ತಿದ್ದೆ.+  ಆ ಎಲ್ಲ ಸಮಯದಲ್ಲಿ ನಾನು ಇಡೀ ಇಸ್ರಾಯೇಲ್ಯರ ಜೊತೆ ನಡಿತಿದ್ದೆ. ನನ್ನ ಜನ್ರನ್ನ ಇಸ್ರಾಯೇಲಿನ ಯಾವ ನ್ಯಾಯಾಧೀಶ ನೋಡ್ಕೊಬೇಕು ಅಂತ ನಾನೇ ಆರಿಸ್ತಿದ್ದೆ. ಆ ನ್ಯಾಯಾಧೀಶರಲ್ಲಿ ಯಾರ ಹತ್ರನಾದ್ರೂ ‘ನನಗಾಗಿ ದೇವದಾರು ಮರದಿಂದ ಒಂದು ಮನೆ ಕಟ್ಕೊಡಿ’ ಅಂತ ಕೇಳಿದ್ನಾ?”’  ಈಗ ನನ್ನ ಸೇವಕನಾದ ದಾವೀದನಿಗೆ ಹೀಗೆ ಹೇಳು: ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ: “ಹುಲ್ಲುಗಾವಲುಗಳಲ್ಲಿ ಕುರಿಕಾಯ್ತಿದ್ದ ನಿನ್ನನ್ನ, ನಾನು ಕರ್ಕೊಂಡು ಬಂದು ನನ್ನ ಜನ್ರಾದ ಇಸ್ರಾಯೇಲ್ಯರ ಮೇಲೆ ನಾಯಕನಾಗಿ ಮಾಡಿದೆ.+  ನೀನು ಎಲ್ಲಿ ಹೋದ್ರೂ ನಾನು ನಿನ್ನ ಜೊತೆ ಇರ್ತಿನಿ.+ ನಿನ್ನ ಶತ್ರುಗಳನ್ನೆಲ್ಲ ನಿನ್ನ ಮುಂದಿಂದ ಓಡಿಸಿಬಿಡ್ತೀನಿ.*+ ಭೂಮಿಯಲ್ಲಿರೋ ಮಹಾ ಪುರುಷರ ಹೆಸ್ರಿನ ತರ ನಿನಗೂ ದೊಡ್ಡ ಹೆಸ್ರು ಬರೋ ತರ ಮಾಡ್ತೀನಿ.+  ನನ್ನ ಜನ್ರಾದ ಇಸ್ರಾಯೇಲ್ಯರು ನೆಲೆಯೂರೋ ತರ ಅವ್ರಿಗೆ ಒಂದು ಜಾಗ ಕೊಡ್ತೀನಿ. ಅಲ್ಲಿ ಅವರು ಇರ್ತಾರೆ. ಮುಂದೆ ಯಾವತ್ತೂ ಅವ್ರಿಗೆ ತೊಂದ್ರೆ ಆಗಲ್ಲ. ಕೆಟ್ಟವರು ಅವ್ರನ್ನ ಮುಂಚಿನ ಹಾಗೆ ತುಳಿದು ಹಾಕಲ್ಲ.+ 10  ನಾನು ನನ್ನ ಜನ್ರಾದ ಇಸ್ರಾಯೇಲ್ಯರ ಮೇಲೆ ನ್ಯಾಯಾಧೀಶರನ್ನ ನೇಮಿಸಿದ ದಿನದಿಂದ ಕೆಟ್ಟವರು ಅವ್ರಿಗೆ ಕಾಟ ಕೊಡ್ತಾ ಇದ್ದಾರೆ.+ ನಿನ್ನ ಎಲ್ಲ ಶತ್ರುಗಳು ನಿನಗೆ ಅಧೀನರಾಗೋ ತರ ಮಾಡ್ತೀನಿ.+ ನಾನು ನಿನಗೆ ಇನ್ನೊಂದು ಮಾತು ಹೇಳ್ತೀನಿ, ಅದೇನಂದ್ರೆ ‘ಯೆಹೋವನೇ ನಿನಗಾಗಿ ಒಂದು ರಾಜಮನೆತನ* ಕಟ್ಟಿ ಕೊಡ್ತಾನೆ.’ 11  ನೀನು ಸತ್ತು, ನಿನ್ನ ಪೂರ್ವಜರ ತರ ತೀರಿಹೋದಾಗ ನಿನ್ನ ನಂತ್ರದ ಸಂತಾನವನ್ನ ಅಂದ್ರೆ ನಿನ್ನ ಗಂಡು ಮಕ್ಕಳಲ್ಲಿ ಒಬ್ಬನನ್ನ ಮೇಲೇರಿಸ್ತೀನಿ.+ ನಾನು ಅವನ ರಾಜ್ಯಾಧಿಕಾರವನ್ನ ದೃಢಪಡಿಸ್ತೀನಿ.+ 12  ಅವನೇ ನನಗಾಗಿ ಮನೆ ಕಟ್ತಾನೆ.+ ಅವನ ಸಿಂಹಾಸನವನ್ನ ನಾನು ಶಾಶ್ವತವಾಗಿ ಇರೋ ಹಾಗೆ ಮಾಡ್ತೀನಿ.+ 13  ನಾನು ಅವನಿಗೆ ತಂದೆ ಆಗ್ತೀನಿ, ಅವನು ನನಗೆ ಮಗನಾಗ್ತಾನೆ.+ ನಿನಗಿಂತ ಮುಂಚೆ ಇದ್ದ ವ್ಯಕ್ತಿ ಕಡೆಗೆ ನನಗಿದ್ದ ಶಾಶ್ವತ ಪ್ರೀತಿಯನ್ನ ತೆಗೆದುಬಿಟ್ಟೆ.+ ಆದ್ರೆ ನಿನ್ನ ಮಗನ ವಿಷ್ಯದಲ್ಲಿ ಹಾಗೆ ಮಾಡಲ್ಲ.+ 14  ಅವನು ನನ್ನ ಆಲಯದಲ್ಲಿ, ನನ್ನ ರಾಜ್ಯದಲ್ಲಿ ಯಾವಾಗ್ಲೂ ಇರೋ ಹಾಗೆ ಮಾಡ್ತೀನಿ.+ ಅವನ ಸಿಂಹಾಸನ ಶಾಶ್ವತವಾಗಿ ಇರುತ್ತೆ.”’”+ 15  ಈ ಎಲ್ಲ ಮಾತನ್ನ, ಈ ಇಡೀ ದರ್ಶನವನ್ನ* ನಾತಾನ ದಾವೀದನಿಗೆ ಹೇಳಿದ. 16  ಆಗ ರಾಜ ದಾವೀದ ಯೆಹೋವನ ಮುಂದೆ ಕೂತು ಹೀಗಂದ: “ಯೆಹೋವ ದೇವರೇ ನಾನ್ಯಾರು? ನನ್ನ ಮನೆತನಕ್ಕೆ ಯೋಗ್ಯತೆನೇ ಇಲ್ಲ. ನೀನು ಇವತ್ತಿನ ತನಕ ನಮಗೆ ಏನೆಲ್ಲ ಮಾಡಿದ್ದೀಯ!+ 17  ಅಷ್ಟೇ ಅಲ್ಲ ನಿನ್ನ ಸೇವಕನ ಮನೆ ಸದಾಕಾಲ ಇರುತ್ತೆ ಅಂತನೂ ನನಗೆ ಹೇಳಿದ್ದೀಯ.+ ಯೆಹೋವ ದೇವರೇ, ನಾನು ಇನ್ನೂ ಗೌರವ ಸಿಗಬೇಕಾದ ವ್ಯಕ್ತಿ ಅನ್ನೋ ತರ ನನ್ನನ್ನ ನೋಡ್ತಿದ್ದೀಯ. 18  ನಿನಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತಿರುವಾಗ, ನಿನ್ನ ಸೇವಕನಾದ ನನಗೆ ಇಷ್ಟೊಂದು ಗೌರವ ಕೊಟ್ಟಿರುವಾಗ ನಾನು ಇನ್ನೇನು ಹೇಳಕ್ಕಾಗುತ್ತೆ?+ 19  ಯೆಹೋವನೇ, ನಿನ್ನ ಈ ಸೇವಕನ ಸಲುವಾಗಿ, ನಿನ್ನ ಇಷ್ಟದ ಪ್ರಕಾರ ಈ ಎಲ್ಲ ಅದ್ಭುತಗಳನ್ನ ಮಾಡಿ ನಿನ್ನ ಮಹತ್ತನ್ನ ತೋರಿಸಿದೆ.+ 20  ಯೆಹೋವ, ನಿನ್ನ ತರ ಯಾರೂ ಇಲ್ಲ.+ ನಿನ್ನನ್ನ ಬಿಟ್ಟು ಬೇರೆ ದೇವರಿಲ್ಲ.+ ನಮ್ಮ ಕಿವಿಯಾರೆ ಕೇಳಿಸ್ಕೊಂಡ ವಿಷ್ಯಗಳೆಲ್ಲ ಇದನ್ನ ಸತ್ಯ ಅಂತ ಸಾಬೀತು ಮಾಡುತ್ತೆ. 21  ಭೂಮಿಯಲ್ಲಿರೋ ಬೇರೆ ಯಾವ ಜನಾಂಗ ನಿನ್ನ ಜನ್ರಾದ ಇಸ್ರಾಯೇಲ್‌ ತರ ಇದೆ?+ ಸತ್ಯ ದೇವರಾಗಿರೋ ನೀನು ಅವ್ರನ್ನ ಬಿಡಿಸಿ ನಿನ್ನ ಜನ್ರಾಗಿ ಮಾಡ್ಕೊಂಡೆ.+ ಅವ್ರಿಗಾಗಿ ಮಹಾ ಕೆಲಸಗಳನ್ನ, ವಿಸ್ಮಯಕಾರಿ ವಿಷ್ಯಗಳನ್ನ ಮಾಡಿದೆ. ನೀನು ಈಜಿಪ್ಟಿಂದ ಬಿಡಿಸ್ಕೊಂಡು ಬಂದ ನಿನ್ನ ಜನ್ರಿಗಾಗಿ ಬೇರೆ ಜನ್ರನ್ನ ಅವ್ರ ಮುಂದಿಂದ ಓಡಿಸಿಬಿಟ್ಟೆ.+ ಹೀಗೆ ನಿನ್ನ ಹೆಸ್ರಿಗೆ ಗೌರವ ತಂದ್ಕೊಂಡೆ.+ 22  ನಿನ್ನ ಜನ್ರಾದ ಇಸ್ರಾಯೇಲ್ಯರನ್ನ ಶಾಶ್ವತವಾಗಿ ನಿನ್ನ ಸ್ವಂತ ಜನ್ರಾಗಿ ಮಾಡ್ಕೊಂಡೆ.+ ಯೆಹೋವ ನೀನೇ ಅವ್ರ ದೇವರಾದೆ.+ 23  ಯೆಹೋವ ದೇವರೇ ನಿನ್ನ ಸೇವಕನ ಬಗ್ಗೆ, ಅವನ ಮನೆ ಬಗ್ಗೆ ಕೊಟ್ಟ ಮಾತನ್ನ ಯಾವಾಗ್ಲೂ ನೆರವೇರಿಸು. ಮಾತು ಕೊಟ್ಟ ಹಾಗೇ ಮಾಡು.+ 24  ‘ಇಸ್ರಾಯೇಲಿನ ದೇವರೂ ಸೈನಗಳ ದೇವರೂ ಆದ ಯೆಹೋವ ಇಸ್ರಾಯೇಲ್ಯರಿಗೆ ದೇವರಾಗಿದ್ದಾನೆ’ ಅಂತ ಜನ್ರು ಹೇಳೋ ಹಾಗೆ ನಿನ್ನ ಹೆಸ್ರು ಯಾವಾಗ್ಲೂ ಇರಲಿ, ಅದಕ್ಕೆ ತುಂಬ ಗೌರವ ಸಿಗಲಿ.+ ನಿನ್ನ ಸೇವಕನಾದ ದಾವೀದನ ರಾಜವಂಶ ನಿನ್ನ ಮುಂದೆ ದೃಢವಾಗಿ ನಿಲ್ಲಲಿ.+ 25  ನನ್ನ ದೇವರೇ, ನಿನಗಾಗಿ ಒಂದು ಆಲಯ* ಕಟ್ಟೋ ನಿನ್ನ ಉದ್ದೇಶವನ್ನ ನೀನು ನಿನ್ನ ಸೇವಕನಿಗೆ ಹೇಳಿದೆ. ಹಾಗಾಗಿ ನಿನ್ನ ಈ ಸೇವಕನಿಗೆ ನಿನ್ನ ಹತ್ರ ನಂಬಿಕೆಯಿಂದ ಹೀಗೆ ಪ್ರಾರ್ಥಿಸೋಕೆ ಆಯ್ತು. 26  ಯೆಹೋವ, ನೀನೇ ನಿಜವಾದ ದೇವರು. ನಿನ್ನ ಸೇವಕನಿಗೆ ಈ ಒಳ್ಳೇ ವಿಷ್ಯಗಳನ್ನ ಮಾಡ್ತೀನಿ ಅಂತ ಮಾತು ಕೊಟ್ಟಿದ್ದೀಯ. 27  ಹಾಗಾಗಿ ದಯವಿಟ್ಟು ಈ ನಿನ್ನ ಸೇವಕನ ರಾಜವಂಶವನ್ನ ಆಶೀರ್ವದಿಸು. ಅದು ಯಾವಾಗ್ಲೂ ನಿನ್ನ ಮುಂದೆನೇ ಇರಲಿ. ಯಾಕಂದ್ರೆ ಯೆಹೋವನೇ, ನನ್ನ ಮನೆಯನ್ನ ನೀನೇ ಆಶೀರ್ವದಿಸಿದ್ದೀಯ, ಆ ನಿನ್ನ ಆಶೀರ್ವಾದ ಶಾಶ್ವತವಾಗಿ ಇರುತ್ತೆ.”

ಪಾದಟಿಪ್ಪಣಿ

ಬಹುಶಃ ಇದ್ರರ್ಥ “ಒಂದು ಡೇರೆಯ ಸ್ಥಳದಿಂದ ಮತ್ತೊಂದು ಡೇರೆಯ ಸ್ಥಳಕ್ಕೆ ಮತ್ತು ಒಂದು ವಾಸಸ್ಥಾನದಿಂದ ಮತ್ತೊಂದು ವಾಸಸ್ಥಾನಕ್ಕೆ.”
ಅಕ್ಷ. “ನಾಶಮಾಡ್ತೀನಿ.”
ಅಥವಾ “ಸಾಮ್ರಾಜ್ಯ.”
ಅಥವಾ “ಸಾಮ್ರಾಜ್ಯ.”