ಒಂದನೇ ಪೂರ್ವಕಾಲವೃತ್ತಾಂತ 18:1-17

  • ದಾವೀದನ ವಿಜಯಗಳು (1-13)

  • ದಾವೀದನ ಆಡಳಿತ (14-17)

18  ಸ್ವಲ್ಪ ಸಮಯ ಆದ್ಮೇಲೆ ದಾವೀದ ಫಿಲಿಷ್ಟಿಯರನ್ನ ಸೋಲಿಸಿ ಅವ್ರನ್ನ, ಅವ್ರ ಕೈಯಿಂದ ಗತ್‌+ ಊರನ್ನ ಅದಕ್ಕೆ ಸೇರಿದ* ಊರುಗಳನ್ನ ವಶ ಮಾಡ್ಕೊಂಡ.+  ಅವನು ಮೋವಾಬ್ಯರನ್ನ ಸೋಲಿಸಿದ.+ ಅವರು ಅವನ ಸೇವಕರಾದ್ರು, ಅವನಿಗೆ ಕಪ್ಪ ಕೊಡ್ತಾ ಇದ್ರು.+  ಚೋಬದ+ ರಾಜ ಹದದೆಜೆರ+ ಯೂಫ್ರೆಟಿಸ್‌ ನದಿ ಪ್ರದೇಶದಲ್ಲಿ ತನ್ನ ರಾಜ್ಯಾಧಿಕಾರ ಸ್ಥಾಪಿಸೋಕೆ+ ಹೋಗ್ತಿದ್ದಾಗ ಹಾಮಾತಿನ+ ಹತ್ರ ದಾವೀದ ಅವನನ್ನ ಸೋಲಿಸಿದ.  ದಾವೀದ ಅವನ 1,000 ರಥಗಳನ್ನ, 7,000 ಕುದುರೆ ಸವಾರರನ್ನ, 20,000 ಕಾಲಾಳುಗಳನ್ನ ಸೆರೆಹಿಡಿದ.+ ಆಮೇಲೆ ರಥಗಳ 100 ಕುದುರೆ ಬಿಟ್ಟು ಉಳಿದೆಲ್ಲ ಕುದುರೆಗಳ ಹಿಂದಿನ ಕಾಲಿನ ನರಗಳನ್ನ ಕತ್ತರಿಸಿದ.+  ದಮಸ್ಕದ ಅರಾಮ್ಯರು ಚೋಬದ ರಾಜ ಹದದೆಜೆರನಿಗೆ ಸಹಾಯ ಮಾಡೋಕೆ ಬಂದಾಗ ದಾವೀದ 22,000 ಅರಾಮ್ಯರನ್ನ ಕೊಂದ.+  ಆಮೇಲೆ ದಾವೀದ ದಮಸ್ಕದ ಅರಾಮ್ಯರ ಪ್ರದೇಶದಲ್ಲಿ ಕಾವಲುಪಡೆಗಳನ್ನ ಇಟ್ಟ. ಅರಾಮ್ಯರು ದಾವೀದನ ಸೇವಕರಾದ್ರು, ಅವನಿಗೆ ಕಪ್ಪ ಕೊಡ್ತಾ ಹೋದ್ರು. ದಾವೀದ ಹೋದಲ್ಲೆಲ್ಲ ಯೆಹೋವ ಅವನಿಗೆ ಜಯ* ಕೊಟ್ಟನು.+  ಅಷ್ಟೇ ಅಲ್ಲ, ದಾವೀದ ಹದದೆಜೆರನ ಸೇವಕರಿಂದ ವೃತ್ತಾಕಾರದ ಬಂಗಾರದ ಗುರಾಣಿಗಳನ್ನ ತಗೊಂಡು ಯೆರೂಸಲೇಮಿಗೆ ಬಂದ.  ಹದದೆಜೆರನ ಪಟ್ಟಣಗಳಾದ ಟಿಭತ್‌, ಕೂನದಿಂದ ರಾಜ ದಾವೀದ ತುಂಬಾ ತಾಮ್ರ ತಗೊಂಡ. ಆ ತಾಮ್ರ ಬಳಸಿ ಸೊಲೊಮೋನ ತಾಮ್ರದ ಸಮುದ್ರವನ್ನ,+ ಕಂಬಗಳನ್ನ, ಪಾತ್ರೆಗಳನ್ನ+ ಮಾಡಿಸಿದ.  ದಾವೀದ ಚೋಬದ ರಾಜ ಹದದೆಜೆರನ ಇಡೀ ಸೈನ್ಯವನ್ನ ಸೋಲಿಸಿದ್ದಾನೆ+ ಅನ್ನೋ ಸುದ್ದಿ ಹಾಮಾತಿನ ರಾಜನಾದ ತೋವಿಯ ಕಿವಿಗೆ ಬಿತ್ತು.+ 10  ತಕ್ಷಣ ತೋವಿ ದಾವೀದ ಹೇಗಿದ್ದಾನೆ ಅಂತ ವಿಚಾರಿಸೋಕೆ, ಹದದೆಜೆರನ ವಿರುದ್ಧ ಹೋರಾಡಿ ಅವನನ್ನ ಸೋಲಿಸಿದ್ದಕ್ಕಾಗಿ ಅಭಿನಂದನೆ ಹೇಳೋಕೆ ತನ್ನ ಮಗ ಹದೋರಾಮನನ್ನ* ಕಳಿಸಿದ. (ಯಾಕಂದ್ರೆ ತೋವಿ ವಿರುದ್ಧ ಹದದೆಜೆರ ಆಗಾಗ ಯುದ್ಧಕ್ಕೆ ಬರ್ತಿದ್ದ.) ಹದೋರಾಮ ದಾವೀದನಿಗಾಗಿ ಬೆಳ್ಳಿ, ಬಂಗಾರ, ತಾಮ್ರದ ಬೇರೆ ಬೇರೆ ವಸ್ತುಗಳನ್ನ ತಗೊಂಡು ಬಂದ. 11  ಇದರ ಜೊತೆಗೆ ರಾಜ ದಾವೀದ ತಾನು ತಗೊಂಡು ಬಂದಿದ್ದ ಬೆಳ್ಳಿಬಂಗಾರವನ್ನೂ ಯೆಹೋವನಿಗಾಗಿ ಮೀಸಲಿಟ್ಟ.+ ಆ ಬೆಳ್ಳಿಬಂಗಾರವನ್ನ ಎದೋಮಿಂದ, ಮೋವಾಬಿಂದ, ಅಮ್ಮೋನಿಯರಿಂದ,+ ಫಿಲಿಷ್ಟಿಯರಿಂದ,+ ಅಮಾಲೇಕ್ಯರಿಂದ+ ತಗೊಂಡು ಬಂದಿದ್ದ. 12  ಚೆರೂಯಳ+ ಮಗ ಅಬೀಷೈ+ 18,000 ಎದೋಮ್ಯರನ್ನ ಉಪ್ಪಿನ ಕಣಿವೆಯಲ್ಲಿ ಕೊಂದ.+ 13  ಅವನು ಎದೋಮಲ್ಲಿ ಕಾವಲು ಪಡೆಗಳನ್ನ ಇಟ್ಟ. ಆಗ ಎಲ್ಲ ಎದೋಮ್ಯರು ದಾವೀದನ ಸೇವಕರಾದ್ರು.+ ದಾವೀದ ಹೋದಲ್ಲೆಲ್ಲ ಯೆಹೋವ ಅವನಿಗೆ ಜಯ* ಕೊಟ್ಟನು.+ 14  ದಾವೀದ ಇಡೀ ಇಸ್ರಾಯೇಲ್‌ ಮೇಲೆ ರಾಜ್ಯಭಾರ ಮಾಡ್ತಾ+ ತನ್ನೆಲ್ಲ ಜನ್ರಿಗಾಗಿ ನೀತಿನ್ಯಾಯದಿಂದ ಆಳಿದ.+ 15  ಚೆರೂಯಳ ಮಗ ಯೋವಾಬ ಸೇನಾಪತಿಯಾಗಿದ್ದ.+ ಅಹೀಲೂದನ ಮಗ ಯೆಹೋಷಾಫಾಟ+ ದಾಖಲೆಗಾರ ಆಗಿದ್ದ. 16  ಅಹೀಟೂಬನ ಮಗ ಚಾದೋಕ, ಎಬ್ಯಾತಾರನ ಮಗ ಅಹೀಮೆಲೆಕ ಪುರೋಹಿತರು ಆಗಿದ್ರು. ಶವ್ಷ ಕಾರ್ಯದರ್ಶಿ ಆಗಿದ್ದ. 17  ಯೆಹೋಯಾದನ ಮಗ ಬೆನಾಯ ಕೆರೇತ್ಯರ,+ ಪೆಲೇತ್ಯರ+ ಮೇಲೆ ಮುಖ್ಯಸ್ಥನಾಗಿದ್ದ. ದಾವೀದನ ಮಕ್ಕಳು ರಾಜನ ನಂತ್ರದ ಸ್ಥಾನಗಳಲ್ಲಿ ಮುಖ್ಯಮಂತ್ರಿ ಆಗಿದ್ರು.

ಪಾದಟಿಪ್ಪಣಿ

ಅಥವಾ “ಸುತ್ತಮುತ್ತ ಇದ್ದ.”
ಅಥವಾ “ರಕ್ಷಣೆ.”
2 ಸಮು 8:10ರಲ್ಲಿ ಯೋರಾಮ.
ಅಥವಾ “ರಕ್ಷಣೆ.”