ಒಂದನೇ ಪೂರ್ವಕಾಲವೃತ್ತಾಂತ 20:1-8

  • ರಬ್ಬಾ ವಶ (1-3)

  • ಫಿಲಿಷ್ಟಿಯರ ದೈತ್ಯರನ್ನ ಕೊಲ್ಲಲಾಯ್ತು (4-8)

20  ವರ್ಷದ ಆರಂಭದಲ್ಲಿ* ರಾಜರು ಯುದ್ಧಕ್ಕೆ ಹೋಗ್ತಿದ್ದ ಸಮಯದಲ್ಲಿ ಯೋವಾಬ+ ಒಂದು ಸೈನ್ಯ ಕರ್ಕೊಂಡು ಹೋಗಿ ಅಮ್ಮೋನಿಯರ ದೇಶ ನಾಶಮಾಡಿದ. ಆಮೇಲೆ ಅವನು ರಬ್ಬಾ ಪಟ್ಟಣಕ್ಕೆ+ ಮುತ್ತಿಗೆ ಹಾಕಿದ. ಆ ಸಮಯದಲ್ಲಿ ದಾವೀದ ಯೆರೂಸಲೇಮಲ್ಲಿ ಇದ್ದ.+ ಯೋವಾಬ ರಬ್ಬಾ ಪಟ್ಟಣದ ಮೇಲೆ ದಾಳಿ ಮಾಡಿ ಹಾಳುಮಾಡಿಬಿಟ್ಟ.+  ಆಮೇಲೆ ದಾವೀದ ಮಲ್ಕಾಮನ* ತಲೆ ಮೇಲಿದ್ದ ಕಿರೀಟ ತಗೊಂಡ. ಅದ್ರಲ್ಲಿ ಒಂದು ತಲಾಂತು* ಚಿನ್ನ, ಅಮೂಲ್ಯ ರತ್ನಗಳು ಇದೆ ಅಂತ ಅವನಿಗೆ ಗೊತ್ತಾಯ್ತು. ಆಮೇಲೆ ಅದನ್ನ ದಾವೀದನ ತಲೆ ಮೇಲೆ ಇಟ್ರು. ಅವನು ಆ ಪಟ್ಟಣದಿಂದ ತುಂಬಾ ಕೊಳ್ಳೆ ಸಹ ತಗೊಂಡ.+  ಅಲ್ಲದೆ ದಾವೀದ ಆ ಪಟ್ಟಣದಲ್ಲಿದ್ದ ಜನ್ರನ್ನ ಕರ್ಕೊಂಡು ಬಂದು ಕಲ್ಲು ಕತ್ತರಿಸೋಕೆ, ಚೂಪಾದ ಕಬ್ಬಿಣದ ಉಪಕರಣ ಮತ್ತು ಕೊಡಲಿಯಿಂದ ಕೆಲಸ ಮಾಡೋಕೆ ಇಟ್ಟ.+ ಹೀಗೇ ಅವನು ಅಮ್ಮೋನಿಯರ ಎಲ್ಲ ಪಟ್ಟಣಗಳ ಜನ್ರಿಗೂ ಮಾಡಿದ. ಕೊನೆಗೆ ದಾವೀದ, ಎಲ್ಲ ಸೈನಿಕರು ಯೆರೂಸಲೇಮಿಗೆ ವಾಪಸ್‌ ಬಂದ್ರು.  ಇದಾದ್ಮೇಲೆ ಫಿಲಿಷ್ಟಿಯರ ಜೊತೆ ಗೆಜೆರ್‌ ಅನ್ನೋ ಜಾಗದಲ್ಲಿ ಯುದ್ಧ ನಡಿತು. ಆಗ ಹುಷಾತ್ಯನಾಗಿದ್ದ ಸಿಬ್ಕೈ+ ರೆಫಾಯರ+ ವಂಶಕ್ಕೆ ಸೇರಿದ ಸಿಪೈ ಅನ್ನು ಕೊಂದುಹಾಕಿದ. ಹೀಗೆ ಫಿಲಿಷ್ಟಿಯರು ಇಸ್ರಾಯೇಲ್ಯರಿಗೆ ಅಧೀನರಾದ್ರು.  ಆಮೇಲೆ ಫಿಲಿಷ್ಟಿಯರ ವಿರುದ್ಧ ಇನ್ನೊಂದು ಸಲ ಯುದ್ಧ ಮಾಡಿದ್ರು. ಆಗ ಯಾಯೀರನ ಮಗ ಎಲ್ಹಾನಾನ ಗಿತ್ತೀಯನಾದ ಗೊಲ್ಯಾತನ+ ಸಹೋದರ ಲಹ್ಮೀಯನ್ನ ಸಾಯಿಸಿದ. ಲಹ್ಮೀಯ ಈಟಿಯ ಹಿಡಿ ಮಗ್ಗ ನೇಯುವವರ ಹಿಡಿ ತರ ಇತ್ತು.+  ಗತ್‌+ ಊರಲ್ಲಿ ಇನ್ನೊಂದು ಸಲ ಯುದ್ಧ ನಡಿತು. ಫಿಲಿಷ್ಟಿಯರ ಸೇನೆಯಲ್ಲಿ ತುಂಬ ಎತ್ರ ಇದ್ದ ಒಬ್ಬ ವ್ಯಕ್ತಿ ಇದ್ದ.+ ಅವನ ಕೈಕಾಲುಗಳಲ್ಲಿ ಆರಾರು ಬೆರಳು ಇತ್ತು, ಅಂದ್ರೆ ಒಟ್ಟು 24 ಬೆರಳಿತ್ತು. ಅವನು ಸಹ ರೆಫಾಯರ ವಂಶಕ್ಕೆ ಸೇರಿದವ.+  ಅವನು ಇಸ್ರಾಯೇಲ್ಯರನ್ನ ಕೆಣಕಿ ಮಾತಾಡ್ತಾ ಇದ್ದಿದ್ರಿಂದ+ ಯೋನಾತಾನ ಅವನನ್ನ ಕೊಂದುಹಾಕಿದ. ಇವನು ದಾವೀದನ ಸಹೋದರ ಶಿಮ್ಮನ+ ಮಗ.  ಗತ್‌+ ಊರಲ್ಲಿ ವಾಸ ಇದ್ದ ಇವರು ರೆಫಾಯರ+ ವಂಶಕ್ಕೆ ಸೇರಿದವರು. ಇವರು ದಾವೀದನ, ಅವನ ಸೇವಕರ ಕೈಯಿಂದ ಪ್ರಾಣ ಕಳ್ಕೊಂಡ್ರು.

ಪಾದಟಿಪ್ಪಣಿ

ಅದು, ವಸಂತಕಾಲ.
2 ಸಮುವೇಲ 12:30ರ ಪಾದಟಿಪ್ಪಣಿ ನೋಡಿ.
ಸುಮಾರು 34.2 ಕೆಜಿ. ಪರಿಶಿಷ್ಟ ಬಿ14 ನೋಡಿ.