ಒಂದನೇ ಪೂರ್ವಕಾಲವೃತ್ತಾಂತ 22:1-19

  • ದೇವಾಲಯಕ್ಕಾಗಿ ದಾವೀದನ ತಯಾರಿ (1-5)

  • ದಾವೀದನಿಂದ ಸೊಲೊಮೋನನಿಗೆ ನಿರ್ದೇಶನ (6-16)

  • ಸೊಲೊಮೋನನಿಗೆ ಸಹಾಯ ಮಾಡೋಕೆ ನಾಯಕರಿಗೆ ಆಜ್ಞೆ (17-19)

22  ದಾವೀದ “ಸತ್ಯ ದೇವರಾದ ಯೆಹೋವನ ಆಲಯ ಇದೇ. ಇಸ್ರಾಯೇಲ್ಯರು ಅರ್ಪಿಸೋ ಸರ್ವಾಂಗಹೋಮದ ಯಜ್ಞವೇದಿ ಇದೇ”+ ಅಂದ.  ಆಮೇಲೆ ದಾವೀದ ಇಸ್ರಾಯೇಲ್‌ ದೇಶದಲ್ಲಿದ್ದ ವಿದೇಶಿಯರನ್ನ ಒಂದು ಕಡೆ ಸೇರಿಸೋಕೆ ಹೇಳಿ,+ ಕಲ್ಲು ಒಡೆಯೋ ಕೆಲಸವನ್ನ ಅವ್ರಿಗೆ ನೇಮಿಸಿದ. ಸತ್ಯ ದೇವರ ಆಲಯ ಕಟ್ಟೋಕೆ ಅವರು ಕಲ್ಲು ಕತ್ತರಿಸಿ ಆಕಾರ ಕೊಡ್ತಿದ್ರು.+  ಬಾಗಿಲುಗಳಿಗಾಗಿ ಬೇಕಾಗಿರೋ ಮೊಳೆ, ಹಿಡಿಕೆಗಳನ್ನ ತಯಾರಿಸೋಕೆ ಭಾರಿ ಮೊತ್ತದ ಕಬ್ಬಿಣವನ್ನ ದಾವೀದ ಶೇಖರಿಸಿಟ್ಟ. ತೂಕ ಮಾಡೋಕೆ ಆಗದಷ್ಟು ತಾಮ್ರ ಕೂಡಿಸಿಟ್ಟ.+  ಜೊತೆಗೆ ಲೆಕ್ಕ ಮಾಡೋಕೆ ಆಗದಷ್ಟು ದೇವದಾರು ಮರಗಳನ್ನ+ ಶೇಖರಿಸಿಟ್ಟ. ಯಾಕಂದ್ರೆ ಸೀದೋನ್ಯರು,+ ತೂರ್ಯರು+ ಭಾರಿ ಮೊತ್ತದಲ್ಲಿ ದೇವದಾರು ಮರಗಳನ್ನ ದಾವೀದನಿಗೆ ತಂದ್ಕೊಟ್ರು.  ಆಮೇಲೆ ದಾವೀದ “ನನ್ನ ಮಗ ಸೊಲೊಮೋನ ಇನ್ನೂ ಚಿಕ್ಕವನು. ಅವನಿಗೆ ಅನುಭವ ಇಲ್ಲ.+ ಯೆಹೋವನಿಗಾಗಿ ಕಟ್ಟೋ ಆಲಯ ಎಷ್ಟು ಶ್ರೇಷ್ಠ + ಅಂದ್ರೆ ಅದ್ರ ಸೌಂದರ್ಯದ ಬಗ್ಗೆ, ವೈಭವದ+ ಬಗ್ಗೆ ಎಲ್ಲ ದೇಶದ ಜನ್ರಿಗೆ ಗೊತ್ತಾಗಬೇಕು.+ ಹಾಗಾಗಿ ನಾನು ನನ್ನ ಮಗನಿಗೋಸ್ಕರ ಆಲಯಕ್ಕೆ ಬೇಕಾಗಿರೋದನ್ನೆಲ್ಲ ಸಿದ್ಧ ಮಾಡ್ತೀನಿ” ಅಂದ. ಹೀಗೆ ದಾವೀದ ತಾನು ಸಾಯೋ ಮುಂಚೆ ಭಾರಿ ಮೊತ್ತದಲ್ಲಿ ವಸ್ತುಗಳನ್ನ ಕೂಡಿಸಿಟ್ಟ.  ದಾವೀದ ತನ್ನ ಮಗ ಸೊಲೊಮೋನನನ್ನ ಕರೆದು ಇಸ್ರಾಯೇಲ್‌ ದೇವರಾದ ಯೆಹೋವನಿಗಾಗಿ ಒಂದು ಆಲಯ ಕಟ್ಟೋಕೆ ಏನೇನು ಮಾಡಬೇಕು ಅಂತ ಹೇಳಿದ.  ದಾವೀದ ಅವನಿಗೆ “ನನ್ನ ದೇವರಾದ ಯೆಹೋವನ ಹೆಸ್ರಿಗಾಗಿ ಒಂದು ಆಲಯ ಕಟ್ಟಬೇಕು ಅನ್ನೋದು ನನ್ನ ಆಸೆ ಆಗಿತ್ತು.+  ಆದ್ರೆ ಯೆಹೋವ ನನಗೆ ‘ನೀನು ತುಂಬ ರಕ್ತ ಸುರಿಸಿದೆ. ದೊಡ್ಡದೊಡ್ಡ ಯುದ್ಧಗಳನ್ನ ಮಾಡಿದೆ. ನನ್ನ ಹೆಸ್ರಿಗಾಗಿ ನೀನು ಆಲಯ ಕಟ್ಟಲ್ಲ.+ ಯಾಕಂದ್ರೆ ಭೂಮಿ ಮೇಲೆ ನೀನು ತುಂಬ ರಕ್ತ ಸುರಿಸಿದೆ.  ನಿನಗೆ ಒಬ್ಬ ಮಗ ಹುಟ್ತಾನೆ.+ ಅವನು ಸಮಾಧಾನವಾಗಿ* ಬದುಕ್ತಾನೆ. ನಾನು ಅವನ ಸುತ್ತ ಇರೋ ಎಲ್ಲ ಶತ್ರುಗಳನ್ನ ತೊಲಗಿಸಿ ಅವನು ಹಾಯಾಗಿ ಇರೋ ಹಾಗೆ ಮಾಡ್ತೀನಿ.+ ಅವನ ಹೆಸ್ರು ಸೊಲೊಮೋನ*+ ಆಗಿರುತ್ತೆ. ನಾನು ಅವನ ದಿನಗಳಲ್ಲಿ ಇಸ್ರಾಯೇಲ್ಯರಿಗೆ ಶಾಂತಿ ನೆಮ್ಮದಿ ಕೊಡ್ತೀನಿ.+ 10  ಅವನೇ ನನ್ನ ಹೆಸ್ರಿಗಾಗಿ ಒಂದು ಆಲಯ ಕಟ್ತಾನೆ.+ ನನಗೆ ಮಗನಾಗಿ ಇರ್ತಾನೆ, ನಾನು ಅವನಿಗೆ ಅಪ್ಪ ಆಗಿರ್ತಿನಿ.+ ಇಸ್ರಾಯೇಲಿನ ಮೇಲೆ ಅವನ ಆಡಳಿತ ಶಾಶ್ವತವಾಗಿ ಇರೋ ತರ ಮಾಡ್ತೀನಿ’+ ಅಂದನು. 11  ನನ್ನ ಮಗನೇ, ಯೆಹೋವ ನಿನ್ನ ಜೊತೆ ಇರಲಿ. ನೀನು ಯಶಸ್ವಿ ಆಗ್ತೀಯ, ದೇವರಾದ ಯೆಹೋವನ ಆಲಯ ಕಟ್ತೀಯ ಅಂತ ದೇವರು ನಿನ್ನ ಬಗ್ಗೆ ಹೇಳಿದ್ದನು. ಆ ಮಾತು ನಿಜ ಆಗ್ಲಿ.+ 12  ಯೆಹೋವ ಇಸ್ರಾಯೇಲಿನ ಮೇಲೆ ನಿನಗೆ ಅಧಿಕಾರ ಕೊಟ್ಟಾಗ ನಿನ್ನ ದೇವರಾದ ಯೆಹೋವನ ನಿಯಮ ಪುಸ್ತಕವನ್ನ ಪಾಲಿಸೋಕೆ+ ಆಗೋ ಹಾಗೇ ಆತನೇ ನಿನಗೆ ವಿವೇಚನೆ, ಯೋಚನಾ ಸಾಮರ್ಥ್ಯ ಕೊಡ್ಲಿ.+ 13  ಯೆಹೋವ ಮೋಶೆಗೆ ಕೊಟ್ಟ ನಿಯಮಗಳನ್ನ, ತೀರ್ಪುಗಳನ್ನ ನೀನು ಜಾಗ್ರತೆಯಿಂದ ಪಾಲಿಸಿದ್ರೆ+ ಯಶಸ್ವಿ ಆಗ್ತೀಯ.+ ಹೆದರಬೇಡ, ಕಳವಳಪಡಬೇಡ. ಧೈರ್ಯವಾಗಿರು.+ 14  ನಾನು ತುಂಬ ಕಷ್ಟಪಟ್ಟು ಯೆಹೋವನ ಆಲಯಕ್ಕಾಗಿ 1,00,000 ತಲಾಂತು* ಚಿನ್ನ, 10,00,000 ತಲಾಂತು ಬೆಳ್ಳಿ ಕೂಡಿಸಿದ್ದೀನಿ. ಜೊತೆಗೆ ತೂಕಮಾಡೋಕೆ ಆಗದಷ್ಟು ತಾಮ್ರ, ಕಬ್ಬಿಣ,+ ಮರದ ದಿಮ್ಮಿ, ಕಲ್ಲುಗಳನ್ನೂ ಸಿದ್ಧ ಮಾಡಿದ್ದೀನಿ.+ ನೀನು ಅದಕ್ಕೆ ಇನ್ನೂ ಕೂಡಿಸಬೇಕು. 15  ಕಲ್ಲು ಒಡೆಯುವವರು, ಕಲ್ಲು ಕೆಲಸಗಾರರು,+ ಬಡಗಿಗಳು, ಎಲ್ಲ ತರದ ನಿಪುಣ ಕೆಲಸಗಾರರು+ ಹೀಗೆ ತುಂಬ ಜನ ನಿನ್ನ ಹತ್ರ ಇದ್ದಾರೆ. 16  ತೂಕ ಮಾಡೋಕೆ ಆಗದಷ್ಟು ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಇದೆ.+ ಹೋಗು, ಆಲಯದ ಕೆಲಸ ಶುರು ಮಾಡು. ಯೆಹೋವ ನಿನ್ನ ಜೊತೆ ಇರಲಿ”+ ಅಂದ. 17  ಆಮೇಲೆ ದಾವೀದ ತನ್ನ ಮಗ ಸೊಲೊಮೋನನಿಗೆ ಸಹಾಯ ಮಾಡೋಕೆ ಇಸ್ರಾಯೇಲಿನ ಎಲ್ಲ ಅಧಿಕಾರಿಗಳಿಗೆ ಹೇಳಿದ. 18  “ನಿನ್ನ ದೇವರಾದ ಯೆಹೋವ ನಿನ್ನ ಜೊತೆ ಇದ್ದಾನೆ. ಆತನು ನಿನಗೆ ಎಲ್ಲ ಕಡೆಯಿಂದ ಶಾಂತಿ ಸಮಾಧಾನ ಕೊಟ್ಟಿದ್ದಾನೆ. ಆತನು ಈ ದೇಶದ ಜನ್ರನ್ನ ನನ್ನ ಕೈಗೆ ಒಪ್ಪಿಸಿದ್ದಾನೆ. ಈ ದೇಶ ಯೆಹೋವನ, ಆತನ ಜನ್ರ ಅಧೀನಕ್ಕೆ ಒಳಗಾಗಿದೆ. 19  ಈಗ ನೀನು ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ ನಿನ್ನ ದೇವರಾದ ಯೆಹೋವನನ್ನ ಆರಾಧಿಸೋಕೆ*+ ದೃಢನಿರ್ಧಾರ ಮಾಡು. ಸತ್ಯ ದೇವರಾದ ಯೆಹೋವನಿಗಾಗಿ ಆರಾಧನಾ ಜಾಗವನ್ನ ಕಟ್ಟೋಕೆ ಶುರು ಮಾಡು.+ ಯೆಹೋವನ ಹೆಸ್ರಲ್ಲಿ ಕಟ್ಟೋ ಆ ಆಲಯದ+ ಒಳಗೆ ಯೆಹೋವನ ಒಪ್ಪಂದದ ಮಂಜೂಷವನ್ನ, ಸತ್ಯದೇವರ ಪವಿತ್ರ ಪಾತ್ರೆಗಳನ್ನ ತಂದಿಡು”+ ಅಂದ.

ಪಾದಟಿಪ್ಪಣಿ

ಅಕ್ಷ. “ವಿಶ್ರಾಂತಿ.”
“ಶಾಂತಿ” ಅಂತ ಅರ್ಥ ಇರೋ ಒಂದು ಹೀಬ್ರು ಪದದಿಂದ ಬಂದಿರೋ ಹೆಸ್ರು.
ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.
ಅಕ್ಷ. “ಹುಡುಕೋಕೆ.”