ಒಂದನೇ ಪೂರ್ವಕಾಲವೃತ್ತಾಂತ 25:1-31

  • ದೇವಾಲಯಕ್ಕಾಗಿ ಸಂಗೀತಗಾರರು, ಗಾಯಕರು (1-31)

25  ಅಷ್ಟೇ ಅಲ್ಲ, ದಾವೀದ, ಆಲಯದಲ್ಲಿ ಸೇವೆಮಾಡೋ ಗುಂಪುಗಳ ಮುಖ್ಯಸ್ಥರು ಸೇರಿ ಆಸಾಫನ, ಹೇಮಾನನ, ಯೆದುತೂನನ+ ಗಂಡು ಮಕ್ಕಳಲ್ಲಿ ಕೆಲವ್ರನ್ನ ಆರಿಸಿದ್ರು. ತಂತಿವಾದ್ಯಗಳನ್ನ,+ ಝಲ್ಲರಿಗಳನ್ನ+ ಬಾರಿಸ್ತಾ ದೇವರಿಗೆ ಹಾಡಿ ಹೊಗಳೋಕೆ, ಭವಿಷ್ಯವಾಣಿ ಹೇಳೋಕೆ ಅವ್ರನ್ನ ಆರಿಸ್ಕೊಂಡ್ರು. ಆ ಸೇವೆಗೋಸ್ಕರ ಆರಿಸ್ಕೊಂಡವರ ಪಟ್ಟಿ ಹೀಗಿದೆ:  ಆಸಾಫನ ಗಂಡು ಮಕ್ಕಳಲ್ಲಿ ಜಕ್ಕೂರ್‌, ಯೋಸೇಫ, ನೆತನ್ಯ, ಅಶರೇಲ. ಇವರು ಆಸಾಫ ಕೊಟ್ಟ ನಿರ್ದೇಶನಕ್ಕೆ ತಕ್ಕ ಹಾಗೆ ಕೆಲಸ ಮಾಡ್ತಿದ್ರು. ಆಸಾಫ ರಾಜನ ನಿರ್ದೇಶನದ ಪ್ರಕಾರ ಭವಿಷ್ಯವಾಣಿ ಹೇಳ್ತಿದ್ದ.  ಯೆದುತೂನನ+ ಗಂಡು ಮಕ್ಕಳಲ್ಲಿ ಗೆದಲ್ಯ, ಚೆರಿ, ಯೆಶಾಯ, ಶಿಮ್ಮಿ, ಹಷಬ್ಯ, ಮತ್ತಿತ್ಯ.+ ಒಟ್ಟು ಆರು. ಇವರು ತಮ್ಮ ತಂದೆ ಯೆದುತೂನನ ನಿರ್ದೇಶನದ ಪ್ರಕಾರ ಕೆಲಸ ಮಾಡ್ತಿದ್ರು. ಯೆದುತೂನ ತಂತಿವಾದ್ಯವನ್ನ ಬಾರಿಸ್ತಾ ಭವಿಷ್ಯವಾಣಿ ಹೇಳ್ತಿದ್ದ, ಯೆಹೋವನಿಗೆ ಧನ್ಯವಾದ ಹೇಳ್ತಿದ್ದ, ಹೊಗಳ್ತಿದ್ದ.+  ಹೇಮಾನನ+ ಗಂಡು ಮಕ್ಕಳಲ್ಲಿ ಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್‌, ಶೆಬೂವೇಲ್‌, ಯೆರೀಮೋತ್‌, ಹನನ್ಯ, ಹನಾನಿ, ಎಲೀಯಾತ, ಗಿದ್ದಲ್ತಿ, ರೋಮಮ್ತಿಯೆಜೆರ್‌, ಯೊಷ್ಬೆಕಾಷ, ಮಲ್ಲೋತಿ, ಹೋತೀರ್‌, ಮಹಜೀಯೋತ್‌.  ಇವ್ರೆಲ್ಲ ಹೇಮಾನನ ಗಂಡು ಮಕ್ಕಳು. ಹೇಮಾನ ರಾಜನ ದರ್ಶಿಯಾಗಿದ್ದ. ಅವನು ಸತ್ಯದೇವರನ್ನ ಮಹಿಮೆಪಡಿಸೋಕೆ ದೇವರ ಮಾತುಗಳನ್ನ ಹೇಳ್ತಿದ್ದ. ಹಾಗಾಗಿ ಸತ್ಯ ದೇವರು ಹೇಮಾನನಿಗೆ 14 ಗಂಡು ಮಕ್ಕಳನ್ನ, 3 ಹೆಣ್ಣು ಮಕ್ಕಳನ್ನ ಕೊಟ್ಟ.  ಇವ್ರೆಲ್ಲ ತಮ್ಮ ತಂದೆಯ ನಿರ್ದೇಶನದ ಪ್ರಕಾರ ಸೇವೆ ಮಾಡ್ತಿದ್ರು. ಯೆಹೋವನ ಆಲಯದಲ್ಲಿ ಝಲ್ಲರಿ, ತಂತಿವಾದ್ಯಗಳ+ ಸ್ವರದ ಜೊತೆಗೆ ಹಾಡುಗಳನ್ನ ಹಾಡ್ತಿದ್ರು. ಸತ್ಯ ದೇವರ ಆಲಯದಲ್ಲಿ ಇದೇ ಅವ್ರ ಸೇವೆ ಆಗಿತ್ತು. ಆಸಾಫ, ಯೆದುತೂನ, ಹೇಮಾನ ಇವರು ರಾಜನ ನಿರ್ದೇಶನದ ಪ್ರಕಾರ ಸೇವೆ ಮಾಡ್ತಿದ್ರು.  ಇವರು, ಇವ್ರ ಸಹೋದರರು ಒಟ್ಟು 288 ಜನ ಇದ್ರು. ಯೆಹೋವನಿಗೆ ಹಾಡು ಹಾಡೋಕೆ ಇವ್ರಿಗೆ ತರಬೇತಿ ಕೊಟ್ರು, ಇವ್ರೆಲ್ಲ ಹಾಡೋದ್ರಲ್ಲಿ ನಿಪುಣರಾಗಿದ್ರು.  ಇವ್ರಲ್ಲಿ ದೊಡ್ಡವರು, ಚಿಕ್ಕವರು, ಹಾಡೋದ್ರಲ್ಲಿ ನಿಪುಣರು ಅಥವಾ ಇನ್ನೂ ಕಲಿತಾ ಇರುವವರು ಅನ್ನೋ ವ್ಯತ್ಯಾಸ ಇಲ್ಲದೆ ಎಲ್ಲರೂ ತಮ್ಮತಮ್ಮ ಜವಾಬ್ದಾರಿಗಳು ಏನಂತ ಗೊತ್ತಾಗೋಕೆ ಚೀಟು ಹಾಕಿದ್ರು.+  ಮೊದಲ್ನೇ ಚೀಟು ಆಸಾಫನ ಮಗ ಯೋಸೇಫನಿಗೆ+ ಬಿತ್ತು. ಎರಡನೇದು ಗೆದಲ್ಯನಿಗೆ+ (ಇವನು, ಇವನ ಸಹೋದರರು, ಇವನ ಗಂಡು ಮಕ್ಕಳು 12 ಜನ) 10  ಮೂರನೇದು ಜಕ್ಕೂರನಿಗೆ,+ ಇವನ ಮಕ್ಕಳು, ಸಹೋದರರು 12 ಜನ. 11  ನಾಲ್ಕನೇದು ಇಚ್ರೀಗೆ, ಇವನ ಮಕ್ಕಳು, ಸಹೋದರರು 12 ಜನ. 12  ಐದನೇದು ನೆತನ್ಯನಿಗೆ,+ ಇವನ ಮಕ್ಕಳು, ಸಹೋದರರು 12 ಜನ. 13  ಆರನೇದು ಬುಕ್ಕೀಯನಿಗೆ, ಇವನ ಮಕ್ಕಳು, ಸಹೋದರರು 12 ಜನ. 14  ಏಳನೇದು ಯೆಸರೇಲನಿಗೆ, ಇವನ ಮಕ್ಕಳು, ಸಹೋದರರು 12 ಜನ. 15  ಎಂಟನೇದು ಯೆಶಾಯನಿಗೆ, ಇವನ ಮಕ್ಕಳು, ಸಹೋದರರು 12 ಜನ. 16  ಒಂಬತ್ತನೇದು ಮತ್ತನ್ಯನಿಗೆ, ಇವನ ಮಕ್ಕಳು, ಸಹೋದರರು 12 ಜನ. 17  ಹತ್ತನೇದು ಶಿಮ್ಮಿಗೆ, ಇವನ ಮಕ್ಕಳು, ಸಹೋದರರು 12 ಜನ. 18  ಹನ್ನೊಂದನೇದು ಅಜರೇಲನಿಗೆ, ಇವನ ಮಕ್ಕಳು, ಸಹೋದರರು 12 ಜನ. 19  ಹನ್ನೆರಡನೇದು ಹಷಬ್ಯನಿಗೆ, ಇವನ ಮಕ್ಕಳು, ಸಹೋದರರು 12 ಜನ. 20  ಹದಿಮೂರನೇದು ಶೂಬಾಯೇಲನಿಗೆ,+ ಇವನ ಮಕ್ಕಳು, ಸಹೋದರರು 12 ಜನ. 21  ಹದಿನಾಲ್ಕನೇದು ಮತ್ತಿತ್ಯನಿಗೆ, ಇವನ ಮಕ್ಕಳು, ಸಹೋದರರು 12 ಜನ. 22  ಹದಿನೈದನೇದು ಯೆರೇಮೋತನಿಗೆ, ಇವನ ಮಕ್ಕಳು, ಸಹೋದರರು 12 ಜನ. 23  ಹದಿನಾರನೇದು ಹನನ್ಯನಿಗೆ, ಇವನ ಮಕ್ಕಳು, ಸಹೋದರರು 12 ಜನ. 24  ಹದಿನೇಳನೇದು ಯೊಷ್ಬೆಕಾಷನಿಗೆ, ಇವನ ಮಕ್ಕಳು, ಸಹೋದರರು 12 ಜನ. 25  ಹದಿನೆಂಟನೇದು ಹನಾನೀಗೆ, ಇವನ ಮಕ್ಕಳು, ಸಹೋದರರು 12 ಜನ. 26  ಹತ್ತೊಂಬತ್ತನೇದು ಮಲ್ಲೋತಿಗೆ, ಇವನ ಮಕ್ಕಳು, ಸಹೋದರರು 12 ಜನ. 27  ಇಪ್ಪತ್ತನೇದು ಎಲೀಯಾತನಿಗೆ, ಇವನ ಮಕ್ಕಳು, ಸಹೋದರರು 12 ಜನ. 28  ಇಪ್ಪತ್ತೊಂದನೇದು ಹೋತೀರನಿಗೆ, ಇವನ ಮಕ್ಕಳು, ಸಹೋದರರು 12 ಜನ. 29  ಇಪ್ಪತ್ತೆರಡನೇದು ಗಿದ್ದಲ್ತಿಗೆ,+ ಇವನ ಮಕ್ಕಳು, ಸಹೋದರರು 12 ಜನ. 30  ಇಪ್ಪತ್ತಮೂರನೇದು ಮಹಜೀಯೋತನಿಗೆ,+ ಇವನ ಮಕ್ಕಳು, ಸಹೋದರರು 12 ಜನ. 31  ಇಪ್ಪತ್ತನಾಲ್ಕನೇದು ರೋಮಮ್ತಿಯೆಜೆರಗೆ,+ ಇವನ ಮಕ್ಕಳು, ಸಹೋದರರು 12 ಜನ.

ಪಾದಟಿಪ್ಪಣಿ