ಒಂದನೇ ಪೂರ್ವಕಾಲವೃತ್ತಾಂತ 27:1-34
-
ರಾಜನ ಸೇವೆ ಮಾಡ್ತಿದ್ದ ಬೇರೆ ಅಧಿಕಾರಿಗಳು (1-34)
27 ರಾಜನ ಸೈನ್ಯದಲ್ಲಿದ್ದ ಇಸ್ರಾಯೇಲ್ಯರ ದಳಗಳು ಹೀಗಿದ್ವು. ಈ ದಳಗಳಲ್ಲಿ ಕುಟುಂಬಗಳ ಮುಖ್ಯಸ್ಥರು, ಸಾವಿರ ಗಂಡಸ್ರ ಮೇಲೆ ನೂರು ಗಂಡಸ್ರ ಮೇಲೆ ಇದ್ದ ಮುಖ್ಯಸ್ಥರು,+ ಆ ದಳಗಳನ್ನ ನೋಡ್ಕೊಳ್ತಿದ್ದ ಮುಖ್ಯಸ್ಥರು ಇದ್ರು.+ ತಿಂಗಳಿಗೆ ಒಂದು ದಳದ ಹಾಗೇ ಇಡೀ ವರ್ಷ ಸರದಿ ಪ್ರಕಾರ ಈ ದಳಗಳು ಕೆಲಸ ಮಾಡ್ತಿದ್ದವು. ಒಂದೊಂದು ದಳದಲ್ಲೂ 24,000 ಗಂಡಸ್ರು ಇದ್ರು.
2 ಜಬ್ದೀಯೇಲನ ಮಗ ಯಾಷೊಬ್ಬಾಮ+ ಮೊದಲ್ನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ ಒಂದನೇ ದಳದವ್ರ ಮುಖ್ಯಸ್ಥನಾಗಿದ್ದ. ಇವನ ದಳದಲ್ಲಿ 24,000 ಗಂಡಸ್ರು ಇದ್ರು.
3 ಇವನು ಪೆರೆಚನ+ ವಂಶಸ್ಥನಾಗಿದ್ದ. ಮೊದಲ ತಿಂಗಳಲ್ಲಿ ಸೇವೆ ಮಾಡಬೇಕಾಗಿದ್ದ ದಳಗಳ ಅಧಿಕಾರಿಗಳಿಗೆ ಇವನು ಮುಖ್ಯಸ್ಥನಾಗಿದ್ದ.
4 ಅಹೋಹಿಯನಾದ+ ದೋದೈ+ ಎರಡನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ ದಳದವ್ರ ಮುಖ್ಯಸ್ಥನಾಗಿದ್ದ. ಮಿಕ್ಲೋತ ಈ ದಳದ ನಾಯಕನಾಗಿದ್ದ. ಈ ದಳದಲ್ಲಿ 24,000 ಗಂಡಸ್ರು ಇದ್ರು.
5 ಮುಖ್ಯ ಪುರೋಹಿತನಾದ ಯೆಹೋಯಾದನ+ ಮಗ ಬೆನಾಯ+ ಮೂರನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ ಮೂರನೇ ದಳದವರ ಮುಖ್ಯಸ್ಥನಾಗಿದ್ದ. ಇವನ ದಳದಲ್ಲಿ 24,000 ಗಂಡಸ್ರು ಇದ್ರು.
6 ಈ ಬೆನಾಯ ಮೂವತ್ತು ವೀರ ಸೈನಿಕರಲ್ಲಿ ಒಬ್ಬನಾಗಿದ್ದು ಅವ್ರ ಮೇಲ್ವಿಚಾರಕನಾಗಿದ್ದ. ಬೆನಾಯನ ದಳದ ಮೇಲ್ವಿಚಾರಣೆಯನ್ನ ಅವನ ಮಗ ಅಮ್ಮೀಜಾಬಾದ ಮಾಡ್ತಿದ್ದ.
7 ಯೋವಾಬನ ಸಹೋದರ+ ಅಸಾಹೇಲ+ ನಾಲ್ಕನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ ನಾಲ್ಕನೇ ದಳದವ್ರ ಮುಖ್ಯಸ್ಥನಾಗಿದ್ದ. ಅವನು ಆದ್ಮೇಲೆ ಅವನ ಮಗ ಜೆಬದ್ಯ ಆ ಸ್ಥಾನವನ್ನ ವಹಿಸ್ಕೊಂಡ. ಅವನ ದಳದಲ್ಲಿ 24,000 ಗಂಡಸ್ರು ಇದ್ರು.
8 ಇಜ್ರಾಹ್ಯನಾದ ಶಮ್ಹೂತ ಐದನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ ಐದನೇ ದಳದವ್ರ ಮುಖ್ಯಸ್ಥನಾಗಿದ್ದ. ಇವನ ದಳದಲ್ಲಿ 24,000 ಗಂಡಸ್ರು ಇದ್ರು.
9 ತೆಕೋವದವನಾದ+ ಇಕ್ಕೇಷನ ಮಗ ಈರಾ+ ಆರನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ ಆರನೇ ದಳದವ್ರ ಮುಖ್ಯಸ್ಥನಾಗಿದ್ದ. ಇವನ ದಳದಲ್ಲಿ 24,000 ಗಂಡಸ್ರು ಇದ್ರು.
10 ಎಫ್ರಾಯೀಮ್ ಕುಲದ ಪೆಲೋನ್ಯನಾದ ಹೆಲೆಚ+ ಏಳನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ ಏಳನೇ ದಳದವ್ರ ಮುಖ್ಯಸ್ಥನಾಗಿದ್ದ. ಇವನ ದಳದಲ್ಲಿ 24,000 ಗಂಡಸ್ರು ಇದ್ರು.
11 ಜೆರಹೀಯರಲ್ಲಿ+ ಹುಷಾತ್ಯನಾದ ಸಿಬ್ಕೈ+ ಎಂಟನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ ಎಂಟನೇ ದಳದವ್ರ ಮುಖ್ಯಸ್ಥನಾಗಿದ್ದ. ಇವನ ದಳದಲ್ಲಿ 24,000 ಗಂಡಸ್ರು ಇದ್ರು.
12 ಅನಾತೋತ್+ ಊರಿನ ಬೆನ್ಯಾಮೀನ್ಯನಾದ ಅಬೀಯೆಜೆರ+ ಒಂಬತ್ತನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ ಒಂಬತ್ತನೇ ದಳದವ್ರ ಮುಖ್ಯಸ್ಥನಾಗಿದ್ದ. ಇವನ ದಳದಲ್ಲಿ 24,000 ಗಂಡಸ್ರು ಇದ್ರು.
13 ನೆಟೋಫ ಊರಿನ ಜೆರಹೀಯನಾದ+ ಮಹರೈ+ ಹತ್ತನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ ಹತ್ತನೇ ದಳದವರ ಮುಖ್ಯಸ್ಥನಾಗಿದ್ದ. ಇವನ ದಳದಲ್ಲಿ 24,000 ಗಂಡಸ್ರು ಇದ್ರು.
14 ಪಿರಾತೋನ್ ಊರಿನ ಎಫ್ರಾಯೀಮ್ಯನಾದ ಬೆನಾಯ+ 11ನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ 11ನೇ ದಳದವ್ರ ಮುಖ್ಯಸ್ಥನಾಗಿದ್ದ. ಇವನ ದಳದಲ್ಲಿ 24,000 ಗಂಡಸ್ರು ಇದ್ರು.
15 ನೆಟೋಫ ಊರಿನ ಒತ್ನೀಯೇಲನ ವಂಶದವನಾದ ಹೆಲ್‌ದೈ 12ನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ 12ನೇ ದಳದವ್ರ ಮುಖ್ಯಸ್ಥನಾಗಿದ್ದ. ಇವನ ದಳದಲ್ಲಿ 24,000 ಗಂಡಸ್ರು ಇದ್ರು.
16 ಇಸ್ರಾಯೇಲ್ ಕುಲದ ನಾಯಕರು: ಜಿಕ್ರಿಯ ಮಗ ಎಲೀಯೆಜರ ರೂಬೇನ್ಯರ ನಾಯಕನಾಗಿದ್ದ, ಮಾಕಾನ ಮಗ ಶೆಫಟ್ಯ ಸಿಮೆಯೋನ್ಯರ ನಾಯಕನಾಗಿದ್ದ,
17 ಕೆಮೂವೇಲನ ಮಗ ಹಷಬ್ಯ ಲೇವಿಯರ ನಾಯಕನಾಗಿದ್ದ, ಆರೋನನ ವಂಶದವ್ರಿಗೆ ಚಾದೋಕ ನಾಯಕನಾಗಿದ್ದ,
18 ದಾವೀದನ ಸಹೋದರರಲ್ಲಿ ಒಬ್ಬನಾದ ಎಲೀಹು+ ಯೆಹೂದ ಕುಲದ ನಾಯಕನಾಗಿದ್ದ. ಒಮ್ರಿಯ ಮಗ ಮೀಕಾಯೇಲ ಇಸ್ಸಾಕಾರ್ ಕುಲದ ನಾಯಕನಾಗಿದ್ದ,
19 ಓಬದ್ಯನ ಮಗ ಇಷ್ಮಾಯ ಜೆಬುಲೂನ್ ಕುಲದ ನಾಯಕನಾಗಿದ್ದ, ಅಜ್ರೀಯೇಲನ ಮಗ ಯೆರೀಮೋತ ನಫ್ತಾಲಿ ಕುಲದ ನಾಯಕನಾಗಿದ್ದ,
20 ಅಜಜ್ಯನ ಮಗ ಹೋಷೇಯ ಎಫ್ರಾಯೀಮ್ಯರ ನಾಯಕನಾಗಿದ್ದ. ಪೆದಾಯನ ಮಗ ಯೋವೇಲ ಮನಸ್ಸೆಯ ಅರ್ಧ ಕುಲದ ಜನ್ರಿಗೆ ನಾಯಕನಾಗಿದ್ದ.
21 ಗಿಲ್ಯಾದಿನಲ್ಲಿದ್ದ ಮನಸ್ಸೆಯ ಉಳಿದ ಅರ್ಧ ಕುಲದ ಜನ್ರಿಗೆ ಜೆಕರ್ಯನ ಮಗ ಇದ್ದೋ ಅನ್ನುವವನು ನಾಯಕನಾಗಿದ್ದ, ಅಬ್ನೇರನ+ ಮಗ ಯಾಸೀಯೇಲ ಬೆನ್ಯಾಮೀನ್ ಕುಲದ ನಾಯಕನಾಗಿದ್ದ,
22 ಯೆರೋಹಾಮನ ಮಗ ಅಜರೇಲ ದಾನ್ ಕುಲದ ನಾಯಕನಾಗಿದ್ದ. ಇವ್ರೆಲ್ಲ ಇಸ್ರಾಯೇಲ್ ಕುಲಗಳ ಅಧಿಕಾರಿಗಳಾಗಿದ್ರು.
23 ದಾವೀದ 20 ವರ್ಷ, ಅದಕ್ಕಿಂತ ಕಮ್ಮಿ ವಯಸ್ಸಿನವ್ರ ಲೆಕ್ಕ ತಗೊಂಡಿಲ್ಲ. ಯಾಕಂದ್ರೆ ಯೆಹೋವ ಇಸ್ರಾಯೇಲ್ಯರನ್ನ ಆಕಾಶದ ನಕ್ಷತ್ರಗಳ ಹಾಗೇ ಲೆಕ್ಕ ಮಾಡೋಕೆ ಆಗದಷ್ಟು ಜನ್ರಾಗಿ ಮಾಡ್ತೀನಿ ಅಂತ ಮಾತು ಕೊಟ್ಟಿದ್ದನು.+
24 ಚೆರೂಯಳ ಮಗ ಯೋವಾಬ ಜನ್ರ ಲೆಕ್ಕ ತಗೊಳ್ಳೋದನ್ನ ಶುರುಮಾಡಿದ್ದ. ಆದ್ರೆ ಅದನ್ನ ಮುಗಿಸೋಕೆ ಆಗಲಿಲ್ಲ. ಹೀಗೆ ಲೆಕ್ಕ ಮಾಡ್ತಾ ಇದ್ದಿದ್ರಿಂದ ಇಸ್ರಾಯೇಲಿನ ಮೇಲೆ ದೇವರಿಗೆ ತುಂಬ ಕೋಪ ಬಂತು.+ ರಾಜ ದಾವೀದನ ಕಾಲದ ಇತಿಹಾಸ ಪುಸ್ತಕದಲ್ಲಿ ಆ ಲೆಕ್ಕ ಬರಿಲಿಲ್ಲ.
25 ಅದೀಯೇಲನ ಮಗ ಅಜ್ಮಾವೇತ ರಾಜನ ಖಜಾನೆಗಳ+ ಮುಖ್ಯಸ್ಥನಾಗಿದ್ದ. ಉಜ್ಜೀಯನ ಮಗ ಯೋನಾತಾನ ಹೊಲಗಳಲ್ಲಿ, ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ, ಗೋಪುರಗಳಲ್ಲಿದ್ದ ಕಣಜಗಳ* ಮುಖ್ಯಸ್ಥನಾಗಿದ್ದ.
26 ಕೆಲೂಬನ ಮಗ ಎಜ್ರಿ ರೈತರ ಮುಖ್ಯಸ್ಥನಾಗಿದ್ದ.
27 ರಾಮ ಊರಿನ ಶಿಮ್ಮಿ ದ್ರಾಕ್ಷಿ ತೋಟಗಳ ಮುಖ್ಯಸ್ಥನಾಗಿದ್ದ. ಶಿಪ್ಮೋತಿನ ಜಬ್ದಿ ಫಸಲಿಗೆ ಬಂದ ದ್ರಾಕ್ಷಿಗಳನ್ನ ದ್ರಾಕ್ಷಾಮದ್ಯವಾಗಿ ತಯಾರಿಸಿ ಇಡ್ತಿದ್ದ ಕಣಜಗಳ ಮುಖ್ಯಸ್ಥನಾಗಿದ್ದ.
28 ಷೆಫೆಲಾದಲ್ಲಿದ್ದ+ ಆಲಿವ್ ತೋಟಗಳ ಮೇಲೆ, ಅತ್ತಿ ಮರಗಳ+ ಮೇಲೆ ಗೆದೆರಿನವನಾದ ಬಾಳ್-ಹಾನಾನ ಮುಖ್ಯಸ್ಥನಾಗಿದ್ದ. ಎಣ್ಣೆ ಕಣಜಗಳ ಮೇಲೆ ಯೋವಾಷ ಮುಖ್ಯಸ್ಥನಾಗಿದ್ದ.
29 ಶಾರೋನಿನಲ್ಲಿ+ ಮೇಯ್ತಿದ್ದ ದನಗಳ ಹಿಂಡಿನ ಮೇಲೆ ಶಾರೋನ್ಯನಾದ ಶಿಟ್ರೈ ಮುಖ್ಯಸ್ಥನಾಗಿದ್ದ. ಕಣಿವೆಯಲ್ಲಿ ಮೇಯ್ತಿದ್ದ ದನಗಳ ಹಿಂಡಿನ ಮೇಲೆ ಅದ್ಲೈಯನ ಮಗ ಶಾಫಾಟ ಮುಖ್ಯಸ್ಥನಾಗಿದ್ದ.
30 ಒಂಟೆಗಳ ಮೇಲೆ ಇಷ್ಮಾಯೇಲ್ಯನಾದ ಓಬೀಲ ಮುಖ್ಯಸ್ಥನಾಗಿದ್ದ. ಕತ್ತೆಗಳ* ಮೇಲೆ ಮೇರೊನೋತ್ಯನಾದ ಯೆಹ್ದೆಯಾಹ ಮುಖ್ಯಸ್ಥನಾಗಿದ್ದ.
31 ಆಡುಕುರಿಗಳ ಮೇಲೆ ಹಗ್ರೀಯನಾದ ಯಾಜೀಜ ಮುಖ್ಯಸ್ಥನಾಗಿದ್ದ. ಇವ್ರೆಲ್ಲ ರಾಜ ದಾವೀದನ ಆಸ್ತಿಯನ್ನ ನೋಡ್ಕೊಳ್ತಿದ್ದ ಅಧಿಪತಿಗಳಾಗಿದ್ರು.
32 ದಾವೀದನ ಸಹೋದರನ ಮಗ ಯೋನಾತಾನ+ ಸಲಹೆಗಾರನಾಗಿದ್ದ, ತಿಳುವಳಿಕೆ ಇದ್ದ ಕಾರ್ಯದರ್ಶಿ ಆಗಿದ್ದ. ಹಕ್ಮೋನಿಯ ಮಗ ಯೆಹೀಯೇಲ ರಾಜನ ಗಂಡು ಮಕ್ಕಳನ್ನ+ ನೋಡ್ಕೊಳ್ತಿದ್ದ.
33 ಅಹೀತೋಫೆಲ+ ರಾಜನ ಸಲಹೆಗಾರನಾಗಿದ್ದ. ಅರ್ಕೀಯನಾದ ಹೂಷೈ+ ರಾಜನ ಸ್ನೇಹಿತನಾಗಿದ್ದ.*
34 ಅಹೀತೋಫೆಲ ಆದ್ಮೇಲೆ ಬೆನಾಯನ+ ಮಗ ಯೆಹೋಯಾದ, ಎಬ್ಯಾತಾರ+ ಸಲಹೆಗಾರರಾದ್ರು. ಯೋವಾಬ+ ರಾಜನ ಸೈನ್ಯದ ಸೇನಾಪತಿ ಆಗಿದ್ದ.