ಒಂದನೇ ಪೂರ್ವಕಾಲವೃತ್ತಾಂತ 3:1-24

  • ದಾವೀದನ ವಂಶದವರು (1-9)

  • ದಾವೀದನ ರಾಜವಂಶ (10-24)

3  ಹೆಬ್ರೋನಲ್ಲಿ+ ದಾವೀದನಿಗೆ ಹುಟ್ಟಿದ ಗಂಡು ಮಕ್ಕಳು ಯಾರಂದ್ರೆ, ಮೊದಲ್ನೇ ಮಗ ಅಮ್ನೋನ.+ ಇವನ ತಾಯಿ ಇಜ್ರೇಲ್‌ನ ಅಹೀನೋವಮ.+ ಎರಡ್ನೇ ಮಗ ದಾನಿಯೇಲ. ಇವನ ತಾಯಿ ಕರ್ಮೆಲಿನವನಾದ ನಾಬಾಲನ ಹೆಂಡತಿ ಅಬೀಗೈಲ್‌.+  ಮೂರನೇ ಮಗ ಅಬ್ಷಾಲೋಮ.+ ಇವನ ತಾಯಿ ಗೆಷೂರಿನ ರಾಜ ತಲ್ಮೈಯ ಮಗಳಾದ ಮಾಕಾ. ನಾಲ್ಕನೇ ಮಗ ಅದೋನೀಯ.+ ಇವನ ತಾಯಿ ಹಗ್ಗೀತ.  ಐದನೇ ಮಗ ಶೆಫಟ್ಯ. ಇವನ ತಾಯಿ ಅಬೀಟಲ. ಆರನೇ ಮಗ ಇತ್ರಾಮ. ಇವನ ತಾಯಿ ಎಗ್ಲ.  ಈ ಆರೂ ಮಕ್ಕಳು ದಾವೀದನಿಗೆ ಹೆಬ್ರೋನಲ್ಲಿ ಹುಟ್ಟಿದ್ರು. ಅವನು ಹೆಬ್ರೋನಿಂದ 7 ವರ್ಷ 6 ತಿಂಗಳು ಆಳಿದ, ಯೆರೂಸಲೇಮಿಂದ 33 ವರ್ಷ ಆಳಿದ.+  ದಾವೀದನಿಗೆ ಯೆರೂಸಲೇಮಲ್ಲಿ ಹುಟ್ಟಿದ ಮಕ್ಕಳ ಹೆಸ್ರು+ ಶಿಮ್ಮ, ಶೋಬಾಬ್‌, ನಾತಾನ,+ ಸೊಲೊಮೋನ.+ ಅಮ್ಮೀಯೇಲನ ಮಗಳಾದ ಬತ್ಷೆಬೆ+ ಈ ನಾಲ್ಕು ಮಕ್ಕಳ ತಾಯಿ.  ದಾವೀದನಿಗೆ ಇನ್ನೂ ಒಂಬತ್ತು ಮಕ್ಕಳಿದ್ರು. ಅವರು ಯಾರಂದ್ರೆ ಇಬ್ಹಾರ್‌, ಎಲೀಷಾಮ, ಎಲೀಫೆಲೆಟ್‌,  ನೋಗ, ನೆಫೆಗ್‌, ಯಾಫೀಯ,  ಎಲೀಷಾಮ, ಎಲ್ಯಾದ, ಎಲೀಫೆಲೆಟ್‌.  ಇವ್ರೆಲ್ಲ ದಾವೀದನ ಗಂಡು ಮಕ್ಕಳು. ಇವ್ರಿಗೆ ತಾಮಾರ+ ಅನ್ನೋ ಒಬ್ಬ ತಂಗಿ ಇದ್ದಳು. ಇವ್ರಲ್ಲದೆ ದಾವೀದನಿಗೆ ಉಪಪತ್ನಿಯರಿಂದ ಸಹ ಗಂಡು ಮಕ್ಕಳು ಹುಟ್ಟಿದ್ರು. 10  ಸೊಲೊಮೋನನ ಮಗ ರೆಹಬ್ಬಾಮ.+ ರೆಹಬ್ಬಾಮನ ಮಗ ಅಬೀಯ.+ ಅಬೀಯನ ಮಗ ಆಸ,+ ಆಸನ ಮಗ ಯೆಹೋಷಾಫಾಟ,+ 11  ಯೆಹೋಷಾಫಾಟನ ಮಗ ಯೆಹೋರಾಮ,+ ಯೆಹೋರಾಮನ ಮಗ ಅಹಜ್ಯ,+ ಅಹಜ್ಯನ ಮಗ ಯೆಹೋವಾಷ,+ 12  ಯೆಹೋವಾಷನ ಮಗ ಅಮಚ್ಯ,+ ಅಮಚ್ಯನ ಮಗ ಅಜರ್ಯ,+ ಅಜರ್ಯನ ಮಗ ಯೋತಾಮ,+ 13  ಯೋತಾಮನ ಮಗ ಆಹಾಜ,+ ಆಹಾಜನ ಮಗ ಹಿಜ್ಕೀಯ,+ ಹಿಜ್ಕೀಯನ ಮಗ ಮನಸ್ಸೆ,+ 14  ಮನಸ್ಸೆಯ ಮಗ ಆಮೋನ,+ ಆಮೋನನ ಮಗ ಯೋಷೀಯ.+ 15  ಯೋಷೀಯನ ಮೊದಲ್ನೇ ಮಗ ಯೋಹಾನಾನ್‌, ಎರಡ್ನೇ ಮಗ ಯೆಹೋಯಾಕೀಮ್‌,+ ಮೂರನೇ ಮಗ ಚಿದ್ಕೀಯ,+ ನಾಲ್ಕನೇ ಮಗ ಶಲ್ಲೂಮ. 16  ಯೆಹೋಯಾಕೀಮನ ಗಂಡು ಮಕ್ಕಳು ಯೆಕೊನ್ಯ,+ ಚಿದ್ಕೀಯ. 17  ಕೈದಿಯಾಗಿದ್ದ ಯೆಕೊನ್ಯನ ಗಂಡು ಮಕ್ಕಳು ಶೆಯಲ್ತಿಯೇಲ, 18  ಮಲ್ಕೀರಾಮ್‌, ಪೆದಾಯ, ಶೆನಚ್ಚರ್‌, ಯೆಕಮ್ಯಾಹ, ಹೋಷಾಮ, ನೆದಬ್ಯ. 19  ಪೆದಾಯನ ಗಂಡು ಮಕ್ಕಳು ಜೆರುಬ್ಬಾಬೆಲ್‌,+ ಶಿಮ್ಮಿ. ಜೆರುಬ್ಬಾಬೆಲನ ಗಂಡು ಮಕ್ಕಳು ಮೆಷುಲ್ಲಾಮ, ಹನನ್ಯ. (ಶೆಲೋಮೀತ ಇವ್ರ ತಂಗಿ.) 20  ಅವನಿಗೆ ಇನ್ನೂ ಐದು ಗಂಡು ಮಕ್ಕಳಿದ್ರು. ಅವರು ಹಷುಬ, ಓಹೆಲ್‌, ಬೆರೆಕ್ಯ, ಹಸದ್ಯ, ಯೂಷಬ್ಹೆಸೆದ್‌. 21  ಹನನ್ಯನ ಗಂಡು ಮಕ್ಕಳು ಪೆಲಟ್ಯ, ಯೆಶಾಯ. ಯೆಶಾಯನ ಮಗ* ರೆಫಾಯ, ರೆಫಾಯನ ಮಗ* ಅರ್ನಾನ್‌, ಅರ್ನಾನನ ಮಗ* ಓಬದ್ಯ, ಓಬದ್ಯನ ಮಗ* ಶೆಕನ್ಯ, 22  ಶೆಕನ್ಯನಿಗೆ ಒಬ್ಬ ಮಗ ಮತ್ತು ಮೊಮ್ಮಕ್ಕಳು ಇದ್ರು. ಅವನ ಮಗನ ಹೆಸ್ರು ಶೆಮಾಯ. ಶೆಮಾಯನ ಗಂಡು ಮಕ್ಕಳು ಹಟ್ಟೂಷ್‌, ಇಗಾಲ್‌, ಬಾರೀಹ, ನೆಯರ್ಯ, ಶಾಫಾಟ. ಒಟ್ಟು ಆರು ಮಕ್ಕಳು. 23  ನೆಯರ್ಯನ ಗಂಡು ಮಕ್ಕಳು ಎಲ್ಯೋವೇನೈ, ಹಿಜ್ಕೀಯ, ಅಜ್ರೀಕಾಮ್‌. ಒಟ್ಟು ಮೂರು ಮಕ್ಕಳು. 24  ಎಲ್ಯೋವೇನೈಯ ಗಂಡು ಮಕ್ಕಳು ಹೋದವ್ಯ, ಎಲ್ಯಾಷೀಬ್‌, ಪೆಲಾಯ, ಅಕ್ಕೂಬ್‌, ಯೋಹಾನಾನ್‌, ದೆಲಾಯ, ಅನಾನೀ. ಒಟ್ಟು ಏಳು ಮಕ್ಕಳು.

ಪಾದಟಿಪ್ಪಣಿ

ಅಕ್ಷ. “ಗಂಡು ಮಕ್ಕಳು.”
ಅಕ್ಷ. “ಗಂಡು ಮಕ್ಕಳು.”
ಅಕ್ಷ. “ಗಂಡು ಮಕ್ಕಳು.”
ಅಕ್ಷ. “ಗಂಡು ಮಕ್ಕಳು.”