ಒಂದನೇ ಪೂರ್ವಕಾಲವೃತ್ತಾಂತ 4:1-43
4 ಯೆಹೂದನ ಗಂಡು ಮಕ್ಕಳು ಪೆರೆಚ್,+ ಹೆಚ್ರೋನ್,+ ಕರ್ಮೀ, ಹೂರ್,+ ಶೋಬಾಲ.+
2 ಶೋಬಾಲನ ಮಗ ರೆವಾಯ, ರೆವಾಯನ ಮಗ ಯಹತ್. ಯಹತನ ಗಂಡು ಮಕ್ಕಳು ಅಹೂಮೈ, ಲಹದ್. ಇವರು ಚೊರ್ರಾತ್ಯರ+ ಮನೆತನದವರು.
3 ಏಟಾಮನ+ ತಂದೆಯ* ಗಂಡು ಮಕ್ಕಳು ಇಜ್ರೆಯೇಲ್, ಇಷ್ಮ, ಇಬ್ಬಾಷ್ (ಇವ್ರ ತಂಗಿ ಹೆಸ್ರು ಹಚೆಲೆಲ್-ಪೋನೀ).
4 ಗೆದೋರನ ತಂದೆ ಪೆನೂವೇಲ್, ಹುಷಾನ ತಂದೆ ಏಚೆರ್. ಇವರು ಎಫ್ರಾತನ ಮೊದಲ್ನೇ ಮಗನೂ ಬೆತ್ಲೆಹೇಮನ+ ತಂದೆಯೂ ಆಗಿದ್ದ ಹೂರನ+ ಗಂಡು ಮಕ್ಕಳು.
5 ತೆಕೋವನ+ ತಂದೆ ಅಷ್ಹೂರನಿಗೆ+ ಹೆಲಾಹ, ನಾರ ಅನ್ನೋ ಇಬ್ರು ಹೆಂಡತಿಯರು ಇದ್ರು.
6 ಅಷ್ಹೂರನಿಗೆ ನಾರಳಿಂದ ಹುಟ್ಟಿದ ಗಂಡು ಮಕ್ಕಳು ಅಹುಜ್ಜಾಮ್, ಹೇಫೆರ್, ತೇಮಾನಿ, ಅಹಷ್ಟಾರ್ಯ.
7 ಹೆಲಾಹಳಿಂದ ಚೆರೆತ್, ಇಚ್ಹಾರ್, ಎತ್ನಾನ್ ಅನ್ನೋ ಮಕ್ಕಳು ಹುಟ್ಟಿದ್ರು.
8 ಕೋಚನು ಆನೂಬನಿಗೆ, ಚೊಬೇಬನಿಗೆ, ಹಾರುಮನ ಮಗ ಅಹರ್‌ಹೇಲನ ಮನೆತನಗಳಿಗೆ ತಂದೆಯಾದ.
9 ಯಾಬೇಚ ತನ್ನ ಸಹೋದರರಿಗಿಂತ ಜಾಸ್ತಿ ಗೌರವ ಸಂಪಾದಿಸಿದ್ದ. ಅವನ ತಾಯಿ “ನಾನು ತುಂಬ ನೋವು ಅನುಭವಿಸಿ ಇವನನ್ನ ಹೆತ್ತೆ” ಅಂತ ಹೇಳಿ ಅವನಿಗೆ ಯಾಬೇಚ್* ಅಂತ ಹೆಸ್ರಿಟ್ಟಳು.
10 ಯಾಬೇಚ ಇಸ್ರಾಯೇಲ್ ದೇವರಿಗೆ “ದೇವರೇ, ನೀನು ನನ್ನನ್ನ ಆಶೀರ್ವದಿಸು, ನನ್ನ ಪ್ರಾಂತ್ಯವನ್ನ ದೊಡ್ಡದು ಮಾಡು. ಯಾವುದೇ ಹಾನಿ ಆಗದ ಹಾಗೆ ಯಾವಾಗ್ಲೂ ನನಗೆ ಸಹಾಯ ಮಾಡು, ಕಷ್ಟ ಬರದ ಹಾಗೆ ಕಾಪಾಡು” ಅಂತ ಪ್ರಾರ್ಥಿಸಿದ. ಅವನು ಕೇಳಿದ ಹಾಗೇ ದೇವರು ಮಾಡಿದನು.
11 ಶೂಹಾನ ಸಹೋದರನಾದ ಕೆಲೂಬನ ಮಗ ಮೆಹೀರ, ಮೆಹೀರನ ಮಗ ಎಷ್ಟೋನ.
12 ಎಷ್ಟೋನನ ಮಕ್ಕಳು ಬೇತ್ರಾಫ, ಪಾಸೇಹ, ತೆಹಿನ್ನ. ತೆಹಿನ್ನನ ಮಗ ಇರ್-ನಾಹಷ. ಇವರು ರೇಕಾಹ್ಯರು.
13 ಕೆನಜನ ಗಂಡು ಮಕ್ಕಳು ಒತ್ನೀಯೇಲ್,+ ಸೆರಾಯ. ಒತ್ನೀಯೇಲನ ಮಗ* ಹತತ್.
14 ಮೆಯೋನೋತೈನ ಮಗ ಒಫ್ರ. ಸೆರಾಯನ ಮಗ ಯೋವಾಬ. ಯೋವಾಬ ಗೇಹರಾಷೀಮಿನ* ನಿವಾಸಿಗಳ ತಂದೆ. ಅಲ್ಲಿನ ಜನ್ರು ಕೈಕೆಲಸದಲ್ಲಿ ನಿಪುಣರು, ಹಾಗಾಗಿ ಅವ್ರಿಗೆ ಈ ಹೆಸ್ರು ಬಂತು.
15 ಯೆಫುನ್ನೆಯ ಮಗ ಕಾಲೇಬನ+ ಗಂಡು ಮಕ್ಕಳು ಈರು, ಏಲಾ, ನಾಮ್. ಏಲಾನ ಮಗ* ಕೆನಜ್.
16 ಯೆಹಲ್ಲೆಲೇಲನ ಗಂಡು ಮಕ್ಕಳು ಜೀಫ್, ಜೀಫಾ, ತೀರ್ಯ, ಅಸರೇಲ್.
17 ಎಜ್ರಾನ ಗಂಡು ಮಕ್ಕಳು ಯೆತೆರ್, ಮೆರೆದ್, ಏಫೆರ್, ಯಾಲೋನ್. ಮೆರೆದನ ಹೆಂಡತಿಯರಲ್ಲಿ ಒಬ್ಬಳಿಗೆ* ಮಿರ್ಯಾಮ, ಶಮೈ, ಎಷ್ಟೆಮೋವನ ತಂದೆ ಇಷ್ಬಹ ಹುಟ್ಟಿದ್ರು.
18 (ಮೆರೆದನ ಯೆಹೂದ್ಯಳಾದ ಹೆಂಡತಿಗೆ ಯೆರೆದ, ಹೆಬೆರ, ಯೆಕೂತೀಯೇಲ ಹುಟ್ಟಿದ್ರು. ಯೆರೆದನ ಮಗ ಗೆದೋರ, ಹೆಬೆರನ ಮಗ ಸೋಕೋನ, ಯೆಕೂತೀಯೇಲನ ಮಗ ಜಾನೋಹ.) ಇವರು ಫರೋಹನ ಮಗಳಾಗಿದ್ದ ಬಿತ್ಯಳ ಗಂಡು ಮಕ್ಕಳು. ಬಿತ್ಯ ಮೆರೆದನನ್ನ ಮದುವೆ ಆಗಿದ್ದಳು.
19 ನಹಮನ ಸಹೋದರಿ ಅಂದ್ರೆ ಹೋದೀಯನ ಹೆಂಡತಿಗೆ ಹುಟ್ಟಿದ ಗಂಡು ಮಕ್ಕಳು ಗರ್ಮ್ಯನಾಗಿದ್ದ ಕೆಯೀಲಾನಿಗೆ ಮತ್ತು ಮಾಕಾತ್ಯನಾಗಿದ್ದ ಎಷ್ಟೆಮೋವನಿಗೆ ತಂದೆಗಳಾಗಿದ್ರು.
20 ಶೀಮೋನನ ಗಂಡು ಮಕ್ಕಳು ಅಮ್ನೋನ, ರಿನ್ನ, ಬೆನ್ಹಾನಾನ್, ತೀಲೋನ್. ಇಷ್ಷೀಯ ಗಂಡು ಮಕ್ಕಳು ಜೋಹೇತ್, ಬೆನ್‌ಜೋಹೇತ್.
21 ಯೆಹೂದನ ಮಗ ಶೇಲಹನ+ ಗಂಡು ಮಕ್ಕಳು ಲೇಕಾಹನ ತಂದೆ ಏರ್, ಮಾರೇಷನ ತಂದೆ ಲದ್ದ, ಉತ್ತಮ ಬಟ್ಟೆಗಳ ತಯಾರಕರಾದ ಅಷ್ಬೇಯದ ಮನೆತನಕ್ಕೆ ಸೇರಿದ ಕುಟುಂಬಗಳು,
22 ಯೊಕೀಮ, ಕೋಜೇಬಿನ ಗಂಡಸರು, ಯೆಷೂಬಿಲೆಹೆಮ್, ಮೋವಾಬಿನ ಸ್ತ್ರೀಯರನ್ನ ಮದುವೆಯಾದ ಯೋವಾಷ, ಸಾರಾಫ. ಈ ವಿವರಗಳು ಪ್ರಾಚೀನ ಕಾಲದ್ದು.*
23 ಇವರು ನೆಟಾಯಿಮ್, ಗೆದೇರಾ ಅನ್ನೋ ಊರುಗಳಲ್ಲಿ ಕುಂಬಾರರಾಗಿದ್ರು. ಇವರು ಅಲ್ಲೇ ಇದ್ದು ರಾಜನಿಗಾಗಿ ಕೆಲಸ ಮಾಡ್ತಿದ್ರು.
24 ಸಿಮೆಯೋನನ+ ಗಂಡು ಮಕ್ಕಳು ನೆಮೂವೇಲ್, ಯಾಮೀನ್, ಯಾರೀಬ್, ಜೆರಹ, ಶೌಲ.+
25 ಶೌಲನ ಮಗ ಶಲ್ಲೂಮ, ಶಲ್ಲೂಮನ ಮಗ ಮಿಬ್ಸಾಮ್, ಮಿಬ್ಸಾಮನ ಮಗ ಮಿಷ್ಮ.
26 ಮಿಷ್ಮನ ವಂಶದವರು ಮಿಷ್ಮನ ಮಗ ಹಮ್ಮೂವೇಲ್, ಹಮ್ಮೂವೇಲನ ಮಗ ಜಕ್ಕೂರ್, ಜಕ್ಕೂರನ ಮಗ ಶಿಮ್ಮಿ.
27 ಶಿಮ್ಮಿಗೆ 16 ಗಂಡು ಮಕ್ಕಳು, 6 ಹೆಣ್ಣು ಮಕ್ಕಳು. ಆದ್ರೆ ಅವನ ಸಹೋದರರಿಗೆ ಗಂಡು ಮಕ್ಕಳು ಜಾಸ್ತಿ ಇರ್ಲಿಲ್ಲ. ಯೆಹೂದದ ಗಂಡಸರಿಗೆ ಇದ್ದಷ್ಟು ಗಂಡು ಮಕ್ಕಳು ಅವ್ರ ಕುಟುಂಬಗಳಲ್ಲಿ ಯಾವ ಕುಟುಂಬಕ್ಕೂ ಇರಲಿಲ್ಲ.+
28 ಅವ್ರಿದ್ದ ಪಟ್ಟಣಗಳು: ಬೇರ್ಷೆಬ,+ ಮೋಲಾದಾ,+ ಹಚರ್-ಷೂವಾಲ್,+
29 ಬಿಲ್ಹ, ಎಚೆಮ್,+ ತೋಲಾದ್,
30 ಬೆತೂವೇಲ್,+ ಹೊರ್ಮಾ,+ ಚಿಕ್ಲಗ್,+
31 ಬೇತ್-ಮರ್ಕಾಬೋತ್, ಹಚರ್-ಸೂಸೀಮ್,+ ಬೇತ್-ಬಿರೀ, ಶಾರಯಿಮ್. ಈ ಪಟ್ಟಣಗಳು ದಾವೀದನ ಆಳ್ವಿಕೆ ಶುರುವಾಗೋ ತನಕ ಅವ್ರದ್ದಾಗಿತ್ತು.
32 ಅವ್ರಿದ್ದ ಪಟ್ಟಣಗಳು ಏಟಾಮ್, ಅಯಿನ್, ರಿಮ್ಮೋನ್, ತೋಕೆನ್, ಆಷಾನ್.+ ಒಟ್ಟು ಐದು ಪಟ್ಟಣ.
33 ಅಷ್ಟೇ ಅಲ್ಲ ಬಾಲ್ ಪಟ್ಟಣದ ತನಕ ಈ ಪಟ್ಟಣಗಳ ಸುತ್ತಮುತ್ತ ಇದ್ದ ಹಳ್ಳಿಗಳೂ ಅವ್ರದ್ದೇ. ಇವು ಅವ್ರ ವಂಶಾವಳಿ ಪಟ್ಟಿಯಲ್ಲಿರೋ ಹೆಸ್ರುಗಳು, ಅವ್ರಿದ್ದ ಜಾಗಗಳು.
34 ಮೆಷೋಬಾಬ್, ಯಮ್ಲೇಕ್, ಅಮಚ್ಯನ ಮಗ ಯೋಷ,
35 ಯೋವೇಲ, ಅಸಿಯೇಲನ ಮರಿಮಗನೂ ಸೆರಾಯನ ಮೊಮ್ಮಗನೂ ಯೊಷಿಬ್ಯನ ಮಗನೂ ಆದ ಯೇಹು,
36 ಎಲ್ಯೋವೇನೈ, ಯಾಕೊಬ, ಯೆಷೋಹಾಯ, ಅಸಾಯ, ಅದೀಯೇಲ್, ಯೆಸೀಮಿಯೇಲ್, ಬೆನಾಯ,
37 ಶಿಪ್ಫಿಯ ಮಗ ಜೀಜ, ಅಲ್ಲೋನನ ಮಗ ಶಿಪ್ಫಿ, ಯೆದಾಯನ ಮಗ ಅಲ್ಲೋನ, ಶಿಮ್ರಿಯ ಮಗ ಯೆದಾಯ, ಶೆಮಾಯನ ಮಗ ಶಿಮ್ರಿ,
38 ಇವು ಅವ್ರವ್ರ ಕುಟುಂಬಗಳ ಪ್ರಧಾನರ ಹೆಸ್ರುಗಳು. ಅವ್ರ ಪೂರ್ವಜರ ಕುಟುಂಬಗಳಲ್ಲಿ ತುಂಬಾ ಜನ ಇದ್ರು.
39 ಹಾಗಾಗಿ ಅವರು ತಮ್ಮ ಕುರಿಗಳಿಗಾಗಿ ಹುಲ್ಲುಗಾವಲು ಹುಡುಕ್ತಾ ಕಣಿವೆಯ ಪೂರ್ವ ದಿಕ್ಕಲ್ಲಿದ್ದ ಗೆದೋರಿನ ಬಾಗಿಲು ತನಕ ಹೋದ್ರು.
40 ಕೊನೆಗೂ ಅವ್ರಿಗೆ ಹುಲುಸಾಗಿ ಬೆಳೆದ ಒಳ್ಳೇ ಹುಲ್ಲುಗಾವಲು ಸಿಕ್ತು. ಆ ಪ್ರದೇಶ ವಿಶಾಲವಾಗಿ, ಪ್ರಶಾಂತವಾಗಿತ್ತು. ಅಲ್ಲಿ ಯಾವುದೇ ತೊಂದ್ರೆ ಇರಲಿಲ್ಲ. ಈ ಮುಂಚೆ ಅಲ್ಲಿ ಹಾಮ್ ವಂಶದವರು+ ಇದ್ರು.
41 ವಂಶಾವಳಿ ಪಟ್ಟಿಯಲ್ಲಿ ಯಾರ ಹೆಸ್ರು ಇದ್ಯೋ ಅವರು ಯೆಹೂದದ ರಾಜ ಹಿಜ್ಕೀಯನ+ ಸಮಯದಲ್ಲಿ ಅಲ್ಲಿಗೆ ಹೋದ್ರು. ಅಲ್ಲಿದ್ದ ಹಾಮ್ಯರ, ಮೆಯನೀಮ್ಯರ ಡೇರೆಗಳನ್ನ ಹಾಳುಮಾಡಿ, ಆ ಜನ್ರನ್ನ ಪೂರ್ತಿ ನಾಶಮಾಡಿದ್ರು. ಅದ್ರ ರುಜುವಾತು ಇವತ್ತಿಗೂ ಸಿಗುತ್ತೆ. ಆ ಜನ್ರ ಜಾಗಗಳಲ್ಲಿ ಇವರು ವಾಸ ಮಾಡಿದ್ರು. ಯಾಕಂದ್ರೆ ಅವ್ರ ಕುರಿಗಳಿಗೆ ಬೇಕಾಗಿದ್ದ ಹುಲ್ಲುಗಾವಲುಗಳು ಅಲ್ಲಿದ್ದವು.
42 ಸಿಮೆಯೋನ್ಯರಲ್ಲಿ ಕೆಲವರು ಅಂದ್ರೆ 500 ಗಂಡಸ್ರು ಸೇಯೀರ್+ ಬೆಟ್ಟಕ್ಕೆ ಹೋದ್ರು. ಮುಂದೆ ನಿಂತು ಇವ್ರನ್ನ ಕರ್ಕೊಂಡು ಹೋದವರು ಇಷ್ಷೀಯ ಮಕ್ಕಳಾದ ಪೆಲಟ್ಯ, ನೆಯರ್ಯ, ರೆಫಾಯ, ಉಜ್ಜೀಯೇಲ.
43 ತಪ್ಪಿಸ್ಕೊಂಡು ಹೋಗಿ ಉಳ್ಕೊಂಡಿದ್ದ ಅಮಾಲೇಕ್ಯರನ್ನ+ ಅವರು ಅಲ್ಲಿ ಕೊಂದುಹಾಕಿದ್ರು, ಇವತ್ತಿಗೂ ಅವರು ಅಲ್ಲೇ ಇದ್ದಾರೆ.
ಪಾದಟಿಪ್ಪಣಿ
^ ಈ ಅಧ್ಯಾಯದಲ್ಲಿ ಕೆಲವು ಹೆಸ್ರು ಜನ್ರದ್ದಲ್ಲ ಬದಲಿಗೆ ಜಾಗಗಳು ಇರಬಹುದು. ಅಂಥ ವಚನಗಳಲ್ಲಿ ‘ತಂದೆ’ ಅನ್ನೋದು ಪಟ್ಟಣ ಕಟ್ಟಿದವರನ್ನ ಸೂಚಿಸುತ್ತೆ.
^ ಯಾಬೇಚ್ ಅನ್ನೋ ಹೆಸ್ರು “ನೋವು” ಅಂತ ಅರ್ಥ ಕೊಡೋ ಹೀಬ್ರು ಪದ ಆಗಿರಬಹುದು.
^ ಅಕ್ಷ. “ಗಂಡು ಮಕ್ಕಳು.”
^ ಅರ್ಥ “ಕುಶಲಕರ್ಮಿಗಳ ಕಣಿವೆ.”
^ ಅಕ್ಷ. “ಗಂಡು ಮಕ್ಕಳು.”
^ ಇವಳು ಬಹುಶಃ ವಚನ 18ರಲ್ಲಿರೋ ಬಿತ್ಯ.
^ ಅಥವಾ “ಇದು ಹಳೇ ಸಂಪ್ರದಾಯದ ಮಾತುಗಳು.”