ಒಂದನೇ ಪೂರ್ವಕಾಲವೃತ್ತಾಂತ 7:1-40

  • ಇಸ್ಸಾಕಾರನ ವಂಶದವರು (1-5), ಬೆನ್ಯಾಮೀನನ ವಂಶದವರು (6-12), ನಫ್ತಾಲಿಯ ವಂಶದವರು (13), ಮನಸ್ಸೆಯ ವಂಶದವರು (14-19), ಎಫ್ರಾಯೀಮನ ವಂಶದವರು (20-29), ಅಶೇರನ ವಂಶದವರು (30-40)

7  ಇಸ್ಸಾಕಾರನ ನಾಲ್ಕು ಗಂಡು ಮಕ್ಕಳು ತೋಲಾ, ಪೂವ, ಯಾಶೂಬ್‌, ಶಿಮ್ರೋನ್‌.+  ತೋಲಾನ ಗಂಡು ಮಕ್ಕಳು ಉಜ್ಜಿ, ರೆಫಾಯ, ಯೆರೀಯೇಲ್‌, ಯಹ್ಮೈ, ಇಬ್ಸಾಮ್‌, ಶೆಮೂವೇಲ್‌. ಇವರು ಕುಲಗಳ ಮುಖ್ಯಸ್ಥರಾಗಿದ್ರು. ತೋಲಾನ ವಂಶದವರು ವೀರ ಸೈನಿಕರು. ದಾವೀದನ ದಿನಗಳಲ್ಲಿ ಅವರು 22,600 ಜನ ಇದ್ರು.  ಉಜ್ಜಿಯ ವಂಶದವರು ಇಜ್ರಾಹ್ಯಹ, ಇಜ್ರಾಹ್ಯಹನ ಗಂಡು ಮಕ್ಕಳಾದ ಮೀಕಾಯೇಲ, ಓಬದ್ಯ, ಯೋವೇಲ, ಇಷ್ಷೀಯ. ಈ ಐದೂ ಜನ ಪ್ರಧಾನರಾಗಿದ್ರು.*  ಇವ್ರ ಕುಲಗಳ ವಂಶಾವಳಿ ಪಟ್ಟಿ ಪ್ರಕಾರ ಇವ್ರ ಸೈನ್ಯದಲ್ಲಿ ಯುದ್ಧಕ್ಕೆ ಸಿದ್ಧರಾಗಿದ್ದ ಸೈನಿಕರ ಸಂಖ್ಯೆ 36,000. ಅವ್ರಿಗೆ ಅನೇಕ ಹೆಂಡತಿಯರು, ಮಕ್ಕಳು ಇದ್ರು.  ಇಸ್ಸಾಕಾರನ ಎಲ್ಲ ಮನೆತನಗಳಲ್ಲಿದ್ದ ಅವ್ರ ಸಂಬಂಧಿಕರು ವೀರ ಸೈನಿಕರಾಗಿದ್ರು. ವಂಶಾವಳಿ ಪಟ್ಟಿ ಪ್ರಕಾರ ಅವ್ರ ಸಂಖ್ಯೆ 87,000.+  ಬೆನ್ಯಾಮೀನನ+ ಮೂರು ಗಂಡು ಮಕ್ಕಳು ಬೆಳ,+ ಬೆಕೆರ್‌,+ ಯೆದೀಯಯೇಲ್‌.+  ಬೆಳನಿಗೆ ಐದು ಗಂಡು ಮಕ್ಕಳು ಎಚ್ಬೋನ್‌, ಉಜ್ಜಿ, ಉಜ್ಜಿಯೇಲ್‌, ಯೆರೀಮೋತ್‌, ಈರಿ. ಇವರು ಕುಲದ ಮುಖ್ಯಸ್ಥರಾಗಿದ್ರು, ವೀರ ಸೈನಿಕರಾಗಿದ್ರು. ಇವ್ರ ವಂಶಾವಳಿ ಪಟ್ಟಿ ಪ್ರಕಾರ ಇವ್ರ ಸಂಖ್ಯೆ 22,034.+  ಬೆಕೆರನ ಗಂಡು ಮಕ್ಕಳು ಜೆಮೀರ, ಯೋವಾಷ, ಎಲೀಯೆಜರ, ಎಲ್ಯೋವೇನೈ, ಒಮ್ರಿ, ಯೆರೇಮೋತ್‌, ಅಬೀಯ, ಅನಾತೋತ್‌, ಆಲೆಮೆತ್‌. ಇವ್ರೆಲ್ಲ ಬೆಕೆರನ ಗಂಡು ಮಕ್ಕಳು.  ಅವ್ರ ವಂಶಾವಳಿ ಪಟ್ಟಿ ಪ್ರಕಾರ ಅವ್ರ ಕುಲಗಳಲ್ಲಿದ್ದ ಮುಖ್ಯಸ್ಥರ ವಂಶಗಳಲ್ಲಿ 20,200 ವೀರ ಸೈನಿಕರಿದ್ರು. 10  ಯೆದೀಯಯೇಲನ+ ವಂಶದವರು ಬಿಲ್ಹಾನ್‌, ಬಿಲ್ಹಾನನ ಮಕ್ಕಳಾದ ಯೆಗೂಷ್‌, ಬೆನ್ಯಾಮೀನ್‌, ಏಹೂದ, ಕೆನಾನ, ಜೇತಾನ್‌, ತಾರ್ಷೀಷ್‌, ಅಹೀಷೆಹರ್‌. 11  ಇವ್ರೆಲ್ಲ ಯೆದೀಯಯೇಲನ ವಂಶದವರು. ಇವ್ರ ಕುಲಗಳ ಮುಖ್ಯಸ್ಥರ ಪ್ರಕಾರ ಇವ್ರ ಸೈನ್ಯದಲ್ಲಿ ಯುದ್ಧಕ್ಕೆ ಸಿದ್ಧರಾಗಿ ಇರ್ತಿದ್ದ ವೀರ ಸೈನಿಕರ ಸಂಖ್ಯೆ 17,200. 12  ಶುಪ್ಪೀಮ್‌, ಹುಪ್ಪೀಮ್‌ ಈರನ+ ಗಂಡು ಮಕ್ಕಳು. ಹುಶೀಮರು ಅಹೇರನ ವಂಶದವರು. 13  ನಫ್ತಾಲಿಯ+ ಗಂಡು ಮಕ್ಕಳು ಯಹಚಿಯೇಲ್‌, ಗೂನೀ, ಯೇಜೆರ್‌ ಮತ್ತು ಶಲ್ಲೂಮ್‌. ಇವ್ರೆಲ್ಲ ಬಿಲ್ಹಾಳ+ ವಂಶಸ್ಥರು. 14  ಮನಸ್ಸೆಯ+ ಗಂಡು ಮಕ್ಕಳಲ್ಲಿ ಮೊದಲ್ನೇ ಮಗ ಅಸ್ರೀಯೇಲ. ಇವನು ಮನಸ್ಸೆಯ ಉಪಪತ್ನಿಗೆ ಹುಟ್ಟಿದ. ಅವಳು ಅರಾಮ್ಯದವಳು. (ಅವಳಿಗೆ ಗಿಲ್ಯಾದನ ತಂದೆ ಮಾಕೀರ+ ಸಹ ಹುಟ್ಟಿದ. 15  ಮಾಕೀರ ಹುಪ್ಪೀಮನಿಗೆ, ಶುಪ್ಪೀಮನಿಗೆ ಮದುವೆ ಮಾಡಿಸಿದ. ಅವ್ರ ಸಹೋದರಿಯ ಹೆಸ್ರು ಮಾಕಾ.) ಎರಡ್ನೇ ಮಗನ ಹೆಸ್ರು ಚಲ್ಪಹಾದ.+ ಚಲ್ಪಹಾದನಿಗೆ ಹೆಣ್ಣು ಮಕ್ಕಳು+ ಮಾತ್ರ ಇದ್ರು. 16  ಮಾಕೀರನ ಹೆಂಡತಿಯಾದ ಮಾಕಾ ಒಬ್ಬ ಮಗನನ್ನ ಹೆತ್ತು ಅವನಿಗೆ ಪೆರೆಷ್‌ ಅಂತ ಹೆಸ್ರಿಟ್ಟಳು. ಅವನ ಸಹೋದರನ ಹೆಸ್ರು ಶೆರೆಷ್‌. ಶೆರೆಷನಿಗೆ ಊಲಾಮ್‌, ರೆಕೆಮ್‌ ಅನ್ನೋ ಗಂಡು ಮಕ್ಕಳಿದ್ರು. 17  ಊಲಾಮನ ಮಗ* ಬೆದಾನ್‌. ಇವ್ರೇ ಮನಸ್ಸೆಯ ಮೊಮ್ಮಗನೂ ಮಾಕೀರನ ಮಗನೂ ಆದ ಗಿಲ್ಯಾದನ ಗಂಡು ಮಕ್ಕಳು. 18  ಗಿಲ್ಯಾದನ ಸಹೋದರಿ ಹೆಸ್ರು ಹಮ್ಮೋಲೆಕೆತ. ಇವಳಿಗೆ ಈಷ್ಹೋದ್‌, ಅಬೀಯೆಜೆರ್‌, ಮಹ್ಲಾ ಹುಟ್ಟಿದ್ರು. 19  ಶೆಮೀದಾನ ಮಕ್ಕಳು ಅಹ್ಯಾನ್‌, ಶೆಕೆಮ್‌, ಲಿಕ್ಹಿ, ಅನೀಯಾಮ್‌. 20  ಎಫ್ರಾಯೀಮನ+ ವಂಶದವರು ಶೂತೆಲಹ,+ ಶೂತೆಲಹನ ಮಗ ಬೆರೆದ್‌, ಬೆರೆದನ ಮಗ ತಹತ್‌, ತಹತನ ಮಗ ಎಲ್ಲಾದ, ಎಲ್ಲಾದನ ಮಗ ತಹತ್‌, 21  ತಹತನ ಮಗ ಜಾಬಾದ್‌, ಜಾಬಾದನ ಮಗ ಶೂತೆಲಹ. ಏಚೆರ, ಎಲ್ಲಾದ್‌ ಸಹ ಎಫ್ರಾಯೀಮನ ವಂಶದವರು. ಇವ್ರಿಬ್ಬರು ಗತ್‌+ ಊರಿನವ್ರ ಪ್ರಾಣಿಗಳನ್ನ ಕದಿಯೋಕೆ ಹೋದಾಗ ಆ ದೇಶದ ಮೂಲನಿವಾಸಿಗಳು ಇವ್ರನ್ನ ಕೊಂದುಹಾಕಿದ್ರು. 22  ಇವ್ರ ತಂದೆ ಎಫ್ರಾಯೀಮ ಇವ್ರಿಗೋಸ್ಕರ ತುಂಬ ದಿನ ಗೋಳಾಡಿದ. ಆಗ ಎಫ್ರಾಯೀಮನ ಸಹೋದರರು ಅವನನ್ನ ಸಮಾಧಾನ ಮಾಡೋಕೆ ಅವನ ಹತ್ರ ಬರ್ತಿದ್ರು. 23  ಇದಾದ್ಮೇಲೆ ಎಫ್ರಾಯೀಮ ತನ್ನ ಹೆಂಡತಿಯನ್ನ ಕೂಡಿದ. ಅವಳಿಗೆ ಒಂದು ಗಂಡು ಮಗು ಆಯ್ತು. ಅವನು ಆ ಮಗುಗೆ ಬೆರೀಯ* ಅಂತ ಹೆಸ್ರಿಟ್ಟ. ಯಾಕಂದ್ರೆ ಅವನ ಕುಟುಂಬಕ್ಕೆ ಕಷ್ಟ ಬಂದಿದ್ದ ಸಮಯದಲ್ಲಿ ಆ ಮಗು ಹುಟ್ಟಿತು. 24  ಎಫ್ರಾಯೀಮನ ಮಗಳ ಹೆಸ್ರು ಶೇರ. ಅವಳು ಮೇಲಿನ ಕೆಳಗಿನ ಬೇತ್‌-ಹೋರೋನನ್ನ+ ಹಾಗೂ ಉಜ್ಜೇನ್‌-ಶೇರ ಅನ್ನೋ ಪಟ್ಟಣಗಳನ್ನ ಕಟ್ಟಿಸಿದಳು. 25  ರೆಫಹ, ರೆಷೆಫ್‌ ಎಫ್ರಾಯೀಮನ ವಂಶದವರು. ರೆಷೆಫನ ಮಗ ತೆಲಹ, ತೆಲಹನ ಮಗ ತಹನ್‌. 26  ತಹನನ ಮಗ ಲದ್ದಾನ್‌, ಲದ್ದಾನನ ಮಗ ಅಮ್ಮೀಹೂದ್‌, ಅಮ್ಮೀಹೂದನ ಮಗ ಎಲೀಷಾಮ್‌, 27  ಎಲೀಷಾಮನ ಮಗ ನೂನ, ನೂನನ ಮಗ ಯೆಹೋಶುವ.*+ 28  ಎಫ್ರಾಯೀಮನ ವಂಶದವರು ನೆಲೆಸಿದ ಪ್ರದೇಶಗಳು ಬೆತೆಲ್‌,+ ಅದಕ್ಕೆ ಸೇರಿದ* ಪಟ್ಟಣಗಳು, ಪೂರ್ವಕ್ಕೆ ನಾರಾನ್‌, ಪಶ್ಚಿಮಕ್ಕೆ ಗೆಜೆರ್‌, ಅದಕ್ಕೆ ಸೇರಿದ ಪಟ್ಟಣಗಳು, ಶೆಕೆಮ್‌, ಅದಕ್ಕೆ ಸೇರಿದ ಪಟ್ಟಣಗಳು, ದೂರದಲ್ಲಿರೋ ಅಯ್ಯಾ,* ಅದಕ್ಕೆ ಸೇರಿದ ಪಟ್ಟಣಗಳು, 29  ಮನಸ್ಸೆಯ ವಂಶದವ್ರ ಪ್ರದೇಶಗಳ ಪಕ್ಕದ ಬೇತ್‌-ಷೆಯಾನ್‌,+ ಅದಕ್ಕೆ ಸೇರಿದ ಪಟ್ಟಣಗಳು, ತಾನಕ್‌,+ ಅದಕ್ಕೆ ಸೇರಿದ ಪಟ್ಟಣಗಳು, ಮೆಗಿದ್ದೋ,+ ಅದಕ್ಕೆ ಸೇರಿದ ಪಟ್ಟಣಗಳು, ದೋರ್‌,+ ಅದಕ್ಕೆ ಸೇರಿದ ಪಟ್ಟಣಗಳು. ಈ ಪ್ರದೇಶಗಳಲ್ಲಿ ಇಸ್ರಾಯೇಲನ ಮಗ ಯೋಸೇಫನ ವಂಶದವರು ವಾಸಿಸ್ತಿದ್ರು. 30  ಅಶೇರನ ಗಂಡು ಮಕ್ಕಳು ಇಮ್ನಾ, ಇಷ್ವ, ಇಷ್ವಿ, ಬೆರೀಯ.+ ಇವ್ರ ಸಹೋದರಿ ಹೆಸ್ರು ಸೆರಹ.+ 31  ಬೆರೀಯನ ಗಂಡು ಮಕ್ಕಳು ಹೆಬೆರ್‌, ಮಲ್ಕೀಯೇಲ್‌. ಮಲ್ಕೀಯೇಲ್‌ನ ಮಗ ಬಿರ್ಜೈತ. 32  ಹೆಬೆರನ ಗಂಡು ಮಕ್ಕಳು ಯಫ್ಲೇಟ್‌, ಶೋಮೇರ, ಹೋತಾಮ್‌. ಇವ್ರ ಸಹೋದರಿ ಹೆಸ್ರು ಶೂವ. 33  ಯಫ್ಲೇಟನ ಗಂಡು ಮಕ್ಕಳು ಪಾಸಕ್‌, ಬಿಮ್ಹಾಲ್‌, ಅಶ್ವಾತ್‌. ಇವರು ಯಫ್ಲೇಟನ ಗಂಡು ಮಕ್ಕಳು. 34  ಶೆಮೆರನ* ಗಂಡು ಮಕ್ಕಳು ಅಹೀ, ರೊಹ್ಗ, ಯೆಹುಬ್ಬ, ಅರಾಮ್‌. 35  ಅವನ ಸಹೋದರನಾದ ಹೆಲೆಮನ* ಗಂಡು ಮಕ್ಕಳು ಚೋಫಹ, ಇಮ್ನ, ಶೇಲೆಷ್‌, ಆಮಾಲ್‌. 36  ಚೋಫಹನ ಗಂಡು ಮಕ್ಕಳು ಸೂಹ, ಹರ್ನೆಫೆರ್‌, ಶೂಗಾಲ್‌, ಬೇರಿ, ಇಮ್ರ, 37  ಬೆಚೆರ್‌, ಹೋದ್‌, ಶಮ್ಮ, ಶಿಲ್ಷ, ಇತ್ರಾನ್‌, ಬೇರ. 38  ಯೆತೆರನ ಗಂಡು ಮಕ್ಕಳು ಯೆಫುನ್ನೆ, ಪಿಸ್ಪ, ಅರಾ. 39  ಉಲ್ಲನ ಗಂಡು ಮಕ್ಕಳು ಅರಹ, ಹನ್ನೀಯೇಲ್‌, ರಿಚ್ಯ. 40  ಇವರೆಲ್ಲ ಅಶೇರನ ವಂಶದವರು. ಅವರು ತಮ್ಮತಮ್ಮ ಕುಲಗಳ ಮುಖ್ಯಸ್ಥರು, ಪ್ರಮುಖ ವ್ಯಕ್ತಿಗಳು, ವೀರ ಸೈನಿಕರು, ಸೇನಾಪತಿಗಳ ಮುಖ್ಯಸ್ಥರು. ಇವ್ರ ವಂಶಾವಳಿ ಪಟ್ಟಿ+ ಪ್ರಕಾರ ಇವ್ರ ಸೈನ್ಯದಲ್ಲಿ ಯುದ್ಧಕ್ಕೆ ಸಿದ್ಧರಾಗಿ ಇರ್ತಿದ್ದ ಸೈನಿಕರ ಸಂಖ್ಯೆ 26,000.+

ಪಾದಟಿಪ್ಪಣಿ

ಅಕ್ಷ. “ಮುಖ್ಯಸ್ಥರು.”
ಅಕ್ಷ. “ಗಂಡು ಮಕ್ಕಳು.”
ಅರ್ಥ “ಕಷ್ಟದ ಜೊತೆ.”
ಅರ್ಥ “ಯೆಹೋವ ರಕ್ಷಣೆಯಾಗಿದ್ದಾನೆ.”
ಅಥವಾ “ಸುತ್ತಮುತ್ತ ಇದ್ದ.”
ಬಹುಶಃ, “ಗಾಜಾ.” ಆದ್ರೆ ಫಿಲಿಷ್ಟಿಯಕ್ಕೆ ಸೇರಿದ ಗಾಜಾ ಅಲ್ಲ.
ವಚನ 32ರಲ್ಲಿ ಇವನ ಹೆಸ್ರು ಶೋಮೇರ.
ಬಹುಶಃ ಇವನು ವಚನ 32ರಲ್ಲಿ ಇರೋ ಹೋತಾಮ ಇರಬಹುದು.