ಒಂದನೇ ಪೂರ್ವಕಾಲವೃತ್ತಾಂತ 8:1-40
8 ಬೆನ್ಯಾಮೀನನ+ ಗಂಡು ಮಕ್ಕಳಲ್ಲಿ ಮೊದಲ್ನೇ ಮಗ ಬೆಳ,+ ಎರಡ್ನೇ ಮಗ ಅಷ್ಬೇಲ,+ ಮೂರನೇ ಮಗ ಅಹ್ರಹ,
2 ನಾಲ್ಕನೇ ಮಗ ನೋಹಾ, ಐದನೇ ಮಗ ರಾಫ.
3 ಬೆಳನ ಗಂಡು ಮಕ್ಕಳು ಅದ್ದಾರ್, ಗೇರ,+ ಅಬೀಹೂದ್,
4 ಅಬೀಷೂವ, ನಾಮಾನ್, ಅಹೋಹ,
5 ಗೇರ, ಶೂಫಾಮ, ಹೂರಾಮ್.
6 ಏಹೂದನ ಗಂಡು ಮಕ್ಕಳು ಗೆಬದಲ್ಲಿ+ ವಾಸವಿದ್ದ ಕುಲಗಳ ಮುಖ್ಯಸ್ಥರು. ಗೆಬದ ಜನ್ರಾಗಿದ್ದ ಇವ್ರನ್ನ ಮಾನಹತಿಗೆ ಕೈದಿಗಳಾಗಿ ಕರ್ಕೊಂಡು ಹೋಗಿದ್ರು. ಏಹೂದನ ಗಂಡು ಮಕ್ಕಳು
7 ನಾಮಾನ್, ಅಹೀಯ, ಗೇರ. ಇವ್ರೇ ಆ ಪ್ರಜೆಗಳನ್ನ ಕೈದಿಗಳಾಗಿ ಕರ್ಕೊಂಡು ಹೋಗಿದ್ದವರು. ಆಗ ಗೇರ ಅವ್ರ ಮುಂದಾಳತ್ವ ವಹಿಸಿದ. ಇವನ ಮಕ್ಕಳು ಉಜ್ಜ, ಅಹೀಹೂದ.
8 ಶಹರಯಿಮನಿಗೆ ಮೋವಾಬಿನ ಪ್ರಾಂತ್ಯದಿಂದ ಮೋವಾಬ್ಯರನ್ನ ಕಳಿಸಿಬಿಟ್ಟ ಮೇಲೆ ಮಕ್ಕಳು ಹುಟ್ಟಿದ್ರು. ಹುಶೀಮ್, ಬಾರ ಅವನ ಹೆಂಡತಿಯರು.*
9 ಅವನಿಗೆ ಇನ್ನೊಬ್ಬ ಹೆಂಡತಿ ಹೋದೆಷಳಿಂದ ಸಹ ಮಕ್ಕಳು ಹುಟ್ಟಿದ್ರು. ಅವ್ರ ಹೆಸ್ರು ಚಿಬ್ಯ, ಮೇಷ, ಮಲ್ಕಾಮ,
10 ಯೆಯೂಚ್, ಸಾಕ್ಯ, ಮಿರ್ಮ. ಇವರು ಶಹರಯಿಮನ ಗಂಡು ಮಕ್ಕಳು, ಅವ್ರ ಕುಲಗಳ ಮುಖ್ಯಸ್ಥರು.
11 ಹುಶೀಮಳಿಗೆ ಅಬೀಟೂಬ್, ಎಲ್ಪಾಲ ಹುಟ್ಟಿದ್ರು.
12 ಎಲ್ಪಾಲನ ಗಂಡು ಮಕ್ಕಳು ಎಬೆರ, ಮಿಷ್ಷಾಮ್, ಶೆಮೆದ (ಓನೋವ,+ ಲೋದ,+ ಅವುಗಳಿಗೆ ಸೇರಿದ* ಪಟ್ಟಣಗಳನ್ನ ಕಟ್ಟಿದವನು ಇವನೇ),
13 ಬೆರೀಯ, ಶಮ. ಇವರು ಅಯ್ಯಾಲೋನಿನ+ ನಿವಾಸಿಗಳ ಕುಲಗಳ ಮುಖ್ಯಸ್ಥರು. ಇವರು ಗತ್ ಊರಿನ ಜನ್ರನ್ನ ಓಡಿಸಿಬಿಟ್ರು.
14 ಅಹಿಯೋವ, ಶಾಷಕ, ಯೆರೇಮೋತ್,
15 ಜೆಬದ್ಯ, ಅರಾದ್, ಎದೆರ್,
16 ಮೀಕಾಯೇಲ, ಇಷ್ಪ, ಯೋಹ ಇವ್ರೆಲ್ಲ ಬೆರೀಯನ ಗಂಡು ಮಕ್ಕಳು.
17 ಜೆಬದ್ಯ, ಮೆಷುಲ್ಲಾಮ, ಹಿಜ್ಕೀ, ಹೆಬೆರ್,
18 ಇಷ್ಮೆರೈ, ಇಜ್ಲೀಯ, ಯೋಬಾಬ್ ಇವರೆಲ್ಲ ಎಲ್ಪಾಲನ ಗಂಡು ಮಕ್ಕಳು.
19 ಯಾಕೀಮ್, ಜಿಕ್ರಿ, ಜಬ್ದಿ,
20 ಎಲೀಗೇನೈ, ಚಿಲ್ಲೆತೈ, ಎಲೀಯೇಲ್,
21 ಅದಾಯ, ಬೆರಾಯ, ಶಿಮ್ರಾತ್ ಇವರೆಲ್ಲ ಶಿಮ್ಮಿಯ ಗಂಡು ಮಕ್ಕಳು.
22 ಇಷ್ಪಾನ್, ಎಬೆರ, ಎಲೀಯೇಲ್,
23 ಅಬ್ದೋನ್, ಜಿಕ್ರಿ, ಹಾನಾನ್,
24 ಹನನ್ಯ, ಏಲಾಮ್, ಅನೆತೋತೀಯ,
25 ಇಫ್ದೆಯಾಹ, ಪೆನೂವೇಲ್ ಇವ್ರೆಲ್ಲ ಶಾಷಕನ ಗಂಡು ಮಕ್ಕಳು.
26 ಶಂಷೆರೈ, ಶೆಹರ್ಯ, ಅತಲ್ಯ,
27 ಯಾರೆಷ್ಯ, ಎಲೀಯ, ಜಿಕ್ರಿ ಇವ್ರೆಲ್ಲ ಯೆರೋಹಾಮನ ಗಂಡು ಮಕ್ಕಳು.
28 ಇವರು ತಮ್ಮತಮ್ಮ ವಂಶದ ಪ್ರಕಾರ ಕುಲಗಳ ಮುಖ್ಯಸ್ಥರು. ಈ ಮುಖ್ಯಸ್ಥರು ಯೆರೂಸಲೇಮಲ್ಲಿ ವಾಸ ಇದ್ರು.
29 ಗಿಬ್ಯೋನನ ತಂದೆ ಯೆಗೀಯೇಲ ಗಿಬ್ಯೋನಲ್ಲಿ+ ವಾಸ ಇದ್ದ. ಅವನ ಹೆಂಡತಿ ಹೆಸ್ರು ಮಾಕಾ.+
30 ಅವನ ಮೊದಲ್ನೇ ಮಗ ಅಬ್ದೋನ್, ಅವನ ನಂತ್ರ ಚೂರ್, ಕೀಷ, ಬಾಳ್, ನಾದಾಬ್,
31 ಗೆದೋರ್, ಅಹಿಯೋವ, ಜೆಕೆರ್ ಹುಟ್ಟಿದ್ರು.
32 ಮಿಕ್ಲೋತನಿಗೆ ಶಿಮಾಹ ಹುಟ್ಟಿದ. ಅವ್ರೆಲ್ಲ ತಮ್ಮ ಸಹೋದರರ ಜೊತೆ ಯೆರೂಸಲೇಮಲ್ಲಿ ಇದ್ರು. ಇವ್ರ ಜೊತೆ ಬೇರೆ ಸಹೋದರರು ಸಹ ಇದ್ರು.
33 ನೇರನ+ ಮಗ ಕೀಷ, ಕೀಷನ ಮಗ ಸೌಲ,+ ಸೌಲನ ಮಕ್ಕಳು ಯೋನಾತಾನ,+ ಮಲ್ಕೀಷೂವ,+ ಅಬೀನಾದಾಬ,+ ಎಷ್ಬಾಳ.*+
34 ಯೋನಾತಾನನ ಮಗ ಮೆರೀಬ್ಬಾಳ,*+ ಮೆರೀಬ್ಬಾಳನ ಮಗ ಮೀಕ.+
35 ಮೀಕನ ಗಂಡು ಮಕ್ಕಳು ಪೀತೋನ್, ಮೆಲೆಕ್, ತರೇಯ, ಆಹಾಜ್.
36 ಆಹಾಜನ ಮಗ ಯೆಹೋವದ್ದಾಹ, ಯೆಹೋವದ್ದಾಹನ ಮಕ್ಕಳು ಆಲೆಮೆತ, ಅಜ್ಮಾವೇತ, ಜಿಮ್ರಿ. ಜಿಮ್ರಿಯ ಮಗ ಮೋಚ.
37 ಮೋಚನ ಮಗ ಬಿನ್ನ, ಬಿನ್ನನ ಮಗ ರಾಫಾ, ರಾಫಾನ ಮಗ ಎಲ್ಲಾಸಾ, ಎಲ್ಲಾಸಾನ ಮಗ ಆಚೇಲ.
38 ಆಚೇಲನಿಗೆ ಆರು ಗಂಡು ಮಕ್ಕಳು. ಅವರು ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ, ಶೆಯರ್ಯ, ಓಬದ್ಯ, ಹಾನಾನ್. ಇವ್ರೆಲ್ಲ ಆಚೇಲನ ಗಂಡು ಮಕ್ಕಳಾಗಿದ್ರು.
39 ಅವನ ಸಹೋದರನಾದ ಏಷೆಕನ ಗಂಡು ಮಕ್ಕಳಲ್ಲಿ ಮೊದಲ್ನೇ ಮಗ ಊಲಾಮ್, ಎರಡ್ನೇ ಮಗ ಯೆಗೂಷ್, ಮೂರನೇ ಮಗ ಎಲೀಫೆಲೆಟ್.
40 ಊಲಾಮನ ಗಂಡು ಮಕ್ಕಳು ಬಿಲ್ಲುಗಳನ್ನ ಬಳಸೋಕೆ* ಸಮರ್ಥರಾಗಿದ್ದ ವೀರ ಸೈನಿಕರು. ಅವ್ರಿಗೆ ತುಂಬ ಜನ ಗಂಡು ಮಕ್ಕಳು, ಮೊಮ್ಮಕ್ಕಳು ಇದ್ರು. ಅವ್ರ ಒಟ್ಟು ಸಂಖ್ಯೆ 150. ಇವ್ರೆಲ್ಲ ಬೆನ್ಯಾಮೀನನ ವಂಶದವರು.
ಪಾದಟಿಪ್ಪಣಿ
^ ಬಹುಶಃ, “ಅವನು ತನ್ನ ಹೆಂಡತಿಯರಾದ ಹುಶೀಮ್ ಮತ್ತು ಬಾರಳನ್ನ ಕಳಿಸಿದ ಮೇಲೆ ಹೀಗೆ ಆಗಿರಬಹುದು.”
^ ಅಥವಾ “ಸುತ್ತಮುತ್ತ ಇದ್ದ.”
^ ಇವನ ಇನ್ನೊಂದು ಹೆಸ್ರು ಇಷ್ಬೊಷೆತ್.
^ ಇವನ ಇನ್ನೊಂದು ಹೆಸ್ರು ಮೆಫಿಬೋಶೆತ್.
^ ಅಕ್ಷ. “ಕಾಲಿಂದ ತುಳಿಯೋಕೆ.”