ಪೇತ್ರ ಬರೆದ ಮೊದಲನೇ ಪತ್ರ 2:1-25

  • ದೇವರ ಸಂದೇಶಕ್ಕೆ ಹಂಬಲ ಬೆಳೆಸ್ಕೊಳ್ಳಿ (1-3)

  • ಜೀವ ಇರೋ ಕಲ್ಲುಗಳಿಂದ ಕಟ್ಟಿದ ಮನೆ (4-10)

  • ಈ ಲೋಕದಲ್ಲಿ ವಿದೇಶಿಯರಾಗಿ ಇರಿ (11, 12)

  • ಸರಿಯಾದ ಅಧೀನತೆ (13-25)

    • ಕ್ರಿಸ್ತ, ನಮಗಿರೋ ಮಾದರಿ (21)

2  ಅದಕ್ಕೇ ಕೆಟ್ಟತನ,+ ವಂಚನೆ, ಕಪಟ, ಹೊಟ್ಟೆಕಿಚ್ಚು, ಚಾಡಿ ಹೇಳೋದು ಇಂಥ ಎಲ್ಲ ವಿಷ್ಯಗಳನ್ನ ಬಿಟ್ಟುಬಿಡಿ.  ಹಾಲಿಗಾಗಿ ಹಸಿದಿರೋ ಚಿಕ್ಕ ಮಕ್ಕಳ+ ತರ ದೇವರ ಸಂದೇಶದ ಶುದ್ಧ* ಹಾಲಿಗಾಗಿ ಹಸಿವು ಬೆಳೆಸ್ಕೊಳ್ಳಿ. ಅದ್ರಿಂದ ಬೆಳೆದು ರಕ್ಷಣೆ ಪಡಿಯೋಕೆ ಆಗುತ್ತೆ.+  ರಕ್ಷಣೆ ಸಿಗಬೇಕಂದ್ರೆ ಒಡೆಯ ಎಷ್ಟು ದಯೆ ತೋರಿಸ್ತಾನೆ ಅಂತ ಅರ್ಥ ಮಾಡ್ಕೊಬೇಕು.*  ಜೀವ ಇರೋ ಕಲ್ಲನ್ನ ಮನುಷ್ಯರು ಬೇಡ ಅಂದಿದ್ದಾರೆ.+ ಆದ್ರೆ ದೇವರು ಆತನನ್ನ ಆರಿಸ್ಕೊಂಡಿದ್ದಾನೆ, ಆತನನ್ನ ಅಮೂಲ್ಯವಾಗಿ ನೋಡ್ತಾನೆ.+ ಆತನ ಮೇಲೆ ನಂಬಿಕೆ ಇಟ್ಟಿದ್ರಿಂದ,  ನೀವೂ ಜೀವ ಇರೋ ಕಲ್ಲುಗಳು. ದೇವರ ಪವಿತ್ರಶಕ್ತಿಯಿಂದ ಕಟ್ಟಿದ ಮನೆ.+ ನೀವು ಪವಿತ್ರ ಪುರೋಹಿತರು ಆಗಬೇಕು ಮತ್ತು ದೇವರಿಗೆ ಬಲಿ ಕೊಡಬೇಕು+ ಅನ್ನೋದಕ್ಕೇ ಈ ಮನೆ ಕಟ್ಟಿದ್ದು. ಈ ಬಲಿಗಳನ್ನ ಕೊಡೋಕೆ ಪವಿತ್ರಶಕ್ತಿ ಸಹಾಯ ಮಾಡುತ್ತೆ. ಅದನ್ನ ದೇವರು ಯೇಸು ಕ್ರಿಸ್ತನ ಮೂಲಕ ಸ್ವೀಕರಿಸ್ತಾನೆ.+  ಯಾಕಂದ್ರೆ “ನಾನು ಆರಿಸ್ಕೊಂಡಿರೋ ಒಂದು ಕಲ್ಲನ್ನ ಚೀಯೋನಲ್ಲಿ ಹಾಕ್ತಿದ್ದೀನಿ. ಅದು ಅಮೂಲ್ಯವಾದ ಅಡಿಪಾಯದ ಮೂಲೆಗಲ್ಲು. ಅದ್ರ ಮೇಲೆ ನಂಬಿಕೆ ಇಡೋ ಯಾರಿಗೂ ನಿರಾಸೆ ಆಗಲ್ಲ”+ ಅಂತ ಪವಿತ್ರ ಗ್ರಂಥದಲ್ಲಿ ಹೇಳಿದೆ.  ಹಾಗಾಗಿ ನೀವು ಆತನಲ್ಲಿ ನಂಬಿಕೆ ಇಟ್ಟಿರೋದ್ರಿಂದ ಆತನು ನಿಮಗೆ ಅಮೂಲ್ಯ ವ್ಯಕ್ತಿ. ಆದ್ರೆ ಆತನ ಮೇಲೆ ನಂಬಿಕೆ ಇಡದೆ ಇರುವವ್ರಿಗೆ “ಕಟ್ಟುವವರು ಬೇಡ ಅಂತ ಬಿಟ್ಟ ಕಲ್ಲೇ+ ಮುಖ್ಯವಾದ ಮೂಲೆಗಲ್ಲಾಯ್ತು.”+  ಅಷ್ಟೇ ಅಲ್ಲ “ಎಡವಿಸೋ ಕಲ್ಲು ಮುಗ್ಗರಿಸೋ ಬಂಡೆ ಆಯ್ತು.”+ ಅವರು ದೇವರ ಸಂದೇಶದ ಪ್ರಕಾರ ನಡ್ಕೊಳ್ಳದೇ ಇರೋದ್ರಿಂದ ಎಡವಿ ಬೀಳ್ತಾರೆ. ಅವ್ರಿಗೆ ಆಗಬೇಕಾಗಿರೋ ಗತಿ ಇದೇ.  ಆದ್ರೆ ನೀವು “ಆರಿಸ್ಕೊಂಡಿರೋ ಕುಲಕ್ಕೆ ಸೇರಿದವರು. ನೀವು ಪುರೋಹಿತರು ಆಗಿರೋ ರಾಜರು. ನೀವು ಪವಿತ್ರ ಜನಾಂಗಕ್ಕೆ+ ಸೇರಿದವರು.+ ದೇವರ ಒಳ್ಳೇತನದ ಬಗ್ಗೆ ನೀವು ಎಲ್ಲಾ ಕಡೆ ತಿಳಿಸಬೇಕಂತ ದೇವರು ಆರಿಸ್ಕೊಂಡಿರೋ ಜನ್ರು.”+ ಆತನು ನಿಮ್ಮನ್ನ ಕತ್ತಲೆಯಿಂದ ತನ್ನ ಅದ್ಭುತ ಬೆಳಕಿಗೆ ಕರ್ಕೊಂಡು ಬಂದನು.+ 10  ಮುಂಚೆ ನೀವು ದೇವರ ಜನ್ರು ಆಗಿರಲಿಲ್ಲ. ಆದ್ರೆ ಈಗ ದೇವರ ಜನ್ರಾಗಿದ್ದೀರ.+ ದೇವರು ನಿಮಗೆ ಕರುಣೆ ತೋರಿಸಿರಲಿಲ್ಲ. ಆದ್ರೆ ಈಗ ಕರುಣೆ ತೋರಿಸಿದ್ದಾನೆ.+ 11  ಪ್ರೀತಿಯ ಸಹೋದರ ಸಹೋದರಿಯರೇ, ಈ ಲೋಕದಲ್ಲಿ ವಿದೇಶಿಯರಾಗಿ ಸ್ವಲ್ಪ ದಿನ ಇರೋ+ ನಿಮಗೆ ನಾನು ಹೇಳೋದು ಏನಂದ್ರೆ ಪಾಪಕ್ಕೆ ನಡಿಸೋ ಆಸೆಗಳಿಂದ ದೂರ ಇರಿ.+ ಆ ಆಸೆಗಳು ನಿಮ್ಮ ಜೊತೆ ಹೋರಾಡ್ತಾ ಇರುತ್ತೆ.+ 12  ಲೋಕದ ಜನ್ರ ಮಧ್ಯ ಇರುವಾಗ ನೀವು ಯಾವಾಗ್ಲೂ ಚೆನ್ನಾಗಿ ನಡ್ಕೊಳ್ಳಿ.+ ನೀವು ತಪ್ಪು ಮಾಡಿದ್ದೀರ ಅಂತ ಅವರು ಆರೋಪ ಹಾಕಿದ್ರೂ, ನೀವು ಮಾಡಿದ ಒಳ್ಳೇ ಕೆಲಸಗಳನ್ನ ನೋಡ್ತಾರೆ.+ ದೇವರು ನ್ಯಾಯತೀರಿಸೋ ಸಮಯ ಬಂದಾಗ ಅವರು ದೇವರನ್ನ ಹೊಗಳ್ತಾರೆ. 13  ಒಡೆಯನ ಇಷ್ಟದ ಪ್ರಕಾರ ಮನುಷ್ಯರು ಮಾಡಿರೋ ಅಧಿಕಾರಿಗಳಿಗೆ ಅಧೀನತೆ ತೋರಿಸಿ.+ ನಿಮ್ಮ ಮೇಲೆ ಅಧಿಕಾರಿಯಾಗಿ ಇರೋ ರಾಜನ+ ಮಾತು ಕೇಳಿ. 14  ರಾಜ್ಯಪಾಲರ ಮಾತನ್ನೂ ಕೇಳಿ. ಯಾಕಂದ್ರೆ ತಪ್ಪು ಮಾಡಿದವ್ರಿಗೆ ಶಿಕ್ಷೆ ಕೊಡಕ್ಕೆ, ಒಳ್ಳೇದನ್ನ ಮಾಡಿದವ್ರಿಗೆ ಶಭಾಷ್‌ ಹೇಳಕ್ಕೆ ರಾಜ ಅವ್ರನ್ನ ನೇಮಿಸಿದ್ದಾನೆ.+ 15  ನೀವು ಒಳ್ಳೇದನ್ನ ಮಾಡೋ ಮೂಲಕ ಮೂರ್ಖರ ತರ ಮಾತಾಡೋ ಜನ್ರ ಬಾಯನ್ನ ಮುಚ್ಚಿಸಬೇಕು ಅನ್ನೋದೇ ದೇವರ ಇಷ್ಟ.+ 16  ಸ್ವತಂತ್ರ ಜನ್ರ ತರ ಜೀವನ ಮಾಡಿ.+ ಆದ್ರೆ ಅದನ್ನ ತಪ್ಪು ಮಾಡೋಕೆ ನೆಪವಾಗಿ ಬಳಸಬೇಡಿ.+ ಬದಲಿಗೆ ದೇವರಿಗೆ ದಾಸರಾಗಿ ಇರಿ.+ 17  ಎಲ್ಲ ತರದ ಜನ್ರನ್ನ ಗೌರವಿಸಿ.+ ಲೋಕದಲ್ಲಿ ಎಲ್ಲ ಕಡೆ ಇರೋ ಸಹೋದರರನ್ನ ಪ್ರೀತಿಸಿ.+ ದೇವರಿಗೆ ಭಯಪಡಿ.+ ರಾಜನನ್ನ ಗೌರವಿಸಿ.+ 18  ದಾಸರಾಗಿ ಇರುವವರು ತಮ್ಮ ಯಜಮಾನ್ರಿಗೆ ಪೂರ್ತಿ ಗೌರವ ಕೊಡಬೇಕು,+ ಅವ್ರಿಗೆ ಅಧೀನರಾಗಿ ಇರಬೇಕು. ಒಳ್ಳೇ ಯಜಮಾನ್ರಿಗೆ, ಅರ್ಥ ಮಾಡ್ಕೊಳ್ಳೋ ಯಜಮಾನ್ರಿಗೆ ಅಷ್ಟೇ ಅಲ್ಲ ಏನೇ ಮಾಡಿದ್ರೂ ಖುಷಿಯಾಗದ ಯಜಮಾನ್ರಿಗೂ ಅಧೀನರಾಗಿರಿ. 19  ದೇವರ ಮುಂದೆ ಒಳ್ಳೇ ಮನಸ್ಸಾಕ್ಷಿ ಕಾಪಾಡ್ಕೊಳ್ಳೋಕೆ ಯಾರು ಕಷ್ಟಗಳನ್ನ ಮತ್ತು ಅನ್ಯಾಯವನ್ನ ಸಹಿಸ್ಕೊಳ್ತಾರೋ ಅಂಥವ್ರನ್ನ ದೇವರು ಇಷ್ಟಪಡ್ತಾನೆ.+ 20  ಪಾಪಮಾಡಿದ್ದಕ್ಕೆ ನಿಮಗೆ ಶಿಕ್ಷೆ ಆಗ್ತಿರುವಾಗ ಅದನ್ನ ಸಹಿಸ್ಕೊಂಡ್ರೆ ಅದ್ರಲ್ಲಿ ಹೇಳ್ಕೊಳ್ಳಕ್ಕೆ ಏನಿದೆ?+ ಆದ್ರೆ ನೀವು ಒಳ್ಳೇದನ್ನ ಮಾಡಿ ಕಷ್ಟ ಅನುಭವಿಸ್ತಾ ಇದ್ರೆ ದೇವರ ದೃಷ್ಟಿಯಲ್ಲಿ ಅದು ತುಂಬ ಒಳ್ಳೇದು.+ 21  ನಿಜ ಹೇಳಬೇಕಂದ್ರೆ, ಅನ್ಯಾಯವಾಗಿ ಕಷ್ಟ ಅನುಭವಿಸಬೇಕು ಅಂತಾನೇ ನಿಮ್ಮನ್ನ ದೇವರು ಕರೆದಿದ್ದಾನೆ. ಕ್ರಿಸ್ತನೂ ನಿಮಗೋಸ್ಕರ ಕಷ್ಟ ಅನುಭವಿಸಿದನು.+ ನೀವು ನಂಬಿಗಸ್ತರಾಗಿದ್ದು ಆತನ ತರ ನಡಿಬೇಕು ಅಂತಾನೇ ಆತನು ನಿಮಗೋಸ್ಕರ ಮಾದರಿ ಇಟ್ಟಿದ್ದಾನೆ.+ 22  ಆತನು ಯಾವ ಪಾಪನೂ ಮಾಡಲಿಲ್ಲ,+ ಆತನ ಬಾಯಲ್ಲಿ ಮೋಸದ ಮಾತುಗಳೇ ಬರಲಿಲ್ಲ.+ 23  ಜನ್ರು ಆತನಿಗೆ ಅವಮಾನ ಮಾಡಿದಾಗ+ ಆತನೂ ಅವ್ರಿಗೆ ಅವಮಾನ ಮಾಡಲಿಲ್ಲ.+ ಆತನು ಕಷ್ಟ ಅನುಭವಿಸ್ತಿದ್ದಾಗ+ ತನಗೆ ಕಷ್ಟ ಕೊಡ್ತಿದ್ದವ್ರಿಗೆ ಬೆದರಿಕೆ ಹಾಕಲಿಲ್ಲ. ಬದಲಿಗೆ, ಸರಿಯಾಗಿ ತೀರ್ಪು ಮಾಡೋ+ ತನ್ನ ದೇವರಿಗೆ ಎಲ್ಲ ಬಿಟ್ಕೊಟ್ಟ. 24  ಆತನನ್ನ ಕಂಬದ+ ಮೇಲೆ ಜಡಿದಾಗ ತನ್ನ ಶರೀರದಲ್ಲಿ ನಮ್ಮೆಲ್ರ ಪಾಪಗಳನ್ನ ಹೊತ್ಕೊಂಡ.+ ನಾವು ಪಾಪದಿಂದ ಬಿಡುಗಡೆ ಪಡ್ಕೊಂಡು, ನೀತಿಯ ಕೆಲಸಗಳನ್ನ ಮಾಡೋಕೆ ಜೀವಿಸಬೇಕು ಅಂತ ಆತನು ಹಾಗೆ ಮಾಡಿದನು. “ಆತನ ಗಾಯಗಳಿಂದ ನಿಮಗೆ ವಾಸಿಯಾಯ್ತು.”+ 25  ಯಾಕಂದ್ರೆ ಒಂದು ಕಾಲದಲ್ಲಿ ನೀವೂ ದಾರಿತಪ್ಪಿದ ಕುರಿಗಳ ತರ ಇದ್ರಿ.+ ಆದ್ರೆ ಈಗ ನಿಮ್ಮ ಪ್ರಾಣಗಳನ್ನ ರಕ್ಷಿಸೋ ಕುರುಬನ ಹತ್ರ ವಾಪಸ್‌ ಬಂದಿದ್ದೀರ.+

ಪಾದಟಿಪ್ಪಣಿ

ಅದು, ಕಲಬೆರಕೆ ಇಲ್ಲದಿರೋ ಹಾಲು.
ಅಕ್ಷ. “ನೀವೇ ರುಚಿ ನೋಡಬೇಕು.”