ಒಂದನೇ ಸಮುವೇಲ 29:1-11
-
ಫಿಲಿಷ್ಟಿಯರು ದಾವೀದನಲ್ಲಿ ಭರವಸೆ ಇಡಲಿಲ್ಲ (1-11)
29 ಫಿಲಿಷ್ಟಿಯರು+ ತಮ್ಮ ಸೈನ್ಯವನ್ನ ಅಫೇಕಲ್ಲಿ ಒಟ್ಟುಸೇರಿಸಿದಾಗ ಇಸ್ರಾಯೇಲ್ಯರು ಇಜ್ರೇಲಿನ+ ಬುಗ್ಗೆ ಹತ್ರ ಪಾಳೆಯ ಹೂಡಿದ್ರು.
2 ಫಿಲಿಷ್ಟಿಯರ ಪ್ರಭುಗಳು ನೂರು ನೂರು, ಸಾವಿರ ಸಾವಿರ ಸೈನಿಕರ ಗುಂಪುಗಳನ್ನ ಕರ್ಕೊಂಡು ಹೋಗ್ತಿದ್ರು. ದಾವೀದ, ಅವನ ಗಂಡಸ್ರು ಸೈನ್ಯದ ಹಿಂದೆ ಆಕೀಷನ+ ಜೊತೆ ಬರ್ತಿದ್ರು.
3 ಆದ್ರೆ ಫಿಲಿಷ್ಟಿಯರ ಅಧಿಕಾರಿಗಳು ಆಕೀಷ್‌ಗೆ “ಈ ಇಬ್ರಿಯರು ಯಾಕೆ ಇಲ್ಲಿಗೆ ಬಂದಿದ್ದಾರೆ?” ಅಂತ ಕೇಳಿದ್ರು. ಅದಕ್ಕೆ ಆಕೀಷ್ “ಇವನು ದಾವೀದ. ಇಸ್ರಾಯೇಲ್ ರಾಜನಾದ ಸೌಲನ ಸೇವಕ. ಇವನು ಒಂದು ವರ್ಷ ಅಥವಾ ಅದಕ್ಕಿಂತ ಜಾಸ್ತಿ ಸಮಯದಿಂದ ನನ್ನ ಜೊತೆ ಇದ್ದಾನೆ.+ ಇವನು ಓಡಿಬಂದ ದಿನದಿಂದ ಇವತ್ತಿನ ತನಕ ಇವನಲ್ಲಿ ನಾನು ಯಾವ ತಪ್ಪನ್ನೂ ನೋಡಿಲ್ಲ” ಅಂದ.
4 ಆದ್ರೆ ಫಿಲಿಷ್ಟಿಯರ ಅಧಿಕಾರಿಗಳಿಗೆ ಆಕೀಷನ ಮೇಲೆ ಕೋಪ ಬಂತು. ಅವರು “ಆ ಮನುಷ್ಯನನ್ನ ವಾಪಸ್ ಕಳಿಸಿಬಿಡು.+ ನೀನು ಅವನಿಗೆ ಕೊಟ್ಟ ಜಾಗಕ್ಕೆ ಹೋಗೋಕೆ ಹೇಳು. ಯುದ್ಧ ನಡಿವಾಗ ಅವನು ನಮ್ಮ ಮೇಲೆ ದಾಳಿ ಮಾಡಬಹುದು. ಹಾಗಾಗಿ ಯುದ್ಧಕ್ಕೆ ಅವನು ನಮ್ಮ ಜೊತೆ ಬರದ ಹಾಗೆ ನೋಡ್ಕೊ.+ ಅವನು ತನ್ನ ಪ್ರಭುವನ್ನ ಮೆಚ್ಚಿಸೋಕೆ ನಮ್ಮ ಜನ್ರ ತಲೆಗಳನ್ನ ತಗೊಂಡು ಹೋದ್ರೆ ಸಾಕಲ್ವಾ?
5 ‘ಸೌಲ ಸಾವಿರಗಟ್ಟಲೆ ಶತ್ರುಗಳನ್ನ ಸಾಯಿಸಿದ,ದಾವೀದ ಹತ್ತು ಸಾವಿರಗಟ್ಟಲೆ ಶತ್ರುಗಳನ್ನ ಸಾಯಿಸಿದ’ ಅಂತ
ಜನ ಹಾಡ್ತಾ ಕುಣಿತಾ ಹೇಳಿದ್ದು ಈ ದಾವೀದನ ಬಗ್ಗೆನೇ ಅಲ್ವಾ?”+ ಅಂದ್ರು.
6 ಹಾಗಾಗಿ ಆಕೀಷ್+ ದಾವೀದನನ್ನ ಕರೆದು “ಜೀವ ಇರೋ ಯೆಹೋವನ ಆಣೆ, ನೀನು ಸತ್ಯವಂತ. ನನ್ನ ಸೈನ್ಯ ಯುದ್ಧಕ್ಕೆ ಹೋಗುವಾಗ ನೀನೂ ಅದ್ರ ಜೊತೆ ಬರೋದನ್ನ ನೋಡಿ ನನಗೆ ತುಂಬ ಖುಷಿ ಆಯ್ತು.+ ಯಾಕಂದ್ರೆ ನೀನು ನನ್ನ ಹತ್ರ ಬಂದ ದಿನದಿಂದ ಇವತ್ತಿನ ತನಕ ನಾನು ನಿನ್ನಲ್ಲಿ ಯಾವ ತಪ್ಪನ್ನೂ ನೋಡಿಲ್ಲ.+ ಆದ್ರೆ ಬೇರೆ ಪ್ರಭುಗಳಿಗೆ ನಿನ್ನ ಮೇಲೆ ಭರವಸೆ ಇಲ್ಲ.+
7 ಹಾಗಾಗಿ ಸಮಾಧಾನದಿಂದ ವಾಪಸ್ ಹೋಗು. ಫಿಲಿಷ್ಟಿಯರ ಪ್ರಭುಗಳಿಗೆ ಬೇಜಾರು ಆಗೋ ಯಾವುದನ್ನೂ ಮಾಡಬೇಡ” ಅಂದ.
8 ಆಗ ದಾವೀದ ಆಕೀಷನಿಗೆ “ಯಾಕೆ, ನಾನೇನು ಮಾಡ್ದೆ? ನಾನು ನಿನ್ನ ಹತ್ರ ಬಂದ ದಿನದಿಂದ ಇವತ್ತಿನ ತನಕ ಈ ನಿನ್ನ ಸೇವಕನಲ್ಲಿ ಯಾವ ತಪ್ಪು ನೋಡ್ದೆ? ನಿನ್ನ ಜೊತೆ ನಾನ್ಯಾಕೆ ಬರಬಾರದು? ನನ್ನ ಒಡೆಯನಾಗಿರೋ ರಾಜನ ಶತ್ರುಗಳ ವಿರುದ್ಧ ಯಾಕೆ ಹೋರಾಡಬಾರದು?” ಅಂತ ಕೇಳಿದ.
9 ಅದಕ್ಕೆ ಆಕೀಷ್ ದಾವೀದನಿಗೆ “ನನ್ನ ದೃಷ್ಟಿಯಲ್ಲಿ ನೀನು ದೇವದೂತನಷ್ಟು ಒಳ್ಳೇವನು.+ ಆದ್ರೆ ಫಿಲಿಷ್ಟಿಯರ ಅಧಿಕಾರಿಗಳು ‘ಯುದ್ಧಕ್ಕೆ ಅವನು ನಮ್ಮ ಜೊತೆ ಬರದ ಹಾಗೆ ನೋಡ್ಕೊ’ ಅಂತ ಹೇಳಿದ್ದಾರೆ.
10 ಹಾಗಾಗಿ ನೀನು ಮತ್ತು ನಿನ್ನ ಜೊತೆ ಬಂದ ಗಂಡಸ್ರು ಬೆಳಿಗ್ಗೆ ಬೇಗ ಎದ್ದು ವಾಪಸ್ ಹೋಗಿ” ಅಂದ.
11 ಹಾಗಾಗಿ ದಾವೀದ ಮತ್ತು ಅವನ ಗಂಡಸ್ರು ಫಿಲಿಷ್ಟಿಯರ ದೇಶಕ್ಕೆ ವಾಪಸ್ ಹೋಗೋಕೆ ಬೆಳಿಗ್ಗೆ ಬೇಗ ಎದ್ರು. ಫಿಲಿಷ್ಟಿಯರು ಇಜ್ರೇಲಿಗೆ+ ಹೋದ್ರು.