ಎರಡನೇ ಅರಸು 21:1-26

  • ಮನಸ್ಸೆ ಯೆಹೂದದ ರಾಜ, ರಕ್ತದೋಕುಳಿ (1-18)

    • ಯೆರೂಸಲೇಮಿನ ನಾಶನ (12-15)

  • ಆಮೋನ ಯೆಹೂದದ ರಾಜ (19-26)

21  ಮನಸ್ಸೆ+ ರಾಜನಾದಾಗ ಅವನಿಗೆ 12 ವರ್ಷ. ಅವನು ಯೆರೂಸಲೇಮಿಂದ 55 ವರ್ಷ ಆಳಿದ.+ ಅವನ ತಾಯಿ ಹೆಸ್ರು ಹೆಫ್ಸಿಬಾ.  ಮನಸ್ಸೆ ಯೆಹೋವನಿಗೆ ಇಷ್ಟ ಆಗೋದನ್ನ ಮಾಡಲಿಲ್ಲ. ಯೆಹೋವ ಇಸ್ರಾಯೇಲ್ಯರ ಮುಂದಿಂದ ಓಡಿಸಿಬಿಟ್ಟ ಜನ್ರು ಮಾಡ್ತಿದ್ದ ಅಸಹ್ಯ ಪದ್ಧತಿಗಳನ್ನೇ ಇವನೂ ಮಾಡ್ತಿದ್ದ.+  ತನ್ನ ತಂದೆ ಹಿಜ್ಕೀಯ ನಾಶಮಾಡಿದ ಸುಳ್ಳು ದೇವರ ಪೂಜಾ ಸ್ಥಳಗಳನ್ನ ಮನಸ್ಸೆ ಮತ್ತೆ ಕಟ್ಟಿಸಿದ.+ ಇಸ್ರಾಯೇಲ್‌ ರಾಜ ಅಹಾಬ ಕಟ್ಟಿಸಿದ ತರಾನೇ+ ಬಾಳನಿಗಾಗಿ ಯಜ್ಞವೇದಿಗಳನ್ನ ಕಟ್ಟಿಸಿದ, ಪೂಜಾಕಂಬ* ಮಾಡಿಸಿದ.+ ಅಷ್ಟೇ ಅಲ್ಲ ಅವನು ಆಕಾಶದ ಇಡೀ ಸೈನ್ಯಕ್ಕೆ ಅಡ್ಡಬಿದ್ದು ಆರಾಧಿಸಿದ.+  ಅವನು ಯಜ್ಞವೇದಿಗಳನ್ನ ಯೆಹೋವನ ಆಲಯದಲ್ಲೂ ಕಟ್ಟಿಸಿದ.+ ಯೆಹೋವ ಈ ಆಲಯದ ಬಗ್ಗೆ “ಯೆರೂಸಲೇಮಲ್ಲಿ ನನ್ನ ಹೆಸ್ರು ಇರುತ್ತೆ”+ ಅಂದಿದ್ದನು.  ಆದ್ರೆ ಯೆಹೋವನ ಆಲಯದ ಎರಡು ಅಂಗಳಗಳಲ್ಲಿ+ ಆಕಾಶದ ಇಡೀ ಸೈನ್ಯಕ್ಕಾಗಿ ಅವನು ಯಜ್ಞವೇದಿಗಳನ್ನ ಕಟ್ಟಿಸಿದ.+  ಅವನು ತನ್ನ ಮಗನನ್ನೇ ಬೆಂಕಿಯಲ್ಲಿ ಬಲಿ ಕೊಟ್ಟ. ಅವನು ಮಂತ್ರತಂತ್ರಗಳನ್ನ ಮಾಡ್ತಿದ್ದ, ಶಕುನ ನೋಡ್ತಿದ್ದ.+ ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳ್ಕೊಳ್ತಿದ್ದ ಜನ್ರನ್ನ, ಭವಿಷ್ಯ ಹೇಳೋರನ್ನ ನೇಮಿಸಿದ.+ ಹೀಗೆ ಅವನು ಯೆಹೋವನಿಗೆ ಇಷ್ಟ ಆಗದ್ದನ್ನ ಮಿತಿ ಮೀರಿ ಮಾಡಿ ಆತನಿಗೆ ಕೋಪ ಬರಿಸಿದ.  ಮನಸ್ಸೆ ತಾನು ಕೆತ್ತಿಸಿ ಮಾಡಿಸಿದ ಪೂಜಾಕಂಬ*+ ತಗೊಂಡು ಹೋಗಿ ಆಲಯದಲ್ಲಿ ಇಟ್ಟ. ಆ ಆಲಯದ ಬಗ್ಗೆ ಯೆಹೋವ ದಾವೀದನಿಗೆ ಮತ್ತು ಅವನ ಮಗ ಸೊಲೊಮೋನನಿಗೆ “ಇಸ್ರಾಯೇಲಿನ ಎಲ್ಲ ಕುಲಗಳಿಂದ ನಾನು ಆರಿಸ್ಕೊಂಡಿರೋ ಈ ಆಲಯದಲ್ಲಿ ಮತ್ತು ಯೆರೂಸಲೇಮಲ್ಲಿ ನನ್ನ ಹೆಸ್ರು ಶಾಶ್ವತವಾಗಿ ಇರುತ್ತೆ.+  ಇಸ್ರಾಯೇಲ್ಯರು ನಾನು ಕೊಟ್ಟ ಎಲ್ಲ ಆಜ್ಞೆಗಳ ಪ್ರಕಾರ ಅಂದ್ರೆ ನನ್ನ ಸೇವಕನಾದ ಮೋಶೆ ಅವ್ರಿಗೆ ಹೇಳಿದ ನಿಯಮ ಪುಸ್ತಕದಲ್ಲಿರೋ ಎಲ್ಲ ವಿಷ್ಯಗಳ ಪ್ರಕಾರ ನಡೆದ್ರೆ,+ ನಾನು ಅವ್ರ ಪೂರ್ವಜರಿಗೆ ಕೊಟ್ಟ ಈ ದೇಶದಿಂದ ಅವ್ರನ್ನ ಓಡಿಸಲ್ಲ. ಇನ್ನು ಯಾವತ್ತೂ ಅವರು ಅಲೆಯೋ ತರ ಮಾಡಲ್ಲ”+ ಅಂದಿದ್ದನು.  ಆದ್ರೆ ಇಸ್ರಾಯೇಲ್ಯರು ದೇವರ ಮಾತು ಕೇಳಲಿಲ್ಲ. ಮನಸ್ಸೆ ಅವ್ರನ್ನ ತಪ್ಪು ದಾರಿಗೆ ನಡೆಸಿದ. ಯೆಹೋವ ಯಾವ ಜನಾಂಗಗಳನ್ನ ಪೂರ್ಣವಾಗಿ ನಾಶವಾಗೋ ತರ ಮಾಡಿದ್ದನೋ ಆ ಜನಾಂಗಗಳಿಗಿಂತ ತುಂಬ ಕೆಟ್ಟ ಕೆಲಸಗಳನ್ನ ಇಸ್ರಾಯೇಲ್ಯರ ಕೈಯಿಂದ ಮನಸ್ಸೆ ಮಾಡಿಸಿದ.+ 10  ಯೆಹೋವ ತನ್ನ ಸೇವಕರಾದ ಪ್ರವಾದಿಗಳ ಮೂಲಕ ಮತ್ತೆಮತ್ತೆ ಇಸ್ರಾಯೇಲ್ಯರಿಗೆ ಹೀಗೆ ಹೇಳಿಸಿದನು:+ 11  “ಯೆಹೂದದ ರಾಜ ಮನಸ್ಸೆ ತುಂಬ ಅಸಹ್ಯ ಕೆಲಸಗಳನ್ನ ಮಾಡಿದ. ಅವನು ತನಗಿಂತ ಮುಂಚೆ ಇದ್ದ ಅಮೋರಿಯರಿಗಿಂತ+ ಹೆಚ್ಚು ಕೆಟ್ಟದು ಮಾಡಿದ.+ ಅಷ್ಟೇ ಅಲ್ಲ ಅಸಹ್ಯಕರ ಮೂರ್ತಿಗಳನ್ನ* ನಿಲ್ಲಿಸಿ ಯೆಹೂದದವರಿಂದ ಪಾಪ ಮಾಡಿಸಿದ. 12  ಹಾಗಾಗಿ ಇಸ್ರಾಯೇಲ್‌ ದೇವರಾದ ಯೆಹೋವ ಹೀಗೆ ಹೇಳ್ತಾನೆ: ‘ನಾನು ಯೆರೂಸಲೇಮಿನ ಮತ್ತು ಯೆಹೂದದ ಮೇಲೆ ಎಂಥಾ ಕಷ್ಟ ತರ್ತೀನಿ ಅಂದ್ರೆ+ ಅದ್ರ ಬಗ್ಗೆ ಕೇಳಿಸ್ಕೊಳ್ಳೋ ಜನ್ರು ದಂಗಾಗಿ ಹೋಗ್ತಾರೆ.*+ 13  ನಾನು ಸಮಾರ್ಯವನ್ನ+ ಅಳೆದ ಅಳತೆಯ ದಾರವನ್ನೇ ಯೆರೂಸಲೇಮಿನ ಮೇಲೆ ಇಡ್ತೀನಿ.+ ಅಹಾಬನ ಮನೆಗೆ ಬಳಸಿದ ಮಟ್ಟಕೋಲನ್ನೇ* ಅದ್ರ ಮೇಲೆ ಬಳಸ್ತೀನಿ.+ ಒಬ್ಬ ಪಾತ್ರೆಯನ್ನ ಒರೆಸಿ, ಮಗುಚಿ ಇಡೋ ಹಾಗೆ ನಾನು ಯೆರೂಸಲೇಮನ್ನ ಶುಚಿ ಮಾಡ್ತೀನಿ.+ 14  ನಾನು ನನ್ನ ಆಸ್ತಿಯಾಗಿರೋ ಪ್ರಜೆಗಳಲ್ಲಿ ಉಳಿದಿರುವವರ ಕೈಬಿಟ್ಟಿದ್ದೀನಿ.+ ಅವ್ರನ್ನ ಶತ್ರುಗಳ ಕೈಗೆ ಒಪ್ಪಿಸ್ತೀನಿ. ಅವ್ರ ಎಲ್ಲ ಶತ್ರುಗಳು ಅವ್ರ ವಸ್ತುಗಳನ್ನ ದೋಚಿ, ಅವ್ರನ್ನ ಕೈದಿಗಳಾಗಿ ತಗೊಂಡು ಹೋಗ್ತಾರೆ.+ 15  ಯಾಕಂದ್ರೆ ಅವರು ನನಗಿಷ್ಟ ಆಗದ ಕೆಲಸ ಮಾಡಿದ್ದಾರೆ. ಅವ್ರ ಪೂರ್ವಜರು ಈಜಿಪ್ಟಿಂದ ಬಂದ ದಿನದಿಂದ ಇವತ್ತಿನ ತನಕ ನನ್ನ ಕೋಪವನ್ನ ಜಾಸ್ತಿ ಮಾಡ್ತಾನೇ ಇದ್ದಾರೆ.’”+ 16  ಮನಸ್ಸೆ ಯೆಹೂದದ ಕೈಯಿಂದ ಯೆಹೋವನಿಗೆ ಇಷ್ಟ ಆಗದ್ದನ್ನ ಮಾಡಿಸಿ ಅವ್ರಿಂದ ಪಾಪ ಮಾಡಿಸಿದ. ಅವನ ಈ ಪಾಪದ ಜೊತೆ ನಿರಪರಾಧಿಗಳ ರಕ್ತವನ್ನ ದೊಡ್ಡ ಪ್ರಮಾಣದಲ್ಲಿ ಸುರಿಸ್ತಾ ಯೆರೂಸಲೇಮನ್ನ ಒಂದು ತುದಿಯಿಂದ ಇನ್ನೊಂದು ತುದಿ ತನಕ ಆ ರಕ್ತದಿಂದ ತುಂಬಿಸಿದ.+ 17  ಮನಸ್ಸೆಯ ಉಳಿದ ಜೀವನಚರಿತ್ರೆ ಬಗ್ಗೆ, ಅವನು ಮಾಡಿದ ಎಲ್ಲ ಕೆಲಸಗಳ ಬಗ್ಗೆ, ಅವನ ಎಲ್ಲ ಪಾಪ ಕೃತ್ಯಗಳ ಬಗ್ಗೆ ಯೆಹೂದದ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ. 18  ಕೊನೆಗೆ ಮನಸ್ಸೆ ತೀರಿಹೋದ. ಅವನ ಅರಮನೆಯ ತೋಟದಲ್ಲಿ ಅಂದ್ರೆ ಉಜ್ಜನ ತೋಟದಲ್ಲಿ ಅವನನ್ನ ಸಮಾಧಿ ಮಾಡಿದ್ರು.+ ಅವನ ನಂತ್ರ ಅವನ ಮಗ ಆಮೋನ ರಾಜನಾದ. 19  ಆಮೋನ+ ರಾಜನಾದಾಗ ಅವನಿಗೆ 22 ವರ್ಷ. ಅವನು ಯೆರೂಸಲೇಮಿಂದ ಎರಡು ವರ್ಷ ಆಳಿದ.+ ಅವನ ತಾಯಿ ಹೆಸ್ರು ಮೆಷುಲ್ಲೆಮೆತ್‌. ಅವಳು ಯೊಟ್ಬಾದವನಾದ ಹಾರೂಚನ ಮಗಳು. 20  ಆಮೋನ ತನ್ನ ತಂದೆ ಮನಸ್ಸೆ ತರಾನೇ ಯೆಹೋವನಿಗೆ ಇಷ್ಟ ಆಗದ್ದನ್ನ ಮಾಡ್ತಾ ಹೋದ.+ 21  ಅವನು ತನ್ನ ತಂದೆಯ ದಾರಿಯನ್ನೇ ಹಿಡಿದ. ಅವನ ತಂದೆ ಆರಾಧಿಸ್ತಿದ್ದ ಅಸಹ್ಯವಾದ ಮೂರ್ತಿಗಳಿಗೆ ಅಡ್ಡಬೀಳ್ತಾ ಆರಾಧಿಸಿದ.+ 22  ಹೀಗೆ ಆಮೋನ ತನ್ನ ಪೂರ್ವಜರ ದೇವರಾದ ಯೆಹೋವನನ್ನ ಬಿಟ್ಟುಬಿಟ್ಟ. ಅವನು ಯೆಹೋವನ ದಾರೀಲಿ ನಡಿಲಿಲ್ಲ.+ 23  ಸ್ವಲ್ಪ ಸಮಯ ಆದ್ಮೇಲೆ ಆಮೋನನ ಸೇವಕರು ಅವನ ವಿರುದ್ಧ ಸಂಚು ಮಾಡಿ ಅವನ ಮನೆಯಲ್ಲೇ ಅವನನ್ನ ಕೊಂದು ಹಾಕಿದ್ರು. 24  ರಾಜನ ವಿರುದ್ಧ ಸಂಚು ಮಾಡಿದವ್ರನ್ನ ಆ ದೇಶದ ಜನ ಸಾಯಿಸಿದ್ರು. ಆಮೇಲೆ ಆಮೋನನ ಸ್ಥಾನದಲ್ಲಿ ಅವನ ಮಗ ಯೋಷೀಯನನ್ನ ರಾಜನಾಗಿ ಮಾಡಿದ್ರು.+ 25  ಆಮೋನನ ಉಳಿದ ಜೀವನಚರಿತ್ರೆ ಬಗ್ಗೆ, ಅವನು ಮಾಡಿದ ಕೆಲಸಗಳ ಬಗ್ಗೆ ಯೆಹೂದದ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ. 26  ಆಮೋನನನ್ನ ಉಜ್ಜನ ತೋಟದಲ್ಲಿದ್ದ ಅವನ ಸಮಾಧಿಯಲ್ಲಿ ಹೂಣಿಟ್ರು.+ ಅವನ ಸ್ಥಾನದಲ್ಲಿ ಅವನ ಮಗ ಯೋಷೀಯ+ ರಾಜನಾದ.

ಪಾದಟಿಪ್ಪಣಿ

ಇದಕ್ಕೆ ಹೀಬ್ರು ಭಾಷೆಯಲ್ಲಿ ಬಳಸಿರೋ ಪದ “ಸಗಣಿ” ಅನ್ನೋದಕ್ಕೆ ಬಳಸಿರೋ ಪದಕ್ಕೆ ಸಂಬಂಧಿಸಿದೆ. ತುಂಬ ಅಸಹ್ಯ ಅಂತ ತೋರಿಸೋಕೆ ಈ ಪದ ಬಳಸಲಾಗಿದೆ.
ಅಕ್ಷ. “ಜನ್ರ ಎರಡೂ ಕಿವಿ ಗುಂಯ್‌ಗುಟ್ಟುತ್ತೆ.”
ಅಥವಾ “ತೂಗುಗುಂಡು ದಾರವನ್ನೇ.”