ಎರಡನೇ ಅರಸು 22:1-20

  • ಯೋಷೀಯ ಯೆಹೂದದ ರಾಜ (1, 2)

  • ದೇವಾಲಯದ ದುರಸ್ತಿ ಕೆಲಸಕ್ಕಾಗಿ ನಿರ್ದೇಶನ (3-7)

  • ನಿಯಮ ಪುಸ್ತಕ ಸಿಕ್ತು (8-13)

  • ವಿನಾಶದ ಬಗ್ಗೆ ಹುಲ್ದಳ ಭವಿಷ್ಯವಾಣಿ (14-20)

22  ಯೋಷೀಯ+ ರಾಜನಾದಾಗ ಅವನಿಗೆ ಎಂಟು ವರ್ಷ. ಅವನು ಯೆರೂಸಲೇಮಿಂದ 31 ವರ್ಷ ಆಳಿದ.+ ಅವನ ತಾಯಿ ಹೆಸ್ರು ಯೆದೀದಾ. ಅವಳು ಬೊಚ್ಕತಿನ+ ಅದಾಯನ ಮಗಳು.  ಯೋಷೀಯ ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡಿದ. ಆತನ ಪ್ರತಿಯೊಂದು ಆಜ್ಞೆಯನ್ನ ಪಾಲಿಸಿದ. ತನ್ನ ಪೂರ್ವಜನಾದ ದಾವೀದನ ದಾರಿಯಲ್ಲೇ ನಡೆದ.+  ರಾಜ ಯೋಷೀಯ ಆಳ್ತಿದ್ದ 18ನೇ ವರ್ಷದಲ್ಲಿ ಮೆಷುಲ್ಲಾಮನ ಮೊಮ್ಮಗನೂ ಅಚಲ್ಯನ ಮಗನೂ ಕಾರ್ಯದರ್ಶಿಯೂ ಆಗಿದ್ದ ಶಾಫಾನನನ್ನ ಯೆಹೋವನ ಆಲಯಕ್ಕೆ ಕಳಿಸಿದ.+ ರಾಜ ಅವನಿಗೆ  “ನೀನು ಮಹಾ ಪುರೋಹಿತ ಹಿಲ್ಕೀಯನ+ ಹತ್ರ ಹೋಗಿ ಯೆಹೋವನ ಆಲಯಕ್ಕೆ ಜನ್ರು ತಂದ ಹಣವನ್ನೆಲ್ಲ+ ಅಂದ್ರೆ ಬಾಗಿಲು ಕಾಯುವವರು ಜನ್ರಿಂದ ಸೇರಿಸಿದ ಹಣವನ್ನೆಲ್ಲ ಸಂಗ್ರಹಿಸು ಅಂತ ಹೇಳು.+  ಆ ಹಣವನ್ನ ಯೆಹೋವನ ಆಲಯದಲ್ಲಿ ನಡಿತಿರೋ ಕೆಲಸದ ಮೇಲ್ವಿಚಾರಣೆ ಮಾಡ್ತಾ ಇರುವವರಿಗೆ ಕೊಡೋಕೆ ಹೇಳು. ಯೆಹೋವನ ಆಲಯದ ದುರಸ್ತಿ ಕೆಲಸ ಮಾಡ್ತಿರೋ ಕೆಲಸಗಾರರಿಗೆ ಮೇಲ್ವಿಚಾರಕರು ಆ ಹಣ ಕೊಡ್ಲಿ.+  ಅಂದ್ರೆ ಕರಕುಶಲಗಾರರಿಗೆ, ನಿರ್ಮಾಣ ಕೆಲಸ ಮಾಡುವವರಿಗೆ, ಮೇಸ್ತ್ರಿಗಳಿಗೆ ಕೊಡ್ಲಿ. ಅವರು ಆ ಹಣದಿಂದ ಆಲಯದ ದುರಸ್ತಿಗಾಗಿ ಮರಗಳನ್ನ ಮತ್ತು ಕತ್ತರಿಸಿದ ಕಲ್ಲುಗಳನ್ನ ಖರೀದಿಸ್ಲಿ.+  ಆದ್ರೆ ಆ ಮೇಲ್ವಿಚಾರಕರಿಂದ ಲೆಕ್ಕ ಕೇಳೋ ಅಗತ್ಯ ಇಲ್ಲ. ಯಾಕಂದ್ರೆ ಅವರು ನಂಬಿಗಸ್ತರು”+ ಅಂದ.  ಆಮೇಲೆ ಮಹಾ ಪುರೋಹಿತ ಹಿಲ್ಕೀಯ ಕಾರ್ಯದರ್ಶಿ ಶಾಫಾನನಿಗೆ+ “ಯೆಹೋವನ ಆಲಯದಲ್ಲಿ ನನಗೆ ನಿಯಮ ಪುಸ್ತಕ ಸಿಕ್ತು”+ ಅಂತ ಹೇಳಿ ಅದನ್ನ ಅವನಿಗೆ ಕೊಟ್ಟ. ಶಾಫಾನ ಅದನ್ನ ಓದೋಕೆ ಶುರುಮಾಡಿದ.+  ಆಮೇಲೆ ಕಾರ್ಯದರ್ಶಿ ಶಾಫಾನ ರಾಜನ ಹತ್ರ ಹೋಗಿ “ನಿನ್ನ ಸೇವಕರು ಆಲಯದ ಅಷ್ಟೂ ಹಣ ತಗೊಂಡು ಯೆಹೋವನ ಆಲಯದ ಕೆಲಸ ಮಾಡುವವರ ಮೇಲ್ವಿಚಾರಕರಿಗೆ ಕೊಟ್ಟಿದ್ದಾರೆ”+ ಅಂದ. 10  ಅಷ್ಟೇ ಅಲ್ಲ ಅವನು ರಾಜನಿಗೆ “ಪುರೋಹಿತ ಹಿಲ್ಕೀಯ ನನಗೆ ಒಂದು ಪುಸ್ತಕ+ ಕೊಟ್ಟಿದ್ದಾನೆ” ಅಂತ ಹೇಳಿ ಅದನ್ನ ರಾಜನ ಮುಂದೆ ಓದಿದ. 11  ರಾಜ ನಿಯಮ ಪುಸ್ತಕದಲ್ಲಿದ್ದ ಮಾತುಗಳನ್ನ ಕೇಳಿದ ತಕ್ಷಣ ತನ್ನ ಬಟ್ಟೆ ಹರ್ಕೊಂಡ.+ 12  ಪುರೋಹಿತ ಹಿಲ್ಕೀಯನಿಗೆ, ಶಾಫಾನನ ಮಗ ಅಹೀಕಾಮನಿಗೆ,+ ಮೀಕಾಯನ ಮಗ ಅಕ್ಬೋರನಿಗೆ, ಕಾರ್ಯದರ್ಶಿ ಶಾಫಾನನಿಗೆ, ತನ್ನ ಸೇವಕ ಅಸಾಯನಿಗೆ ರಾಜ ಈ ಆಜ್ಞೆ ಕೊಟ್ಟ: 13  “ಈ ಪುಸ್ತಕದಲ್ಲಿ ಬರೆದಿರೋ ವಿಷ್ಯಗಳನ್ನ ನಮ್ಮ ಪೂರ್ವಜರು ಪಾಲಿಸಲಿಲ್ಲ, ಅದರ ಪ್ರಕಾರ ನಡಿಲಿಲ್ಲ. ಹಾಗಾಗಿ ಯೆಹೋವನಿಗೆ ನಮ್ಮ ಮೇಲೆ ತುಂಬ ಕೋಪ ಬಂದಿದೆ.+ ಹಾಗಾಗಿ ನೀವೆಲ್ಲ ನನ್ನ ಪರವಾಗಿ, ಜನ್ರ ಪರವಾಗಿ, ಇಡೀ ಯೆಹೂದದ ಪರವಾಗಿ ಹೋಗಿ ನಮಗೆ ಸಿಕ್ಕಿರೋ ಈ ಪುಸ್ತಕದಲ್ಲಿ ಬರೆದಿರೋ ಎಲ್ಲ ಮಾತುಗಳ ಬಗ್ಗೆ ಯೆಹೋವನ ಹತ್ರ ಕೇಳು.” 14  ಆಗ ಪುರೋಹಿತ ಹಿಲ್ಕೀಯ, ಅಹೀಕಾಮ್‌, ಅಕ್ಬೋರ್‌, ಶಾಫಾನ್‌ ಮತ್ತು ಅಸಾಯ ಎಲ್ರೂ ಪ್ರವಾದಿನಿ+ ಹುಲ್ದಳ ಹತ್ರ ಹೋದ್ರು. ಅವಳು ಹರ್ಹಸನ ಮೊಮ್ಮಗನೂ ತಿಕ್ವನ ಮಗನೂ ಆದ ಶಲ್ಲೂಮನ ಹೆಂಡತಿ. ಶಲ್ಲೂಮ ಬಟ್ಟೆಗಳ ಕೋಣೆಯ ಉಸ್ತುವಾರಿ ವಹಿಸ್ತಿದ್ದ. ಹುಲ್ದ ಯೆರೂಸಲೇಮ್‌ ಪಟ್ಟಣದ ಹೊಸ ಭಾಗದಲ್ಲಿ ವಾಸಿಸ್ತಿದ್ದಳು. ಅವರು ಅಲ್ಲಿಗೆ ಹೋಗಿ ಅವಳ ಜೊತೆ ಮಾತಾಡಿದ್ರು.+ 15  ಅವಳು ಅವ್ರಿಗೆ “ನಿಮ್ಮನ್ನ ನನ್ನ ಹತ್ರ ಕಳಿಸ್ಕೊಟ್ಟ ಆ ಮನುಷ್ಯನಿಗೆ ಇಸ್ರಾಯೇಲ್‌ ದೇವರಾದ ಯೆಹೋವ ಹೀಗೆ ಹೇಳಿದ ಅಂತ ತಿಳಿಸಿ: 16  ‘ಯೆಹೋವ ಹೀಗೆ ಹೇಳ್ತಾನೆ: “ಯೆಹೂದದ ರಾಜ ಆ ಪುಸ್ತಕದಲ್ಲಿ ಓದಿದ ಮಾತುಗಳ ಪ್ರಕಾರನೇ ನಾನು ಈ ಸ್ಥಳದ ಮೇಲೆ, ಅದ್ರ ಜನ್ರ ಮೇಲೆ ಕಷ್ಟ ತರ್ತೀನಿ.+ 17  ಅವರು ನನ್ನನ್ನ ಬಿಟ್ಟು ಬೇರೆ ದೇವರುಗಳ ಮುಂದೆ ಬಲಿಗಳನ್ನ ಅರ್ಪಿಸಿ+ ತಮ್ಮ ಕೆಲಸಗಳಿಂದ ನನಗೆ ಕೋಪ ಬರಿಸಿದ್ದಾರೆ.+ ಹಾಗಾಗಿ ಈ ಸ್ಥಳದ ಮೇಲೆ ನನ್ನ ಕೋಪ ಹೊತ್ತಿ ಉರಿತಿದೆ. ಅದು ಆರಿಹೋಗಲ್ಲ.”’+ 18  ಆದ್ರೆ ಯೆಹೋವನ ಹತ್ರ ಕೇಳೋಕೆ ನಿಮ್ಮನ್ನ ನನ್ನ ಹತ್ರ ಕಳಿಸಿದ ಯೆಹೂದದ ರಾಜನಿಗೆ ಹೀಗೆ ಹೇಳಿ: ‘ನೀನು ಕೇಳಿಸ್ಕೊಂಡಿರೋ ಮಾತುಗಳ ಬಗ್ಗೆ ಇಸ್ರಾಯೇಲ್‌ ದೇವರಾದ ಯೆಹೋವ ಹೇಳೋದು ಏನಂದ್ರೆ 19  “ಈ ಸ್ಥಳದ ಬಗ್ಗೆ, ಇದ್ರ ಜನ್ರ ಬಗ್ಗೆ ಅವ್ರಿಗೆ ಶಾಪ ತಗಲುತ್ತೆ, ಆ ಜನ್ರು ಭಯಪಡ್ತಾರೆ ಅಂತ ನಾನು ಹೇಳಿದ ಮಾತುಗಳನ್ನ ನೀನು ಕೇಳಿಸ್ಕೊಂಡಾಗ ನಿನ್ನ ಹೃದಯ ಸ್ಪಂದಿಸಿತು. ಯೆಹೋವನ ಮುಂದೆ ನಿನ್ನನ್ನ ತಗ್ಗಿಸ್ಕೊಂಡೆ.+ ನಿನ್ನ ಬಟ್ಟೆಗಳನ್ನ ಹರ್ಕೊಂಡು+ ನನ್ನ ಮುಂದೆ ಗೋಳಾಡಿದೆ. ಹಾಗಾಗಿ ನಿನ್ನ ಪ್ರಾರ್ಥನೆ ಕೇಳಿಸ್ಕೊಂಡೆ ಅಂತ ಯೆಹೋವನಾದ ನಾನು ಹೇಳ್ತಿದ್ದೀನಿ. 20  ಹಾಗಾಗಿ ನೀನು ಬದುಕಿರೋ ತನಕ ಈ ಸ್ಥಳದ ಮೇಲೆ ನಾನು ಕಷ್ಟ ತರಲ್ಲ. ನೀನು ಶಾಂತಿಯಿಂದ ನಿನ್ನ ಪೂರ್ವಜರ ತರ ಸಮಾಧಿ ಸೇರ್ತಿಯ”’” ಅಂದಳು. ಅವರು ಈ ಮಾತುಗಳನ್ನ ರಾಜನಿಗೆ ಹೇಳಿದ್ರು.

ಪಾದಟಿಪ್ಪಣಿ