ತಿಮೊತಿಗೆ ಬರೆದ ಎರಡನೇ ಪತ್ರ 4:1-22
4 ಕ್ರಿಸ್ತ ಯೇಸು ರಾಜನಾಗಿ+ ಬರುವಾಗ+ ಜೀವಿಸುವವ್ರಿಗೂ ಸತ್ತವ್ರಿಗೂ+ ನ್ಯಾಯತೀರಿಸ್ತಾನೆ.+ ಆತನ ಮುಂದೆ, ದೇವರ ಮುಂದೆ ನಾನು ನಿನಗೆ ಕೊಡೋ ಆಜ್ಞೆ ಏನಂದ್ರೆ,
2 ದೇವರ ಸಂದೇಶವನ್ನ ಸಾರು.+ ಪರಿಸ್ಥಿತಿ ಚೆನ್ನಾಗಿ ಇದ್ದಾಗ್ಲೂ ಕಷ್ಟ ಬಂದಾಗ್ಲೂ ಹುರುಪಿಂದ ತಡಮಾಡ್ದೆ* ಸಾರು. ತಾಳ್ಮೆಯಿಂದ, ಜಾಣ್ಮೆಯಿಂದ ಕಲಿಸ್ತಾ+ ತಪ್ಪು ಮಾಡುವವ್ರನ್ನ ತಿದ್ದು,+ ಎಚ್ಚರಿಕೆ ಕೊಟ್ಟು ಬುದ್ಧಿಹೇಳು.
3 ಯಾಕಂದ್ರೆ ಜನ ಒಳ್ಳೇ* ಮಾತನ್ನ ಕೇಳದ ಸಮಯ ಬರುತ್ತೆ.+ ಆಗ ಅವರು ತಮ್ಮ ಕಿವಿಗೆ ಇಂಪಾದ ವಿಷ್ಯಗಳನ್ನ ಹೇಳೋ* ಬೋಧಕರನ್ನ ತಮಗೆ ಇಷ್ಟಬಂದ ಹಾಗೆ ಸೇರಿಸ್ಕೊಳ್ತಾರೆ.+
4 ಅವರು ಸತ್ಯವನ್ನ ಬಿಟ್ಟು ಕಟ್ಟುಕಥೆಗಳನ್ನ ಗಮನಕೊಟ್ಟು ಕೇಳ್ತಾರೆ.
5 ಆದ್ರೆ ನೀನು ಏನೇ ಮಾಡಿದ್ರೂ ಯೋಚಿಸಿ ಕೆಲಸಮಾಡು, ಕಷ್ಟವನ್ನ ತಾಳ್ಕೊ,+ ಸಿಹಿಸುದ್ದಿ ಸಾರುತ್ತಾ ಇರು,* ನಿನ್ನ ಸೇವೆಯನ್ನ ಪೂರ್ತಿಯಾಗಿ ಮಾಡು.+
6 ನಾನು ಈಗಾಗ್ಲೇ ನನ್ನನ್ನ ಸುರಿಯೋ ಪಾನ ಅರ್ಪಣೆ ತರ+ ಅರ್ಪಿಸ್ಕೊಂಡಿದ್ದೀನಿ. ಇನ್ನೂ ಸ್ವಲ್ಪ ಸಮಯದಲ್ಲೇ ನನಗೆ ಬಿಡುಗಡೆ ಆಗುತ್ತೆ.+
7 ನಾನು ಚೆನ್ನಾಗಿ ಹೋರಾಡಿದ್ದೀನಿ,+ ನಾನು ನನ್ನ ಓಟವನ್ನ ಓಡಿ ಮುಗಿಸಿದ್ದೀನಿ,+ ನಾನು ನಂಬಿಕೆಗೆ ತಕ್ಕ ಹಾಗೆ ಜೀವನ ಮಾಡಿದ್ದೀನಿ.
8 ನೀತಿಯಿಂದ ತೀರ್ಪು ಮಾಡೋ ಒಡೆಯ+ ನನಗಾಗಿ ಒಂದು ಕಿರೀಟ ಇಟ್ಟಿದ್ದಾನೆ.+ ಅದು ನೀತಿವಂತರಿಗೆ ಕೊಡೋ ಕಿರೀಟ. ಆತನು ಅದನ್ನ ತೀರ್ಪಿನ ದಿನದಲ್ಲಿ ನನಗೆ ಬಹುಮಾನವಾಗಿ ಕೊಡ್ತಾನೆ.+ ನನಗೆ ಮಾತ್ರ ಅಲ್ಲ ಆತನು ರಾಜನಾಗಿ ಬರೋದನ್ನ ಆಸೆಯಿಂದ ಕಾಯ್ತಾ ಇರೋ ಎಲ್ರಿಗೆ ಅದನ್ನ ಕೊಡ್ತಾನೆ.
9 ನೀನು ಆದಷ್ಟು ಬೇಗ ಇಲ್ಲಿಗೆ ಬಾ.
10 ಯಾಕಂದ್ರೆ ದೇಮ+ ಈ ಲೋಕವನ್ನ* ಪ್ರೀತಿಸಿದ್ರಿಂದ ನನ್ನನ್ನ ಬಿಟ್ಟು ಥೆಸಲೊನೀಕಕ್ಕೆ ಹೋದ. ಕ್ರೆಸ್ಕನು ಗಲಾತ್ಯಕ್ಕೆ, ತೀತನು ದಲ್ಮಾತ್ಯಕ್ಕೆ ಹೋದ.
11 ಲೂಕ ಮಾತ್ರ ನನ್ನ ಜೊತೆ ಇದ್ದಾನೆ. ಮಾರ್ಕನನ್ನ ನಿನ್ನ ಜೊತೆ ಕರ್ಕೊಂಡು ಬಾ, ಯಾಕಂದ್ರೆ ಅವನು ಸೇವೆಯಲ್ಲಿ ನನಗೆ ತುಂಬ ಸಹಾಯ ಮಾಡ್ತಾನೆ.
12 ತುಖಿಕನನ್ನ+ ನಾನು ಎಫೆಸಕ್ಕೆ ಕಳಿಸಿದ್ದೀನಿ.
13 ನೀನು ಬರುವಾಗ ತ್ರೋವದಲ್ಲಿ ನಾನು ಕರ್ಪನ ಮನೇಲಿ ಬಿಟ್ಟುಬಂದಿರೋ ಅಂಗಿನ, ಸುರುಳಿಗಳನ್ನ, ಮುಖ್ಯವಾಗಿ ಚರ್ಮದ ಸುರುಳಿಗಳನ್ನ ತಗೊಂಡು ಬಾ.
14 ತಾಮ್ರದ ಕೆಲಸಮಾಡೋ ಅಲೆಕ್ಸಾಂದ್ರ ನನಗೆ ತುಂಬ ಕೆಟ್ಟದು ಮಾಡಿದ್ದಾನೆ. ಅದಕ್ಕಾಗಿ ಯೆಹೋವ* ಅವನಿಗೆ ತಕ್ಕ ಶಿಕ್ಷೆ ಕೊಡ್ತಾನೆ.+
15 ಹುಷಾರು! ನೀನೂ ಅವನಿಂದ ದೂರ ಇರು. ಯಾಕಂದ್ರೆ ಅವನು ನಮ್ಮ ಸಂದೇಶವನ್ನ ತುಂಬ ವಿರೋಧಿಸಿದ.
16 ಮೊದಲ್ನೇ ಸಲ ಅಧಿಕಾರಿಗಳ ಮುಂದೆ ನಾನು ವಾದ ಮಾಡುವಾಗ ಯಾರೂ ನನ್ನ ಪಕ್ಷ ನಿಂತ್ಕೊಳ್ಳಲಿಲ್ಲ. ಎಲ್ರೂ ನನ್ನನ್ನ ಬಿಟ್ಟು ಹೋದ್ರು. ಆ ತಪ್ಪಿಗೆ ದೇವರು ಅವ್ರಿಗೆ ಶಿಕ್ಷೆ ಕೊಡಬಾರದು ಅಂತ ಬೇಡ್ಕೊಳ್ತೀನಿ.
17 ಆದ್ರೆ ಒಡೆಯ ನನ್ನ ಪಕ್ಕದಲ್ಲೇ ನಿಂತನು. ನಾನು ಸಿಹಿಸುದ್ದಿಯನ್ನ ಪೂರ್ತಿಯಾಗಿ ಸಾರೋಕೆ ಮತ್ತು ಎಲ್ಲ ಜನ್ರು ಅದನ್ನ ಕೇಳಿಸ್ಕೊಳ್ಳೋಕೆ ಆತನು ನನ್ನಲ್ಲಿ ಶಕ್ತಿ ತುಂಬಿದನು.+ ಸಿಂಹದ ಬಾಯಿಂದ ನನ್ನನ್ನ ಕಾಪಾಡಿದನು.+
18 ಒಡೆಯ ನನ್ನನ್ನ ಎಲ್ಲ ಕೇಡಿಂದ ಬಿಡಿಸಿ ಕಾಪಾಡಿ ದೇವರ ಆಳ್ವಿಕೆ ಬರೋ ತನಕ ನನ್ನನ್ನ ಸಂರಕ್ಷಿಸ್ತಾನೆ.+ ಆತನಿಗೆ ಯಾವಾಗ್ಲೂ ಗೌರವ ಸಿಗ್ಲಿ. ಆಮೆನ್.
19 ಪ್ರಿಸ್ಕಳಿಗೂ ಅಕ್ವಿಲ್ಲಗೂ+ ಒನೆಸಿಫೊರನ+ ಮನೆಯವ್ರಿಗೂ ನನ್ನ ವಂದನೆ ಹೇಳು.
20 ಎರಸ್ತ+ ಕೊರಿಂಥದಲ್ಲಿ ಉಳ್ಕೊಂಡ. ತ್ರೊಫಿಮಗೆ+ ಹುಷಾರಿಲ್ದೆ ಇದ್ದಿದ್ರಿಂದ ನಾನು ಅವನನ್ನ ಮಿಲೇತದಲ್ಲೇ ಬಿಟ್ಟು ಬಂದೆ.
21 ಚಳಿಗಾಲಕ್ಕೆ ಮುಂಚೆ ಬರೋಕೆ ನಿನ್ನಿಂದ ಆದಷ್ಟು ಪ್ರಯತ್ನ ಮಾಡು.
ಯುಬೂಲ, ಪೂದೆಯ, ಲೀನನು, ಕ್ಲೌದ್ಯಳು ಮತ್ತು ಬೇರೆ ಎಲ್ಲ ಸಹೋದರರೂ ನಿನ್ನನ್ನ ಕೇಳಿದ್ದಾರೆ.
22 ನೀನು ತೋರಿಸಿರೋ ಒಳ್ಳೇ ಮನೋಭಾವಕ್ಕೆ ಒಡೆಯ ನಿಮಗೆ ಅಪಾರ ಕೃಪೆ ತೋರಿಸಿ ಆಶೀರ್ವಾದ ಮಾಡ್ಲಿ.
ಪಾದಟಿಪ್ಪಣಿ
^ ಅಕ್ಷ. “ಅವಸರದಿಂದ.”
^ ಅಥವಾ “ಪ್ರಯೋಜನಕರ.”
^ ಅಥವಾ “ಅವ್ರಿಗೆ ಬೇಕಾಗಿರೋದನ್ನೇ ಹೇಳೋ.”
^ ಅಥವಾ “ಪ್ರಚಾರಕನ ಕೆಲಸ ಮಾಡು.”
^ ಪದವಿವರಣೆಯಲ್ಲಿ “ಲೋಕದ ವ್ಯವಸ್ಥೆ” ನೋಡಿ.
^ ಪರಿಶಿಷ್ಟ ಎ5 ನೋಡಿ.