ಎರಡನೇ ಪೂರ್ವಕಾಲವೃತ್ತಾಂತ 27:1-9

  • ಯೋತಾಮ ಯೆಹೂದದ ರಾಜನಾದ (1-9)

27  ಯೋತಾಮ+ ರಾಜ ಆದಾಗ ಅವನಿಗೆ 25 ವರ್ಷ. ಅವನು ಯೆರೂಸಲೇಮಿಂದ 16 ವರ್ಷ ಆಳಿದ. ಅವನ ತಾಯಿ ಹೆಸ್ರು ಯೆರೂಷ. ಅವಳು ಚಾದೋಕನ ಮಗಳು.+  ಯೋತಾಮ ತನ್ನ ಅಪ್ಪ ಉಜ್ಜೀಯನ ತರ ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡ್ತಿದ್ದ.+ ಆದ್ರೆ ಉಜ್ಜೀಯನ ತರ ಹದ್ದುಮೀರಿ ಯೆಹೋವನ ಆಲಯದ ಒಳಗೆ ನುಗ್ಗಲಿಲ್ಲ.+ ಅಲ್ಲಿನ ಜನ್ರು ಮಾತ್ರ ಕೆಟ್ಟ ಕೆಲಸಗಳಲ್ಲೇ ಮುಳುಗಿದ್ರು.  ಯೋತಾಮ ಯೆಹೋವನ ಆಲಯದ ‘ಮೇಲಿನ ಬಾಗಿಲನ್ನ’ ಕಟ್ಟಿಸಿದ.+ ಓಫೇಲ್‌+ ಗೋಡೆ ಮೇಲೆ ತುಂಬ ಕೆಲಸಗಳನ್ನ ಮಾಡಿಸಿದ.  ಯೆಹೂದ ಬೆಟ್ಟ ಪ್ರದೇಶದಲ್ಲೂ+ ಅವನು ಪಟ್ಟಣಗಳನ್ನ ಕಟ್ಟಿಸಿದ.+ ಕಾಡುಗಳಲ್ಲಿ ಭದ್ರ ಕೋಟೆಗಳಿದ್ದ ಪಟ್ಟಣಗಳನ್ನ+ ಮತ್ತು ಗೋಪುರಗಳನ್ನ+ ಕಟ್ಟಿಸಿದ.  ಅವನು ಅಮ್ಮೋನಿಯರ ರಾಜನ ವಿರುದ್ಧ ಯುದ್ಧಮಾಡಿ+ ಕೊನೆಗೆ ಅವನನ್ನ ಸೋಲಿಸಿದ. ಹಾಗಾಗಿ ಆ ವರ್ಷ ಅಮ್ಮೋನಿಯರು ಅವನಿಗೆ 100 ತಲಾಂತು* ಬೆಳ್ಳಿ, 10,000 ಕೋರ್‌* ಗೋದಿ, 10,000 ಕೋರ್‌* ಬಾರ್ಲಿ ಕೊಟ್ರು. ಇದೇ ತರ ಅಮ್ಮೋನಿಯರು ಅವನಿಗೆ ಎರಡನೇ ಮತ್ತು ಮೂರನೇ ವರ್ಷದಲ್ಲೂ ಕೊಟ್ರು.+  ಹಾಗಾಗಿ ಯೋತಾಮ ದಿನದಿಂದ ದಿನಕ್ಕೆ ಬಲಗೊಳ್ತಾ ಹೋದ. ಯಾಕಂದ್ರೆ ಅವನು ತನ್ನ ದೇವರಾದ ಯೆಹೋವನ ದಾರಿಯಲ್ಲಿ ನಡಿಯೋಕೆ ದೃಢತೀರ್ಮಾನ ಮಾಡಿದ್ದ.  ಯೋತಾಮನ ಇಡೀ ಜೀವನಚರಿತ್ರೆ, ಅವನ ಎಲ್ಲ ಯುದ್ಧಗಳು, ನಡ್ಕೊಂಡ ರೀತಿ ಬಗ್ಗೆ ಇಸ್ರಾಯೇಲ್‌ ಮತ್ತು ಯೆಹೂದದ ರಾಜರ ಕಾಲದ ಪುಸ್ತಕದಲ್ಲಿದೆ.+  ಅವನು ರಾಜ ಆದಾಗ ಅವನಿಗೆ 25 ವರ್ಷ. ಅವನು ಯೆರೂಸಲೇಮಿನಿಂದ 16 ವರ್ಷ ಆಳಿದ.+  ಆಮೇಲೆ ಯೋತಾಮ ತೀರಿಹೋದ. ಅವನನ್ನ ದಾವೀದಪಟ್ಟಣದಲ್ಲಿ+ ಸಮಾಧಿ ಮಾಡಿದ್ರು. ಅವನ ನಂತ್ರ ಅವನ ಮಗ ಆಹಾಜ ರಾಜನಾದ.+

ಪಾದಟಿಪ್ಪಣಿ

ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.
ಒಂದು ಕೋರ್‌ ಅಳತೆಯ ಗೋದಿ=ಸುಮಾರು 170 ಕೆಜಿ. ಪರಿಶಿಷ್ಟ ಬಿ14 ನೋಡಿ.
ಒಂದು ಕೋರ್‌ ಅಳತೆಯ ಜವೆಗೋದಿ=ಸುಮಾರು 130 ಕೆಜಿ. ಪರಿಶಿಷ್ಟ ಬಿ14 ನೋಡಿ.