ಎರಡನೇ ಪೂರ್ವಕಾಲವೃತ್ತಾಂತ 5:1-14

  • ಆಲಯದ ಉದ್ಘಾಟನಾ ಸಮಾರಂಭಕ್ಕೆ ತಯಾರಿ (1-14)

    • ಮಂಜೂಷವನ್ನ ಆಲಯಕ್ಕೆ ತರಲಾಯ್ತು (2-10)

5  ಹೀಗೆ ಸೊಲೊಮೋನ ಯೆಹೋವನ ಆಲಯಕ್ಕಾಗಿ ಮಾಡಬೇಕಾಗಿದ್ದ ಎಲ್ಲ ಕೆಲಸಗಳನ್ನ ಮಾಡಿಮುಗಿಸಿದ.+ ಅವನ ಅಪ್ಪ ದಾವೀದ ಆಲಯಕ್ಕೆ ಅಂತಾನೇ ಇಟ್ಟಿದ್ದ ಎಲ್ಲ ವಸ್ತುಗಳನ್ನ ಅಲ್ಲಿಗೆ ತಂದ.+ ಚಿನ್ನ, ಬೆಳ್ಳಿ ಮತ್ತು ಬೇರೆ ವಸ್ತುಗಳನ್ನ ತಂದು ಸತ್ಯ ದೇವರ ಆಲಯದ ಖಜಾನೆಯಲ್ಲಿ ತುಂಬಿಸಿದ.+  ಆಗ ಸೊಲೊಮೋನ ಇಸ್ರಾಯೇಲಿನ ಹಿರಿಯರಿಗೆ, ಎಲ್ಲ ಕುಲದ ಮುಖ್ಯಸ್ಥರಿಗೆ ಮತ್ತು ಕುಲದ ಪ್ರಧಾನರಿಗೆ ಸೇರಿ ಬರೋಕೆ ಹೇಳಿದ. ದಾವೀದಪಟ್ಟಣದಿಂದ ಅಂದ್ರೆ ಚೀಯೋನಿಂದ ಯೆಹೋವನ ಒಪ್ಪಂದದ ಮಂಜೂಷ ತಗೊಂಡು ಬರೋಕೆ ಅವ್ರೆಲ್ಲ ಯೆರೂಸಲೇಮಿಗೆ ಬಂದ್ರು.+  ಏಳನೇ ತಿಂಗಳು ನಡೆಯೋ ಹಬ್ಬಕ್ಕೆ* ಇಸ್ರಾಯೇಲಿನ ಎಲ್ಲ ಗಂಡಸರು ರಾಜನ ಹತ್ರ ಸೇರಿ ಬಂದ್ರು.+  ಇಸ್ರಾಯೇಲಿನ ಎಲ್ಲ ಹಿರಿಯರು ಸೇರಿ ಬಂದಾಗ ಲೇವಿಯರು ಮಂಜೂಷನ ಎತ್ಕೊಂಡ್ರು.+  ಪುರೋಹಿತರು ಮತ್ತು ಲೇವಿಯರು* ಮಂಜೂಷವನ್ನ, ದೇವದರ್ಶನದ ಡೇರೆಯನ್ನ+ ಮತ್ತು ಅದ್ರೊಳಗೆ ಇಟ್ಟಿದ್ದ ಪವಿತ್ರ ವಸ್ತುಗಳನ್ನೆಲ್ಲ ತಂದ್ರು.  ರಾಜ ಸೊಲೊಮೋನ ಮತ್ತು ಅವನು ಕರೆಸಿದ್ದ ಎಲ್ಲ ಇಸ್ರಾಯೇಲ್ಯರು ಮಂಜೂಷದ ಮುಂದೆ ನಿಂತಿದ್ರು. ಅಲ್ಲಿ ಅವರು ದನಕುರಿಗಳನ್ನ ಬಲಿಯಾಗಿ ಕೊಟ್ರು.+ ಅವು ಲೆಕ್ಕ ಮಾಡೋಕೆ ಆಗದಷ್ಟು ಇದ್ವು.  ಆಮೇಲೆ ಪುರೋಹಿತರು ಯೆಹೋವನ ಒಪ್ಪಂದದ ಮಂಜೂಷವನ್ನ ಅದ್ರ ಜಾಗಕ್ಕೆ ಅಂದ್ರೆ ಅತಿ ಪವಿತ್ರ ಸ್ಥಳಕ್ಕೆ ತಂದ್ರು. ಅವರು ಅದನ್ನ ಕೆರೂಬಿಗಳ ರೆಕ್ಕೆಗಳ ಕೆಳಗೆ ಇಟ್ರು.+  ಮಂಜೂಷ ಇಟ್ಟ ಜಾಗದ ಮೇಲೆ ಕೆರೂಬಿಗಳ ರೆಕ್ಕೆಗಳು ಚಾಚಿದ್ವು. ಹೀಗೆ ಕೆರೂಬಿಗಳ ರೆಕ್ಕೆಗಳು ಮಂಜೂಷನ ಮತ್ತು ಅದರ ಕೋಲುಗಳನ್ನ+ ಮೇಲಿಂದ ಮುಚ್ಚಿದ್ವು.  ಮಂಜೂಷದ ಕೋಲುಗಳು ಎಷ್ಟು ಉದ್ದ ಇದ್ವು ಅಂದ್ರೆ ಅವುಗಳ ತುದಿ ಅತಿ ಪವಿತ್ರ ಸ್ಥಳದ ಮುಂದೆ ಇದ್ದ ಪವಿತ್ರ ಸ್ಥಳದಿಂದ ಕಾಣ್ತಿದ್ವು. ಆದ್ರೆ ಅವುಗಳ ತುದಿ ಆಲಯದ ಹೊರಗಿಂದ ಕಾಣಿಸ್ತಿರಲಿಲ್ಲ. ಆ ಕೋಲುಗಳು ಇವತ್ತಿನ ತನಕ ಹಾಗೇ ಇವೆ. 10  ಈಜಿಪ್ಪಿಂದ ಹೊರಗೆ ಬಂದಿದ್ದ ಇಸ್ರಾಯೇಲ್‌ ಜನ್ರ ಜೊತೆ+ ಯೆಹೋವ ಹೋರೇಬ್‌ ಬೆಟ್ಟದಲ್ಲಿ ಒಂದು ಒಪ್ಪಂದ* ಮಾಡ್ಕೊಂಡಾಗ+ ಮೋಶೆ ಮಂಜೂಷದ ಒಳಗೆ ಎರಡು ಹಲಗೆಗಳನ್ನ ಇಟ್ಟಿದ್ದ.+ ಅದನ್ನ ಬಿಟ್ರೆ ಅದ್ರೊಳಗೆ ಬೇರೇನೂ ಇರಲಿಲ್ಲ. 11  ಪವಿತ್ರ ಸ್ಥಳದಿಂದ ಪುರೋಹಿತರು ಹೊರಗೆ ಬಂದಾಗ (ಅಲ್ಲಿ ಬೇರೆಬೇರೆ ದಳಕ್ಕೆ+ ಸೇರಿದ್ದ ಎಲ್ಲ ಪುರೋಹಿತರು ತಮ್ಮನ್ನ ಪವಿತ್ರ ಮಾಡ್ಕೊಂಡಿದ್ರು),+ 12  ಆಸಾಫ,+ ಹೇಮಾನ,+ ಯೆದುತೂನನಿಗೆ+ ಅವ್ರ ಗಂಡುಮಕ್ಕಳಿಗೆ ಮತ್ತು ಅವ್ರ ಅಣ್ಣತಮ್ಮಂದಿರಿಗೆ ಸೇರಿದ ಎಲ್ಲ ಲೇವಿಯ ಗಾಯಕರು+ ಒಳ್ಳೇ ನಾರಿನಿಂದ ಮಾಡಿದ ಬಟ್ಟೆಯನ್ನ ಹಾಕಿಕೊಂಡಿದ್ರು. ಆ ಗಾಯಕರು ಝಲ್ಲರಿ ಮತ್ತು ತಂತಿವಾದ್ಯಗಳನ್ನ ಹಿಡ್ಕೊಂಡು ಯಜ್ಞವೇದಿಯ ಪೂರ್ವಕ್ಕೆ ನಿಂತುಕೊಂಡಿದ್ರು. ಅವ್ರ ಜೊತೆ 120 ಪುರೋಹಿತರು ತುತ್ತೂರಿಗಳನ್ನ ಊದುತ್ತಿದ್ರು.+ 13  ತುತ್ತೂರಿ ಊದುತ್ತಿದ್ದವರು ಮತ್ತು ಗಾಯಕರು ಒಂದೇ ಸ್ವರದಲ್ಲಿ ಯೆಹೋವನನ್ನ ಹೊಗಳ್ತಾ, ಆತನಿಗೆ ಧನ್ಯವಾದ ಹೇಳ್ತಿದ್ರು. “ಯಾಕಂದ್ರೆ ಆತನು ಒಳ್ಳೆಯವನು, ಆತನ ಪ್ರೀತಿ ಶಾಶ್ವತ”+ ಅಂತ ಹೇಳ್ತಾ ಅವ್ರೆಲ್ಲ ಯೆಹೋವನನ್ನ ಹೊಗಳ್ತಿದ್ದಾಗ ತುತ್ತೂರಿ, ಝಲ್ಲರಿ ಮತ್ತು ಬೇರೆ ಸಂಗೀತ ವಾದ್ಯಗಳ ಶಬ್ದ ಆಕಾಶ ಮುಟ್ಟುತ್ತಿತ್ತು. ಆಗ ಯೆಹೋವನ ಆಲಯ ಮೋಡದಿಂದ ತುಂಬಿಕೊಳ್ತು.+ 14  ಅದ್ರಿಂದ ಪುರೋಹಿತರಿಗೆ ಸೇವೆ ಮಾಡೋದನ್ನ ಮುಂದುವರಿಸೋಕೆ ಆಗಲಿಲ್ಲ. ಯಾಕಂದ್ರೆ ಸತ್ಯ ದೇವರ ಆಲಯದಲ್ಲಿ ಯೆಹೋವನ ಮಹಿಮೆ ತುಂಬ್ಕೊಳ್ತು.+

ಪಾದಟಿಪ್ಪಣಿ

ಅದು, “ಚಪ್ಪರಗಳ ಹಬ್ಬ.”
ಅಥವಾ “ಲೇವಿಯರಾದ ಪುರೋಹಿತರು.”
ಅಥವಾ “ಒಡಂಬಡಿಕೆ.” ಪದವಿವರಣೆ ನೋಡಿ.