ಎರಡನೇ ಪೂರ್ವಕಾಲವೃತ್ತಾಂತ 8:1-18

  • ಸೊಲೊಮೋನನಿಂದ ಇತರ ಕಟ್ಟಡಗಳ ನಿರ್ಮಾಣ (1-11)

  • ಆಲಯದಲ್ಲಿ ಆರಾಧನೆಯ ಏರ್ಪಾಡು (12-16)

  • ಸೊಲೊಮೋನನ ಹಡಗುಪಡೆ (17, 18)

8  ಯೆಹೋವನ ಆಲಯ ಮತ್ತು ತನ್ನ ಅರಮನೆಯನ್ನ ಕಟ್ಟಿ ಮುಗಿಸೋಕೆ ಸೊಲೊಮೋನನಿಗೆ 20 ವರ್ಷ ಹಿಡಿತು.+  ಹೀರಾಮ+ ಕೊಟ್ಟ ಪಟ್ಟಣಗಳನ್ನ ಸೊಲೊಮೋನ ಮತ್ತೆ ಕಟ್ಟಿ ಇಸ್ರಾಯೇಲ್ಯರು ಅಲ್ಲಿರೋ ತರ ಮಾಡಿದ.  ಆಮೇಲೆ ಸೊಲೊಮೋನ ಹಮಾತ್‌-ಚೋಬಗೆ ಹೋಗಿ ಅದನ್ನ ವಶಮಾಡ್ಕೊಂಡ.  ಅವನು ಕಾಡಲ್ಲಿದ್ದ ತದ್ಮೋರ್‌ ಪಟ್ಟಣ ಮತ್ತು ಹಾಮಾತಿನಲ್ಲಿ+ ಕಟ್ಟಿಸಿದ್ದ ಕಣಜ ಪಟ್ಟಣಗಳನ್ನ+ ಮತ್ತೆ ಕಟ್ಟಿಸಿದ.  ಅಷ್ಟೇ ಅಲ್ಲ ಅವನು ಮೇಲಿನ ಬೇತ್‌-ಹೋರೋನನ್ನ,+ ಕೆಳಗಿನ ಬೇತ್‌-ಹೋರೋನನ್ನ+ ಕಟ್ಟಿಸಿದ. ಆ ಪಟ್ಟಣಗಳಿಗೆ ಗೋಡೆಗಳನ್ನ, ಬಾಗಿಲುಗಳನ್ನ ಮತ್ತು ಕಂಬಿಗಳನ್ನ ಮಾಡಿಸಿ ಭದ್ರಪಡಿಸಿದ.  ತನ್ನ ಎಲ್ಲ ಕಣಜ ಪಟ್ಟಣಗಳ ಜೊತೆ ಬಾಲತ್‌,+ ರಥಗಳ ಪಟ್ಟಣ,+ ಕುದುರೆ ಸವಾರರಿಗಾಗಿ ಪಟ್ಟಣಗಳನ್ನ ಕಟ್ಟಿಸಿದ. ಯೆರೂಸಲೇಮಲ್ಲಿ, ಲೆಬನೋನಿನಲ್ಲಿ ಮತ್ತು ಅವನ ಅಧಿಕಾರದ ಕೆಳಗಿದ್ದ ಎಲ್ಲ ಪ್ರದೇಶಗಳಲ್ಲಿ ಅವನು ಕಟ್ಟಬೇಕು ಅಂದ್ಕೊಂಡಿದ್ದ ಎಲ್ಲವನ್ನ ಸೊಲೊಮೋನ ಕಟ್ಟಿಸಿದ.  ಇಸ್ರಾಯೇಲಿನ ಪ್ರಜೆಗಳಲ್ಲದ+ ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು ಮತ್ತು ಯೆಬೂಸಿಯರಲ್ಲಿ+ ಉಳಿದಿದ್ದ ಜನ್ರ ವಂಶದವರು  ಮತ್ತು ಯಾರನ್ನ ಇಸ್ರಾಯೇಲ್ಯರು ನಾಶ ಮಾಡಿರಲಿಲ್ವೋ+ ಅವ್ರ ವಂಶದವರು ಇಸ್ರಾಯೇಲ್‌ ದೇಶದಲ್ಲಿ ವಾಸಿಸ್ತಿದ್ರು. ಈ ಜನ್ರನ್ನ ಸೊಲೊಮೋನ ಗುಲಾಮರಾಗಿ ಮಾಡ್ಕೊಂಡು ಬಿಟ್ಟಿ ಕೆಲಸಕ್ಕೆ ಹಾಕಿದ. ಅವರು ಇವತ್ತಿನ ತನಕ ಅದೇ ಕೆಲಸ ಮಾಡ್ತಿದ್ದಾರೆ.+  ಆದ್ರೆ ಸೊಲೊಮೋನ ಇಸ್ರಾಯೇಲ್ಯರಲ್ಲಿ ಯಾರನ್ನೂ ಗುಲಾಮರಾಗಿ ಮಾಡ್ಕೊಳ್ಳಿಲ್ಲ.+ ಅವರು ಅವನ ಸೈನಿಕರಾಗಿ, ಅಧಿಕಾರಿಗಳ ಮುಖ್ಯಸ್ಥರಾಗಿ, ಅವನ ಸಾರಥಿಗಳ ಮತ್ತು ರಾಹುತರ ಅಧಿಪತಿಗಳಾಗಿ ಕೆಲಸಮಾಡ್ತಿದ್ರು.+ 10  ರಾಜ ಸೊಲೊಮೋನನ ಹತ್ರ 250 ಪ್ರದೇಶಾಧಿಪತಿಗಳಿದ್ರು. ಜನ್ರ ಮೇಲೆ ಇವ್ರಿಗೆ ಅಧಿಕಾರ ಇತ್ತು.+ 11  ಸೊಲೊಮೋನ ಫರೋಹನ ಮಗಳ+ ಬಗ್ಗೆ “ಅವಳು ನನ್ನ ಹೆಂಡತಿಯಾಗಿದ್ರೂ, ರಾಜ ದಾವೀದನ ಅರಮನೆಯಲ್ಲಿ ಅವಳು ಇರಬಾರದು. ಯಾಕಂದ್ರೆ ಯೆಹೋವನ ಮಂಜೂಷ ಎಲ್ಲೆಲ್ಲಿ ಇತ್ತೋ ಆ ಎಲ್ಲ ಜಾಗಗಳು ಪವಿತ್ರವಾಗಿವೆ”+ ಅಂದ್ಕೊಂಡು ಅವಳನ್ನ ದಾವೀದಪಟ್ಟಣದಿಂದ ಅವಳಿಗಾಗಿ ಕಟ್ಟಿಸಿದ್ದ ಅರಮನೆಗೆ+ ಕರ್ಕೊಂಡು ಬಂದ. 12  ಆಮೇಲೆ ಸೊಲೊಮೋನ ಯೆಹೋವನಿಗಾಗಿ ಸರ್ವಾಂಗಹೋಮ ಬಲಿಗಳನ್ನ+ ಯೆಹೋವನ ಯಜ್ಞವೇದಿ+ ಮೇಲೆ ಕೊಟ್ಟ. ಆ ಯಜ್ಞವೇದಿಯನ್ನ ಅವನು ಮಂಟಪದ+ ಮುಂದೆ ಕಟ್ಟಿಸಿದ್ದ. 13  ಮೋಶೆ ಕೊಟ್ಟಿರೋ ಆಜ್ಞೆ ಪ್ರಕಾರ ಅವನು ಪ್ರತಿದಿನ ಕೊಡಬೇಕಾದ ಬಲಿಗಳ ಜೊತೆ ಸಬ್ಬತ್‌ಗಳಲ್ಲಿ,+ ಅಮಾವಾಸ್ಯೆಯ ದಿನಗಳಲ್ಲಿ+ ಕೊಡಬೇಕಾದ ಬಲಿಗಳನ್ನ, ವರ್ಷದಲ್ಲಿ ಮಾಡಬೇಕಾದ ಮೂರು ಹಬ್ಬಗಳಲ್ಲಿ+ ಅಂದ್ರೆ ಹುಳಿಯಿಲ್ಲದ ರೊಟ್ಟಿಗಳ ಹಬ್ಬ,+ ವಾರಗಳ ಹಬ್ಬ,+ ಚಪ್ಪರಗಳ* ಹಬ್ಬದಲ್ಲಿ+ ಕೊಡಬೇಕಾದ ಬಲಿಗಳನ್ನ ಕೊಟ್ಟ. 14  ಅಷ್ಟೇ ಅಲ್ಲ ಅವನು ತನ್ನ ಅಪ್ಪ ದಾವೀದ ಕೊಟ್ಟ ನಿಯಮದ ಪ್ರಕಾರ ಪುರೋಹಿತರ ಸೇವೆಗಾಗಿ ಬೇರೆಬೇರೆ ದಳಗಳನ್ನ+ ನೇಮಿಸಿದ. ಪ್ರತಿದಿನದ ಪದ್ಧತಿ ಪ್ರಕಾರ ದೇವರನ್ನ ಹೊಗಳೋಕೆ+ ಮತ್ತು ಪುರೋಹಿತರ ಮುಂದೆ ಸೇವೆ ಮಾಡೋಕೆ ಲೇವಿಯರಿಗೆ ಅವರವರ ಕೆಲಸಗಳನ್ನ ವಹಿಸಿಕೊಟ್ಟ. ಬಾಗಿಲು ಕಾಯೋರನ್ನ ಅವರವರ ದಳಗಳ+ ಪ್ರಕಾರ ಬೇರೆಬೇರೆ ಬಾಗಿಲ ಹತ್ರ ನೇಮಿಸಿದ. ಯಾಕಂದ್ರೆ ಇದು ಸತ್ಯ ದೇವರ ಸೇವಕ ದಾವೀದನ ಆಜ್ಞೆ ಆಗಿತ್ತು. 15  ಕಣಜಗಳ ಬಗ್ಗೆ ಅಥವಾ ಇನ್ಯಾವುದರ ಬಗ್ಗೆನೂ ರಾಜ ಏನೆಲ್ಲ ಆಜ್ಞೆ ಕೊಟ್ಟಿದ್ದನೋ ಅವನ್ನೆಲ್ಲ ಪುರೋಹಿತರು ಮತ್ತು ಲೇವಿಯರು ತಪ್ಪದೆ ಪಾಲಿಸಿದ್ರು. 16  ಹಾಗಾಗಿ ಯೆಹೋವನ ಆಲಯದ ತಳಪಾಯವನ್ನ ಹಾಕಿದ ದಿನದಿಂದ+ ಹಿಡಿದು ಅದನ್ನ ಪೂರ್ತಿ ಕಟ್ಟಿ ಮುಗಿಸೋ ತನಕ ಸೊಲೊಮೋನ ಎಲ್ಲ ಕೆಲಸಗಳನ್ನ ಅಚ್ಚುಕಟ್ಟಾಗಿ* ಮಾಡಿದ. ಹೀಗೆ ಯೆಹೋವನ ಆಲಯನ ಕಟ್ಟಿ ಮುಗಿಸಿದ.+ 17  ಇದಾದ ಮೇಲೆ ರಾಜ ಸೊಲೊಮೋನ ಎಚ್ಯೋನ್‌-ಗೆಬೆರಿಗೆ+ ಮತ್ತು ಏಲೋತಿಗೆ+ ಹೋದ. ಇವು ಎದೋಮ್‌ ದೇಶದ ಸಮುದ್ರ ತೀರದಲ್ಲಿದ್ದ ಪ್ರದೇಶಗಳಾಗಿದ್ವು.+ 18  ಹೀರಾಮ+ ತನ್ನ ಸೇವಕರ ಮೂಲಕ ಸೊಲೊಮೋನನಿಗೆ ಹಡಗುಗಳನ್ನ ಕಳಿಸಿಕೊಟ್ಟ. ಜೊತೆಗೆ ಅನುಭವಸ್ಥ ನಾವಿಕರನ್ನೂ ಕಳಿಸಿಕೊಟ್ಟ. ಅವರು ಸೊಲೊಮೋನನ ಸೇವಕರ ಜೊತೆ ಓಫೀರಿಗೆ+ ಹೋಗಿ ಅಲ್ಲಿಂದ 450 ತಲಾಂತು* ಚಿನ್ನ+ ತಂದು ರಾಜ ಸೊಲೊಮೋನನಿಗೆ ಕೊಟ್ರು.+

ಪಾದಟಿಪ್ಪಣಿ

ಅಥವಾ “ತಾತ್ಕಾಲಿಕ ವಸತಿಗಳ.”
ಅಥವಾ “ವ್ಯವಸ್ಥಿತವಾಗಿ, ಪೂರ್ತಿಯಾಗಿ.”
ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.