ಎರಡನೇ ಸಮುವೇಲ 20:1-26

  • ಶೆಬನ ದಂಗೆ, ಯೋವಾಬ ಅಮಾಸನನ್ನ ಕೊಂದ (1-13)

  • ಶೆಬನನ್ನ ಬೆನ್ನಟ್ಟಿದ್ರು, ಅವನ ತಲೆ ಕತ್ತರಿಸಿದ್ದು (14-22)

  • ದಾವೀದನ ಆಡಳಿತ (23-26)

20  ಬೆನ್ಯಾಮೀನ್‌ ಕುಲದಲ್ಲಿ ಶೆಬ+ ಅನ್ನೋ ಒಬ್ಬ ವ್ಯಕ್ತಿ ಇದ್ದ. ಅವನು ತೊಂದ್ರೆ ತಂದಿಡುವವನಾಗಿದ್ದ. ಅವನು ಬಿಕ್ರೀಯನ ಮಗ. ಶೆಬ ಕೊಂಬು ಊದಿ+ “ಇಸ್ರಾಯೇಲ್ಯರೇ, ನಮಗೂ ದಾವೀದನಿಗೂ ಯಾವ ಸಂಬಂಧನೂ ಇಲ್ಲ. ಇಷಯನ ಮಗನ ಆಸ್ತಿಯನ್ನ ಅವನೇ ಇಟ್ಕೊಳ್ಳಲಿ.+ ನೀವೆಲ್ಲ ನಿಮ್ಮ ನಿಮ್ಮ ದೇವರುಗಳ* ಹತ್ರ ವಾಪಸ್‌ ಹೋಗಿ!”+ ಅಂದ.  ಆಗ ಎಲ್ಲ ಇಸ್ರಾಯೇಲ್ಯರು ದಾವೀದನನ್ನ ಬಿಟ್ಟು ಬಿಕ್ರೀಯ ಮಗ ಶೆಬನ ಹಿಂದೆ ಹೋದ್ರು.+ ಆದ್ರೆ ಯೆಹೂದದ ಗಂಡಸ್ರು ತಮ್ಮ ರಾಜನನ್ನ ಬಿಟ್ಟುಹೋಗಲಿಲ್ಲ. ಅವರು ಯೋರ್ದನಿಂದ ಯೆರೂಸಲೇಮ್‌ ತನಕ ಅವನ ಜೊತೆ ಇದ್ರು.+  ದಾವೀದ ಯೆರೂಸಲೇಮಲ್ಲಿದ್ದ ತನ್ನ ಅರಮನೆಗೆ ಬಂದಾಗ+ ಮನೆ ನೋಡ್ಕೊಳ್ಳೋಕೆ ಬಿಟ್ಟು ಹೋಗಿದ್ದ ತನ್ನ 10 ಉಪಪತ್ನಿಯರಿಗೆ+ ಬೇರೆ ಮನೆ ಕೊಟ್ಟು ಕಾವಲುಗಾರರನ್ನ ಇಟ್ಟ. ಅವ್ರಿಗೆ ಬೇಕಾದ ಊಟ, ನೀರು ಕೊಟ್ಟ. ಆದ್ರೆ ಅವ್ರ ಜೊತೆ ಮಲಗಲಿಲ್ಲ.+ ಗಂಡ ಬದುಕಿದ್ರೂ ಅವರು ವಿಧವೆಯರ ತರ ಜೀವನ ನಡೆಸಿದ್ರು. ಸಾಯೋ ತನಕ ಗೃಹಬಂಧನದಲ್ಲೇ ಇದ್ರು.  ಅಮಾಸನಿಗೆ+ ರಾಜ “ಮೂರು ದಿನದ ಒಳಗೆ ಯೆಹೂದದ ಗಂಡಸ್ರನ್ನ ಸೇರಿಸಿ ನನ್ನ ಹತ್ರ ಕರ್ಕೊಂಡು ಬಾ. ಅವ್ರ ಜೊತೆ ನೀನೂ ಇರಬೇಕು” ಅಂದ.  ಆಗ ಅಮಾಸ ಯೆಹೂದದ ಗಂಡಸ್ರನ್ನ ಒಟ್ಟುಸೇರಿಸೋಕೆ ಹೋದ. ಆದ್ರೆ ಅವನು ಕೊಟ್ಟ ಸಮಯಕ್ಕೆ ಬರಲಿಲ್ಲ.  ಆಗ ದಾವೀದ ಅಬೀಷೈಗೆ+ “ಅಬ್ಷಾಲೋಮನಿಗಿಂತ ಬಿಕ್ರೀಯ ಮಗ ಶೆಬ+ ನಮಗೆ ಜಾಸ್ತಿ ತೊಂದ್ರೆ ಕೊಡಬಹುದು.+ ಅವನು ಭದ್ರ ಕೋಟೆಗಳಿರೋ ಪಟ್ಟಣಗಳಿಗೆ ಓಡಿಹೋಗಿ ನಮ್ಮ ಕೈಯಿಂದ ತಪ್ಪಿಸ್ಕೊಂಡು ಹೋಗದ ಹಾಗೆ ನನ್ನ ಸೇವಕರನ್ನ* ಕರ್ಕೊಂಡು ಅವನ ಹಿಂದೆ ಹೋಗು” ಅಂದ.  ಹಾಗಾಗಿ ಯೋವಾಬನ+ ಗಂಡಸ್ರು, ಕೆರೇತ್ಯರು, ಪೆಲೇತ್ಯರು,+ ಎಲ್ಲ ಬಲಿಷ್ಠ ಗಂಡಸ್ರು ಅವನ* ಹಿಂದೆ ಹೋದ್ರು. ಬಿಕ್ರೀಯ ಮಗ ಶೆಬನ ಹಿಂದೆ ಹೋಗೋಕೆ ಯೆರೂಸಲೇಮಿಂದ ಹೊರಟ್ರು.  ಅವರು ಗಿಬ್ಯೋನಲ್ಲಿದ್ದ+ ದೊಡ್ಡ ಕಲ್ಲಿನ ಹತ್ರ ಬಂದಾಗ ಅಮಾಸ+ ಅವ್ರನ್ನ ಭೇಟಿಯಾಗೋಕೆ ಬಂದ. ಯೋವಾಬ ಯುದ್ಧದ ಬಟ್ಟೆ ಹಾಕೊಂಡಿದ್ದ, ಸೊಂಟಕ್ಕೆ ಕಟ್ಕೊಂಡಿದ್ದ ಒರೆಯಲ್ಲಿ ಒಂದು ಕತ್ತಿ ಇತ್ತು. ಅವನು ಮುಂದೆ ಹೆಜ್ಜೆ ಇಟ್ಟಾಗ ಒರೆಯಲ್ಲಿದ್ದ ಆ ಕತ್ತಿ ಕೆಳಗೆ ಬಿತ್ತು.  ಯೋವಾಬ ಅಮಾಸನಿಗೆ “ನನ್ನ ಸಹೋದರ, ಚೆನ್ನಾಗಿದ್ದೀಯಾ?” ಅಂತ ಕೇಳಿ, ಮುತ್ತು ಕೊಡೋ ತರ ಹೋಗಿ ಬಲಗೈಯಿಂದ ಅಮಾಸನ ಗಡ್ಡ ಹಿಡಿದ. 10  ಅಮಾಸ ಯೋವಾಬನ ಕೈಯಲ್ಲಿದ್ದ ಕತ್ತಿ ನೋಡಲಿಲ್ಲ. ಯೋವಾಬ ಕತ್ತಿಯಿಂದ ಅಮಾಸನ ಹೊಟ್ಟೆಗೆ ಚುಚ್ಚಿದ.+ ಆಗ ಅಮಾಸನ ಕರುಳುಗಳೆಲ್ಲಾ ನೆಲಕ್ಕೆ ಬಿತ್ತು. ಯೋವಾಬ ಇನ್ನೊಂದು ಸಲ ಚುಚ್ಚಬೇಕಾಗಿ ಇರಲಿಲ್ಲ, ಒಂದೇ ಒಂದು ಸಾಕಾಗಿತ್ತು. ಆಮೇಲೆ ಯೋವಾಬ, ಅವನ ಸಹೋದರ ಅಬೀಷೈ ಬಿಕ್ರೀಯ ಮಗನಾದ ಶೆಬನನ್ನ ಹುಡುಕೊಂಡು ಹೋದ್ರು. 11  ಯೋವಾಬನ ಯುವಕರಲ್ಲಿ ಒಬ್ಬ, ಅವನ ಪಕ್ಕದಲ್ಲಿ ನಿಂತು “ಯೋವಾಬನ ಪಕ್ಷದಲ್ಲಿರೋ, ದಾವೀದನಿಗೆ ಬೆಂಬಲ ಕೊಡೋ ಜನ್ರೆಲ್ಲ ಯೋವಾಬನ ಹಿಂದೆ ಹೋಗಿ!” ಅಂದ. 12  ಅಲ್ಲಿ ತನಕ ನಡುರಸ್ತೆಯಲ್ಲೇ ಬಿದ್ದಿದ್ದ ಅಮಾಸ ರಕ್ತದ ಮಡುವಿನಲ್ಲಿ ಒದ್ದಾಡ್ತಿದ್ದ. ಜನ್ರೆಲ್ಲ ಬಂದು ನಿಂತು ನೋಡೋದನ್ನ ಒಬ್ಬ ಗಮನಿಸಿ, ಅಮಾಸನನ್ನ ರಸ್ತೆಯಿಂದ ಬಯಲಿಗೆ ಎಳ್ಕೊಂಡು ಹೋಗಿ ಮೇಲೆ ಒಂದು ಬಟ್ಟೆ ಹಾಕಿದ. 13  ಅವನು ಯಾವಾಗ ಅಮಾಸನನ್ನ ರಸ್ತೆಯಿಂದ ಎಳೆದು ಹಾಕಿದ್ನೋ ಆಗ ಎಲ್ಲ ಗಂಡಸ್ರು ಬಿಕ್ರೀಯ ಮಗ ಶೆಬನನ್ನ+ ಹಿಡಿಯೋಕೆ ಯೋವಾಬನ ಜೊತೆ ಹೋದ್ರು. 14  ಶೆಬ ಇಸ್ರಾಯೇಲಿನ ಎಲ್ಲ ಕುಲಗಳ ಜನ್ರಿದ್ದ ಪ್ರದೇಶವನ್ನ ಹಾದು ಬೇತ್‌-ಮಾಕಾದ+ ಆಬೇಲ್‌ ಪಟ್ಟಣಕ್ಕೆ ಹೋದ. ಬಿಕ್ರೀಯ ವಂಶದವ್ರೆಲ್ಲ ಒಟ್ಟುಗೂಡಿ ಅವರು ಸಹ ಅವನ ಹಿಂದೆ ಹೋದ್ರು. 15  ಯೋವಾಬ, ಅವನ ಗಂಡಸ್ರು ಬೇತ್‌-ಮಾಕಾದ ಆಬೇಲ್‌ ಪಟ್ಟಣಕ್ಕೆ ಬಂದು ಸುತ್ತುವರಿದ್ರು. ಆ ಪಟ್ಟಣದ ಸುತ್ತ ಅದ್ರ ರಕ್ಷಣೆಗಾಗಿ ಮಣ್ಣಿನ ದಿಬ್ಬ ಇತ್ತು. ಯೋವಾಬ, ಅವನ ಗಂಡಸ್ರು ಪಟ್ಟಣದ ಮೇಲೆ ದಾಳಿ ಮಾಡೋಕೆ ಇನ್ನೊಂದು ಇಳಿಜಾರು ದಿಬ್ಬ ಕಟ್ಟಿ ಪಟ್ಟಣದ ಗೋಡೆ ಕೆಡವಿದ್ರು. 16  ಆಗ ಆ ಪಟ್ಟಣದ ಒಬ್ಬ ಬುದ್ಧಿವಂತ ಸ್ತ್ರೀ “ಸೈನಿಕರೇ ಇಲ್ಲಿ ಕೇಳಿ, ದಯವಿಟ್ಟು ಯೋವಾಬನಿಗೆ ನನ್ನ ಹತ್ರ ಬಂದು ಮಾತಾಡೋಕೆ ಹೇಳಿ” ಅಂತ ಕೂಗಿದಳು. 17  ಹಾಗಾಗಿ ಯೋವಾಬ ಆ ಸ್ತ್ರೀ ಹತ್ರ ಹೋದ. ಅವಳು ಅವನಿಗೆ “ನೀನು ಯೋವಾಬನಾ?” ಅಂತ ಕೇಳಿದಾಗ “ಹೌದು” ಅಂದ. ಆಗ ಅವಳು “ನಿನ್ನ ಸೇವಕಿಯಾದ ನಾನು ನಿನಗೊಂದು ವಿಷ್ಯ ಹೇಳಬೇಕಿತ್ತು” ಅಂದಳು. ಅದಕ್ಕೆ “ಸರಿ ಹೇಳು” ಅಂದ. 18  ಆಗ ಅವಳು “‘ಏನಾದ್ರೂ ಸಮಸ್ಯೆ ಇದ್ರೆ ಆಬೇಲಿಗೆ ಹೋಗಿ, ನಿಮಗೆ ಪರಿಹಾರ ಸಿಗುತ್ತೆ’ ಅಂತ ನಮ್ಮ ಪಟ್ಟಣದ ಬಗ್ಗೆ ಮುಂಚೆ ಹೇಳ್ತಿದ್ರು. 19  ಇಸ್ರಾಯೇಲಿನ ಶಾಂತಿಶೀಲ ಮತ್ತು ನಂಬಿಗಸ್ತ ಜನ್ರ ಪರವಾಗಿ ನಾನು ಮಾತಾಡ್ತಾ ಇದ್ದೀನಿ. ಇಸ್ರಾಯೇಲಲ್ಲಿ ತಾಯಿ ತರ ಇರೋ ಈ ಪಟ್ಟಣವನ್ನ ನೀನ್ಯಾಕೆ ನಾಶ ಮಾಡಬೇಕಂತ ಇದ್ದೀಯಾ? ಯೆಹೋವ ಆಸ್ತಿಯಾಗಿ ಕೊಟ್ಟಿರೋ ಈ ಪಟ್ಟಣವನ್ನ ಯಾಕೆ ಕೆಡವಿಹಾಕಬೇಕು ಅಂತ ಇದ್ದೀಯಾ?”+ ಅಂತ ಕೇಳಿದಳು. 20  ಅದಕ್ಕೆ ಯೋವಾಬ “ಈ ಪಟ್ಟಣ ನಾಶ ಮಾಡಬೇಕಂತ ನಾನು ಬಂದಿಲ್ಲ. 21  ವಿಷ್ಯ ಏನಂದ್ರೆ, ಶೆಬ+ ಅನ್ನೋ ವ್ಯಕ್ತಿ ರಾಜ ದಾವೀದನ ವಿರುದ್ಧ ತಿರುಗಿ ಬಿದ್ದಿದ್ದಾನೆ.* ಎಫ್ರಾಯೀಮ್‌ ಪರ್ವತ ಪ್ರದೇಶದಲ್ಲಿ+ ವಾಸ ಇರೋ ಇವನು ಬಿಕ್ರೀಯನ ಮಗ. ನೀವು ಅವನನ್ನ ನನ್ನ ಕೈಗೆ ಒಪ್ಪಿಸಿದ್ರೆ ಈ ಪಟ್ಟಣದಿಂದ ಹೋಗ್ತೀನಿ” ಅಂದ. ಅದಕ್ಕೆ ಅವಳು ಯೋವಾಬನಿಗೆ “ಸರಿ, ಅವನ ತಲೆ ಕತ್ತರಿಸಿ ಗೋಡೆ ಮೇಲಿಂದ ನಿನ್ನ ಕಡೆಗೆ ಎಸಿತಾರೆ!” ಅಂದಳು. 22  ಕೂಡ್ಲೇ ಆ ಬುದ್ಧಿವಂತ ಸ್ತ್ರೀ ಈ ವಿಷ್ಯವನ್ನ ಪಟ್ಟಣದಲ್ಲಿದ್ದ ಎಲ್ಲ ಜನ್ರಿಗೂ ಮುಟ್ಟಿಸಿದಳು. ಆಗ ಅವರು ಬಿಕ್ರೀಯ ಮಗ ಶೆಬನ ತಲೆ ಕತ್ತರಿಸಿ ಯೋವಾಬನ ಕಡೆಗೆ ಎಸೆದ್ರು. ಆಗ ಯೋವಾಬ ಕೊಂಬು ಊದಿದ. ಆಗ ಅವನ ಗಂಡಸ್ರೆಲ್ಲ ಪಟ್ಟಣ ಬಿಟ್ಟು ತಮ್ಮ ಮನೆಗೆ ಹೋದ್ರು.+ ಯೋವಾಬ ಯೆರೂಸಲೇಮಲ್ಲಿದ್ದ ರಾಜನ ಹತ್ರ ವಾಪಸ್‌ ಹೋದ. 23  ಯೋವಾಬ ಇಡೀ ಇಸ್ರಾಯೇಲ್‌ ಸೈನ್ಯದ ಸೇನಾಪತಿ ಆಗಿದ್ದ.+ ಯೆಹೋಯಾದನ+ ಮಗ ಬೆನಾಯ+ ಕೆರೇತ್ಯರ ಮತ್ತು ಪೆಲೇತ್ಯರ+ ಸೈನ್ಯದ ಸೇನಾಪತಿ ಆಗಿದ್ದ. 24  ಅದೋರಾಮ+ ಒತ್ತಾಯದಿಂದ ಗುಲಾಮರಾಗಿ ಕೆಲಸ ಮಾಡ್ತಿದ್ದವರ ಮೇಲ್ವಿಚಾರಕ ಆಗಿದ್ದ. ಅಹೀಲೂದನ ಮಗ ಯೆಹೋಷಾಫಾಟ+ ದಾಖಲೆಗಾರ ಆಗಿದ್ದ. 25  ಶೆವ ಕಾರ್ಯದರ್ಶಿ ಆಗಿದ್ದ. ಚಾದೋಕ+ ಮತ್ತು ಎಬ್ಯಾತಾರ+ ಪುರೋಹಿತರು ಆಗಿದ್ರು. 26  ಯಾಯೀರನ ವಂಶದವನಾದ ಈರಾ ದಾವೀದನ ಒಬ್ಬ ಪ್ರಮುಖ ಮಂತ್ರಿಯಾದ.*

ಪಾದಟಿಪ್ಪಣಿ

ಬಹುಶಃ, “ಡೇರೆಗಳ.”
ಅಕ್ಷ. “ನಿನ್ನ ಒಡೆಯನ ಸೇವಕರನ್ನ.”
ಬಹುಶಃ, ಅಬೀಷೈ.
ಅಕ್ಷ. “ತನ್ನ ಕೈಯೆತ್ತಿದ್ದಾನೆ.”
ಅಕ್ಷ. “ಯಾಜಕನಾದ.”