ಬೈಬಲಿನ ಪದವಿವರಣೆ
ಅ ಆ ಇ ಉ ಊ ಎ ಏ ಐ ಒ ಓ ಕ ಗ ಚ ಜ ಝ ಟ ಡ ತ ದ ನ ಪ ಫ ಬ ಭ ಮ ಯ ರ ಲ ವ ಶ ಷ ಸ ಹ
ಅ
-
ಅಂಗಳ.
ಪವಿತ್ರ ಡೇರೆಯ ಸುತ್ತ ಇದ್ದ ಖಾಲಿ ಜಾಗ. ಇದ್ರ ಸುತ್ತ ಆವರಣ ಇತ್ತು. ಆಮೇಲೆ ಆಲಯ ಕಟ್ಟಿದಾಗ್ಲೂ ಈ ಅಂಗಳ ಇದ್ದು, ಸುತ್ತ ಗೋಡೆ ಇತ್ತು. ಪವಿತ್ರ ಡೇರೆಯ ಅಂಗಳದಲ್ಲಿ ಮತ್ತು ಆಲಯದ ಒಳಗಿನ ಅಂಗಳದಲ್ಲಿ ಸರ್ವಾಂಗಹೋಮ ಅರ್ಪಿಸೋ ಯಜ್ಞವೇದಿ ಇತ್ತು. (ಪರಿಶಿಷ್ಟ ಬಿ5, 8, 11 ನೋಡಿ.) ಮನೆ, ಅರಮನೆಯ ಅಂಗಳದ ಬಗ್ಗೆನೂ ಬೈಬಲಲ್ಲಿ ಇದೆ.—ವಿಮೋ 8:13; 27:9; 1ಅರ 7:12; ಎಸ್ತೇ 4:11; ಮತ್ತಾ 26:3.
-
ಅಂಟುರೋಗ.
ತುಂಬ ಬೇಗ ಹಬ್ಬಿ ಪ್ರಾಣ ತೆಗಿಯೋ ಯಾವುದೇ ರೋಗ ಅಂಟುರೋಗ ಆಗಿದೆ. ದೇವರ ತೀರ್ಪುಗಳನ್ನ ಜಾರಿಗೆ ತರುವುದರ ಬಗ್ಗೆ ಮಾತಾಡ್ತಾ ಇದರ ಬಗ್ಗೆ ಮಾತಾಡ್ತಿದ್ರು.—ಅರ 14:12; ಯೆಹೆ 38:22, 23; ಆಮೋ 4:10.
-
ಅಖಾಯ.
ಕ್ರೈಸ್ತ ಗ್ರೀಕ್ ಗ್ರಂಥದ ಪ್ರಕಾರ ಗ್ರೀಸ್ ದೇಶದ ರೋಮ್ ಪ್ರಾಂತ್ಯ. ಅದ್ರ ರಾಜಧಾನಿ ಕೊರಿಂಥ. ಇಡೀ ಪೆಲೊಪೊನ್ನೀಸ್ ಮತ್ತು ಗ್ರೀಸ್ ಖಂಡದ ಮಧ್ಯ ಭಾಗ ಅಖಾಯಕ್ಕೆ ಸೇರಿದೆ. (ಅಕಾ 18:12)—ಪರಿಶಿಷ್ಟ ಬಿ13 ನೋಡಿ.
-
ಅಗಾಧ ಸ್ಥಳ.
ಗ್ರೀಕ್‌ನಲ್ಲಿ ಅಬೀಸೋಸ್. ಅರ್ಥ “ತುಂಬ ಆಳ” “ಊಹಿಸಕ್ಕೂ ಆಗದಷ್ಟು ಆಳ, ಕೊನೆ ಇಲ್ಲ.” ಕ್ರೈಸ್ತ ಗ್ರೀಕ್ ಗ್ರಂಥದಲ್ಲಿ ಈ ಪದವನ್ನ ಸೆರೆಯಲ್ಲಿ ಇರೋದಕ್ಕೆ ಅಥವಾ ಸೆರೆಯ ಸ್ಥಳವನ್ನ ಸೂಚಿಸೋಕೆ ಉಪಯೋಗಿಸಲಾಗಿದೆ. ಇದಕ್ಕೆ ಸಮಾಧಿ ಅಂತಾನೂ ಅರ್ಥ ಬರುತ್ತೆ.—ಲೂಕ 8:31; ರೋಮ 10:7; ಪ್ರಕ 20:3.
-
ಅಜಾಜೇಲ.
ಇದೊಂದು ಹೀಬ್ರು ಹೆಸ್ರು. ಬಹುಶಃ ಅದ್ರ ಅರ್ಥ “ಕಣ್ಮರೆಯಾಗೋ ಆಡು.” ಪ್ರಾಯಶ್ಚಿತ್ತ ದಿನ ಅಜಾಜೇಲನಿಗಾಗಿ ಆರಿಸಿದ ಆಡನ್ನ ಕಾಡಲ್ಲಿ ಬಿಟ್ಟುಬಿಡ್ತಿದ್ರು. ಇದು ಹಿಂದಿನ ವರ್ಷ ಎಲ್ಲ ಇಸ್ರಾಯೇಲ್ಯರು ಮಾಡಿದ ಪಾಪವನ್ನ ಆ ಆಡು ಹೊತ್ಕೊಂಡು ಹೋಗ್ತಿದೆ ಅಂತ ಸೂಚಿಸ್ತಿತ್ತು.—ಯಾಜ 16:8, 10.
-
ಅತಿ ಪವಿತ್ರ ಸ್ಥಳ.
ಗುಡಾರದಲ್ಲಿ, ಆಮೇಲೆ ದೇವಾಲಯದಲ್ಲಿ ಇರೋ ಒಳಗಿನ ಕೋಣೆ. ಅಲ್ಲಿ ಒಪ್ಪಂದದ ಮಂಜೂಷ ಇರ್ತಿತ್ತು. ಇದನ್ನ ಪರಮ ಪವಿತ್ರ ಅಂತ ಕೂಡ ಕರಿತಾರೆ. ಮೋಶೆಯ ನಿಯಮ ಪುಸ್ತಕದ ಪ್ರಕಾರ, ಮಹಾ ಪುರೋಹಿತನಿಗೆ ಮಾತ್ರ ಅತಿ ಪವಿತ್ರ ಸ್ಥಳಕ್ಕೆ ಹೋಗೋ ಅನುಮತಿ ಇತ್ತು. ಮಹಾ ಪುರೋಹಿತ ಪ್ರತಿವರ್ಷ ಪಾಪಪರಿಹಾರಕ ದಿನ ಮಾತ್ರ ಅಲ್ಲಿಗೆ ಹೋಗ್ತಿದ್ದ.—ವಿಮೋ 26:33; ಯಾಜ 16:2, 17; 1ಅರ 6:16; ಇಬ್ರಿ 9:3.
-
ಅದಾರ್.
ಬಾಬೆಲಿನ ಸೆರೆಯಿಂದ ಬಂದ ಮೇಲೆ ಯೆಹೂದ್ಯರು ಉಪಯೋಗಿಸ್ತಿದ್ದ ಪವಿತ್ರ ಕ್ಯಾಲೆಂಡರಿನ 12ನೇ ತಿಂಗಳು. ಬೇರೆಯವ್ರ ಕ್ಯಾಲೆಂಡರಿನ 6ನೇ ತಿಂಗಳು. ನಮ್ಮ ಕ್ಯಾಲೆಂಡರ್ ಪ್ರಕಾರ ಈ ತಿಂಗಳು ಫೆಬ್ರವರಿ ಮತ್ತು ಮಾರ್ಚ್ ಮಧ್ಯ ಬರುತ್ತೆ. (ಎಸ್ತೇ 3:7)—ಪರಿಶಿಷ್ಟ ಬಿ15 ನೋಡಿ.
-
ಅಪಾರ ಕೃಪೆ.
ಇದರ ಗ್ರೀಕ್ ಪದ ಮುಖ್ಯವಾಗಿ ಪ್ರೀತಿಪೂರ್ವಕ ಮನೋಹರ ಗುಣವನ್ನ ಸೂಚಿಸುತ್ತೆ. ಕೃಪೆಯಿಂದ ಕೊಡೋ ಬಹುಮಾನವನ್ನ ಅಥವಾ ದಯೆ ತೋರಿಸೋದನ್ನ ಸೂಚಿಸೋಕೆ ಇದನ್ನ ಹೆಚ್ಚಾಗಿ ಬಳಸಲಾಗಿದೆ. ದೇವರ ಅಪಾರ ಕೃಪೆಯನ್ನ ಸೂಚಿಸೋಕೆ ಈ ಪದ ಬಳಸಿದಾಗ, ತಿರುಗಿ ಕೊಡಬೇಕು ಅಂತ ನಿರೀಕ್ಷಿಸದೆ ದೇವರು ಉದಾರವಾಗಿ ಕೊಡೋ ಒಂದು ಉಚಿತ ಉಡುಗೊರೆಯನ್ನ ಅದು ವರ್ಣಿಸುತ್ತೆ. ಹಾಗಾಗಿ ಈ ಪದ ದೇವರು ಸಮೃದ್ಧಿಯಾಗಿ ಕೊಡೋದನ್ನ, ಮನುಷ್ಯರ ಕಡೆ ಆತನಿಗಿರೋ ಮಹಾ ಪ್ರೀತಿಯನ್ನ, ದಯೆಯನ್ನ ಸೂಚಿಸುತ್ತೆ. ಈ ಗ್ರೀಕ್ ಪದವನ್ನ “ಅನುಗ್ರಹ,” “ದಯೆಯಿಂದ ಕೊಟ್ಟ ಬಹುಮಾನ” ಅನ್ನೋ ಮಾತುಗಳಿಂದಾನೂ ಅನುವಾದ ಮಾಡಿದ್ದಾರೆ. ಒಬ್ಬ ವ್ಯಕ್ತಿಗೆ ಯೋಗ್ಯತೆ ಇಲ್ಲದಿದ್ರೂ, ಅದಕ್ಕಾಗಿ ಕಷ್ಟ ಪಡದಿದ್ರೂ ಇನ್ನೊಬ್ಬ ವ್ಯಕ್ತಿ ಬರೀ ತನ್ನ ಉದಾರತೆಯಿಂದ ಇದನ್ನ ಕೊಡ್ತಾನೆ.—2ಕೊರಿಂ 6:1; ಎಫೆ 1:7.
-
ಅಪೊಸ್ತಲ.
ಇದ್ರ ಅರ್ಥ “ಕಳಿಸಲಾದ ವ್ಯಕ್ತಿ.” ಬೇರೆಯವ್ರ ಸೇವೆ ಮಾಡೋಕೆ ಕಳಿಸಲಾದ ಯೇಸು ಮತ್ತು ಬೇರೆಯವ್ರಿಗೆ ಈ ಪದ ಬಳಸಲಾಗಿದೆ. ಯೇಸುನೇ ಆರಿಸಿ ತನ್ನ ಪ್ರತಿನಿಧಿಗಳಾಗಿ ಕಳಿಸಿದ 12 ಶಿಷ್ಯರಿಗೆ ಹೆಚ್ಚಾಗಿ ಈ ಪದ ಬಳಸಲಾಗಿದೆ.—ಮಾರ್ಕ 3:14; ಅಕಾ 14:14.
-
ಅಬದ್ದೋನ್.
ಈ ಹೀಬ್ರು ಪದದ ಅರ್ಥ “ನಾಶ.” “ನಾಶನದ ಜಾಗ” ಅಂತನೂ ಇದಕ್ಕೆ ಹೇಳಲಾಗಿದೆ. ಕೀರ್ತ 88:11; ಯೋಬ 26:6; 28:22; ಜ್ಞಾನೋ 15:11) ಪ್ರಕಟನೆ 9:11ರಲ್ಲಿ ಈ ಪದವನ್ನ “ಅಗಾಧ ಸ್ಥಳದ ದೇವದೂತನ” ಹೆಸ್ರಾಗಿ ಕೂಡ ಬಳಸಲಾಗಿದೆ.
ಇದು ನಿಜವಾದ ಜಾಗ ಅಲ್ಲ. ಒಬ್ಬ ವ್ಯಕ್ತಿ ಸತ್ತ ಮೇಲೆ ಮಣ್ಣಿಗೆ ಸೇರ್ತಾನೆ ಅಂತ ಹೇಳೋಕೆ ಈ ಪದ ಬಳಸ್ತಿದ್ರು. ( -
ಅಬೀಬ್.
ಯೆಹೂದ್ಯರ ಪವಿತ್ರ ಕ್ಯಾಲೆಂಡರಿನ ಮೊದಲನೇ ತಿಂಗಳಿಗೆ, ಬೇರೆಯವ್ರ ಕ್ಯಾಲೆಂಡರಿನ 7ನೇ ತಿಂಗಳಿಗೆ ಆರಂಭದಲ್ಲಿದ್ದ ಹೆಸ್ರು. ಅದ್ರ ಅರ್ಥ “ಹಸಿರು ತೆನೆ (ಧಾನ್ಯ.)” ನಮ್ಮ ಕ್ಯಾಲೆಂಡರ್ ಪ್ರಕಾರ ಈ ತಿಂಗಳು ಮಾರ್ಚ್ ಮತ್ತು ಏಪ್ರಿಲ್ ಮಧ್ಯ ಬರುತ್ತೆ. ಯೆಹೂದ್ಯರು ಬಾಬೆಲಿನ ಸೆರೆಯಿಂದ ಬಂದ ಮೇಲೆ ಈ ತಿಂಗಳಿಗೆ ನೈಸಾನ್ ಅನ್ನೋ ಹೆಸ್ರು ಬಂತು. (ಧರ್ಮೋ 16:1)—ಪರಿಶಿಷ್ಟ ಬಿ15 ನೋಡಿ.
-
ಅಭಿಷೇಕ.
ಇದಕ್ಕಿರೋ ಹೀಬ್ರು ಪದದ ಅರ್ಥ ತೈಲ ಅಥವಾ ದ್ರವ ಹಚ್ಚೋದು. ಒಬ್ಬ ವ್ಯಕ್ತಿ ಅಥವಾ ವಸ್ತುಗೆ ತೈಲ ಹಚ್ಚೋದು ಒಂದು ವಿಶೇಷ ಸೇವೆಗೆ ಸಮರ್ಪಿತ ಅನ್ನೋದಕ್ಕೆ ಗುರುತು. ಕ್ರೈಸ್ತ ಗ್ರೀಕ್ ಗ್ರಂಥದಲ್ಲಿ ಅದೇ ಪದವನ್ನ ಸ್ವರ್ಗಕ್ಕೆ ಹೋಗುವವ್ರ ಮೇಲೆ ಪವಿತ್ರಶಕ್ತಿ ಸುರಿಸೋದಕ್ಕೆ ಬಳಸಲಾಗಿದೆ.—ವಿಮೋ 28:41; 1ಸಮು 16:13; 2ಕೊರಿಂ 1:21.
-
ಅಮಾವಾಸ್ಯೆ.
ಯೆಹೂದಿ ಕ್ಯಾಲೆಂಡರಿನ ಪ್ರತಿ ತಿಂಗಳ ಮೊದಲ ದಿನ. ಎಲ್ಲರೂ ಸೇರಿಬರೋಕೆ, ಹಬ್ಬ ಮಾಡೋಕೆ, ವಿಶೇಷ ಬಲಿಗಳನ್ನ ಅರ್ಪಿಸೋಕೆ ಅಂತಾನೇ ಈ ದಿನ ಇತ್ತು. ಆಮೇಲೆ ಇದೊಂದು ರಾಷ್ಟ್ರೀಯ ಹಬ್ಬವಾಗಿ ಬದಲಾಯ್ತು. ಆ ದಿನ ಜನ ಕೆಲಸ ಮಾಡ್ತಿರಲಿಲ್ಲ.—ಅರ 10:10; 2ಪೂರ್ವ 8:13; ಕೊಲೊ 2:16.
-
ಅರಣ್ಯಪ್ರದೇಶ, ಕಾಡು.
ಬೈಬಲಲ್ಲಿ ಅರಣ್ಯಪ್ರದೇಶ (ಹೀಬ್ರುನಲ್ಲಿ ಮಿದ್ಬರ್) ಅಂತ ಭಾಷಾಂತರ ಮಾಡಿರೋ ಪದ ಜನ್ರು ಇಲ್ಲದಿರೋ ಜಾಗ. ಕೃಷಿ ಮಾಡಕ್ಕಾಗದಿರೋ ಜಾಗ. (ಯೆರೆ 2:2) ಕೆಲವೊಮ್ಮೆ ಈ ಸ್ಥಳಗಳಲ್ಲಿ ಹುಲ್ಲುಗಾವಲುಗಳೂ ಇರಬಹುದು. (ಕೀರ್ತ 65:12; ಯೆರೆ 23:10; ವಿಮೋ 3:1) ಇಂಥ ಜಾಗದಲ್ಲಿ ಬಾವಿನೂ ಇರ್ತಿತ್ತು. (2ಪೂರ್ವ 26:10) ಮನೆಗಳು, ಪಟ್ಟಣಗಳು ಇರ್ತಿತ್ತು. (1ಅರ 2:34; ಯೆಹೋ 15:61, 62; ಯೆಶಾ 42:11) ಈ ಪದ ಕೆಲವೊಮ್ಮೆ ಮರುಭೂಮಿ, ಕಲ್ಲುಗಳು ತುಂಬಿರೋ ಬರಡು ಭೂಮಿ, ನೀರಿಲ್ಲದೆ ಒಣಗಿ ಹೋಗಿರೋ ಜಾಗವನ್ನೂ ಸೂಚಿಸುತ್ತೆ.
-
ಅರಮನೆಯ ಕಾವಲುಗಾರರು.
ರೋಮ್ ಚಕ್ರವರ್ತಿಯ ಅಂಗರಕ್ಷಕರಾಗಿ ಸೇವೆ ಮಾಡ್ತಿದ್ದ ರೋಮ್ ಸೈನಿಕರ ಗುಂಪು. ನಂತರದ ಕಾಲದಲ್ಲಿ ಈ ಸೈನಿಕರು ಚಕ್ರವರ್ತಿಯನ್ನ ಬೆಂಬಲಿಸೋ ಅಥವಾ ಆ ಸ್ಥಾನದಿಂದ ತೆಗೆದು ಹಾಕೋ ಪ್ರಬಲ ರಾಜಕೀಯ ಶಕ್ತಿಯಾಗಿ ಬದಲಾದ್ರು.—ಫಿಲಿ 1:13.
-
ಅರಾಮಿಕ್ ಭಾಷೆ.
ಈ ಭಾಷೆ ಹೆಚ್ಚುಕಡಿಮೆ ಹೀಬ್ರು ಭಾಷೆ ತರನೇ ಇದೆ. ಇವೆರಡೂ ಭಾಷೆಯ ಅಕ್ಷರಮಾಲೆನೂ ಒಂದೇ. ಮೊದಮೊದಲು ಅರಾಮ್ಯರು ಮಾತ್ರ ಈ ಭಾಷೆ ಮಾತಾಡ್ತಿದ್ರು. ಆಮೇಲೆ ಅಶ್ಶೂರ್ಯ ಮತ್ತು ಬಾಬಿಲೋನ್ ಸಾಮ್ರಾಜ್ಯಗಳಲ್ಲಿ ಈ ಭಾಷೆ ಮಾತಾಡ್ತಿದ್ರು, ವ್ಯಾಪಾರದಲ್ಲೂ ಬಳಸ್ತಿದ್ರು. ಹೀಗೆ ಇದು ಅಂತಾರಾಷ್ಟ್ರೀಯ ಭಾಷೆ ಆಯ್ತು. ಪರ್ಶಿಯ ಸಾಮ್ರಾಜ್ಯದ ಆಸ್ಥಾನದಲ್ಲೂ ಇದೇ ಭಾಷೆ ಬಳಸ್ತಿದ್ರು. (ಎಜ್ರ 4:7) ಎಜ್ರ, ಯೆರೆಮೀಯ, ದಾನಿಯೇಲ ಪುಸ್ತಕಗಳ ಕೆಲವು ಭಾಗಗಳನ್ನ ಅರಾಮಿಕ್ ಭಾಷೆಯಲ್ಲಿ ಬರೆದಿದ್ದಾರೆ.—ಎಜ್ರ 4:8–6:18; 7:12-26; ಯೆರೆ 10:11; ದಾನಿ 2:4ಬಿ–7:28.
-
ಅರಾಮ್; ಅರಾಮ್ಯರು.
ಇವರು ಶೇಮನ ಮಗ ಅರಾಮನ ವಂಶದವರು. ಲೆಬನೋನ್ ಬೆಟ್ಟಗಳಿಂದ ಮೆಸಪಟೇಮ್ಯದ ತನಕ ಇರೋ ಪ್ರದೇಶಗಳಲ್ಲಿ ಮತ್ತು ಉತ್ತರದ ಟಾರಸ್ ಬೆಟ್ಟಗಳಿಂದ ಕೆಳಗೆ ದಮಸ್ಕ ಮತ್ತು ದೂರದ ದಕ್ಷಿಣದ ತನಕ ಇರೋ ಪ್ರದೇಶಗಳಲ್ಲಿ ವಾಸಿಸ್ತಿದ್ರು. ಈ ಸ್ಥಳಕ್ಕೆ ಹೀಬ್ರುನಲ್ಲಿ ಅರಾಮ್ ಅಂತ ಹೆಸ್ರು. ಸಮಯ ಕಳೆದ ಹಾಗೆ ಅದಕ್ಕೆ ಸಿರಿಯಾ ಅನ್ನೋ ಹೆಸ್ರು ಬಂತು. ಅಲ್ಲಿನ ಜನ್ರಿಗೆ ಸಿರಿಯಾದವರು ಅಂತ ಕರಿತಿದ್ರು.—ಆದಿ 25:20; ಧರ್ಮೋ 26:5; ಹೋಶೇ 12:12.
-
ಅರಿಯೊಪಾಗ.
ಇದು ಅಥೆನ್ಸಲ್ಲಿ ಅಕ್ರೋಪೋಲಿಸ್‌ನ ಉತ್ತರ-ಪಶ್ವಿಮದಲ್ಲಿರೋ ದೊಡ್ಡ ಬೆಟ್ಟ. ಅಲ್ಲಿ ಕೂಡಿ ಬರ್ತಿದ್ದ ಮಂಡಳಿಗೂ (ಕೋರ್ಟ್) ಅರಿಯೊಪಾಗ ಅಂತಾನೇ ಹೆಸ್ರು. ಪೌಲ ತನ್ನ ನಂಬಿಕೆ ಬಗ್ಗೆ ಹೇಳೋಕೆ ಎಪಿಕೂರಿಯ ಮತ್ತು ಸ್ತೋಯಿಕರ ಪಂಡಿತರು ಅವನನ್ನ ಅರಿಯೊಪಾಗಕ್ಕೆ ಕರ್ಕೊಂಡು ಬಂದ್ರು.—ಅಕಾ 17:19.
-
ಅರ್ಪಣೆಯ ರೊಟ್ಟಿ.
ದೇವಗುಡಾರದಲ್ಲಿ, ಆಮೇಲೆ ಆಲಯದಲ್ಲಿ ಮೇಜಿನ ಮೇಲೆ ಇಡುತ್ತಿದ್ದ 12 ರೊಟ್ಟಿಗಳು. ಇದನ್ನ ಎರಡು ಸಾಲಾಗಿ ಆರಾರು ರೊಟ್ಟಿಗಳಾಗಿ ಇಡ್ತಿದ್ರು. ಈ ರೊಟ್ಟಿಗಳನ್ನ ‘ಸನ್ನಿಧಿಯ ರೊಟ್ಟಿಗಳು’ ಅಂತಾನೂ ಹೇಳ್ತಿದ್ರು. ದೇವರಿಗೆ ಅರ್ಪಿಸ್ತಿದ್ದ ಈ ರೊಟ್ಟಿಗಳನ್ನ ಪ್ರತಿ ಸಬ್ಬತ್ ದಿನ ಬದಲಾಯಿಸ್ತಿದ್ರು. ಈ ರೊಟ್ಟಿಗಳನ್ನ ಕೊನೆಯಲ್ಲಿ ಸಾಮಾನ್ಯವಾಗಿ ಪುರೋಹಿತರು ಮಾತ್ರ ತಿಂತಿದ್ರು. (2ಪೂರ್ವ 2:4; ಮತ್ತಾ 12:4; ವಿಮೋ 25:30; ಯಾಜ 24:5-9; ಇಬ್ರಿ 9:2)—ಪರಿಶಿಷ್ಟ ಬಿ5 ನೋಡಿ.
-
ಅಲಬಾಸ್ಟರ್.
ಸುಗಂಧ ತೈಲದ ಚಿಕ್ಕ ಹೂಜಿಗಿರೋ ಹೆಸ್ರು. ಈಜಿಪ್ಟಿನ ಅಲಬಾಸ್ಟ್ರನ್ ಹತ್ರ ಸಿಗೋ ಕಲ್ಲಿಂದ ಇದನ್ನ ಮಾಡ್ತಾರೆ. ಆ ಕಲ್ಲಿಗೂ ಅಲಬಾಸ್ಟರ್ ಅಂತ ಹೆಸ್ರು. ಸಾಮಾನ್ಯವಾಗಿ ಅಂಥ ಹೂಜಿಯ ಕುತ್ತಿಗೆ ಚಿಕ್ಕದಾಗಿರುತ್ತೆ. ಅದ್ರಲ್ಲಿ ಬೆಲೆಬಾಳೋ ಸುಗಂಧ ತೈಲ ಇಡ್ತಿದ್ರು. ಅದು ಸೋರಿ ಹೋಗದೆ ಇರೋಕೆ ಅದ್ರ ಬಾಯಿಯನ್ನ ಬಿಗಿಯಾಗಿ ಮುಚ್ತಿದ್ರು.—ಮಾರ್ಕ 14:3.
-
ಅಲಾಮೋತ್.
ಇದು ಒಂದು ಸಂಗೀತ ಪದ. ಅರ್ಥ “ಕನ್ಯೆಯರು; ಹುಡುಗಿಯರು.” ಬಹುಶಃ ಇದು ಹುಡುಗಿಯರು ಎತ್ತರದ ಧ್ವನಿಯಲ್ಲಿ ಹಾಡೋದಕ್ಕೆ ಸೂಚಿಸಬಹುದು. ಸಂಗೀತವನ್ನ ಅಥವಾ ಸಂಗೀತ ಉಪಕರಣವನ್ನ ತುಂಬ ಜೋರಾಗಿ ನುಡಿಸಬೇಕಂತ ಸೂಚಿಸೋಕೆ ಈ ಪದ ಬಳಸಿದ್ದಿರಬಹುದು.—1ಪೂರ್ವ 15:20; ಕೀರ್ತ 46:ಶೀರ್ಷಿಕೆ.
-
ಅಶುದ್ಧ.
ದೇಹ ಕೊಳಕಾಗಿ ಇರೋದನ್ನ ಅಥವಾ ನೈತಿಕ ನಿಯಮಗಳನ್ನ ಮೀರಿ ನಡಿಯೋದನ್ನ ಸೂಚಿಸುತ್ತೆ. ಬೈಬಲಲ್ಲಿ ಈ ಪದ ಸಾಮಾನ್ಯವಾಗಿ ಮೋಶೆಯ ನಿಯಮ ಪುಸ್ತಕದ ಪ್ರಕಾರ ತಪ್ಪಾಗಿ ಇರೋದನ್ನ ಇಲ್ಲಾ ಅಪವಿತ್ರವಾಗಿ ಇರೋದನ್ನ ಸೂಚಿಸುತ್ತೆ. (ಯಾಜ 5:2; 13:45; ಮತ್ತಾ 10:1; ಅಕಾ 10:14; ಎಫೆ 5:5)—ಶುದ್ಧ ಸಹ ನೋಡಿ.
-
ಅಷ್ಟೋರೆತ್.
ಇದು ಯುದ್ಧ ಮತ್ತು ಸಂತಾನ ಭಾಗ್ಯಕ್ಕಾಗಿ ಕಾನಾನ್ಯರು ಆರಾಧಿಸ್ತಿದ್ದ ದೇವತೆ. ಬಾಳನ ಹೆಂಡತಿ.—1ಸಮು 7:3.
-
ಅಳತೆ ಕೋಲು.
ಅಳತೆ ಕೋಲಿನ ಉದ್ದ ಆರು ಮೊಳ. ಸಾಮಾನ್ಯವಾಗಿ ಉಪಯೋಗಿಸೋ ಮೊಳದ ಅಳತೆ ಪ್ರಕಾರ 2.67 ಮೀ. (8.75 ಅಡಿ) ಉದ್ದ ಮೊಳದ ಅಳತೆ ಪ್ರಕಾರ 3.11 ಮೀ. (10.2 ಅಡಿ) (ಯೆಹೆ 40:3, 5; ಪ್ರಕ 11:1)—ಪರಿಶಿಷ್ಟ ಬಿ14 ನೋಡಿ.
-
ಅಳು, ಗೋಳಾಡು, ದುಃಖ.
ಯಾರಾದ್ರೂ ಸತ್ತಾಗ ಅಥವಾ ದೊಡ್ಡ ದುರಂತ ಆದಾಗ ತೋರಿಸೋ ಒಂದು ಭಾವನೆ ಅಥವಾ ಜೋರಾಗಿ ಅಳೋದು. ಸ್ವಲ್ಪ ಸಮಯದ ತನಕ ಅಳೋದು ಅಥವಾ ದುಃಖ ಪಡೋದು ಬೈಬಲ್ ಕಾಲದಲ್ಲಿ ಒಂದು ಪದ್ಧತಿ ಆಗಿತ್ತು. ಜೋರಾಗಿ ಅಳೋರು, ಗೋಳಾಡೋರು ಬೇರೆ ತರದ ಬಟ್ಟೆ ಹಾಕ್ತಿದ್ರು, ತಲೆ ಮೇಲೆ ಬೂದಿ ಹಾಕೊಳ್ತಿದ್ರು, ಬಟ್ಟೆ ಹರ್ಕೊಳ್ತಿದ್ರು, ಎದೆ ಬಡ್ಕೊಳ್ತಿದ್ರು. ಗೋಳಾಡೋ ಕೆಲಸ ಮಾಡ್ತಿದ್ದ ಜನ್ರನ್ನ ಶವಸಂಸ್ಕಾರಕ್ಕೆ ಕರಿತಿದ್ರು.—ಆದಿ 23:2; ಎಸ್ತೇ 4:3; ಪ್ರಕ 21:4.
ಆ
-
ಆಣೆ.
ಹೇಳಿದ್ದು ನಿಜ ಅಂತ ಭರವಸೆ ತುಂಬೋಕೆ ಮತ್ತು ಒಂದು ವಿಷ್ಯ ಮಾಡ್ತೀನಿ ಅಥವಾ ಮಾಡಲ್ಲ ಅಂತ ಮಾತು ಕೊಡೋಕೆ ಪ್ರಮಾಣ ಮಾಡ್ತಿದ್ರು ಅಥವಾ ಆಣೆ ಇಡ್ತಿದ್ರು. ಸಾಮಾನ್ಯವಾಗಿ ದೊಡ್ಡ ಅಧಿಕಾರಿಯ ಮುಂದೆ, ಯೆಹೋವನ ಮುಂದೆ ಆಣೆ ಇಡ್ತಿದ್ರು. ಯೆಹೋವ ದೇವರು ಸಹ ಆಣೆ ಇಟ್ಟು ಅಬ್ರಹಾಮನ ಜೊತೆ ಮಾಡ್ಕೊಂಡಿದ್ದ ಒಪ್ಪಂದವನ್ನ ಪಕ್ಕಾ ಮಾಡಿದನು.—ಆದಿ 14:22; ಇಬ್ರಿ 6:16, 17.
-
ಆತ್ಮಜೀವಿಗಳು.
ದೇವದೂತರು ಮತ್ತು ಕೆಟ್ಟ ದೇವದೂತರು ನೋಡಿ.—ವಿಮೋ 35:21; ಕೀರ್ತ 104:29; ಮತ್ತಾ 12:43; ಲೂಕ 11:13.
-
ಆಬ್.
ಬಾಬೆಲಿನ ಸೆರೆಯಿಂದ ಬಂದ ಮೇಲೆ ಯೆಹೂದ್ಯರು ಉಪಯೋಗಿಸ್ತಿದ್ದ ಪವಿತ್ರ ಕ್ಯಾಲೆಂಡರಿನ 5ನೇ ತಿಂಗಳು. ಬೇರೆಯವ್ರ ಕ್ಯಾಲೆಂಡರಿನ 11ನೇ ತಿಂಗಳು. ನಮ್ಮ ಕ್ಯಾಲೆಂಡರ್ ಪ್ರಕಾರ ಈ ತಿಂಗಳು ಜುಲೈ ಮತ್ತು ಆಗಸ್ಟ್ ಮಧ್ಯ ಬರುತ್ತೆ. ಆಬ್ ಅಂತ ಬೈಬಲಲ್ಲಿ ಎಲ್ಲೂ ಇಲ್ಲ. ಆದ್ರೆ 5ನೇ ತಿಂಗಳು ಅಂತ ಅದಕ್ಕೆ ಸೂಚಿಸಲಾಗಿದೆ. (ಅರ 33:38; ಎಜ್ರ 7:9)—ಪರಿಶಿಷ್ಟ ಬಿ15 ನೋಡಿ.
-
ಆಮೆನ್.
“ಹಾಗೇ ಆಗ್ಲಿ” ಅಥವಾ “ಖಂಡಿತ ನಡಿಲಿ.” ಇದಕ್ಕಿರೋ ಹೀಬ್ರು ಪದ ‘ಆಮನ್.’ ಅರ್ಥ, ನಂಬಿಗಸ್ತರಾಗಿ ಭರವಸೆಗೆ ಯೋಗ್ಯರಾಗಿ ಇರೋದು. ಪ್ರಮಾಣ, ಪ್ರಾರ್ಥನೆ ಅಥವಾ ಒಂದು ಹೇಳಿಕೆಗೆ ಒಪ್ಪಿಗೆ ಸೂಚಿಸೋಕೆ “ಆಮೆನ್” ಅಂತಾರೆ. ಇದು ಪ್ರಕಟನೆಯಲ್ಲಿ ಯೇಸುಗಿರೋ ಒಂದು ಬಿರುದು.—ಧರ್ಮೋ 27:26; 1ಪೂರ್ವ 16:36; ಪ್ರಕ 3:14.
-
ಆರಾಧನಾ ಸ್ಥಳ.
ಸಾಮಾನ್ಯವಾಗಿ, ಆರಾಧನೆ ಮಾಡೋಕೆ ಪ್ರತ್ಯೇಕವಾಗಿ ಮೀಸಲಾಗಿರೋ ಒಂದು ಪವಿತ್ರ ಸ್ಥಳ. ಹೆಚ್ಚಾಗಿ ಅದು ಯೆರೂಸಲೇಮಿನಲ್ಲಿದ್ದ ದೇವಗುಡಾರ ಅಥವಾ ದೇವಾಲಯವನ್ನ ಸೂಚಿಸೋಕೆ ಬಳಸಲಾಗಿದೆ. ದೇವರು ವಾಸಿಸೋ ಸ್ವರ್ಗಕ್ಕೂ ಈ ಪದವನ್ನ ಬಳಸಲಾಗಿದೆ.—ವಿಮೋ 25:8, 9; 2ಅರ 10:25; 1ಪೂರ್ವ 28:10; ಪ್ರಕ 11:19.
-
ಆರೋನನ ಗಂಡು ಮಕ್ಕಳು.
ಲೇವಿ ಮೊಮ್ಮಗನಾದ ಆರೋನನ ವಂಶಸ್ಥರು. ಮೋಶೆ ನಿಯಮ ಪುಸ್ತಕದ ಪ್ರಕಾರ, ಮಹಾ ಪುರೋಹಿತನಾಗಿ ಆರಿಸಲಾದ ಮೊದಲ ವ್ಯಕ್ತಿ ಇವನೇ. ಆರೋನನ ಮಕ್ಕಳು ಗುಡಾರದಲ್ಲಿ, 1ಪೂರ್ವ 23:28.
ಆಲಯದಲ್ಲಿ ಪುರೋಹಿತನ ಕೆಲಸಗಳನ್ನ ಮಾಡ್ತಿದ್ರು.— -
ಆಲಯ.
ಒಂದು ಕಡೆಯಿಂದ ಇನ್ನೊಂದು ಕಡೆ ತಗೊಂಡು ಹೋಗೋಕೆ ಆಗೋ ಪವಿತ್ರ ಡೇರೆಯ ಬದಲಿಗೆ ಇಸ್ರಾಯೇಲ್ಯರು ಆರಾಧನೆಯ ಕೇಂದ್ರವಾಗಿ ಯೆರೂಸಲೇಮಲ್ಲಿ ಕಟ್ಟಿದ ಶಾಶ್ವತ ಕಟ್ಟಡ. ಮೊದಲನೇ ದೇವಾಲಯವನ್ನ ಕಟ್ಟಿಸಿದ್ದು ಸೊಲೊಮೋನ. ಅದನ್ನ ಬಾಬೆಲಿನವರು ನಾಶಮಾಡಿದ್ರು. ಎರಡನೇ ದೇವಾಲಯವನ್ನ ಕಟ್ಟಿಸಿದ್ದು ಜೆರುಬ್ಬಾಬೆಲ್. ಇದನ್ನ ಅವನು ಬಾಬೆಲಿನ ಬಂಧಿವಾಸದಿಂದ ಬಂದ್ಮೇಲೆ ಕಟ್ಟಿಸಿದ. ಆಮೇಲೆ ಅದನ್ನ ಮತ್ತೆ ಮಹಾ ಹೆರೋದ ಕಟ್ಟಿಸಿದ. ಬೈಬಲಿನಲ್ಲಿ ಹೆಚ್ಚಾಗಿ ಆಲಯವನ್ನ “ಯೆಹೋವನ ಮನೆ” ಅಂತ ಹೇಳಲಾಗಿದೆ. (ಎಜ್ರ 1:3; 6:14, 15; 1ಪೂರ್ವ 29:1; 2ಪೂರ್ವ 2:4; ಮತ್ತಾ 24:1)
-
ಆಲ್ಫ ಮತ್ತು ಒಮೇಗ.
ಇವು ಗ್ರೀಕ್ ಅಕ್ಷರಮಾಲೆಯ ಮೊದಲನೇ ಮತ್ತು ಕೊನೆ ಅಕ್ಷರಗಳು. ಪ್ರಕಟನೆಯಲ್ಲಿ ಈ ಅಕ್ಷರಗಳನ್ನ ದೇವರಿಗಿರೋ ಬಿರುದಾಗಿ ಮೂರು ಸಲ ಬಳಸಲಾಗಿದೆ. ಅವುಗಳ ಅರ್ಥ ಆರಂಭ, ಅಂತ್ಯ ಮತ್ತು ಮೊದಲನೆಯವನು, ಕೊನೆಯವನು.—ಪ್ರಕ 1:8; 21:6; 22:13.
-
ಆಶ್ರಯನಗರ.
ಅಪ್ಪಿತಪ್ಪಿ ಯಾರನ್ನಾದ್ರೂ ಕೊಂದವನು ಸೇಡು ತೀರಿಸೋ ವ್ಯಕ್ತಿಯ ಕೈಗೆ ಸಿಗದೆ ಪ್ರಾಣ ಉಳಿಸ್ಕೊಳ್ಳೋಕೆ ಈ ಲೇವಿಯರ ಪಟ್ಟಣಗಳಿಗೆ ಓಡಿ ಹೋಗಬಹುದಿತ್ತು. ದೇವರು ಮಾತು ಕೊಟ್ಟ ಇಡೀ ದೇಶದಲ್ಲಿ ಇಂಥ 6 ಪಟ್ಟಣಗಳು ಇದ್ವು. ಯೆಹೋವ ಹೇಳಿದ ತರ ಮೋಶೆ ಮತ್ತು ಯೆಹೋಶುವ ಇವನ್ನ ಆರಿಸಿದ್ರು. ಆಶ್ರಯನಗರಕ್ಕೆ ಓಡಿ ಬರೋ ವ್ಯಕ್ತಿ ನಡಿದಿದ್ದನ್ನ ಪಟ್ಟಣದ ಬಾಗಿಲಲ್ಲಿ ಕೂತಿರೋ ಹಿರಿಯರಿಗೆ ಹೇಳಬೇಕಿತ್ತು. ಅವರು ಅವನನ್ನ ಬೈಯದೇ ಒಳಗೆ ಸೇರಿಸ್ಕೊಳ್ತಿದ್ರು. ಆಶ್ರಯನಗರಕ್ಕೆ ಹೋಗೋ ವ್ಯಕ್ತಿ ತಾನು ನಿರಪರಾಧಿ ಅಂತ ಸಾಬೀತು ಮಾಡೋಕೆ ಕೊಲೆ ನಡೆದಿರೋ ಪಟ್ಟಣದಲ್ಲಿ ವಿಚಾರಣೆಗೆ ಒಳಪಡಬೇಕಾಗಿತ್ತು. ಬೇಕುಬೇಕಂತ ಕೊಲೆ ಮಾಡೋ ವ್ಯಕ್ತಿ ಈ ಏರ್ಪಾಡನ್ನ ದುರುಪಯೋಗಿಸದೇ ಇರೋಕೆ ಹೀಗೆ ಮಾಡಬೇಕಾಗಿತ್ತು. ಅವನು ನಿರಪರಾಧಿ ಅಂತ ಸಾಬೀತಾದ್ರೆ ಆಶ್ರಯನಗರಕ್ಕೆ ವಾಪಸ್ ಹೋಗಬಹುದು. ಅವನು ಸಾಯೋ ತನಕ ಅಥವಾ ಮಹಾ ಪುರೋಹಿತ ಸಾಯೋ ತನಕ ಆ ಪಟ್ಟಣದೊಳಗೇ ಇರಬೇಕಿತ್ತು.—ಅರ 35:6, 11-15, 22-29; ಯೆಹೋ 20:2-8.
ಇ
-
ಇಥಿಯೋಪ್ಯ.
ಈಜಿಪ್ಟಿನ ದಕ್ಷಿಣಕ್ಕಿರೋ ಒಂದು ಹಳೇ ಜನಾಂಗ. ಇವತ್ತಿರೋ ಈಜಿಪ್ಟಿನ ದಕ್ಷಿಣದ ಮೂಲೆಯಲ್ಲಿರೋ ಭಾಗ ಮತ್ತು ಇವತ್ತಿರೋ ಸೂಡನ್ ಅವತ್ತಿದ್ದ ಇಥಿಯೋಪ್ಯ ಆಗಿತ್ತು. ಈ ಪದವನ್ನ ಹೀಬ್ರು ಪದ ಆಗಿರೋ “ಕೂಷ್” ಅನ್ನೋದಕ್ಕೂ ಕೆಲವೊಮ್ಮೆ ಬಳಸಲಾಗಿದೆ.—ಎಸ್ತೇ 1:1.
-
ಇಬ್ರಿಯ, ಹೀಬ್ರು.
ಇಬ್ರಿಯ ಅಂತ ಕರೆಸ್ಕೊಂಡಿರೋ ಮೊದಲ್ನೇ ವ್ಯಕ್ತಿ ಅಬ್ರಾಮ (ಅಬ್ರಹಾಮ.) ನೆರೆಯವ್ರಾದ ಅಮ್ಮೋನಿಯರಿಂದ ಬೇರೆ ಅಂತ ಗೊತ್ತಾಗೋಕೆ ಅಬ್ರಹಾಮನಿಗೆ ಇಬ್ರಿಯ ಅಂತ ಕರೆಯಲಾಯ್ತು. ಆಮೇಲೆ ಅಬ್ರಹಾಮನ ವಂಶದವ್ರಿಗೆ ಅಂದ್ರೆ ಅಬ್ರಹಾಮನ ಮೊಮ್ಮಗನಾದ ಯಾಕೋಬನಿಗೆ ಈ ಹೆಸ್ರು ಬಂತು. ಅವ್ರ ಭಾಷೆಗೂ ಈ ಹೆಸ್ರು ಬಂತು. ಯೇಸುವಿನ ಕಾಲದಷ್ಟಕ್ಕೆ ಅರಾಮಿಕ್ ಭಾಷೆಯ ಪದಗಳು ಸೇರ್ಕೊಂಡವು. ಯೇಸು ಮತ್ತು ಶಿಷ್ಯರು ಈ ಭಾಷೆ ಮಾತಾಡಿದ್ರು.—ಆದಿ 14:13; ವಿಮೋ 5:3; ಅಕಾ 26:14.
-
ಇಲ್ಲುರಿಕ.
ಗ್ರೀಸ್ ದೇಶದ ಉತ್ತರಪಶ್ಚಿಮ ದಿಕ್ಕಿಗಿರೋ ರೋಮನ್ ಸಾಮ್ರಾಜ್ಯ. ಪೌಲ ಸೇವೆ ಮಾಡ್ತಿದ್ದಾಗ ಇಲ್ಲಿ ತನಕ ಪ್ರಯಾಣ ಮಾಡಿದ. ಆದ್ರೆ ಅಲ್ಲಿ ಸಿಹಿಸುದ್ದಿ ಸಾರಿದ್ನಾ ಅಥವಾ ಅದ್ರ ಹತ್ರ ತನಕ ಮಾತ್ರ ಸಾರಿದ್ನಾ ಅನ್ನೋದ್ರ ಬಗ್ಗೆ ಯಾವ ಮಾಹಿತಿನೂ ಇಲ್ಲ. (ರೋಮ 15:19)—ಪರಿಶಿಷ್ಟ ಬಿ13 ನೋಡಿ.
-
ಇಸ್ರಾಯೇಲ್.
ದೇವರು ಯಾಕೋಬನಿಗೆ ಕೊಟ್ಟ ಹೆಸ್ರು. ಒಂದು ಕಾಲದಲ್ಲಿ ಯಾಕೋಬನ ಇಡೀ ವಂಶದವ್ರನ್ನ ಇಸ್ಯಾಯೇಲ್ಯರು ಅಂತ ಕರಿತಿದ್ರು. ಯಾಕೋಬನ 12 ಗಂಡುಮಕ್ಕಳ ವಂಶಸ್ಥರನ್ನ ಇಸ್ರಾಯೇಲನ ಗಂಡು ಮಕ್ಕಳು, ಇಸ್ರಾಯೇಲಿನ ಮನೆತನ, ಇಸ್ರಾಯೇಲಿನ ಜನ್ರು, ಇಸ್ರಾಯೇಲಿನ ಪುರುಷರು, ಇಸ್ರಾಯೇಲ್ಯರು ಅಂತೆಲ್ಲಾ ಕರಿತಿದ್ರು. ಉತ್ತರದ 10 ಕುಲದ ರಾಜ್ಯಕ್ಕೆ ಇಸ್ರಾಯೇಲ್ ಅನ್ನೋ ಹೆಸ್ರು ಬಳಸ್ತಿದ್ರು. ಆಮೇಲೆ ಅಭಿಷಿಕ್ತ ಕ್ರೈಸ್ತರನ್ನ ‘ದೇವರ ಇಸ್ರಾಯೇಲ್ಯರು’ ಅಂತ ಕರೆಯಲಾಗಿದೆ.—ಗಲಾ 6:16; ಆದಿ 32:28; 2ಸಮು 7:23; ರೋಮ 9:6.
ಉ
-
ಉದ್ದ ಗೋದಿ.
ಪ್ರಾಚೀನ ಈಜಿಪ್ಟಲ್ಲಿ ಬೆಳಿತಿದ್ದ ಕಡಿಮೆ ಗುಣಮಟ್ಟದ ಗೋದಿ (ಟ್ರಿಟಿಕಮ್ ಸ್ಪೆಲ್ಪಾ.) ಈ ಧಾನ್ಯದ ಕಾಳುಗಳಿಂದ ಹೊಟ್ಟು ಅಷ್ಟು ಸುಲಭವಾಗಿ ಬರ್ತಿರಲಿಲ್ಲ.—ವಿಮೋ 9:32.
-
ಉಪಪತ್ನಿ.
ಒಬ್ಬ ವ್ಯಕ್ತಿ ಮದುವೆ ಆದ್ರೂ ಬೇರೆ ಸ್ತ್ರೀಯರನ್ನ ಇಟ್ಕೊಳ್ತಿದ್ದ. ಈ ಸ್ತ್ರೀಯರು ಹೆಚ್ಚಾಗಿ ವಿಮೋ 21:8; 2ಸಮು 5:13; 1ಅರ 11:3.
ಹೆಂಡತಿಯರ ದಾಸಿಯರು ಆಗಿರ್ತಿದ್ರು.— -
ಉಪವಾಸ.
ನಿಶ್ಚಿತ ಸಮಯದ ತನಕ ಏನೂ ತಿನ್ನದೆ ಕುಡೀದೆ ಇರೋದು. ಕಷ್ಟ ಬಂದಾಗ, ದೇವರ ಮಾರ್ಗದರ್ಶನ ಬೇಕು ಅನ್ನುವಾಗ ಮತ್ತು ಪ್ರಾಯಶ್ಚಿತ್ತ ದಿನದಂದು ಇಸ್ರಾಯೇಲ್ಯರು ಉಪವಾಸ ಮಾಡ್ತಿದ್ರು. ಜೀವನದಲ್ಲಿ ಆಗಿದ್ದ ದೊಡ್ಡ ದುರಂತದ ದಿನಗಳನ್ನ ನೆನಪಿಸ್ಕೊಳ್ಳೋಕೆ ಒಂದು ವರ್ಷದಲ್ಲಿ ನಾಲ್ಕು ಸಲ ಉಪವಾಸಗಳನ್ನ ಯೆಹೂದ್ಯರು ಮಾಡ್ತಿದ್ರು. ಆದ್ರೆ ಕ್ರೈಸ್ತರು ಉಪವಾಸ ಮಾಡಬೇಕಾಗಿಲ್ಲ.—ಎಜ್ರ 8:21; ಯೆಶಾ 58:6; ಲೂಕ 18:12.
ಊ
-
ಊರೀಮ್ ಮತ್ತು ತುಮ್ಮೀಮ್.
ಇಡೀ ಜನಾಂಗಕ್ಕೆ ಸಂಬಂಧಿಸಿದ ಮುಖ್ಯವಾದ ಪ್ರಶ್ನೆಗಳಿಗೆ ಯೆಹೋವ ಕೊಡೋ ಉತ್ತರ ತಿಳ್ಕೊಳ್ಳೋಕೆ ಮಹಾ ಪುರೋಹಿತ ಇವನ್ನ ಚೀಟಿಗಳಾಗಿ ಬಳಸ್ತಿದ್ದ. ಮಹಾ ಪುರೋಹಿತ ದೇವರ ಗುಡಾರದಲ್ಲಿ ಪ್ರವೇಶಿಸುವಾಗ ಇವು ಅವನ ಎದೆಪದಕದ ಒಳಗೆ ಇರ್ತಿದ್ವು. ಬಾಬೆಲಿನವರು ಯೆರೂಸಲೇಮನ್ನ ನಾಶ ಮಾಡಿದ ಮೇಲೆ ಇವನ್ನ ಬಳಸೋದು ನಿಂತು ಹೋಗಿರಬೇಕು.—ವಿಮೋ 28:30; ನೆಹೆ 7:65.
ಎ
-
ಎತ್ತರದ ಸ್ಥಳ.
ಸಾಮಾನ್ಯವಾಗಿ ಒಂದು ಬೆಟ್ಟದ ಮೇಲೆ ಅಥವಾ ಗುಡ್ಡದ ಮೇಲೆ ಅಥವಾ ಮನುಷ್ಯ ಕಟ್ಟಿರೋ ಎತ್ತರವಾದ ಜಾಗದ ಮೇಲೆ ಇರೋ ಆರಾಧನಾ ಸ್ಥಳ. ಸತ್ಯ ದೇವರನ್ನ ಆರಾಧಿಸೋಕೆ ಕೆಲವೊಮ್ಮೆ ಈ ಸ್ಥಳ ಬಳಸ್ತಿದ್ರು. ಆದ್ರೆ ಸುಳ್ಳು ದೇವರ ಆರಾಧನೆಗಾಗಿ ಈ ಜಾಗವನ್ನ ಹೆಚ್ಚಾಗಿ ಉಪಯೋಗಿಸ್ತಿದ್ರು.—ಅರ 33:52; 1ಅರ 3:2; ಯೆರೆ 19:5.
-
ಎಥನಿಮ್.
ಯೆಹೂದ್ಯರು ಉಪಯೋಗಿಸ್ತಿದ್ದ ಪವಿತ್ರ ಕ್ಯಾಲೆಂಡರಿನ 7ನೇ ತಿಂಗಳು. ಬೇರೆಯವ್ರ ಕ್ಯಾಲೆಂಡರಿನ 1ನೇ ತಿಂಗಳು. ನಮ್ಮ ಕ್ಯಾಲೆಂಡರ್ ಪ್ರಕಾರ ಈ ತಿಂಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಧ್ಯ ಬರುತ್ತೆ. ಯೆಹೂದ್ಯರು ಬಾಬೆಲಿಂದ ವಾಪಸ್ ಬಂದ್ಮೇಲೆ ಈ ತಿಂಗಳಿಗೆ ‘ಟಿಶ್ರಿ’ ಅಂತ ಹೆಸ್ರಿಟ್ರು. (1ಅರ 8:2)—ಪರಿಶಿಷ್ಟ ಬಿ15 ನೋಡಿ.
-
ಎದೆಪದಕ.
ಇದು ಇಸ್ರಾಯೇಲಿನ ಮಹಾ ಪುರೋಹಿತ ಪ್ರತಿ ಸಲ ಪವಿತ್ರ ಸ್ಥಳದೊಳಗೆ ಹೋಗುವಾಗ ತನ್ನ ಎದೆ ಮೇಲೆ ಹಾಕ್ತಿದ್ದ ರತ್ನಗಳ ಚೀಲ. ಇದಕ್ಕೆ “ದೇವನಿರ್ಣಯದ ಎದೆಪದಕ” ಅನ್ನೋ ಹೆಸ್ರಿತ್ತು. ಯಾಕಂದ್ರೆ ಅದ್ರೊಳಗಿದ್ದ ಊರೀಮ್ ಮತ್ತು ತುಮ್ಮೀಮ್ ಯೆಹೋವನ ತೀರ್ಪುಗಳನ್ನ ತಿಳ್ಕೊಳ್ಳೋಕೆ ಸಹಾಯ ಮಾಡ್ತಿತ್ತು. (ವಿಮೋ 28:15-30)—ಪರಿಶಿಷ್ಟ ಬಿ5 ನೋಡಿ.
-
ಎದೋಮ್.
ಇಸಾಕನ ಮಗನಾದ ಏಸಾವನ ಇನ್ನೊಂದು ಹೆಸ್ರು. ಏಸಾವನ (ಎದೋಮನ) ವಂಶದವರು ಸೇಯೀರ್ ಬೆಟ್ಟ ಪ್ರದೇಶ ವಶ ಮಾಡ್ಕೊಂಡ್ರು. ಮೃತ ಸಮುದ್ರ ಮತ್ತು ಅಕಾಬಾ ಕೊಲ್ಲಿ ಮಧ್ಯ ಇರೋ ಪ್ರದೇಶ ಇದು. ಇದಕ್ಕೆ ಎದೋಮ್ ಅಂತ ಹೆಸ್ರು ಬಂತು. (ಆದಿ 25:30; 36:8)—ಪರಿಶಿಷ್ಟ ಬಿ3, ಬಿ4 ನೋಡಿ.
-
ಎಪಿಕೂರಿಯ ತತ್ವಜ್ಞಾನಿಗಳು.
ಗ್ರೀಕ್ ತತ್ವಜ್ಞಾನಿ ಆಗಿರೋ ಎಪಿಕ್ಯೂರಸ್‌ನ (ಕ್ರಿ.ಪೂ. 341-270) ಶಿಷ್ಯರು. ಜೀವನದಲ್ಲಿ ಸುಖವಾಗಿರಬೇಕು ಅನ್ನೋದೇ ಇವ್ರ ಬೋಧನೆಯ ಮುಖ್ಯ ವಿಷ್ಯ.—ಅಕಾ 17:18.
-
ಎಫ್ರಾಯೀಮ್.
ಇವನು ಯೋಸೇಫನ ಎರಡ್ನೇ ಮಗ. ಆಮೇಲೆ ಇದು ಇಸ್ರಾಯೇಲಿನ ಒಂದು ಕುಲದ ಹೆಸರಾಯ್ತು. ಈ ಕುಲ ಎರಡು ಭಾಗ ಆದ್ಮೇಲೆ ಎಫ್ರಾಯೀಮ್ ತುಂಬ ಶಕ್ತಿಶಾಲಿ ಕುಲ ಆಯ್ತು. ಹಾಗಾಗಿ 10 ಕುಲದ ಇಡೀ ರಾಜ್ಯಕ್ಕೆ ಅದೇ ಹೆಸ್ರು ಬಂತು.—ಆದಿ 41:52; ಯೆರೆ 7:15.
-
ಎಲೂಲ್.
ಬಾಬೆಲಿಂದ ವಾಪಸ್ ಬಂದ್ಮೇಲೆ ಯೆಹೂದ್ಯರು ಉಪಯೋಗಿಸ್ತಿದ್ದ ಪವಿತ್ರ ಕ್ಯಾಲೆಂಡರಿನ 6ನೇ ತಿಂಗಳು. ಬೇರೆಯವ್ರ ಕ್ಯಾಲೆಂಡರಿನ 12ನೇ ತಿಂಗಳು. ನಮ್ಮ ಕ್ಯಾಲೆಂಡರ್ ಪ್ರಕಾರ ಈ ತಿಂಗಳು ಆಗಸ್ಟ್ ಮತ್ತು ಸೆಪ್ಟೆಂಬರ್ ಮಧ್ಯ ಬರುತ್ತೆ. (ನೆಹೆ 6:15)—ಪರಿಶಿಷ್ಟ ಬಿ15 ನೋಡಿ.
ಏ
-
ಏಫಾ.
ಧಾನ್ಯ ಅಳೆಯೋ ಒಣ ಅಳತೆ. ಅಳೆಯೋಕೆ ಇದ್ದ ಪಾತ್ರೆಗೂ ಏಫಾ ಅಂತಿದ್ರು. ಇದ್ರ ಅಳತೆನೂ ದ್ರವ ಅಳತೆ ಆಗಿದ್ದ ಬತ್ ಅಳತೆನೂ ಒಂದೇ, 22 ಲೀ. (ವಿಮೋ 16:36; ಯೆಹೆ 45:10)—ಪರಿಶಿಷ್ಟ ಬಿ14 ನೋಡಿ.
-
ಏಫೋದ್.
ಮಹಾ ಪುರೋಹಿತರು ಹಾಕ್ತಿದ್ದ ಬಟ್ಟೆ. ಬಟ್ಟೆ ಗಲೀಜಾಗ್ದೆ ಇರೋಕೆ ಹಾಕೋ ಇನ್ನೊಂದು ಬಟ್ಟೆ ತರ ಇದಿದೆ. ಮಹಾ ಪುರೋಹಿತ ವಿಶೇಷವಾಗಿರೋ ಒಂದು ಏಫೋದನ್ನ ಹಾಕ್ತಿದ್ದ. ಅದ್ರ ಮುಂಭಾಗದಲ್ಲಿ 12 ಅಮೂಲ್ಯ ರತ್ನಗಳು ಇರೋ ಎದೆಪದಕ ಇತ್ತು. (ವಿಮೋ 28:4, 6)—ಪರಿಶಿಷ್ಟ ಬಿ5 ನೋಡಿ.
-
ಏಷ್ಯಾ.
ಇದು ಕ್ರೈಸ್ತ ಗ್ರೀಕ್ ಗ್ರಂಥದಲ್ಲಿ ರೋಮ್ ಪ್ರಾಂತ್ಯದ ಹೆಸ್ರು. ಇವತ್ತಿರೋ ಟರ್ಕಿಯ ಪಶ್ಚಿಮ ಅಕಾ 20:16; ಪ್ರಕ 1:4)—ಪರಿಶಿಷ್ಟ ಬಿ13 ನೋಡಿ.
ಭಾಗ ಮತ್ತು ಸಾಮೊಸ್, ಪತ್ಮೋಸ್ ಇತರ ಕರಾವಳಿ ದ್ವೀಪಗಳು ಆ ಪ್ರಾಂತ್ಯಕ್ಕೆ ಸೇರಿತ್ತು. ಅದ್ರ ರಾಜಧಾನಿ ಎಫೆಸ. (
ಐ
-
ಐವತ್ತನೇ ದಿನದ ಹಬ್ಬ.
ಯೆಹೂದದ ಗಂಡಸರೆಲ್ರೂ ತಪ್ಪದೆ ಯೆರೂಸಲೇಮಿನಲ್ಲಿ ಮಾಡಬೇಕಾದ ಮೂರು ದೊಡ್ಡ ಹಬ್ಬಗಳಲ್ಲಿ ಇದು ಎರಡನೇದು. ಪಂಚಾಶತ್ತಮ ಅಂದ್ರೆ ಐವತ್ತನೇ (ದಿನ) ಅಂತರ್ಥ. ಹೀಬ್ರು ವಚನಗಳಲ್ಲಿ ಯಾವುದನ್ನ ಕೊಯ್ಲಿನ ಹಬ್ಬ ಅಥವಾ ವಾರಗಳ ಹಬ್ಬ ಅಂತ ಕರೀತಿದ್ರೋ ಅದನ್ನ ಗ್ರೀಕ್ ವಚನಗಳಲ್ಲಿ ಪಂಚಾಶತ್ತಮ ಹಬ್ಬ ಅಂತಿದ್ರು. ನೈಸಾನ್ 16ರಿಂದ 50ದಿನ ಆದಮೇಲೆ ಬರೋ ದಿನ ಈ ಹಬ್ಬ ಆಚರಿಸ್ತಿದ್ರು.—ವಿಮೋ 23:16; 34:22; ಅಕಾ 2:1.
ಒ
-
ಒಡೆಯನ ರಾತ್ರಿ ಊಟ.
ಈ ಊಟದಲ್ಲಿ ಹುಳಿಯಿಲ್ಲದ ರೊಟ್ಟಿ ಮತ್ತು ದ್ರಾಕ್ಷಾಮದ್ಯ ಇತ್ತು. ಅವು ಕ್ರಿಸ್ತನ ಶರೀರ ಮತ್ತು ರಕ್ತವನ್ನ ಸೂಚಿಸ್ತಿತ್ತು. ಯೇಸುವಿನ ಮರಣವನ್ನ ನೆನಪಿಸ್ಕೊಳ್ಳೋಕೆ ಈ ಊಟ ಮಾಡ್ತಿದ್ರು. ಕ್ರೈಸ್ತರು ಇದನ್ನ ಆಚರಿಸಬೇಕು ಅಂತ ಬೈಬಲ್ ಹೇಳಿರೋದ್ರಿಂದ ಇದಕ್ಕೆ “ಸ್ಮರಣೆ” ಅಂತ ಹೇಳೋದು ಸೂಕ್ತವಾಗಿದೆ.—1ಕೊರಿಂ 11:20, 23-26.
-
ಒಪ್ಪಂದ.
ಒಂದು ವಿಷ್ಯ ಮಾಡೋಕೆ ಅಥವಾ ಮಾಡದೇ ಇರೋಕೆ ದೇವರು ಮತ್ತು ಮನುಷ್ಯರ ಮಧ್ಯ ಅಥವಾ ಇಬ್ರು ಮನುಷ್ಯರ ಮಧ್ಯ ಮಾಡೋ ಕರಾರು. ಕೆಲವೊಮ್ಮೆ ಒಪ್ಪಂದದ ನಿಯಮಗಳನ್ನ ಒಂದು ಕಡೆಯವರು ಮಾತ್ರ ಪಾಲಿಸಬೇಕಿತ್ತು. (ಇದು ಏಕಪಕ್ಷೀಯ ಒಪ್ಪಂದವಾಗಿದ್ದು, ಒಬ್ಬರು ಮಾತ್ರ ಮಾತು ಕೊಟ್ಟಿರ್ತಾರೆ.) ಆದ್ರೆ ದ್ವಿಪಕ್ಷೀಯ ಒಪ್ಪಂದದಲ್ಲಿ ಎರಡೂ ಕಡೆಯವರು ನಿಯಮಗಳನ್ನ ಪಾಲಿಸಬೇಕಿತ್ತು. ಬೈಬಲಲ್ಲಿ ದೇವರು ಮನುಷ್ಯರ ಜೊತೆ ಮಾಡ್ಕೊಂಡಿರೋ ಒಪ್ಪಂದ ಅಲ್ದೆ ಪುರುಷರ ಮಧ್ಯ, ಕುಲಗಳ ಮಧ್ಯ, ಜನಾಂಗಗಳ ಮಧ್ಯ, ಜನ್ರ ಗುಂಪುಗಳ ಮಧ್ಯ ಆಗಿರೋ ಒಪ್ಪಂದದ ಬಗ್ಗೆ ಇದೆ. ಕೆಲವೊಂದು ಒಪ್ಪಂದದ ಪ್ರಭಾವ ತುಂಬ ಸಮಯದ ತನಕ ಇರುತ್ತೆ. ಉದಾಹರಣೆಗೆ, ಅಬ್ರಹಾಮ, ದಾವೀದ, ಇಸ್ರಾಯೇಲ್ ಜನಾಂಗ (ನಿಯಮ ಒಪ್ಪಂದ), ದೇವರ ಇಸ್ರಾಯೇಲ್ (ಹೊಸ ಒಪ್ಪಂದ.)—ಆದಿ 9:11; 15:18; 21:27; ವಿಮೋ 24:7; 2ಪೂರ್ವ 21:7.
-
ಒಪ್ಪಂದದ ಮಂಜೂಷ.
ಇದೊಂದು ಪೆಟ್ಟಿಗೆ. ಅಕೇಶಿಯ ಮರದಿಂದ ಮಾಡಿ ಅದಕ್ಕೆ ಚಿನ್ನದ ತಗಡು ಹೊದಿಸಲಾಗಿತ್ತು. ಇದನ್ನ ಪವಿತ್ರ ಡೇರೆಯ ಅತಿ ಪವಿತ್ರ ಸ್ಥಳದಲ್ಲಿ ಇಡಲಾಗಿತ್ತು. ಆಮೇಲೆ ಸೊಲೊಮೋನ ಕಟ್ಟಿದ ದೇವಾಲಯದ ಅತಿ ಪವಿತ್ರ ಸ್ಥಳದಲ್ಲಿ ಇಡಲಾಗಿತ್ತು. ಇದ್ರ ಮುಚ್ಚಳ ಪೂರ್ತಿ ಚಿನ್ನದ್ದು. ಅದ್ರ ಮೇಲೆ ಇಬ್ರು ಕೆರೂಬಿಯರ ಆಕೃತಿಗಳನ್ನ ಎದ್ರುಬದ್ರಾಗಿ ಇಡಲಾಗಿತ್ತು. ಹತ್ತು ಆಜ್ಞೆ ಇದ್ದ ಎರಡು ಕಲ್ಲಿನ ಹಲಗೆಗಳನ್ನ ಅದ್ರೊಳಗೆ ಇಡಲಾಗಿತ್ತು. (ಧರ್ಮೋ 31:26; 1ಅರ 6:19; ಇಬ್ರಿ 9:4)—ಪರಿಶಿಷ್ಟ ಬಿ5, ಬಿ8 ನೋಡಿ.
-
ಒಳ್ಳೇದರ ಕೆಟ್ಟದ್ದರ ತಿಳುವಳಿಕೆ ಕೊಡೋ ಮರ.
ಏದೆನ್ ತೋಟದಲ್ಲಿದ್ದ ಒಂದು ಮರ. ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಅನ್ನೋ ವಿಷ್ಯದಲ್ಲಿ ಮನುಷ್ಯರಿಗೆ ನಿಯಮಗಳನ್ನ ಇಡೋ ಅಧಿಕಾರ ದೇವರಿಗೆ ಮಾತ್ರ ಇದೆ ಅನ್ನೋದನ್ನ ಅದು ಸೂಚಿಸ್ತಿತ್ತು.—ಆದಿ 2:9, 17.
ಓ
-
ಓಮೆರ್.
ಇದು ಒಂದು ಒಣ ಆಳತೆ. 2.2 ಲೀ ಸಮ. ಇದು ಏಫಾದ ಹತ್ತನೇ ಒಂದು ಭಾಗ. (ವಿಮೋ 16:16, 18)—ಪರಿಶಿಷ್ಟ ಬಿ14 ನೋಡಿ.
-
ಓಲಾಡಿಸೋ ಅರ್ಪಣೆ.
ಈ ಅರ್ಪಣೆಯನ್ನ ಆರಾಧಕನು ತನ್ನ ಕೈಯಲ್ಲಿ ಹಿಡ್ಕೊಳ್ತಿದ್ದನು. ಪುರೋಹಿತನು ತನ್ನ ಕೈಗಳನ್ನ ಅವನ ಕೈಗಳ ಕೆಳಗಿಟ್ಟು ಮುಂದಕ್ಕೆ ಹಿಂದಕ್ಕೆ ಓಲಾಡಿಸ್ತಿದ್ದನು ಅಥವಾ ಪುರೋಹಿತ ಈ ಅರ್ಪಣೆಯನ್ನ ತನ್ನ ಕೈಯಲ್ಲಿ ತಗೊಂಡು ಮುಂದಕ್ಕೆ ಹಿಂದಕ್ಕೆ ಓಲಾಡಿಸ್ತಿದ್ದನು. ಹೀಗೆ ಕದಲಿಸೋದು ಇಲ್ಲಾ ಓಲಾಡಿಸೋದು ಬಲಿ ಅರ್ಪಣೆಗಳನ್ನ ಯೆಹೋವನಿಗೆ ಅರ್ಪಿಸೋದನ್ನ ಸೂಚಿಸ್ತಿತ್ತು.—ಯಾಜ 7:30.
ಕ
-
ಕಂಚುಕಿ.
ಇದ್ರ ಅಕ್ಷರಾರ್ಥ ಬೀಜ ಒಡೆದ ಪುರುಷ. ಅರಮನೆಯಲ್ಲಿ ರಾಣಿಯನ್ನ, ಉಪಪತ್ನಿಯರನ್ನ ನೋಡ್ಕೊಳ್ಳೋಕೆ ಮತ್ತು ಅವ್ರ ಸೇವಕರಾಗಿ ಇವ್ರನ್ನ ನೇಮಿಸ್ತಿದ್ರು. ಅರಮನೆಯಲ್ಲಿ ಕೆಲವು ವಿಷ್ಯಗಳನ್ನ ಮೇಲ್ವಿಚಾರಣೆ ಮಾಡ್ತಿದ್ದ ವ್ಯಕ್ತಿಗೂ ಈ ಪದ ಉಪಯೋಗಿಸ್ತಿದ್ರು. ಯೆಹೋವನ ಸೇವೆ ಜಾಸ್ತಿ ಮಾಡೋಕೆ ಸ್ವನಿಯಂತ್ರಣ ತೋರಿಸುವವ್ರಿಗೆ ಈ ಪದವನ್ನ ಅಲಂಕಾರಿಕವಾಗಿ ಬಳಸಲಾಗಿದೆ.—ಮತ್ತಾ 19:12; ಎಸ್ತೇ 2:15; ಅಕಾ 8:27.
-
ಕಂಬ.
ಐತಿಹಾಸಿಕ ಘಟನೆಗಳನ್ನ, ಕೆಲಸಗಳನ್ನ ನೆನಪಿಸ್ಕೊಳ್ಳೋಕೆ ಕೆಲವೊಂದು ಸಾರಿ ಕಂಬಗಳನ್ನ ನ್ಯಾಯ 16:29; 1ಅರ 7:21; 14:23)—ಕಿರೀಟ ಸಹ ನೋಡಿ.
ನಿಲ್ಲಿಸ್ತಿದ್ರು. ಸೊಲೊಮೋನ್ ಕಟ್ಟಿಸಿದ ಆಲಯದಲ್ಲಿ, ರಾಜನ ಅರಮನೆಯಲ್ಲಿ ಈ ತರದ ಕಂಬಗಳು ಇದ್ವು. ಬೇರೆ ಜನ್ರು ಸಹ ಸುಳ್ಳು ಆರಾಧನೆ ಭಾಗವಾಗಿ ಕಂಬಗಳನ್ನ ನಿಲ್ಲಿಸಿ ಪವಿತ್ರ ಕಂಬಗಳು ಅಂತಿದ್ರು. ಕೆಲವೊಂದು ಸಾರಿ ಇಸ್ರಾಯೇಲ್ಯರೂ ಈ ತರ ಮಾಡಿದ್ರು. ( -
ಕಣ, ಧಾನ್ಯ ಒಕ್ಕು.
ಧಾನ್ಯದ ತೆನೆಗಳನ್ನ ಕಾಂಡದಿಂದ, ಹೊಟ್ಟಿನಿಂದ ಬೇರೆ ಮಾಡೋಕೆ ತೂರೋ ಸ್ಥಳವನ್ನ ಕಣ ಅಂತ ಹೇಳ್ತಾರೆ. ತೆನೆಗಳನ್ನ ನುಚ್ಚು ಮಾಡೋಕೆ ಕೋಲುಗಳಿಂದ ಹೊಡಿತಿದ್ರು. ಒಂದು ವೇಳೆ ಧಾನ್ಯ ಹೆಚ್ಚಿದ್ರೆ ಪ್ರಾಣಿಗಳಿಂದ ಎಳೆಯೋ ಹಲಗೆಗಳು ಅಥವಾ ರೋಲರ್‌ಗಳಂತಹ ಪ್ರತ್ಯೇಕವಾದ ಸಾಧನಗಳನ್ನ ಬಳಸ್ತಿದ್ರು. ಕಣದಲ್ಲಿ ಹಾಸಿದ ಧಾನ್ಯದ ಮೇಲೆ ಈ ಸಾಧನಗಳನ್ನ ತಿರುಗಿಸುತ್ತಿದ್ರು. ಸಾಮಾನ್ಯವಾಗಿ ಕಣ ಅನ್ನೋದು ವೃತ್ತಾಕಾರದಲ್ಲಿ ಇರ್ತಿತ್ತು, ಚೆನ್ನಾಗಿ ಗಾಳಿ ಬೀಸೋ ಎತ್ತರ ಜಾಗದಲ್ಲಿ ಇರ್ತಿತ್ತು.—ಯಾಜ 26:5; ಯೆಶಾ 41:15; ಮತ್ತಾ 3:12.
-
ಕಣಿ ಹೇಳೋದು.
ಕೆಟ್ಟ ದೇವದೂತರ ಶಕ್ತಿಯನ್ನ ಬಳಸಿಕೊಳ್ಳೋದು. ಆ ಶಕ್ತಿ ಕೆಟ್ಟದೂತರಿಂದ ಬರುತ್ತೆ ಅಂತ ಜನರು ಸಾಮಾನ್ಯವಾಗಿ ಅಂಗೀಕರಿಸ್ತಾರೆ.—2ಪೂರ್ವ 33:6.
-
ಕಪ್ಪ.
ಒಂದು ದೇಶ ಅಥವಾ ಒಬ್ಬ ನಾಯಕ, ಮಾತು ಕೇಳ್ತೀನಿ ಅಂತ ಹೇಳಿ ಅದರ ಗುರುತಾಗಿ ಇನ್ನೊಂದು ದೇಶಕ್ಕೆ ಅಥವಾ ಇನ್ನೊಬ್ಬ ನಾಯಕನಿಗೆ ಕೊಡ್ತಿದ್ದ ಹಣ ಅಥವಾ ಸ್ವತ್ತು. ಶಾಂತಿಯನ್ನ ಕಾಪಾಡೋಕೆ ಅಥವಾ ರಕ್ಷಣೆಯನ್ನ ಪಡಿಯೋಕೆ ಈ ಕಪ್ಪವನ್ನ ಕೊಡ್ತಿದ್ರು. (2ಅರ 3:4; 18:14-16; 2ಪೂರ್ವ 17:11) ಈ ಪದ ಒಬ್ಬ ವ್ಯಕ್ತಿ ಕೊಡ್ತಿದ್ದ ತೆರಿಗೆಯನ್ನ ಕೂಡ ಸೂಚಿಸುತ್ತೆ.—ನೆಹೆ 5:4; ರೋಮ 13:7.
-
ಕವಣೆ.
ಪ್ರಾಣಿಗಳ ನರಗಳಿಂದ, ಉದ್ದದ ಹುಲ್ಲಿಂದ ಇಲ್ಲಾ ಕೂದಲಿಂದ ಹೆಣೀತಿದ್ದ ಪಟ್ಟಿ ಅಥವಾ ಚರ್ಮದ ಪಟ್ಟಿ. ಎಸೆಯಬೇಕಾದ ವಸ್ತುನ (ಸಾಮಾನ್ಯವಾಗಿ ಕಲ್ಲು) ಅಗಲ ಭಾಗದಲ್ಲಿ ಇಡ್ತಿದ್ರು. ಕವಣೆಯ ಒಂದು ತುದಿಯನ್ನ ಕೈಗೆ ಇಲ್ಲಾ ಮೊಣಕೈಗೆ ಕಟ್ಟಿಕೊಳ್ತಿದ್ರು. ಇನ್ನೊಂದು ತುದಿಯನ್ನ ಕೈಯಲ್ಲಿ ಹಿಡ್ಕೊಂಡು ಗಿರಗಿರ ತಿರುಗಿಸಿ ಬಿಡ್ತಿದ್ರು. ಆಗ ಕಲ್ಲು ರಭಸವಾಗಿ ಹೋಗ್ತಿತ್ತು. ಪ್ರಾಚೀನ ದೇಶಗಳು ಕವಣೆ ಎಸೆಯುತ್ತಿದ್ದ ಜನ್ರನ್ನ ತಮ್ಮ ಸೇನೆಗೆ ಸೇರಿಸಿಕೊಳ್ತಿದ್ರು.—ನ್ಯಾಯ 20:16; 1ಸಮು 17:50.
-
ಕಸ್ದೀಯ; ಕಸ್ದೀಯರು.
ಟೈಗ್ರೀಸ್, ಯೂಫ್ರೆಟಿಸ್ ಅನ್ನೋ ನದಿಗಳ ಮುಖಜ ಭೂಮಿಗಳ ಪ್ರದೇಶ, ಅಲ್ಲಿರೋ ಜನ್ರು. ಮುಂದೆ ಇಡೀ ಬಾಬೆಲಿಗೂ, ಅಲ್ಲಿನ ಜನ್ರಿಗೂ ಈ ಪದವನ್ನ ಉಪಯೋಗಿಸಕ್ಕೆ ಶುರುಮಾಡಿದ್ರು. ಮಾಟಮಂತ್ರ ಮಾಡೋರಿಗೆ, ಜ್ಯೋತಿಷ್ಯರಿಗೆ ಮತ್ತು ವಿಜ್ಞಾನ, ಇತಿಹಾಸ, ಭಾಷೆಗಳು, ಜೋತಿಷ್ಯದ ಬಗ್ಗೆ ಅಧ್ಯಯನ ಮಾಡ್ತಿದ್ದ ವಿದ್ಯಾವಂತರಿಗೂ “ಕಸ್ದೀಯರು” ಅಂತಿದ್ರು.—ಎಜ್ರ 5:12; ದಾನಿ 4:7; ಅಕಾ 7:4.
-
ಕಾನಾನ್.
ನೋಹನ ಮೊಮ್ಮಗ. ಹಾಮನ ನಾಲ್ಕನೇ ಮಗ. ಕಾನಾನಿಂದ ಬಂದ 11 ಕುಲದವರು ಈಜಿಪ್ಟ್ ಮತ್ತು ಸಿರಿಯದ ಮಧ್ಯ ಇರೋ ಮೆಡಿಟರೇನಿಯನ್ ಪ್ರದೇಶಕ್ಕೆ ಬಂದು ವಾಸಿಸಿದ್ರು. ಆ ಸ್ಥಳವನ್ನ ‘ಕಾನಾನ್ ದೇಶ’ ಅಂತ ಕರೆದ್ರು. (ಯಾಜ 18:3; ಆದಿ 9:18; ಅಕಾ 13:19)—ಪರಿಶಿಷ್ಟ ಬಿ4 ನೋಡಿ.
-
ಕಾವಲುಗಾರ.
ಹೆಚ್ಚಾಗಿ ರಾತ್ರಿಹೊತ್ತು, ಮನುಷ್ಯರಿಗೆ ಅಥವಾ ಆಸ್ತಿಗೆ ಹಾನಿ ಆಗದ ಹಾಗೆ ಕಾವಲು ಕಾಯ್ತಿದ್ದ ವ್ಯಕ್ತಿ. ಏನಾದ್ರೂ ಅಪಾಯ ಬರ್ತಿದೆ ಅಂತ ಗೊತ್ತಾದಾಗ ಅವನು ಶಬ್ದ ಮಾಡಬಹುದಿತ್ತು. ಬರ್ತಿದ್ದವರನ್ನ ದೂರದಲ್ಲಿ ಇರೋವಾಗ್ಲೆ ನೋಡೋಕೆ ಆಗೋ ತರ ಈ ಕಾವಲುಗಾರರನ್ನ ಪಟ್ಟಣದ ಗೋಡೆ ಮೇಲೆ ಇಲ್ಲಾ ಕಾವಲು ಗೋಪುರಗಳ ಮೇಲೆ ನಿಲ್ಲಿಸ್ತಿದ್ರು. ಸೈನ್ಯದಲ್ಲಿರೋ ಕಾವಲುಗಾರರನ್ನ ಸಾಮಾನ್ಯವಾಗಿ ಗಾರ್ಡ್ ಅಥವಾ ಭಟರು ಅಂತಿದ್ರು. ಪ್ರವಾದಿಗಳು ಬರಲಿರೋ ನಾಶನದ ಬಗ್ಗೆ ಎಚ್ಚರಿಸ್ತಾ ಇಸ್ರಾಯೇಲ್ ಜನ್ರಿಗೆ ಒಂದರ್ಥದಲ್ಲಿ ಕಾವಲುಗಾರರಂತೆ ಕೆಲಸಮಾಡಿದ್ರು.—2ಅರ 9:20; ಯೆಹೆ 3:17.
-
ಕಿರೀಟ.
ಒಂದು ಕಂಬವನ್ನ ಅಲಂಕರಿಸೋ ಅದ್ರ ಮೇಲಿರೋ ಭಾಗ. ಸೊಲೊಮೋನನ ಆಲಯದ ಮುಂದಿದ್ದ ಯಾಕೀನ ಮತ್ತು ಬೋವಜ್ ಅನ್ನೋ ಅವಳಿ ಕಂಬಗಳಿಗೆ ದೊಡ್ಡ ಕಿರೀಟಗಳು ಇದ್ವು. (1ಅರ 7:16)—ಪರಿಶಿಷ್ಟ ಬಿ8 ನೋಡಿ.
-
ಕಿಸ್ಲೇವ್.
ಬಾಬೆಲಿಂದ ವಾಪಸ್ ಬಂದ್ಮೇಲೆ ಯೆಹೂದ್ಯರು ಉಪಯೋಗಿಸ್ತಿದ್ದ ಪವಿತ್ರ ಕ್ಯಾಲೆಂಡರಿನ 9ನೇ ತಿಂಗಳು. ಬೇರೆಯವ್ರ ಕ್ಯಾಲೆಂಡರಿನ 3ನೇ ತಿಂಗಳು. ನಮ್ಮ ಕ್ಯಾಲೆಂಡರ್ ಪ್ರಕಾರ ಈ ತಿಂಗಳು ನವೆಂಬರ್ ಮತ್ತು ಡಿಸೆಂಬರ್ ಮಧ್ಯ ಬರುತ್ತೆ. (ನೆಹೆ 1:1; ಜೆಕ 7:1)—ಪರಿಶಿಷ್ಟ ಬಿ15 ನೋಡಿ.
-
ಕೀರ್ತನೆ.
ದೇವರನ್ನ ಹಾಡಿ ಹೊಗಳೋ ಗೀತೆ. ಸಂಗೀತಕ್ಕೆ ತಕ್ಕಂತೆ ಕೀರ್ತನೆಗಳನ್ನ ರಚಿಸ್ತಿದ್ರು. ಯೆರೂಸಲೇಮ್ ಆಲಯದಲ್ಲಿ ಎಲ್ಲ ಜನ್ರು ಕೇಳಿಸ್ಕೊಳ್ಳೋ ಲೂಕ 20:42; ಅಕಾ 13:33; ಯಾಕೋ 5:13.
ತರ ಯೆಹೋವ ದೇವರಿಗೆ ಗಟ್ಟಿಯಾಗಿ ಹಾಡೋಕೆ ಈ ಕೀರ್ತನೆಗಳನ್ನ ಬಳಸ್ತಿದ್ರು.— -
ಕುಂಬಾರ.
ಮಣ್ಣಿನ ಮಡಿಕೆಗಳು, ಪಾತ್ರೆಗಳು ಮತ್ತು ಬೇರೆ ವಸ್ತುಗಳನ್ನ ತಯಾರಿಸೋ ವ್ಯಕ್ತಿ. ಹೀಬ್ರು ಭಾಷೆಯಲ್ಲಿ ಬಳಸಿದ ಪದಕ್ಕೆ “ರೂಪಿಸೋನು” ಅನ್ನೋ ಅರ್ಥ ಇದೆ. ವ್ಯಕ್ತಿಗಳ, ಜನಾಂಗಗಳ ಮೇಲೆ ಯೆಹೋವನಿಗಿರೋ ಪರಮಾಧಿಕಾರವನ್ನ ವಿವರಿಸೋಕೆ ಮಣ್ಣಿನ ಮೇಲೆ ಕುಂಬಾರನಿಗೆ ಇರೋ ಅಧಿಕಾರವನ್ನ ಉದಾಹರಣೆಯಾಗಿ ಬಳಸಲಾಗಿದೆ.—ಯೆಶಾ 64:8; ರೋಮ 9:21.
-
ಕುಲುಮೆ, ಒಲೆ.
ಇದ್ರಲ್ಲಿ ಅದಿರು ಅಥವಾ ಲೋಹವನ್ನ ಕರಗಿಸ್ತಿದ್ರು. ಮಣ್ಣಿನಿಂದ ಮಾಡಿರೋ ವಸ್ತುಗಳನ್ನ, ಪಿಂಗಾಣಿ ವಸ್ತುಗಳನ್ನೂ ಇದ್ರಲ್ಲಿ ಸುಡ್ತಿದ್ರು. ಬೈಬಲ್ ಕಾಲದಲ್ಲಿ ಕುಲುಮೆಯನ್ನ ಇಟ್ಟಿಗೆ ಅಥವಾ ಕಲ್ಲಿಂದ ಮಾಡ್ತಿದ್ರು.—ಆದಿ 15:17; ದಾನಿ 3:17; ಪ್ರಕ 9:2.
-
ಕುಷ್ಠ.
ಚರ್ಮದ ಮೇಲೆ ಬರೋ ಒಂದು ದೊಡ್ಡ ಕಾಯಿಲೆ. ಇದು ಇವತ್ತು ನಮಗೆ ಗೊತ್ತಿರೋ ಕುಷ್ಠಕ್ಕಿಂತ ತುಂಬಾ ಭಿನ್ನವಾಗಿತ್ತು. ಇದು ಮನುಷ್ಯರಿಗೆ ಮಾತ್ರ ಅಲ್ಲ ಬಟ್ಟೆಗಳಿಗೆ ಮತ್ತು ಮನೆಗೂ ಬರ್ತಿತ್ತು ಅಂತ ಬೈಬಲಲ್ಲಿದೆ.—ಯಾಜ 14:54, 55; ಲೂಕ 5:12.
-
ಕೃತಜ್ಞತಾ ಅರ್ಪಣೆ.
ದೇವರು ಕೊಟ್ಟಿದ್ದಕ್ಕಾಗಿ, ಆತನು ತೋರಿಸೋ ಶಾಶ್ವತ ಪ್ರೀತಿಗಾಗಿ ಆತನನ್ನ ಸ್ತುತಿಸೋಕೆ ಅರ್ಪಿಸೋ ಕೃತಜ್ಞತೆಯ ಬಲಿಗಳು. ಬಲಿಗಾಗಿ ಅರ್ಪಿಸೋ ಪ್ರಾಣಿ ಮಾಂಸವನ್ನ, ಹುಳಿ ಇರೋ ಮತ್ತು ಹುಳಿಯಿಲ್ಲದ ರೊಟ್ಟಿಗಳ ಜೊತೆ ತಿಂತಿದ್ರು. ಅವರು ಆ ಮಾಂಸವನ್ನ ಅದೇ ದಿನ ತಿನ್ನಬೇಕಿತ್ತು.—2ಪೂರ್ವ 29:31.
-
ಕೆಟ್ಟ ದೇವದೂತರು.
ಇವರು ಕಣ್ಣಿಗೆ ಕಾಣಲ್ಲ. ಅತಿಮಾನುಷ ಶಕ್ತಿ ಇರೋ ದೇವದೂತರು. ಇವ್ರನ್ನ ಆದಿಕಾಂಡ 6:2ರಲ್ಲಿ “ಸತ್ಯ ದೇವರ ಪುತ್ರರು,” ಮತ್ತು ಯೂದ 6ರಲ್ಲಿ “ದೇವದೂತರು” ಅಂತ ಹೇಳಿದೆ. ಇವ್ರನ್ನ ದೇವರು ಕೆಟ್ಟವ್ರಾಗಿ ಸೃಷ್ಟಿ ಮಾಡಿಲ್ಲ. ಅವರು ನೋಹನ ಕಾಲದಲ್ಲಿ ದೇವರ ಮಾತನ್ನ ಕೇಳದೆ, ಸೈತಾನನ ಜೊತೆ ಸೇರಿ ದೇವರ ವಿರುದ್ಧ ತಿರುಗಿ ಬಿದ್ದು ದೇವರ ಶತ್ರುಗಳಾದ್ರು.—ಧರ್ಮೋ 32:17; ಲೂಕ 8:30; ಅಕಾ 16:16; ಯಾಕೋ 2:19.
-
ಕೆಮೋಷ್.
ಮೋವಾಬ್ಯರ ಮುಖ್ಯ ದೇವರು.—1ಅರ 11:33.
-
ಕೆರೂಬಿಯರು.
ವಿಶೇಷವಾದ ನೇಮಕಗಳಿರೋ ದೊಡ್ಡ ಸ್ಥಾನದಲ್ಲಿ ಇರೋ ದೇವದೂತರು. ಇವರು ಸೆರಾಫಿಯರಲ್ಲ.—ಆದಿ 3:24; ವಿಮೋ 25:20; ಯೆಶಾ 37:16; ಇಬ್ರಿ 9:5.
-
ಕೈಗಳನ್ನ ಇಟ್ಟು.
ಒಂದು ನಿರ್ದಿಷ್ಟ ಕೆಲಸಕ್ಕಾಗಿ ಒಬ್ಬ ವ್ಯಕ್ತಿಯನ್ನ ಆರಿಸ್ಕೊಳ್ಳುವಾಗ, ಆಶೀರ್ವದಿಸುವಾಗ, ವಾಸಿ ಮಾಡುವಾಗ, ಪವಿತ್ರಶಕ್ತಿಗೆ ಸಂಬಂಧಪಟ್ಟ ಒಂದು ವರ ಕೊಡುವಾಗ ಆ ವ್ಯಕ್ತಿ ಮೇಲೆ ಕೈಗಳನ್ನ ಇಡ್ತಿದ್ರು. ಕೆಲವೊಮ್ಮೆ ಪ್ರಾಣಿಗಳನ್ನ ಬಲಿ ಕೊಡೋ ಮುಂಚೆ ಅದ್ರ ಮೇಲೆ ಕೈಗಳನ್ನ ಇಡ್ತಿದ್ರು.—ವಿಮೋ 29:15; ಅರ 27:18; ಅಕಾ 19:6; 1ತಿಮೊ 5:22.
-
ಕೈದಿ.
ಒಂದು ದೇಶವನ್ನ ವಶಮಾಡ್ಕೊಂಡವರು ಅಲ್ಲಿನ ಜನ್ರನ್ನ ಅಲ್ಲಿಂದ ಅಥವಾ ಮನೆಯಿಂದ ಹೊರಗೆ ಹಾಕ್ತಿದ್ರು. ಇದಕ್ಕಿರೋ ಹೀಬ್ರು ಪದದ ಅರ್ಥ “ಬಿಟ್ಟು ಹೋಗೋದು.” ಇಸ್ರಾಯೇಲ್ಯರು ಈ ಸ್ಥಿತಿಯನ್ನ ಎರಡು ಸಲ ಅನುಭವಿಸಬೇಕಾಯ್ತ. ಅಶ್ಶೂರ್ಯರು ಉತ್ತರದ ಹತ್ತು ಕುಲದ ರಾಜ್ಯವನ್ನ ವಶಮಾಡ್ಕೊಂಡ್ರು. ಬಾಬೆಲಿನವರು ದಕ್ಷಿಣದ ಎರಡು ಕುಲದ ರಾಜ್ಯವನ್ನ ವಶಮಾಡ್ಕೊಂಡ್ರು. ಈ ಎರಡೂ ರಾಜ್ಯದಲ್ಲಿ ಉಳಿದವರನ್ನ ಪರ್ಶಿಯದ ರಾಜ ಕೋರೇಷ ಸ್ವದೇಶಕ್ಕೆ ಕಳಿಸಿದ.—2 ಅರಸು 17:6; 24:16; ಎಜ್ರ 6:21.
-
ಕೈಸರ; ರೋಮಿನ ರಾಜ.
ಇದು ರೋಮಿನ ಚಕ್ರವರ್ತಿಗಳಿಗೆ ಇರೋ ಬಿರುದು. ಅಗಸ್ಟಸ್, ತಿಬೇರಿಯಸ್, ಕ್ಲೌಡಿಯಸ್ ಅನ್ನೋರ ಹೆಸ್ರುಗಳು ಬೈಬಲಲ್ಲಿದೆ. ನೀರೋ ಹೆಸ್ರು ಹೇಳಿಲ್ಲ ಅಂದ್ರೂ ಅವನಿಗೂ ಈ ಬಿರುದನ್ನ ಉಪಯೋಗಿಸ್ತಿದ್ರು. ಗ್ರೀಕ್ ಪವಿತ್ರ ಗ್ರಂಥದಲ್ಲಿ ‘ಕೈಸರ’ ಅನ್ನೋ ಪದ ಅಧಿಕಾರ ಅಥವಾ ರಾಜ್ಯವನ್ನ ಸೂಚಿಸುತ್ತೆ.—ಮಾರ್ಕ 12:17; ಅಕಾ 25:12.
-
ಕೊಂಬು.
ಇದನ್ನ ಅಂದ್ರೆ ಪ್ರಾಣಿಗಳ ಕೊಂಬನ್ನ ಕುಡಿಯೋ ಪಾತ್ರೆ ತರ ಉಪಯೋಗಿಸ್ತಿದ್ರು. ಇದ್ರಲ್ಲಿ ಎಣ್ಣೆ, ಇಂಕು, ಸೌಂದರ್ಯ ಹೆಚ್ಚಿಸೋ ವಸ್ತುಗಳನ್ನ ಹಾಕಿಡ್ತಿದ್ರು. ಇದ್ರಿಂದ ಸಂಗೀತ ನುಡಿಸ್ತಿದ್ರು. ಸೂಚನೆ ಕೊಡೋ ಸಾಧನವಾಗಿ ಉಪಯೋಗಿಸ್ತಿದ್ರು. (1ಸಮು 16:1, 13; 1ಅರ 1:39; ಯೆಹೆ 9:2) ಶಕ್ತಿ, ಜಯವನ್ನ ಸೂಚಿಸೋಕೆ ಅಲಂಕಾರಿಕವಾಗಿ “ಕೊಂಬು” ಅಂತಿದ್ರು.—ಧರ್ಮೋ 33:17; ಮೀಕ 4:13; ಜೆಕ 1:19.
-
ಕೊನೇ ದಿನಗಳು, ಕಡೇ ದಿನಗಳು.
ಕೊನೇ ದಿನಗಳು ಮತ್ತು ಕಡೇ ದಿನಗಳು ಅನ್ನೋ ಪದಗಳು ಬೈಬಲಲ್ಲಿರೋ ಭವಿಷ್ಯವಾಣಿಗಳಲ್ಲಿ ಉಪಯೋಗ ಯೆಹೆ 38:16; ದಾನಿ 10:14; ಅಕಾ 2:17) ಭವಿಷ್ಯವಾಣಿ ಮೇಲೆ ಹೊಂದ್ಕೊಂಡು ಇದು ಕೆಲವೊಮ್ಮೆ ಕೆಲವು ವರ್ಷಗಳು ಅಥವಾ ಜಾಸ್ತಿ ವರ್ಷಗಳು ಇರುತ್ತೆ. ಬೈಬಲಲ್ಲಿ ಈ ಪದವನ್ನ ಮುಖ್ಯವಾಗಿ ಉಪಯೋಗಿಸಿರೋದು ಯೇಸು ಮತ್ತೆ ಬರೋ ಕಾಲದಲ್ಲಿ ಈ ಲೋಕದ ‘ಕೊನೇ ದಿನಗಳನ್ನ’ ಸೂಚಿಸುತ್ತೆ.—2ತಿಮೊ 3:1; ಯಾಕೋ 5:3; 2ಪೇತ್ರ 3:3.
ಆಗಿರೋ ಪದಗಳು. ತುಂಬ ವರ್ಷಗಳ ಮುಂಚೆ ಆದ ಘಟನೆಗಳು ಇನ್ನೇನು ಮುಗಿಯೋ ಹಂತದಲ್ಲಿ ಇರೋದನ್ನ ಸೂಚಿಸುತ್ತೆ. ( -
ಕೊಯ್ಲಿನ ಹಬ್ಬ, ವಾರಗಳ ಹಬ್ಬ.—
ಐವತ್ತನೇ ದಿನದ ಹಬ್ಬ ನೋಡಿ.
-
ಕೊಳ್ಳೆ.
ಶತ್ರುಗಳನ್ನ ಸೋಲಿಸಿದ ಮೇಲೆ ಅವರಿಂದ ಕೊಳ್ಳೆ ಹೊಡೆದ ಅಥವಾ ದೋಚಿದ ವಸ್ತುಗಳು, ಪ್ರಾಣಿಗಳು, ಬೇರೆ ಅಮೂಲ್ಯ ಸೊತ್ತು.—ಯೆಹೋ 7:21; 22:8; ಇಬ್ರಿ 7:4.
-
ಕೋರ್.
ಒಣ ಮತ್ತು ದ್ರವ ಅಳತೆ. ಇದು ಬತ್ ಅಳತೆಯ ಅಂದಾಜು ಪ್ರಕಾರ ಒಂದು ಕೋರ್ ಅಳತೆ 220 ಲೀ.ಗೆ ಸಮ. (1ಅರ 5:11)—ಪರಿಶಿಷ್ಟ ಬಿ14 ನೋಡಿ.
-
ಕೋಳಗಳು.
ಶಿಕ್ಷೆ ಆದವರನ್ನ ಕಟ್ಟಿಹಾಕೋಕೆ ಬಳಸೋ ಬೇಡಿಗಳು. ಕೆಲವು ಬೇಡಿಗಳು ಕಾಲುಗಳನ್ನ ಮಾತ್ರ ಕಟ್ಟಿಹಾಕೋಕೆ ಇರ್ತಿದ್ವು. ಇನ್ನೂ ಕೆಲವು ಬೇಡಿಗಳು ಮನುಷ್ಯನ ಕೈಕಾಲು ಕುತ್ತಿಗೆಯನ್ನ ಕಟ್ಟಿಹಾಕಿ ದೇಹವನ್ನ ವಕ್ರವಾಗಿ ಮಾಡುತ್ತಿದ್ವು.—ಯೆರೆ 20:2; ಅಕಾ 16:24.
-
ಕ್ಯಾಬ್.
ಇದು ಬತ್ ಅಳತೆಯ ಅಂದಾಜಿನ ಪ್ರಕಾರ 1.22 ಲೀ. ಒಣ ಅಳತೆ. (2ಅರ 6:25)— ಪರಿಶಿಷ್ಟ ಬಿ14 ನೋಡಿ.
-
ಕ್ಯಾಸಿಯ.
ಕ್ಯಾಸಿಯ ಮರದ ತೊಗಟೆ. ದಾಲ್ಚಿನ್ನಿ ಮರದ (ಸಿನ್ನಮೋಮಮ್ ಕ್ಯಾಸಿಯ) ಕುಟುಂಬಕ್ಕೆ ಸೇರಿದೆ. ಸುಗಂಧ ತೈಲ ಮತ್ತು ಅಭಿಷೇಕದ ಪವಿತ್ರ ಎಣ್ಣೆ ತಯಾರಿಸುವಾಗ ಇದನ್ನ ಉಪಯೋಗಿಸ್ತಿದ್ರು.—ವಿಮೋ 30:24; ಕೀರ್ತ 45:8; ಯೆಹೆ 27:19.
-
ಕ್ರಿಸ್ತ.
ಇದು ಯೇಸುಗೆ ಇರೋ ಒಂದು ಬಿರುದು. ಕ್ರಿಸ್ಟೋಸ್ ಅನ್ನೋ ಗ್ರೀಕ್ ಪದದಿಂದ ಬಂದಿದೆ. ಇದಕ್ಕೆ ಸಮಾನವಾದ ಹೀಬ್ರು ಪದವನ್ನ ಭಾಷಾಂತರ ಮಾಡಿದಾಗ ಅದ್ರ ಅರ್ಥ “ಮೆಸ್ಸೀಯ” ಅಥವಾ “ಅಭಿಷಿಕ್ತ.”—ಮತ್ತಾ 1:16; ಯೋಹಾ 1:41.
-
ಕ್ರಿಸ್ತನ ಶತ್ರು.
ಇದಕ್ಕಿರೋ ಹೀಬ್ರು ಪದಕ್ಕೆ ಎರಡು ಅರ್ಥ ಇದೆ. ಒಂದು, ಕ್ರಿಸ್ತನಿಗೆ ತಿರುಗಿಬಿದ್ದವ ಅಥವಾ ಕ್ರಿಸ್ತನ ಶತ್ರು. ಇನ್ನೊಂದು, ಕ್ರಿಸ್ತನ ಸ್ಥಾನ ತಗೊಳ್ಳೋ ನಕಲಿ ಕ್ರಿಸ್ತ. ಕ್ರಿಸ್ತನ ಪ್ರತಿನಿಧಿಗಳು ಅಂತ ಸುಳ್ಳು ಹೇಳೋ, ಮೆಸ್ಸೀಯ ಅಂತ ಹೇಳ್ಕೊಳ್ಳೋ ಮತ್ತು ಕ್ರಿಸ್ತನನ್ನ ಆತನ ಶಿಷ್ಯರನ್ನ ವಿರೋಧಿಸೋ ಎಲ್ಲ ಜನ್ರನ್ನ, ಸಂಘಟನೆಗಳನ್ನ, ಗುಂಪುಗಳನ್ನ ಕ್ರಿಸ್ತನ ಶತ್ರುಗಳು ಅಂದ್ರೆ ತಪ್ಪಾಗಲ್ಲ.—1ಯೋಹಾ 2:22.
-
ಕ್ರೈಸ್ತರು.
ಯೇಸು ಕ್ರಿಸ್ತನ ಶಿಷ್ಯರಿಗೆ ದೇವರು ಕೊಟ್ಟ ಹೆಸ್ರು.—ಅಕಾ 11:26; 26:28.
ಗ
-
ಗಂಧರಸ.
ಕೊಮಿಫೋರ ಜಾತಿಯ ಬೇರೆ ತರದ ಚಿಕ್ಕ ಪೊದೆಯಿಂದ ಅಥವಾ ಮರದಿಂದ ಸಿಗೋ ಸುಗಂಧದ ಅಂಟು. ಪವಿತ್ರವಾದ ಅಭಿಷೇಕ ತೈಲದಲ್ಲಿ ಇದನ್ನ ಸೇರಿಸ್ತಿದ್ರು. ಮೈಗೆ ಹಚ್ಕೊಳ್ತಿದ್ದ ಲೋಷನ್, ಮಸಾಜ್ ಮಾಡೋಕೆ ಉಪಯೋಗಿಸೋ ಎಣ್ಣೆಯಲ್ಲಿ ಇದನ್ನ ಹಾಕ್ತಿದ್ರು. ಬಟ್ಟೆ, ಬೆಡ್‌ಶೀಟ್ ಒಳ್ಳೆ ವಾಸನೆ ಬರಬೇಕು ಅಂತ ಹಾಕ್ತಿದ್ರು. ಶವಕ್ಕೂ ಇದನ್ನ ಹಾಕ್ತಿದ್ರು.—ವಿಮೋ 30:23; ಜ್ಞಾನೋ 7:17; ಯೋಹಾ 19:39.
-
ಗಿತ್ತೀತ್.
ಸಂಗೀತಕ್ಕೆ ಸಂಬಂಧಪಟ್ಟ ಪದ. ಅದ್ರ ಅರ್ಥ ಗೊತ್ತಿಲ್ಲ. ಗಾಥ್ ಅನ್ನೋ ಹೀಬ್ರು ಪದದಿಂದ ಬಂದಿರಬಹುದು. ಗಾಥ್ ಅಂದ್ರೆ ದ್ರಾಕ್ಷಿತೊಟ್ಟಿ. ಹಾಗಾಗಿ ದ್ರಾಕ್ಷಾಮದ್ಯ ಮಾಡುವಾಗ ಹಾಡ್ತಿದ್ದ ಹಾಡುಗಳ ರಾಗ ಆಗಿರಬಹುದು ಅಂತ ಕೆಲವರು ನಂಬ್ತಾರೆ.—ಕೀರ್ತ 81:ಶೀರ್ಷಿಕೆ.
-
ಗಿಲ್ಯಾದ್.
ಸರಿಯಾಗಿ ಹೇಳ್ಬೇಕಂದ್ರೆ ಯೋರ್ದನ್ ನದಿಯ ಪೂರ್ವದಿಂದ ಯಬ್ಬೋಕ್ ಕಣಿವೆಯ ಉತ್ತರ ಮತ್ತು ದಕ್ಷಿಣ ತನಕ ಹರಡಿರೋ ಫಲವತ್ತಾದ ಪ್ರದೇಶ. ಕೆಲವೊಮ್ಮೆ ಯೋರ್ದನಿನ ಪೂರ್ವದಲ್ಲಿರೋ ಇಡೀ ಇಸ್ರಾಯೇಲನ್ನ ಅಂದ್ರೆ ರೂಬೇನ್ ಕುಲ, ಗಾದ್ ಕುಲ ಮತ್ತು ಮನಸ್ಸೆಯ ಅರ್ಧ ಕುಲದವರು ವಾಸ ಇದ್ದ ಪ್ರದೇಶವನ್ನ ಸೂಚಿಸೋಕೆ ಈ ಪದವನ್ನ ಉಪಯೋಗಿಸಿದ್ದಾರೆ. (ಅರ 32:1; ಯೆಹೋ 12:2; 2ಅರ 10:33) —ಪರಿಶಿಷ್ಟ ಬಿ4 ನೋಡಿ.
-
ಗುಂಪು.
ಒಂದು ಸಿದ್ಧಾಂತ ಅಥವಾ ಒಬ್ಬ ನಾಯಕನನ್ನ ಹಿಂಬಾಲಿಸ್ತಾ ಅವರದ್ದೇ ನಂಬಿಕೆಗಳನ್ನ ಪಾಲಿಸೋ ಜನರ ಗುಂಪು. ಯೆಹೂದಿ ಪಂಗಡಗಳಲ್ಲಿ ಮುಖ್ಯವಾಗಿ ಎರಡು ಗುಂಪುಗಳು ಇದ್ವು. ಅವರು ಯಾರಂದ್ರೆ ಫರಿಸಾಯರು ಮತ್ತು ಸದ್ದುಕಾಯರು. ಕ್ರೈಸ್ತರಲ್ಲದವರು ಕ್ರೈಸ್ತರನ್ನ ಒಂದು “ಗುಂಪು” ಅಂತ ಅಥವಾ “ನಜರೇತಿನ ಗುಂಪಿನವರು” ಅಂತ ಕರೀತಿದ್ರು. ಅಕಾ 5:17; 15:5; 24:5; 28:22; ಪ್ರಕ 2:6; 2ಪೇತ್ರ 2:1.
ಕ್ರೈಸ್ತರು ಯೆಹೂದಿ ಮತವನ್ನ ಬಿಟ್ಟು ಹೋದವರು ಅಂತ ಅವರು ಭಾವಿಸ್ತಿದ್ರು. ಆಮೇಲೆ ಕ್ರೈಸ್ತ ಸಭೆಗಳಲ್ಲೂ ಗುಂಪುಗಳು ಹುಟ್ಟಿಕೊಂಡ್ವು. ಪ್ರಕಟಣೆ ಪುಸ್ತಕದಲ್ಲಿ, “ನಿಕೊಲಾಯನ ಗುಂಪು” ಬಗ್ಗೆ ಪ್ರತ್ಯೇಕವಾಗಿ ಹೇಳಲಾಗಿದೆ.— -
ಗೆಹೆನ್ನ, ಸಮಾಧಿ.
ಇದು ಹಿನ್ನೋಮ್ ಕಣಿವೆಯ ಗ್ರೀಕ್ ಹೆಸ್ರು. ಈ ಕಣಿವೆ ಆಗಿನ ಯೆರೂಸಲೇಮಿನ ದಕ್ಷಿಣಪಶ್ಚಿಮದ ಕಡೆ ಇತ್ತು. (ಯೆರೆ 7:31) ಭವಿಷ್ಯವಾಣಿಗಳಲ್ಲಿ ಇದನ್ನ ಶವಗಳನ್ನ ಬಿಸಾಕೋ ಜಾಗ ಅಂತ ಹೇಳಲಾಗಿದೆ. (ಯೆರೆ 7:32; 19:6) ಮನುಷ್ಯನನ್ನಾಗಲಿ ಪ್ರಾಣಿಗಳನ್ನಾಗಲಿ ಗೆಹನ್ನಗೆ ಬಿಸಾಕಿ ಜೀವಂತವಾಗಿ ಸುಟ್ಟಿರೋದಕ್ಕೆ, ಚಿತ್ರಹಿಂಸೆ ಕೊಟ್ಟಿರೋದಕ್ಕೆ ಯಾವ ಆಧಾರನೂ ಇಲ್ಲ. ಹಾಗಾಗಿ ಇದು ಮನುಷ್ಯನ ಆತ್ಮವನ್ನ ಬೆಂಕಿಯಲ್ಲಿ ಶಾಶ್ವತವಾಗಿ ಶಿಕ್ಷೆ ಕೊಡೋ ಒಂದು ಅದೃಶ್ಯ ಸ್ಥಳವನ್ನ ಸೂಚಿಸಲ್ಲ. ಯೇಸು ಮತ್ತು ಶಿಷ್ಯರು ಈ ಪದವನ್ನ ಶಾಶ್ವತ ಮರಣವಾದ “ಎರಡನೇ ಮರಣವನ್ನ” ಅಂದ್ರೆ ಸಂಪೂರ್ಣ ನಾಶವನ್ನ ಸೂಚಿಸೋಕೆ ಬಳಸಿದ್ರು.—ಪ್ರಕ 20:14; ಮತ್ತಾ 5:22; 10:28.
-
ಗೇಣು.
ನೆಟ್ಟನೆ ಅಳೆಯುತ್ತಿದ್ದ ಅಳತೆ. ಇದು ಸುಮಾರು, ಬೆರಳುಗಳನ್ನ ಚಾಚಿದಾಗ ಹೆಬ್ಬೆಟ್ಟಿನ ತುದಿಯಿಂದ ಕಿರುಬೆರಳಿನ ತುದಿಯ ತನಕ ಇರೋ ದೂರ. ಒಂದು ಮೊಳ 44.5 ಸೆಂ.ಮೀ. (17.5 ಇಂಚು) ಇರುತ್ತೆ. ಆದ್ರೆ, ಗೇಣು 22.2 ಸೆಂ.ಮೀ. (8.75 ಇಂಚು) ಇರುತ್ತೆ. (ವಿಮೋ 28:16; 1ಸಮು 17:4)—ಪರಿಶಿಷ್ಟ ಬಿ14 ನೋಡಿ.
-
ಗೇರಾ.
0.57 ಗ್ರಾಂ ಬರೋ ಒಂದು ತೂಕ. ಒಂದು ಶೆಕೆಲಿನ 20ರಲ್ಲಿ ಒಂದು ಭಾಗ. (ಯಾಜ 27:25) —ಪರಿಶಿಷ್ಟ ಬಿ14 ನೋಡಿ.
-
ಗೋಣಿಬಟ್ಟೆ.
ಧಾನ್ಯವನ್ನ ಶೇಖರಿಸಿ ಇಡುತ್ತಿದ್ದ ಚೀಲಗಳನ್ನ ತಯಾರಿಸೋಕೆ ಬಳಸ್ತಿದ್ದ ದಪ್ಪ ಬಟ್ಟೆ ಇದಾಗಿತ್ತು. ಆಗಿನ ಕಾಲದಲ್ಲಿ ಸಾಧಾರಣವಾಗಿ ಗಾಢವಾದ ಬಣ್ಣದ ಆಡಿನ ಕೂದಲಿಂದ ಈ ಬಟ್ಟೆಯನ್ನ ನೇಯ್ತಿದ್ರು. ದುಃಖವನ್ನ ಸೂಚಿಸೋಕೆ ಈ ಬಟ್ಟೆಯನ್ನ ಹಾಕೋ ಸಂಪ್ರದಾಯ ಇತ್ತು.—ಆದಿ 37:34; ಲೂಕ 10:13.
-
ಗೋಮೇದಕ ರತ್ನ.
ಮಧ್ಯಮಧ್ಯದಲ್ಲಿ ಬಿಳಿ ಪದರಗಳಿದ್ದು ವಿಧವಿಧವಾದ ಬಣ್ಣಗಳಿರೋ (ಕಪ್ಪು, ಕಂದು, ಕೆಂಪು, ಬೂದು ಅಥವಾ ಹಸಿರು) ಬೆಲೆಬಾಳೋ ಕಲ್ಲು. ಈ ರತ್ನಗಳನ್ನ ಮಹಾ ಪುರೋಹಿತನ ಪ್ರತ್ಯೇಕ ಬಟ್ಟೆಗಳಲ್ಲಿ ಬಳಸಿದ್ರು.—ವಿಮೋ 28:9, 12; 1ಪೂರ್ವ 29:2; ಯೋಬ 28:16.
-
ಗ್ರೀಕ್.
ಗ್ರೀಸ್ ದೇಶದ ಜನ್ರು ಮಾತಾಡೋ ಭಾಷೆ. ಆ ದೇಶದಲ್ಲಿ ಹುಟ್ಟಿದವರನ್ನ, ಅಲ್ಲಿ ವಾಸಿಸೋ ಕುಟುಂಬದಿಂದ ಬಂದವ್ರನ್ನ ಗ್ರೀಕರು ಅಂತ ಕರಿತಾರೆ. ಗ್ರೀಕ್ ಪವಿತ್ರ ಗ್ರಂಥದಲ್ಲಿ ಗ್ರೀಕ್ ಭಾಷೆಯ ಮತ್ತು ಸಂಸ್ಕೃತಿಯ ಪ್ರಭಾವ ಇಲ್ಲದಿದ್ದ ಎಲ್ಲ ಯೆಹೂದ್ಯರನ್ನೂ ಗ್ರೀಕರನ್ನೂ ಗ್ರೀಕರು ಅಂತ ಹೇಳಲಾಗಿದೆ.—ಯೋವೇ 3:6; ಯೋಹಾ 12:20.
ಚ
-
ಚಪ್ಪರಗಳ ಹಬ್ಬ.
ಇದನ್ನ ಡೇರೆಗಳ ಹಬ್ಬ, ಫಸಲು ಸಂಗ್ರಹ ಹಬ್ಬ ಅಂತಾನೂ ಕರಿತಿದ್ರು. ಎಥನಿಮ್ ತಿಂಗಳ 15-21ನೇ ತಾರೀಕಿನ ತನಕ ಇದನ್ನ ಆಚರಿಸ್ತಿದ್ರು. ಇಸ್ರಾಯೇಲಲ್ಲಿ ಕೃಷಿ ವರ್ಷದ ಕೊನೆಯಲ್ಲಿ ಫಸಲು ಸಂಗ್ರಹಿಸುವಾಗ ಮಾಡೋ ಹಬ್ಬ. ಆಗ ಯೆಹೋವ ಬೆಳೆಯನ್ನ ಆಶೀರ್ವದಿಸಿದ್ದಿಕ್ಕೆ ಜನ ಧನ್ಯವಾದ ಹೇಳಿ ಸಂತೋಷ ಪಡ್ತಿದ್ರು. ಈಜಿಪ್ಟಿಂದ ಹೊರಗೆ ಬಂದ ನೆನಪಿಗಾಗಿ ಆ ದಿನಗಳಲ್ಲಿ ಜನ್ರು ಚಿಕ್ಕ ಚಿಕ್ಕ ಚಪ್ಪರಗಳನ್ನ ಮಾಡಿ ಅದ್ರಲ್ಲಿ ವಾಸ ಮಾಡ್ತಿದ್ರು. ಗಂಡಸ್ರೆಲ್ಲಾ ಯೆರೂಸಲೇಮಿಗೆ ಹೋಗಿ ಆಚರಿಸಬೇಕಾಗಿದ್ದ ಮೂರು ಹಬ್ಬಗಳಲ್ಲಿ ಇದು ಒಂದು.—ಯಾಜ 23:34; ಎಜ್ರ 3:4.
-
ಚರ್ಮದ ಸುರುಳಿ.
ಬರಿಯೋಕೆ ಸಾಧ್ಯ ಆಗೋ ಹಾಗೆ ಕುರಿ, ಆಡು ಅಥವಾ ಕರುವಿನ ಚರ್ಮದಿಂದ ಮಾಡಿದ ಸುರುಳಿ. ಇದು ಪಪೈರಸ್‌ಗಿಂತ ಹೆಚ್ಚು ಕಾಲ ಬಾಳಿಕೆ ಬರ್ತಿತ್ತು. ಅದಕ್ಕೇ ಬೈಬಲನ್ನ ಬರಿಯೋಕೆ ಇದನ್ನ ಬಳಸಿದ್ರು. ಪೌಲ ತಿಮೊತಿ ಹತ್ರ ತರೋಕೆ ಕೇಳ್ಕೊಂಡ ಚರ್ಮದ ಸುರುಳಿಗಳು ಬಹುಶಃ ಪವಿತ್ರ ಗ್ರಂಥದ ಹೀಬ್ರು ಪುಸ್ತಕದ ಭಾಗಗಳಾಗಿ ಇರಬಹುದು. ಮೃತ ಸಮುದ್ರದಲ್ಲಿ ಸಿಕ್ಕ ಕೆಲವು ಸುರುಳಿಗಳು ಚರ್ಮದ ಸುರುಳಿಗಳಾಗಿದ್ವು.—2ತಿಮೊ 4:13.
-
ಚಿಮಟಗಳು.
ಬಂಗಾರದಿಂದ ಮಾಡಿದ ಹಿಡಿಗಳ ತರದ ಸಾಧನಗಳು. ಸಾಮಾನ್ಯವಾಗಿ ದೇವಾಲಯದಲ್ಲಿದ್ದ ದೀಪಗಳನ್ನ ಆರಿಸೋಕೆ ಈ ಚಿಮುಟಗಳನ್ನ ಬಳಸ್ತಿದ್ರು.—ವಿಮೋ 37:23.
-
ಚೀಟು ಹಾಕು.
ತೀರ್ಮಾನ ತಗೊಳ್ಳೋಕೆ ಉಪಯೋಗಿಸೋ ಚಿಕ್ಕ ಕಲ್ಲುಗಳು ಅಥವಾ ಮರದ ತುಂಡುಗಳು. ಇದನ್ನ ಬಟ್ಟೆಯ ಸೆರಗಲ್ಲಿ ಅಥವಾ ಪಾತ್ರೆಯಲ್ಲಿ ಹಾಕಿ ಕುಲುಕ್ತಿದ್ರು. ಆಮೇಲೆ ಅದ್ರಿಂದ ಒಂದನ್ನ ತಗೊಳ್ತಿದ್ರು. ಅಥವಾ ಅದ್ರಿಂದ ಹೊರಗೆ ಬಿಳೋದನ್ನ ಯೆಹೋ 14:2; ಕೀರ್ತ 16:5; ಜ್ಞಾನೋ 16:33; ಮತ್ತಾ 27:35.
ತಗೊಳ್ತಿದ್ರು. ಪ್ರಾರ್ಥನೆ ಮಾಡಿ ಇದನ್ನ ಮಾಡ್ತಿದ್ರು. ಮೂಲಭಾಷೆಯಲ್ಲಿ “ಚೀಟು” ಅನ್ನೋದಕ್ಕೆ ಇರೋ ಪದಕ್ಕೆ “ಪಾಲು,” “ಆಸ್ತಿ” ಅಂತಾನೂ ಅರ್ಥ ಇದೆ.— -
ಚೀಯೋನ್; ಚೀಯೋನ್ ಬೆಟ್ಟ.
ಇದು ಯೆಬೂಸಿಯರಿಗೆ ಸೇರಿದ ಯೆಬೂಸ್ ಅನ್ನೋ ಹೆಸರಿನ ಕೋಟೆಯಿದ್ದ ಪಟ್ಟಣ. ಇದು ಯೆರೂಸಲೇಮಿಗೆ ದಕ್ಷಿಣ ಪೂರ್ವಕ್ಕಿದ್ದ ಬೆಟ್ಟದ ಮೇಲೆ ಇತ್ತು. ದಾವೀದ ಅದನ್ನ ವಶಪಡಿಸ್ಕೊಂಡ ಮೇಲೆ ಅಲ್ಲಿ ತನ್ನ ರಾಜಭವನವನ್ನ ಕಟ್ಟಿದನು. ಹೀಗೆ ಆ ಪಟ್ಟಣಕ್ಕೆ “ದಾವೀದನ ಪಟ್ಟಣ” ಅನ್ನೋ ಹೆಸ್ರು ಬಂತು. (2ಸಮು 5:7, 9) ದಾವೀದ ಯೆಹೋವನ ಮಂಜೂಷವನ್ನ ಅಲ್ಲಿಗೆ ತಂದ ಮೇಲೆ ಆ ಪಟ್ಟಣ ಯೆಹೋವನ ದೃಷ್ಟಿಯಲ್ಲಿ ತುಂಬ ಪವಿತ್ರ ಬೆಟ್ಟವಾಯ್ತು. ಆಮೇಲೆ ಮೋರಿಯಾ ಬೆಟ್ಟದ ಮೇಲಿದ್ದ ಆಲಯ ಪ್ರದೇಶವನ್ನ, ಕೆಲವೊಮ್ಮೆ ಯೆರೂಸಲೇಮ್ ಪಟ್ಟಣವನ್ನ ಸಹ ಚಿಯೋನ್ ಅಂತ ಕರೀತಿದ್ರು. ಪವಿತ್ರ ಗ್ರಂಥದ ಕ್ರೈಸ್ತ ಗ್ರೀಕ್ ಭಾಗದಲ್ಲಿ ಹೆಚ್ಚಾಗಿ ಇದನ್ನ ಸಾಂಕೇತಿಕವಾಗಿ ಬಳಸಲಾಗಿದೆ.—ಕೀರ್ತ 2:6; 1ಪೇತ್ರ 2:6; ಪ್ರಕ 14:1.
ಜ
-
ಜೀವದ ಮರ.
ಜೀವದ ಮರ ಏದೆನ್ ತೋಟದಲ್ಲಿದ್ದ ಒಂದು ಮರ. ಜೀವ ಕೊಡೋ ಶಕ್ತಿ ಆ ಹಣ್ಣುಗಳಲ್ಲಿ ಇತ್ತು ಅಂತ ಬೈಬಲ್ ಸೂಚಿಸಲ್ಲ. ಬದಲಿಗೆ ದೇವರು ಯಾರಿಗೆ ಆ ಹಣ್ಣುಗಳನ್ನ ತಿನ್ನೋ ಅವಕಾಶ ಕೊಡ್ತಾನೋ ಅವ್ರಿಗೆ ಶಾಶ್ವತ ಜೀವ ಸಿಗುತ್ತೆ ಅನ್ನೋ ದೇವರ ಮಾತನ್ನ ಅದು ಸೂಚಿಸುತ್ತೆ.—ಆದಿ 2:9; 3:22.
-
ಜೂಬಿಲಿ ವರ್ಷ.
ಇಸ್ರಾಯೇಲ್ಯರು ದೇವರು ಮಾತುಕೊಟ್ಟ ದೇಶಕ್ಕೆ ಹೋದಾಗಿಂದ ಪ್ರತಿ 50ನೇ ವರ್ಷವನ್ನ ಸೂಚಿಸುತ್ತೆ. ಜೂಬಿಲಿ ವರ್ಷದಲ್ಲಿ ದೇಶದಲ್ಲಿ ಯಾವ ಬೆಳೆಯನ್ನೂ ಬೆಳೆಸೋ ಹಾಗಿರಲಿಲ್ಲ. ಯಾವುದೇ ಕೃಷಿ ಮಾಡೋ ಹಾಗಿರಲಿಲ್ಲ. ಇಬ್ರಿಯ ಗುಲಾಮರನ್ನ ಬಿಡುಗಡೆ ಮಾಡಬೇಕಾಗಿತ್ತು. ಮಾರಿದ ಪಿತ್ರಾರ್ಜಿತ ಆಸ್ತಿ ವಾಪಸ್ ಸಿಗ್ತಿತ್ತು. ಇನ್ನೊಂದು ಅರ್ಥದಲ್ಲಿ, ಈ ಬಿಡುಗಡೆ ವರ್ಷ ಒಂದು ವರ್ಷದ ತನಕ ಸಂಭ್ರಮಿಸೋ ಹಬ್ಬ ಆಗಿತ್ತು. ಇದ್ರಿಂದ ಇಸ್ರಾಯೇಲ್ ಜನಾಂಗ ಆರಂಭದಲ್ಲಿ ಹೇಗೆ ಖುಷಿಯಾಗಿತ್ತೋ ಮತ್ತೆ ಅದೇ ಸ್ಥಿತಿಗೆ ಬರೋಕೆ ಆಗ್ತಿತ್ತು.—ಯಾಜ 25:10.
-
ಜ್ಯೋತಿಷಿ.
ಭವಿಷ್ಯ ಹೇಳೋಕೆ ಸೂರ್ಯ ಚಂದ್ರ ನಕ್ಷತ್ರಗಳ ಚಲನೆಯನ್ನ ಅಧ್ಯಯನ ಮಾಡೋ ವ್ಯಕ್ತಿ.—ದಾನಿ 2:27; ಮತ್ತಾ 2:1.
ಝ
-
ಝಿವ್.
ಬಾಬೆಲಿಂದ ವಾಪಸ್ ಬಂದ್ಮೇಲೆ ಯೆಹೂದ್ಯರು ಉಪಯೋಗಿಸ್ತಿದ್ದ ಪವಿತ್ರ ಕ್ಯಾಲೆಂಡರಿನ ಪ್ರಕಾರ ಎರಡನೇ ತಿಂಗಳು. ಬೇರೆಯವ್ರ ಕ್ಯಾಲೆಂಡರ್ ಪ್ರಕಾರ ಅದು 8ನೇ ತಿಂಗಳು. ನಮ್ಮ ಕ್ಯಾಲೆಂಡರ ಪ್ರಕಾರ ಇದು ಏಪ್ರಿಲ್ ಮತ್ತು ಮೇ ಮಧ್ಯ ಬರುತ್ತೆ. ಬಾಬೆಲಿನ ಬಂದಿವಾಸದ ನಂತ್ರ ಇದನ್ನ ಯೆಹೂದ್ಯರು ಟಾಲ್ಮಡ್‌ನಲ್ಲಿ ಮತ್ತು ಬೇರೆ ಪುಸ್ತಕಗಳಲ್ಲಿ ಇಯ್ಯಾರ್ ಅಂತ ಬರೆದ್ರು. (1ಅರ 6:37)—ಪರಿಶಿಷ್ಟ ಬಿ15 ನೋಡಿ.
ಟ
-
ಟಾರ್ಟರಸ್.
ಈ ಪದವನ್ನ ಪವಿತ್ರ ಗ್ರಂಥದ ಗ್ರೀಕ್ ಭಾಗದಲ್ಲಿ ಬಳಸಿದ್ದಾರೆ. ನೋಹನ ಕಾಲದಲ್ಲಿ ಅವಿಧೇಯತೆ ತೋರಿಸಿದ ದೇವದೂತರನ್ನ ಇಟ್ಟಿರೋ ಜೈಲಿಗೆ ಸಮಾನ ಇರೋ ಒಂದು ಸ್ಥಳವನ್ನ ಇದು ಸೂಚಿಸುತ್ತೆ. 2 ಪೇತ್ರ 2:4 ರಲ್ಲಿ ಹೇಳಿರೋ ಟಾರ್ಟರೂ (‘ಟಾರ್ಟರಸ್‌ಗೆ ಎಸೆಯೋದು’) ಅನ್ನೋ ಕ್ರಿಯಾಪದ ಪಾಪ ಮಾಡಿದ ದೇವದೂತರನ್ನ ಅನ್ಯಧರ್ಮದ ಪುರಾಣಗಳಲ್ಲಿ ಹೇಳಿರೋ ಟಾರ್ಟರಸ್‌ನಲ್ಲಿ (ಅಂದ್ರೆ ಕಡಿಮೆ ಸ್ಥಾನದ ದೇವರುಗಳು ಇರೋ ಭೂಗರ್ಭದಲ್ಲಿರೋ ಜೈಲು, ಕತ್ತಲ ಸ್ಥಳ) ಎಸೆಯಲಾಗಿದೆ ಅಂತ ಸೂಚಿಸಲ್ಲ. ಬದಲಿಗೆ ಈ ಪದ, ದೇವರು ಅವ್ರನ್ನ ಸ್ವರ್ಗದಲ್ಲಿರೋ ಅವರ ಸುಯೋಗಗಳಿಂದ ತೆಗೆದುಹಾಕಿ ತನ್ನ ಉಜ್ವಲ ಉದ್ದೇಶಗಳನ್ನ ಅರ್ಥ ಮಾಡ್ಕೊಳ್ಳೋಕೆ ಆಗದೇ ಇರೋ ಮಾನಸಿಕ ಅಂಧಕಾರದ ಸ್ಥಿತಿಗೆ ಅವರನ್ನ ತಳ್ಳಿಬಿಟ್ಟಿದ್ದಾನೆ ಅಂತ ಸೂಚಿಸುತ್ತೆ. ಈ ಅಂಧಕಾರ ಕೊನೆಗೆ ಅವರಿಗೆ ಆಗೋ ಗತಿಯನ್ನ ಸೂಚಿಸುತ್ತೆ. ಅವರು ತಮ್ಮ ಅಧಿಕಾರಿಯಾಗಿರೋ ಅಪವಾದಿ ಸೈತಾನನ ಜೊತೆ ನಿತ್ಯನಾಶ ಆಗ್ತಾರೆ ಅಂತ ವಚನಗಳು ತೋರಿಸುತ್ತೆ. ಹಾಗಾಗಿ ಟಾರ್ಟರಸ್ ಅನ್ನೋದು ದಂಗೆ ಏದ್ದ ದೇವದೂತರ ಹೀನಾಯ ಸ್ಥಿತಿಯನ್ನ ಸೂಚಿಸುತ್ತೆ. ಪ್ರಕಟನೆ 20:1-3ರಲ್ಲಿ ಹೇಳಿರೋ “ಅಗಾಧ ಸ್ಥಳ” ಟಾರ್ಟರಸ್ ಅಲ್ಲ.
-
ಟಿಶ್ರಿ.—
ಎಥನಿಮ್ ಮತ್ತು ಪರಿಶಿಷ್ಟ ಬಿ15 ನೋಡಿ.
-
ಟೇಬೇತ್.
ಬಾಬೆಲಿಂದ ವಾಪಸ್ ಬಂದ್ಮೇಲೆ ಯೆಹೂದ್ಯರು ಉಪಯೋಗಿಸ್ತಿದ್ದ ಪವಿತ್ರ ಕ್ಯಾಲೆಂಡರಿನ ಹತ್ತನೇ ತಿಂಗಳು. ಬೇರೆಯವ್ರ ಕ್ಯಾಲೆಂಡರ್ ಪ್ರಕಾರ ಅದು 4ನೇ ತಿಂಗಳು. ನಮ್ಮ ಕ್ಯಾಲೆಂಡರ್ ಪ್ರಕಾರ ಈ ತಿಂಗಳು ಡಿಸೆಂಬರ್ ಮತ್ತು ಜನವರಿ ಮಧ್ಯ ಬರುತ್ತೆ. ಎಸ್ತೇ 2:16)—ಪರಿಶಿಷ್ಟ ಬಿ15 ನೋಡಿ.
ಇದನ್ನ ಹೆಚ್ಚಾಗಿ “ಹತ್ತನೇ ತಿಂಗಳು” ಅಂತ ಕರಿತಿದ್ರು. (
ಡ
-
ಡೇರಿಕ್.
8.4 ಗ್ರಾಂ ತೂಕ ಇರೋ ಒಂದು ಪರ್ಶಿಯ ಚಿನ್ನದ ನಾಣ್ಯ. (1ಪೂರ್ವ 29:7)—ಪರಿಶಿಷ್ಟ ಬಿ14 ನೋಡಿ.
ತ
-
ತಮ್ಮೂಜ್.
(1) ಯೆರೂಸಲೇಮಲ್ಲಿದ್ದ ಧರ್ಮಭ್ರಷ್ಟ ಇಬ್ರಿಯ ಸ್ತ್ರೀಯರು ಈ ದೇವರಿಗಾಗಿ ಅತ್ತು ಗೋಳಾಡಿದ್ರು. ತಮ್ಮೂಜ್ ಒಬ್ಬ ರಾಜ ಅಂತ, ಸತ್ತ ಮೇಲೆ ಅವನು ದೇವರಾದ ಅಂತ ಕೆಲವರು ನಂಬ್ತಾರೆ. ಸುಮೇರಿಯನ್ ಬರಹಗಳಲ್ಲಿ ಇವನನ್ನ ಡುಮುಜಿ ಅಂತ ಕರೆದಿದ್ದಾರೆ. ಈ ಡುಮುಜಿಯನ್ನ ಸಂತಾನೋತ್ಪತ್ತಿಯ ದೇವತೆ ಆಗಿರೋ ಇನಾನನ ಗಂಡ ಅಥವಾ ಪ್ರಿಯತಮ ಅಂತ ಗುರುತಿಸ್ತಿದ್ರು. (ಯೆಹೆ 8:14) (2) ಬಾಬೆಲಿಂದ ವಾಪಸ್ ಬಂದ್ಮೇಲೆ ಯೆಹೂದ್ಯರು ಉಪಯೋಗಿಸ್ತಿದ್ದ ಪವಿತ್ರ ಕ್ಯಾಲೆಂಡರಿನ ನಾಲ್ಕನೇ ತಿಂಗಳು. ಬೇರೆಯವ್ರ ಕ್ಯಾಲೆಂಡರ್ ಪ್ರಕಾರ ಅದು 10ನೇ ತಿಂಗಳು. ನಮ್ಮ ಕ್ಯಾಲೆಂಡರ್ ಪ್ರಕಾರ ಈ ತಿಂಗಳು ಜೂನ್ ಮತ್ತು ಜುಲೈ ಮಧ್ಯ ಬರುತ್ತೆ.—ಪರಿಶಿಷ್ಟ ಬಿ15 ನೋಡಿ.
-
ತಲಾಂತು.
ತೂಕದ ಅಥವಾ ಹಣದ ತುಂಬ ದೊಡ್ಡದಾಗಿರೋ ಇಬ್ರಿಯ ಅಳತೆ. ಒಂದು ತಲಾಂತು 34.2 ಕೆಜಿ ತೂಕ ಇತ್ತು. ಗ್ರೀಕ್ ತಲಾಂತು ಸ್ವಲ್ಪ ಚಿಕ್ಕದು. ಅದು ಸುಮಾರು 20.4 ಕೆಜಿ ತೂಕ ಇತ್ತು. (1ಪೂರ್ವ 22:14; ಮತ್ತಾ 18:24)—ಪರಿಶಿಷ್ಟ ಬಿ14 ನೋಡಿ.
-
ತಾರ್ಷೀಷಿನ ಹಡಗುಗಳು.
ಹಿಂದಿನ ಕಾಲದ ತಾರ್ಷೀಷಿಗೆ (ಈಗ ಸ್ಪೇನ್) ಪ್ರಯಾಣಿಸ್ತಿದ್ದ ಹಡಗುಗಳನ್ನ ಮೊದಲು ಹಾಗೆ ಕರಿತಿದ್ರು. ಆಮೇಲೆ, ದೂರ ಪ್ರಯಾಣ ಮಾಡುತ್ತಿದ್ದ ದೊಡ್ಡ ದೊಡ್ಡ ಹಡಗುಗಳಿಗೆ ಈ ಹೆಸ್ರಿಂದ ಕರಿಯೋಕೆ ಶುರುಮಾಡಿದ್ರು. ವ್ಯಾಪಾರಕ್ಕೋಸ್ಕರ ಸೊಲೊಮೋನ್, ಯೆಹೋಷಾಫಾಟ ಅಂತ ಹಡಗುಗಳನ್ನ ಬಳಸಿದ್ರು.—1ಅರ 9:26; 10:22; 22:48.
-
ತೀರ್ಪಿನ ದಿನ.
ಜನ್ರ ಗುಂಪುಗಳ ಹತ್ರ, ಜನಾಂಗಗಳ ಹತ್ರ, ಮಾನವಕುಲದ ಹತ್ರ ದೇವರು ಲೆಕ್ಕ ಕೇಳೋ ಒಂದು ನಿರ್ದಿಷ್ಟವಾದ ದಿನ ಅಥವಾ ಕಾಲ. ಈಗಾಗ್ಲೇ ಮರಣ ಶಿಕ್ಷೆಯ ತೀರ್ಪು ಆಗಿರೋ ಜನ್ರಿಗೆ ಆ ಶಿಕ್ಷೆ ಕೊಡೋ ಸಮಯ ಕೂಡ ಆಗಿರಬಹುದು. ಕೆಲವ್ರಿಗೆ ತೀರ್ಪಿನ ನಂತ್ರ ಶಾಶ್ವತ ಜೀವ ಸಿಗೋ ಅವಕಾಶ ಕೂಡ ಆಗಿರಬಹುದು. ಯೇಸು ಮತ್ತು ಅಪೊಸ್ತಲರು ಮುಂದೆ ಬರೋ ‘ತೀರ್ಪಿನ ದಿನದ’ ಬಗ್ಗೆ ಹೇಳಿದ್ದಾರೆ. ಆಗ ಬದುಕಿರುವವರಿಗೆ ಮಾತ್ರ ಅಲ್ಲ ಸತ್ತೋಗಿರೋ ಜನ್ರಿಗೂ ತೀರ್ಪು ಕೊಡಲಾಗುತ್ತೆ.—ಮತ್ತಾ 12:36.
-
ತುತ್ತೂರಿ.
ಲೋಹದಿಂದ ಮಾಡಿದ ಸಂಗೀತದ ವಾದ್ಯ. ಇದನ್ನ ಸೂಚನೆಗಳನ್ನ ಕೊಡೋಕೆ, ಸಂಗೀತ ನುಡಿಸೋಕೆ ಬಳಸ್ತಿದ್ರು. ಅರಣ್ಯಕಾಂಡ 10:2ರಲ್ಲಿ ಇರೋ ತರ ಸಭೆಯನ್ನ ಸೇರಿಸೋಕೆ, ಡೇರೆಗಳನ್ನ ಬಿಚ್ಚಿ ಹೊರಡೋಕೆ ಅಥವಾ ಯುದ್ಧಕ್ಕಾಗಿ ಸೈನ್ಯ ಸೇರಿಸೋಕೆ ಎರಡು ಬೆಳ್ಳಿ ತುತ್ತೂರಿಗಳನ್ನ ಮಾಡ್ಕೊಳ್ಳೋ ಹಾಗೆ ಯೆಹೋವ ದೇವರು ನಿರ್ದೇಶನಗಳನ್ನ ಕೊಟ್ಟನು. ಇವು ಉದ್ದಕ್ಕೆ ಇರ್ತಿದ್ವು. ನಿಜವಾದ ಪ್ರಾಣಿಯ ಕೊಂಬುಗಳಿಂದ ಮಾಡಿದ ತುತ್ತೂರಿಗಳ ಹಾಗೆ ಡೊಂಕಾಗಿ ಇರದೆ ನೆಟ್ಟಗೆ ಇರ್ತಿದ್ವು. ದೇವಾಲಯದಲ್ಲಿ ಬಳಸ್ತಿದ್ದ ಸಂಗೀತದ ಉಪಕರಣಗಳಲ್ಲಿ ತುತ್ತೂರಿಗಳೂ ಇರ್ತಿದ್ವು. ಆದ್ರೆ ಇವುಗಳ ಆಕಾರ ಹೇಗಿತ್ತು ಅಂತ ಗೊತ್ತಿಲ್ಲ. ಸಾಮಾನ್ಯವಾಗಿ ಯೆಹೋವನ ತೀರ್ಪುಗಳನ್ನ ಅಥವಾ ದೇವರು ಮಾಡೋ ಪ್ರಾಮುಖ್ಯ ಘಟನೆಗಳ ಬಗ್ಗೆ ಹೇಳುವಾಗ ಅಲಂಕಾರಿಕವಾಗಿ ತುತ್ತೂರಿಯ ಶಬ್ದಗಳಿಗೆ ಹೋಲಿಸಲಾಗಿದೆ.—2ಪೂರ್ವ 29:26; ಎಜ್ರ 3:10; 1ಕೊರಿಂ 15:52; ಪ್ರಕ 8:7–11:15.
ದ
-
ದಂಟು.
ಅಥವಾ ಕೋಲು. ಒದ್ದೆ ಇರೋ ಜಾಗದಲ್ಲಿ ಬೆಳಿಯೋ ಬೇರೆಬೇರೆ ಸಸ್ಯಗಳನ್ನ ಸೂಚಿಸೋಕೆ ಈ ಪದವನ್ನ ಬಳಸಲಾಗಿದೆ. ಹೆಚ್ಚಿನ ಸನ್ನಿವೇಶಗಳಲ್ಲಿ, ಇದು ಅರುಂಡೋ ಡೋನಾಕ್ಸ್ ಅನ್ನೋ ಸಸ್ಯವನ್ನ ಸೂಚಿಸುತ್ತೆ. (ಯೋಬ 8:11; ಯೆಶಾ 42:3; ಮತ್ತಾ 27:29; ಪ್ರಕ 11:1) ಈ ದಂಟಿನ ಕೋಲುಗಳನ್ನ ಅಳತೆ ಕೋಲುಗಳಾಗಿ ಬಳಸ್ತಿದ್ರು.—ಅಳತೆ ಕೋಲು ನೋಡಿ.
-
ದರ್ಶನ.
ಕೆಲವ್ರಿಗೆ ದೇವರು ಅದ್ಭುತವಾಗಿ ತೋರಿಸೋ ದೃಶ್ಯ. ಆ ವ್ಯಕ್ತಿಗಳನ್ನ ಹಗಲಲ್ಲಿ ಅಥವಾ ರಾತ್ರಿಯಲ್ಲಿ ಮೈಮರೆಯೋ ತರ, ಕನಸು ಕಾಣೋ ತರ ಮಾಡಿ ದೇವರು ಆ ದೃಶ್ಯಗಳನ್ನ ತೋರಿಸ್ತಿದ್ದನು.—ಆದಿ 46:2; ದಾನಿ 8:2; ಅಕಾ 10:3; 11:5; 16:9.
-
ದಾಗೋನ್.
ಫಿಲಿಷ್ಟಿಯರ ದೇವರು. ಈ ಹೆಸ್ರು ಹೇಗೆ ಬಂತು ಅಂತ ಗೊತ್ತಿಲ್ಲ. ಆದ್ರೆ ದಾಗ್ (ಮೀನು) ಅನ್ನೋ ಹೀಬ್ರು ಪದಕ್ಕೆ ಸಂಬಂಧಪಟ್ಟಿದೆ ಅಂತ ಕೆಲವು ಪಂಡಿತರು ಹೇಳ್ತಾರೆ.—ನ್ಯಾಯ 16:23; 1ಸಮು 5:4.
-
ದಾನಧರ್ಮ.
ಕಷ್ಟದಲ್ಲಿ ಇರುವವ್ರಿಗೆ ಮಾಡೋ ಸಹಾಯ. ಹೀಬ್ರು ಪವಿತ್ರ ಗ್ರಂಥದಲ್ಲಿ ಇದ್ರ ಬಗ್ಗೆ ಮತ್ತಾ 6:2.
ನೇರವಾಗಿ ಹೇಳಿಲ್ಲ. ಆದ್ರೆ ಇಸ್ರಾಯೇಲ್ಯರಿಗೆ ಕೊಟ್ಟಿದ್ದ ನಿಯಮ ಪುಸ್ತಕದಲ್ಲಿ ಬಡವ್ರಿಗೆ ಹೇಗೆಲ್ಲ ಸಹಾಯ ಮಾಡಬೇಕಂತ ಸ್ಪಷ್ಟವಾದ ನಿರ್ದೇಶನಗಳು ಇತ್ತು.— -
ದಾವೀದನ ಮಗ.
ಈ ನುಡಿಗಟ್ಟು ಯೇಸುವನ್ನ ಸೂಚಿಸೋಕೆ ಬಳಸಲಾಗಿದೆ. ದಾವೀದನ ವಂಶದಲ್ಲಿ ಬಂದು ನೆರವೇರಿಸಬೇಕಾದ ಆಳ್ವಿಕೆಯ ಒಪ್ಪಂದಕ್ಕೆ ಯೇಸುನೇ ವಾರಸುದಾರ ಅಂತ ಒತ್ತಿ ಹೇಳೋಕೆ ಈ ಪದ ಬಳಸಲಾಗಿದೆ.—ಮತ್ತಾ 12:23; 21:9.
-
ದಾವೀದಪಟ್ಟಣ.
ಯೆಬೂಸಿ ಪಟ್ಟಣವನ್ನ ದಾವೀದ ವಶ ಮಾಡ್ಕೊಂಡು ಅಲ್ಲಿ ಅರಮನೆ ಕಟ್ಕೊಂಡ. ಆಮೇಲೆ ಅದಕ್ಕೆ ಈ ಹೆಸ್ರು ಇಟ್ಟ. ಈ ಪಟ್ಟಣದ ಇನ್ನೊಂದು ಹೆಸ್ರು ಚೀಯೋನ್. ಇದು ಯೆರೂಸಲೇಮಿನ ದಕ್ಷಿಣಪೂರ್ವ ದಿಕ್ಕಲ್ಲಿದೆ, ತುಂಬ ಹಳೇ ಪಟ್ಟಣ.—2ಸಮು 5:7; 1ಪೂರ್ವ 11:4, 5.
-
ದಿನಾರು.
ಸುಮಾರು 3.85 ಗ್ರಾಂ ತೂಕ ಇರೋ ರೋಮನ್ ಬೆಳ್ಳಿ ನಾಣ್ಯ. ಈ ನಾಣ್ಯದ ಒಂದು ಮುಖದಲ್ಲಿ ರೋಮಿನ ರಾಜನ ಚಿತ್ರ ಇತ್ತು. ಇದು ಕೂಲಿಗಾರನ ಒಂದು ದಿನದ ಕೂಲಿ. ಇದೇ ನಾಣ್ಯವನ್ನ ರೋಮನ್ನರು ಯೆಹೂದ್ಯರಿಂದ ತೆರಿಗೆ ಅಂತ ಕಿತ್ಕೊಳ್ತಿದ್ರು. (ಮತ್ತಾ 22:17; ಲೂಕ 20:24) —ಪರಿಶಿಷ್ಟ ಬಿ14.
-
ದಿವ್ಯದೃಷ್ಟಿ ಇರೋನು.
ದೇವರ ಇಷ್ಟವನ್ನ ತಿಳ್ಕೊಳ್ಳೋ ಸಾಮರ್ಥ್ಯವನ್ನ ದೇವರಿಂದ ಪಡ್ಕೊಂಡ ವ್ಯಕ್ತಿ. ಇವನು ಸಾಮಾನ್ಯವಾಗಿ ಮನುಷ್ಯರು ನೋಡೋಕೆ ಆಗದ ವಿಷ್ಯಗಳನ್ನ ನೋಡ್ತಿದ್ದನು, ಅರ್ಥ ಮಾಡ್ಕೊಳ್ಳೋಕೆ ಆಗದ ವಿಷ್ಯಗಳನ್ನ ಅರ್ಥ ಮಾಡ್ಕೊಳ್ತಿದ್ದನು. ಇದಕ್ಕೆ ಸಂಬಂಧಪಟ್ಟ ಹೀಬ್ರು ಪದ ಅಕ್ಷರಾರ್ಥಕವಾಗಿ ಅಥವಾ ಸಾಂಕೇತಿಕವಾಗಿ “ನೋಡು” ಅನ್ನೋ ಮೂಲಪದದಿಂದ ಬಂದಿದೆ. ಸಾಮಾನ್ಯವಾಗಿ ಸಮಸ್ಯೆಗಳು ಬಂದಾಗ ಬುದ್ಧಿಮಾತಿಗಾಗಿ ದಿವ್ಯದೃಷ್ಟಿ ಇರೋ ವ್ಯಕ್ತಿ ಹತ್ರ ಹೋಗ್ತಿದ್ರು.—1ಸಮು 9:9.
-
ದೀಕ್ಷಾಸ್ನಾನ; ದೀಕ್ಷಾಸ್ನಾನ ಮಾಡಿಸೋದು.
ದೀಕ್ಷಾಸ್ನಾನ ಮಾಡಿಸೋದು ಅಂದ್ರೆ “ಮುಳುಗಿಸು” ಅಥವಾ ನೀರಲ್ಲಿ ಮುಳುಗಿಸಿ ತೆಗಿ. ತನ್ನ ಶಿಷ್ಯರು ದೀಕ್ಷಾಸ್ನಾನ ಮಾಡಿಸ್ಕೊಳ್ಳಲೇಬೇಕು ಅಂತ ಯೇಸು ಹೇಳಿದನು. ಯೋಹಾನ ಮಾಡಿಸ್ತಿದ್ದ ದೀಕ್ಷಾಸ್ನಾನ, ಪವಿತ್ರಶಕ್ತಿಯಿಂದ ದೀಕ್ಷಾಸ್ನಾನ, ಬೆಂಕಿಯಿಂದ ದೀಕ್ಷಾಸ್ನಾನದ ಬಗ್ಗೆನೂ ವಚನಗಳು ತಿಳಿಸುತ್ತೆ.—ಮತ್ತಾ 3:11, 16; 28:19; ಯೋಹಾ 3:23; 1ಪೇತ್ರ 3:21.
-
ದೀಪಶಾಮಕ.
ಪವಿತ್ರ ಡೇರೆಯಲ್ಲಿ, ದೇವಾಲಯದಲ್ಲಿ ಉಪಯೋಗಿಸ್ತಿದ್ದ ಚಿನ್ನ ಅಥವಾ ತಾಮ್ರದ ಸಾಧನ. ಇದು ನೋಡೋಕೆ ಕತ್ತರಿ ತರ ಇರ್ತಿತ್ತು. ಇದ್ರಿಂದ ಬತ್ತಿಗಳನ್ನ ಆರಿಸ್ತಿದ್ರು.—2ಅರ 25:14.
-
ದೆಕಪೊಲಿ.
ಗ್ರೀಕ್ ಪಟ್ಟಣಗಳ ಒಂದು ಗುಂಪು. ಮೊದ್ಲು 10 ಪಟ್ಟಣಗಳು ಇದ್ವು (ಈ ಪದ ದೆಕ ಮತ್ತು ಪೊಲಿ ಅನ್ನೋ ಗ್ರೀಕ್ ಪದದಿಂದ ಬಂದಿದೆ. ಇದ್ರರ್ಥ “ಹತ್ತು” ಮತ್ತು “ಪಟ್ಟಣ.”) ಗಲಿಲಾಯ ಸಮುದ್ರ ಮತ್ತು ಯೋರ್ದನ್ ನದಿಯ ಪೂರ್ವಕ್ಕಿರೋ ಪ್ರದೇಶಕ್ಕೂ ಇದೇ ಹೆಸ್ರಿದೆ. ಅಲ್ಲೇ ಈ ಹೆಚ್ಚಿನ ಪಟ್ಟಣಗಳು ಇರೋದು. ಇದು ಗ್ರೀಕ್ ಸಂಸ್ಕೃತಿಯ ಮತ್ತು ವ್ಯಾಪಾರದ ಕೇಂದ್ರ ಆಗಿತ್ತು. ಯೇಸು ಈ ಪ್ರದೇಶವನ್ನ ದಾಟಿ ಹೋಗಿದ್ರೂ ಈ ಪಟ್ಟಣಗಳಿಗೆ ಹೋಗಿದ್ದಾನೆ ಅನ್ನೋಕೆ ಯಾವ ಆಧಾರನೂ ಇಲ್ಲ. (ಮತ್ತಾ 4:25; ಮಾರ್ಕ 5:20)—ಪರಿಶಿಷ್ಟ ಎ7 ಮತ್ತು ಬಿ10 ನೋಡಿ.
-
ದೇವದರ್ಶನ ಡೇರೆ.
ಮೋಶೆಯ ಡೇರೆಗೂ ಕಾಡಲ್ಲಿ ಮಾಡಿದ ಪವಿತ್ರ ಡೇರೆಗೂ ಇದ್ದ ಹೆಸರು.—ವಿಮೋ 33:7; 39:32.
-
ದೇವದೂತರು.
ಹೀಬ್ರು ಪದ ಮಲಕ್. ಗ್ರೀಕ್ ಪದ ಎಗಿಲೋಸ್. ಈ ಎರಡು ಪದದ ಅರ್ಥ ಸುದ್ದಿ “ಮುಟ್ಟಿಸುವವನು.” ಸ್ವರ್ಗದಲ್ಲಿರೋ ದೂತರನ್ನ ದೇವದೂತರು ಅಂತ ಹೇಳಲಾಗಿದೆ. (ಆದಿ 16:7; 32:3; ಯಾಕೋ 2:25; ಪ್ರಕ 22:8) ದೇವದೂತರು ತುಂಬ ಬಲಿಷ್ಠರು. ಅವರು ಕಣ್ಣಿಗೆ ಕಾಣಲ್ಲ. ಮನುಷ್ಯರನ್ನ ಸೃಷ್ಟಿ ಮಾಡೋದಕ್ಕೆ ಎಷ್ಟೋ ಮುಂಚೆ ದೇವರು ಅವ್ರನ್ನ ಸೃಷ್ಟಿಸಿದನು. ಬೈಬಲಲ್ಲಿ ಅವ್ರಿಗೆ “ಪವಿತ್ರ ದೇವದೂತರು” “ದೇವರ ಪುತ್ರರು” “ಮುಂಜಾನೆಯ ನಕ್ಷತ್ರಗಳು” ಅನ್ನೋ ಹೆಸ್ರಿದೆ. (ಧರ್ಮೋ 33:2; ಯೋಬ 1:6; 38:7) ಮಕ್ಕಳನ್ನ ಪಡೆದು ಅವ್ರ ಸಂಖ್ಯೆ ಹೆಚ್ಚಿಸೋ ಹಾಗೆ ಅವ್ರನ್ನ ಸೃಷ್ಟಿ ಮಾಡಿಲ್ಲ. ಒಂದೊಂದು ದೇವದೂತರನ್ನೂ ದೇವರು ಸೃಷ್ಟಿ ಮಾಡಿದನು. ಅವರು ಕೋಟಿಗಟ್ಟಲೆ ಇದ್ದಾರೆ. (ದಾನಿ 7:10) ಅವ್ರಲ್ಲಿ ಒಬ್ಬೊಬ್ರಿಗೂ ಒಂದೊಂದು ಹೆಸ್ರಿದೆ, ಬೇರೆಬೇರೆ ವ್ಯಕ್ತಿತ್ವ ಇದೆ ಅಂತ ಬೈಬಲ್ ಹೇಳುತ್ತೆ. ಆದ್ರೂ ಅವರು ದೀನರು. ಹಾಗಾಗಿ ಮನುಷ್ಯರಿಂದ ಆರಾಧನೆ ಪಡಿಯೋಕೆ ನಿರಾಕರಿಸಿದ್ರು. ಹೆಚ್ಚಿನವರು ತಮ್ಮ ಹೆಸ್ರನ್ನ ಸಹ ಹೇಳಲಿಲ್ಲ. (ಆದಿ 32:29; ಲೂಕ 1:26; ಪ್ರಕ 22:8, 9) ಅವ್ರಿಗೆ ಬೇರೆಬೇರೆ ಸ್ಥಾನ ಬೇರೆಬೇರೆ ಜವಾಬ್ದಾರಿ ಇದೆ. ಉದಾಹರಣೆಗೆ ಯೆಹೋವನ ಸಿಂಹಾಸನದ ಮುಂದೆ ಸೇವೆ ಮಾಡೋದು, ಸುದ್ದಿ ಮುಟ್ಟಿಸೋದು, ದೇವರ ತೀರ್ಪುಗಳನ್ನ ಕೊಡೋದು, ಸಿಹಿಸುದ್ದಿ ಸಾರೋಕೆ ಬೆಂಬಲ ಕೊಡೋದು. (2ಅರ 19:35; ಕೀರ್ತ 34:7; ಲೂಕ 1:30; ಪ್ರಕ 5:11; 14:6) ಮುಂದೆ ಹರ್ಮಗೆದೋನ್ ಯುದ್ಧದಲ್ಲಿ ಇವರು ಯೇಸುಗೆ ಸಹಾಯ ಮಾಡ್ತಾರೆ.—ಪ್ರಕ 19:14, 15.
-
ದೇವರ ಆಳ್ವಿಕೆ.
ಮುಖ್ಯವಾಗಿ ಈ ಪದವನ್ನ ಯೆಹೋವನಿಗೆ ಮಾತ್ರ ಆಳೋ ಹಕ್ಕಿದೆ ಅನ್ನೋದನ್ನ ಪ್ರತಿನಿಧಿಸೋ ದೇವರ ಮಗನಾದ ಯೇಸು ಕ್ರಿಸ್ತನ ಸರ್ಕಾರದ ಬಗ್ಗೆ ಹೇಳೋವಾಗ ಉಪಯೋಗಿಸಲಾಗಿದೆ.—ಮತ್ತಾ 12:28; ಲೂಕ 4:43; 1ಕೊರಿಂ 15:50.
-
ದೇವರ ಮಾರ್ಗ.
ಯೆಹೋವ ಇಷ್ಟ ಪಡೋ ಅಥವಾ ಇಷ್ಟಪಡದ ನಡತೆಯನ್ನ ಸೂಚಿಸೋಕೆ ಈ ಪದವನ್ನ ಸಾಂಕೇತಿಕವಾಗಿ ಪವಿತ್ರ ಗ್ರಂಥದಲ್ಲಿ ಬಳಸಲಾಗಿದೆ. ಯೇಸುವಿನ ಹಿಂಬಾಲಕರಾಗಿ ಬದಲಾದವ್ರನ್ನ ‘ದೇವರ ಮಾರ್ಗಕ್ಕೆ’ ಸೇರಿದವರು ಅಂತ ಕರೆಯಲಾಗುತ್ತೆ. ಅಂದ್ರೆ ಅವರು ಯೇಸು ಕ್ರಿಸ್ತನ ಜೀವದ ದಾರಿ ಮೇಲೆ ನಂಬಿಕೆ ಇಡ್ತಾರೆ ಮತ್ತು ಆತನ ಮಾದರಿಯನ್ನ ಅನುಕರಿಸ್ತಾರೆ.—ಅಕಾ 19:9.
-
ದೇವರ ವಿರುದ್ಧ ದಂಗೆ.
ಗ್ರೀಕ್‌ನಲ್ಲಿ ಅಪೊಸ್ಟೇಸಿಯ. ಇದೊಂದು ಕ್ರಿಯಾಪದ. ಅರ್ಥ “ದೂರ ನಿಲ್ಲೋದು.” ಇದ್ರ ನಾಮಪದಕ್ಕೆ “ಬಿಟ್ಟುಬಿಡು, ತ್ಯಜಿಸು, ದಂಗೆ” ಅನ್ನೋ ಅರ್ಥ ಇದೆ. ಕ್ರೈಸ್ತ ಗ್ರೀಕ್ ಗ್ರಂಥದಲ್ಲಿ ಮುಖ್ಯವಾಗಿ ಈ ಪದವನ್ನ ಸತ್ಯಾರಾಧನೆ ಬಿಟ್ಟುಹೋಗೋ ಜನ್ರಿಗೆ ಬಳಸಲಾಗಿದೆ.—ಜ್ಞಾನೋ 11:9; ಅಕಾ 21:21; 2ಥೆಸ 2:3.
-
ದೇವರಿಗೆ ತೋರಿಸೋ ಭಕ್ತಿ.
ಯೆಹೋವ ದೇವರಿಗೆ ತೋರಿಸೋ ಆಳವಾದ ಗೌರವ, ಆರಾಧನೆ, ಸೇವೆ. ಜೊತೆಗೆ ಆತನೇ ಒಡೆಯ ಅಂತ ಒಪ್ಕೊಂಡು ನಿಷ್ಠೆ ತೋರಿಸೋದು ಇದರರ್ಥ.—1ತಿಮೊ 4:8; 2ತಿಮೊ 3:12.
-
ದೇಶಾಧಿಪತಿ.
ಬಾಬೆಲ್, ಪರ್ಶಿಯ ಸಾಮ್ರಾಜ್ಯಗಳಲ್ಲಿ ಒಂದು ಸಂಸ್ಥಾನಕ್ಕೆ ಅಧಿಪತಿ. ರಾಜ ಇವನನ್ನ ಮುಖ್ಯ ಅಧಿಪತಿಯಾಗಿ ನೇಮಿಸ್ತಿದ್ದನು.—ಎಜ್ರ 8:36; ದಾನಿ 6:1.
-
ದೋಷಪರಿಹಾರಕ ಬಲಿ.
ತಮ್ಮ ಪಾಪಗಳಿಗೋಸ್ಕರ ಜನ್ರು ಈ ಬಲಿ ಕೊಡ್ತಿದ್ರು. ಬೇರೆ ಬಲಿಗಳಿಗೂ ಈ ಬಲಿಗೂ ಸ್ವಲ್ಪ ವ್ಯತ್ಯಾಸ ಇದೆ. ಪಶ್ಚಾತ್ತಾಪಪಟ್ಟ ವ್ಯಕ್ತಿ ಪಾಪ ಮಾಡಿರೋದ್ರಿಂದ ಕಳ್ಕೊಂಡಿರೋ ಕೆಲವು ಒಪ್ಪಂದದ ಹಕ್ಕುಗಳನ್ನ ವಾಪಸ್ ಪಡಿಯೋಕೆ ಶಿಕ್ಷೆ ಸಿಗದೇ ಇರೋಕೆ ಈ ಬಲಿ ಅರ್ಪಿಸ್ತಿದ್ರು.—ಯಾಜ 7:37; 19:22; ಯೆಶಾ 53:10.
-
ದ್ರಾಕ್ಮಾ.
ಕ್ರೈಸ್ತ ಗ್ರೀಕ್ ಪವಿತ್ರ ಗ್ರಂಥದಲ್ಲಿ ಒಂದು ಗ್ರೀಕ್ ಬೆಳ್ಳಿ ನಾಣ್ಯವನ್ನ ಸೂಚಿಸುತ್ತೆ. ಆ ಕಾಲದಲ್ಲಿ ಅದ್ರ ತೂಕ 3.4 ಗ್ರಾಂ ಇತ್ತು. ಹೀಬ್ರು ಪವಿತ್ರ ಗ್ರಂಥದಲ್ಲಿ ಪರ್ಶಿಯನ್ನರ ಕಾಲದಲ್ಲಿ ಡೇರಿಕ್‌ಗೆ ಸಮ ಆಗಿರೋ ಚಿನ್ನದ ದ್ರಾಕ್ಮಾದ ಬಗ್ಗೆ ಮಾಹಿತಿ ಇದೆ. (ನೆಹೆ 7:70; ಮತ್ತಾ 17:24)—ಪರಿಶಿಷ್ಟ ಬಿ14.
-
ದ್ರಾಕ್ಷಿತೊಟ್ಟಿ.
ಸಾಮಾನ್ಯವಾಗಿ ಸುಣ್ಣದ ಕಲ್ಲಿನಲ್ಲಿ ಎರಡು ಗುಂಡಿಗಳನ್ನ (ತೊಟ್ಟಿಗಳನ್ನ) ತೋಡಿ ಅವುಗಳ ಮಧ್ಯ ಚಿಕ್ಕ ದಾರಿ ಮಾಡ್ತಿದ್ರು. ಆ ಗುಂಡಿಗಳಲ್ಲಿ ಒಂದು ಇನ್ನೊಂದಕ್ಕಿಂತ ಸ್ವಲ್ಪ ಎತ್ತರದಲ್ಲಿ ಇರ್ತಿತ್ತು. ಎತ್ತರದಲ್ಲಿರೋ ಗುಂಡಿಯಲ್ಲಿ ದ್ರಾಕ್ಷಿಯನ್ನ ತುಳಿದಾಗ ಆ ರಸ ಕೆಳಗಿದ್ದ ಗುಂಡಿಗೆ ಹೋಗ್ತಿತ್ತು. ಈ ಪದವನ್ನ ದೇವರ ತೀರ್ಪನ್ನ ಸೂಚಿಸೋಕೆ ಸಹ ಬಳಸಲಾಗಿದೆ.—ಯೆಶಾ 5:2; ಪ್ರಕ 19:15.
-
ಧೂಪ.
ಮೆಲ್ಲನೆ ಉರಿದು ಸುವಾಸನೆ ಬೀರೋ ಸುಗಂಧ ಅಂಟಿನ ಮತ್ತು ಸುಗಂಧ ತೈಲದ ಮಿಶ್ರಣ. 4 ಸಾಮಗ್ರಿಗಳು ಇರೋ ವಿಶೇಷವಾದ ಧೂಪವನ್ನ ದೇವಾಲಯದಲ್ಲಿ, ಪವಿತ್ರ ಡೇರೆಯಲ್ಲಿ ಉಪಯೋಗಿಸ್ತಿದ್ರು. ಪವಿತ್ರ ಸ್ಥಳದ ಧೂಪವೇದಿ ಮೇಲೆ ಇದನ್ನ ಬೆಳಿಗ್ಗೆ ಮತ್ತು ರಾತ್ರಿ ಸುಡ್ತಿದ್ರು. ಅತಿ ಪವಿತ್ರ ಸ್ಥಳದಲ್ಲಿ ಇದನ್ನ ಪ್ರಾಯಶ್ಚಿತ್ತ ದಿನದಂದು ಸುಡ್ತಿದ್ರು. ದೇವರು ಕೇಳೋ ನಂಬಿಗಸ್ತ ಸೇವಕರ ಪ್ರಾರ್ಥನೆಯನ್ನ ಇದು ಸೂಚಿಸುತ್ತೆ. ಆದ್ರೆ ಕ್ರೈಸ್ತರು ಇದನ್ನ ಉಪಯೋಗಿಸಬೇಕಾಗಿಲ್ಲ.—ವಿಮೋ 30:34, 35; ಯಾಜ 16:13; ಪ್ರಕ 5:8.
ನ
-
ನಜರೇತಿನವನು.
ಯೇಸು ನಜರೇತಿಂದ ಬಂದಿದ್ರಿಂದ ಆತನಿಗೆ ಈ ಹೆಸ್ರು ಬಂತು. ಯೆಶಾಯ 11:1ರಲ್ಲಿ ಬಳಸಿರೋ ‘ಚಿಗುರು’ ಅನ್ನೋ ಹೀಬ್ರು ಪದಕ್ಕೂ ನಜರೇತಿಗೂ ಸಂಬಂಧ ಇರಬೇಕು. ಕೆಲವು ವರ್ಷಗಳ ನಂತ್ರ ಇದೇ ಪದವನ್ನ ಯೇಸುವಿನ ಶಿಷ್ಯರಿಗೆ ಸೂಚಿಸಿ ಮಾತಾಡ್ತಿದ್ರು.—ಮತ್ತಾ 2:23; ಅಕಾ 24:5.
-
ನಸುಕಿನ ನಕ್ಷತ್ರ.
ಇದ್ರ ಮತ್ತು ಬೆಳಗಿನ ನಕ್ಷತ್ರ ಎರಡ್ರ ಅರ್ಥಾನೂ ಒಂದೇ. ಸೂರ್ಯ ಹುಟ್ಟೋ ಮುಂಚೆ ಕಾಣೋ ನಕ್ಷತ್ರ ಇದು. ಇದನ್ನ ನೋಡಿ ಜನ ಹೊಸ ದಿನ ಶುರುವಾಗ್ತಿದೆ ಅಂತ ಅರ್ಥ ಮಾಡ್ಕೊಳ್ತಿದ್ರು.—ಪ್ರಕ 22:16; 2ಪೇತ್ರ 1:19.
-
ನಾಚಿಕೆಗೆಟ್ಟ ನಡತೆ.
ಇದೇನೂ ಸಣ್ಣಪುಟ್ಟ ತಪ್ಪು ನಡವಳಿಕೆ ಅಲ್ಲ. ಇದಕ್ಕಿರೋ ಗ್ರೀಕ್ ಪದ ಅಸಲ್‌ಗೆಯ. ಈ ಪದ, ದೇವರ ನಿಯಮಗಳ ವಿರುದ್ಧ ಮಾಡೋ ಕೃತ್ಯಗಳಿಗೆ, ನಾಚಿಕೆ ಇಲ್ದೆ ಅಥವಾ ಸೊಕ್ಕಿಂದ ಗಲಾ 5:19; 2ಪೇತ್ರ 2:7.
ಭಂಡಧೈರ್ಯದಿಂದ ನಡ್ಕೊಳ್ಳೋದಕ್ಕೆ ಸೂಚಿಸುತ್ತೆ. ಅಧಿಕಾರಕ್ಕೆ, ನಿಯಮಗಳಿಗೆ ಅಗೌರವ ತೋರಿಸೋ ತಿರಸ್ಕಾರ ತೋರಿಸೋ ಮನೋಭಾವವನ್ನ ಸೂಚಿಸುತ್ತೆ.— -
ನಾಜೀರ.
ಈ ಪದಕ್ಕೆ ಹೀಬ್ರುನಲ್ಲಿ “ಒಂಟಿ,” “ಅದಕ್ಕಂತಾನೇ ಇರೋನು” ಮತ್ತು “ಮೀಸಲು” ಅನ್ನೋ ಅರ್ಥ ಇದೆ. ನಾಜೀರರಲ್ಲಿ ಎರಡು ರೀತಿ: ಒಂದು ಅವ್ರೇ ಆದವರು, ಇನ್ನೊಂದು ದೇವರೇ ಮಾಡಿದವರು. ಒಂದು ಸಮಯದ ತನಕ ನಾಜೀರರಾಗಿ ಇರೋಕೆ ಒಬ್ಬ ಪುರುಷ ಅಥವಾ ಸ್ತ್ರೀ ಯೆಹೋವನಿಗೆ ವಿಶೇಷ ಹರಕೆ ಮಾಡ್ಕೊಬಹುದಿತ್ತು. ಯಾರು ತಾವಾಗಿಯೇ ಈ ಹರಕೆ ಮಾಡ್ಕೊಳ್ತಿದ್ರೋ ಅವ್ರಿಗೆ ಮೂರು ಶರತ್ತು ಇತ್ತು. ಅವರು ದ್ರಾಕ್ಷಾಮದ್ಯ ಅಥವಾ ಬೇರೆ ಮದ್ಯ ಕುಡಿಬಾರದಿತ್ತು. ಕೂದಲು ಕತ್ತರಿಸಬಾರದಿತ್ತು ಮತ್ತು ಶವವನ್ನ ಮುಟ್ಟಬಾರದಿತ್ತು. ದೇವರು ನೇಮಿಸಿದ ನಾಜೀರರು ಜೀವನಪರ್ಯಂತ ಹಾಗೇ ಇರಬೇಕಿತ್ತು ಮತ್ತು ಯೆಹೋವನೇ ಅವ್ರಿಗೆ ಏನು ಮಾಡಬೇಕು ಅಂತ ಹೇಳ್ತಿದ್ದನು.—ಅರ 6:2-7; ನ್ಯಾಯ 13:5.
-
ನಾಣ್ಣುಡಿ.
ಕೆಲವೇ ಮಾತುಗಳಲ್ಲಿ ಒಂದು ಪಾಠವನ್ನ ಕಲಿಸೋ ಅಥವಾ ಗಹನವಾದ ಸತ್ಯವನ್ನ ತಿಳಿಸೋ ಬುದ್ಧಿಮಾತು ಇಲ್ಲಾ ಚಿಕ್ಕ ಕಥೆನೇ ನಾಣ್ಣುಡಿ. ಕೆಲವೊಮ್ಮೆ ಬೈಬಲ್ ನಾಣ್ಣುಡಿಗಳು ಚಿಕ್ಕ ಚಿಕ್ಕ ಪ್ರಶ್ನೆಗಳ ರೂಪದಲ್ಲಿ, ಗಾದೆಗಳ ರೂಪದಲ್ಲಿ, ಉದಾಹರಣೆಗಳ ರೂಪದಲ್ಲಿ ಇರಬಹುದು. ನಾಣ್ಣುಡಿ ಒಂದು ಸತ್ಯವನ್ನ ವರ್ಣಿಸೋ ಶೈಲಿಯಲ್ಲಿ ವಿವರಿಸುತ್ತೆ. ಸಾಮಾನ್ಯವಾಗಿ ಅದು ಅಲಂಕಾರಿಕ ಭಾಷೆಯಲ್ಲಿ ಇರುತ್ತೆ. ಕೆಲವರನ್ನ ಅಪಹಾಸ್ಯ ಮಾಡೋಕೆ ಅಥವಾ ಅವರ ತಪ್ಪನ್ನ ಎತ್ತಿ ಹೇಳೋಕೆ ಜ್ಞಾನೋಕ್ತಿಗಳನ್ನ ಬಳಸಲಾಗಿದೆ.—ಪ್ರಸಂ 12:9; 2ಪೇತ್ರ 2:22.
-
ನಾಲೆ.
ಕಣಿವೆ ಅಥವಾ ನೀರು ಹೋಗೋ ಕಾಲುವೆ. ಮಳೆಗಾಲ ಬಿಟ್ಟು ಬೇರೆ ದಿನಗಳಲ್ಲಿ ಇದು ಒಣಗಿ ಹೋಗ್ತಿತ್ತು. ಈ ಪದನ ನೀರಿನ ಪ್ರವಾಹಕ್ಕೂ ಸೂಚಿಸೋಕೆ ಬಳಸಲಾಗಿದೆ. ಕೆಲವು ನೀರಿನ ಪ್ರವಾಹಗಳು ಬುಗ್ಗೆಗಳಿಂದ ಬರ್ತಿದ್ವು. ಹಾಗಾಗಿ ಯಾವಾಗ್ಲೂ ಹರಿತಾನೇ ಇರ್ತಿದ್ವು. ಇದನ್ನ ಕೆಲವೊಂದು ಕಡೆ ಕಣಿವೆ ಅಂತಾನೂ ಅನುವಾದಿಸಿದ್ದಾರೆ.—ಆದಿ 26:19; ಅರ 34:5; ಧರ್ಮೋ 8:7; 1ಅರ 18:5; ಯೋಬ 6:15.
-
ನಿಯಮ ಪುಸ್ತಕ.
ಮುಖ್ಯವಾಗಿ ಇದು ಕ್ರಿ.ಪೂ. 1513ರಲ್ಲಿ ಸಿನಾಯಿ ಕಾಡಲ್ಲಿ ಯೆಹೋವ ದೇವರು ಮೋಶೆ ಮೂಲಕ ಇಸ್ರಾಯೇಲ್ಯರಿಗೆ ಕೊಟ್ಟ ನಿಯಮಗಳನ್ನ ಸೂಚಿಸುತ್ತೆ. ಹೆಚ್ಚಾಗಿ ಬೈಬಲಿನ ಮೊದಲ್ನೇ ಐದು ಪುಸ್ತಕಗಳನ್ನ ನಿಯಮ ಅಂತ ಹೇಳಲಾಗಿದೆ. ಇನ್ನು ಕೆಲವೊಮ್ಮೆ ಮೋಶೆಯ ನಿಯಮದಲ್ಲಿರೋ ಯಾವುದಾದ್ರೂ ಒಂದು ನಿಯಮವನ್ನ ಅಥವಾ ಅದ್ರ ಹಿಂದಿರೋ ತತ್ವವನ್ನೂ ಸೂಚಿಸಬಹುದು.—ಅರ 15:16; ಧರ್ಮೋ 4:8; ಮತ್ತಾ 7:12; ಗಲಾ 3:24.
-
ನಿರ್ದೇಶಕ.
ಕೀರ್ತನೆಗಳಲ್ಲಿ ಹೇಳಿರೋ ಪ್ರಕಾರ, ಇದ್ರ ಹೀಬ್ರು ಪದ ಹಾಡುಗಳನ್ನ ಸಂಘಟಿಸೋ, ಹಾಡುಗಾರರಿಗೆ ಹೇಗೆ ಹಾಡಬೇಕಂತ ಹೇಳಿಕೊಡೋ, ಲೇವಿಯ ಹಾಡುಗಾರರಿಗೆ ತರಬೇತಿ ಕೊಟ್ಟು ಪ್ರಾಕ್ಟಿಸ್ ಮಾಡಿಸ್ತಿದ್ದ, ಮುಖ್ಯವಾದ ಸಂದರ್ಭಗಳಲ್ಲಿ ಸಂಗೀತಕ್ಕೆ ನಾಯಕತ್ವ ವಹಿಸ್ತಿದ್ದ ವ್ಯಕ್ತಿಯನ್ನ ಸೂಚಿಸ್ತಾ ಇರಬೇಕು. ಬೇರೆ ಬೈಬಲ್ ಭಾಷಾಂತರಗಳಲ್ಲಿ ಈ ಪದವನ್ನ ಮುಖ್ಯ ಸಂಗೀತಗಾರ ಅಥವಾ ಸಂಗೀತ ನಿರ್ದೇಶಕ ಅಂತ ಹಾಕಲಾಗಿದೆ.—ಕೀರ್ತ 4:ಶೀರ್ಷಿಕೆ; 5:ಶೀರ್ಷಿಕೆ
-
ನೀತಿ.
ಪವಿತ್ರ ಗ್ರಂಥದಲ್ಲಿ, ದೇವರ ದೃಷ್ಟಿಯಲ್ಲಿ ಯಾವುದು ಸರಿ, ಯಾವುದು ತಪ್ಪು ಅಂತ ನಿರ್ಧರಿಸೋ ವಿಷ್ಯನೇ ನೀತಿ.—ಆದಿ 15:6; ಧರ್ಮೋ 6:25; ಜ್ಞಾನೋ 11:4; ಚೆಫ 2:3; ಮತ್ತಾ 6:33.
-
ನೆತಿನಿಮ್.
ಇಸ್ರಾಯೇಲ್ಯರಲ್ಲದ ಆಲಯ ಸೇವಕರು. ಇದ್ರ ಹೀಬ್ರು ಪದಕ್ಕೆ “ಕೊಟ್ಟವರು” ಅನ್ನೋ ಅರ್ಥ ಇದೆ. ಅಂದ್ರೆ ಇವರು ಆಲಯ ಸೇವೆಗಾಗಿ ತಮ್ಮನ್ನೇ ಕೊಟ್ಕೊಂಡಿದ್ರು ಅಂತ ಸೂಚಿಸುತ್ತೆ. ಇವ್ರಲ್ಲಿ ತುಂಬ ಜನ ‘ಸಭೆಗೋಸ್ಕರ, ಯೆಹೋವನ ಯಜ್ಞವೇದಿಗೋಸ್ಕರ ಸೌದೆ ಕೂಡಿಸುವವರಾಗಿ ನೀರು ಸೇದುವವರಾಗಿ’ ಯೆಹೋಶುವ ನೇಮಿಸಿದ ಗಿಬ್ಯೋನಿನ ವಂಶದವರು ಆಗಿರಬಹುದು.—ಯೆಹೋ 9:23, 27; 1ಪೂರ್ವ 9:2; ಎಜ್ರ 8:17.
-
ನೆಫೀಲಿಯರು.
ಜಲಪ್ರಳಯ ಬರೋ ಮುಂಚೆ, ತಮ್ಮನ್ನೇ ತಾವು ಮನುಷ್ಯರನ್ನಾಗಿ ಮಾಡ್ಕೊಂಡಿದ್ದ ದೇವದೂತರಿಗೆ ಮತ್ತು ಭೂಮಿಯಲ್ಲಿದ್ದ ಸ್ತ್ರೀಯರಿಗೆ ಹುಟ್ಟಿದ ಹೈಬ್ರಿಡ್ ಮಕ್ಕಳು ನೆಫೀಲಿಯರು. ಇವರು ತುಂಬ ಕ್ರೂರಿಗಳು.—ಆದಿ 6:4.
-
ನೆಹಿಲೋತ್.
5ನೇ ಕೀರ್ತನೆ ಶೀರ್ಷಿಕೆಯಲ್ಲಿರೋ ಈ ಪದದ ಸರಿಯಾದ ಅರ್ಥ ಗೊತ್ತಿಲ್ಲ. ಇದು ಚಾಲಿಲ್ (ಕೊಳಲು) ಅನ್ನೋ ಅರ್ಥ ಇರೋ ಗಾಳಿಯ ಸಂಗೀತ ಉಪಕರಣಕ್ಕೆ ಸಂಬಂಧಿಸಿರಬಹುದು ಅಂತಾರೆ.
-
ನೇಕಾರ.
ದಾರ ಅಥವಾ ನೂಲಿಂದ ಬಟ್ಟೆಯನ್ನ ನೇಯ್ಗೆ ಮಾಡೋ ವ್ಯಕ್ತಿ.—ವಿಮೋ 39:27.
-
ನೈವೇದ್ಯದ ರೊಟ್ಟಿ.
—ಅರ್ಪಣೆಯ ರೊಟ್ಟಿ ನೋಡಿ.
-
ನೈಸಾನ್.
ಬಾಬೆಲಿಂದ ವಾಪಸ್ ಬಂದ್ಮೇಲೆ ಯೆಹೂದ್ಯರು ಉಪಯೋಗಿಸ್ತಿದ್ದ ಪವಿತ್ರ ಕ್ಯಾಲೆಂಡರಿನ ಮೊದಲ ತಿಂಗಳಾದ ಅಬೀಬಿಗೆ ಇರೋ ಹೊಸ ಹೆಸ್ರು. ಬೇರೆಯವ್ರ ಕ್ಯಾಲೆಂಡರ್ ಪ್ರಕಾರ ಅದು 7ನೇ ತಿಂಗಳು. ನಮ್ಮ ಕ್ಯಾಲೆಂಡರ್ ಪ್ರಕಾರ ಈ ತಿಂಗಳು ಮಾರ್ಚ್ ಮತ್ತು ಏಪ್ರಿಲ್ ಮಧ್ಯ ಬರುತ್ತೆ. (ನೆಹೆ 2:1)—ಪರಿಶಿಷ್ಟ ಬಿ15 ನೋಡಿ.
-
ನೊಗ.
ಒಬ್ಬ ವ್ಯಕ್ತಿ ಹೆಗಲಿನ ಮೇಲೆ ಹೊತ್ಕೊಂಡು ಹೋಗೋ ಕಂಬ. ಇದರ ಎರಡು ಕಡೆ ಭಾರವನ್ನ ಹಾಕ್ತಿದ್ರು. ಅಷ್ಟೇ ಅಲ್ಲ, ಹೊಲದಲ್ಲಿ ಬಳಸೋ ಸಾಧನಗಳನ್ನಾಗಲಿ ಬಂಡಿಯನ್ನಾಗಲಿ ಎಳೆಯುವಾಗ ಎರಡು ಪ್ರಾಣಿಗಳ ಹೆಗಲ ಮೇಲೆ ಇಡೋ ಕಟ್ಟಿಗೆ ಕಂಬ ಇಲ್ಲಾ ಹಲಗೆಯನ್ನ ನೊಗ ಅಂತಾರೆ. ಸೇವಕರು ಸಾಮಾನ್ಯವಾಗಿ ಭಾರವಾದ ವಸ್ತುಗಳನ್ನ ಹೊರಲು ನೊಗಗಳನ್ನ ಬಳಸ್ತಿದ್ರು. ಹಾಗಾಗಿ ಬೇರೆಯವರಿಗೆ ದಾಸರಾಗಿ ಇರೋದನ್ನ, ಅವರ ಮಾತು ಕೇಳೋದನ್ನ ಸೂಚಿಸೋಕೆ, ಅಷ್ಟೇ ಅಲ್ಲ ದಬ್ಬಾಳಿಕೆ, ನೋವನ್ನ ಸೂಚಿಸೋಕೋ ಈ ಪದವನ್ನ ಸಾಂಕೇತಿಕವಾಗಿ ಬಳಸಲಾಗಿದೆ. ನೊಗವನ್ನ ತೆಗೆಯೋದು, ಅದನ್ನ ಮುರಿದುಹಾಕೋದು ಜೈಲಿಂದ, ದಬ್ಬಾಳಿಕೆಯಿಂದ ಸುಲಿಗೆಯಿಂದ ಬಿಡಿಸೋದನ್ನ ಸೂಚಿಸುತ್ತೆ.—ಯಾಜ 26:13; ಮತ್ತಾ 11:29, 30.
-
ನ್ಯಾಯಾಧೀಶರು.
ಇಸ್ರಾಯೇಲಲ್ಲಿ ರಾಜರ ಕಾಲಕ್ಕಿಂತ ಮುಂಚೆ ಶತ್ರುಗಳಿಂದ ಜನ್ರನ್ನ ರಕ್ಷಿಸೋಕೆ ಯೆಹೋವ ದೇವರು ಕೆಲವು ಪುರುಷರನ್ನ ಆರಿಸ್ಕೊಂಡನು. ಇವ್ರನ್ನ ನ್ಯಾಯಾಧೀಶರು ಅಂತ ಕರಿತಿದ್ರು.—ನ್ಯಾಯ 2:16.
-
ನ್ಯಾಯಾಸನ.
ಸಾಮಾನ್ಯವಾಗಿ ಹೊರಗಡೆ ತುಂಬಾ ಎತ್ತರದಲ್ಲಿ ಕಟ್ಟಿರೋ ಒಂದು ಸ್ಥಳ. ಇದಕ್ಕೆ ಮೆಟ್ಟಿಲುಗಳು ಇರ್ತಿತ್ತು. ಅಧಿಕಾರಿಗಳು ಅಲ್ಲಿ ಕೂತ್ಕೊಂಡು ಜನ್ರ ಹತ್ರ ಮಾತಾಡ್ತಿದ್ರು, ತೀರ್ಪುಗಳನ್ನ ಹೇಳ್ತಿದ್ರು. “ದೇವರ ನ್ಯಾಯಾಸನ” “ಕ್ರಿಸ್ತನ ನ್ಯಾಯಾಸನ” ಅನ್ನೋ ಪದಗಳು ಮನುಷ್ಯರಿಗೆ ತೀರ್ಪು ಕೊಡೋಕೆ ಯೆಹೋವ ದೇವರು ಮಾಡಿರೋ ಏರ್ಪಾಡನ್ನ ಸೂಚಿಸುತ್ತೆ.—ರೋಮ 14:10; 2ಕೊರಿಂ 5:10; ಯೋಹಾ 19:13.
ಪ
-
ಪಂಡಿತರು.
ಪವಿತ್ರ ಗ್ರಂಥದ ಹೀಬ್ರು ಭಾಗದ ನಕಲುಗಾರರು ಅಥವಾ ಬರಹಗಾರರು. ಯೇಸು ಭೂಮಿಗೆ ಬರೋ ಸಮಯಕ್ಕೆ ನಿಯಮ ಪುಸ್ತಕವನ್ನ ಅರಿದು ಕುಡಿದವರಿಗೆ ಈ ಹೆಸ್ರು ಬಂತು. ಇವರಿಗೆ ಯೇಸು ಅಂದ್ರೆ ಆಗ್ತಿರ್ಲಿಲ್ಲ.—ಎಜ್ರ 7:6 ಪಾದಟಿಪ್ಪಣಿ; ಮಾರ್ಕ 12:38, 39; 14:1.
-
ಪಪೈರಸ್.
ಬುಟ್ಟಿಗಳನ್ನ, ಪಾತ್ರೆಗಳನ್ನ ಮತ್ತು ಹಡಗುಗಳನ್ನ ತಯಾರಿಸೋಕೆ ಬಳಸ್ತಿದ್ದ ಗರಿ ಆಕಾರದ ನೀರಿನ ಸಸಿ. ಬರೆಯೋಕೆ ಸಾಧ್ಯ ಆಗೋ ತರ ಪೇಪರನ್ನ ತಯಾರಿಸೋಕೆ ಸಹ ಇದ್ರಿಂದ ಆಗ್ತಿತ್ತು. ಇದನ್ನ ತುಂಬ ಸುರುಳಿಗಳಲ್ಲಿ ಕೂಡ ಬಳಸಿದ್ರು.—ವಿಮೋ 2:3.
-
ಪರದೆ.
ಪವಿತ್ರ ಡೇರೆ ಮತ್ತು ದೇವಾಲಯದಲ್ಲಿ ಪವಿತ್ರ ಸ್ಥಳವನ್ನ ಅತಿ ಪವಿತ್ರ ಸ್ಥಳದಿಂದ ಪ್ರತ್ಯೇಕಿಸೋ ಸುಂದರ ಬಟ್ಟೆ. ಇದ್ರ ಮೇಲೆ ಕೆರೂಬಿಯರ ಕಸೂತಿ ಹಾಕಲಾಗಿತ್ತು. (ವಿಮೋ 26:31; 2ಪೂರ್ವ 3:14; ಮತ್ತಾ 27:51; ಇಬ್ರಿ 9:3)—ಪರಿಶಿಷ್ಟ ಬಿ5 ನೋಡಿ.
-
ಪರದೈಸ್.
ಸುಂದರ ಉದ್ಯಾನವನ ಅಥವಾ ತೋಟ. ಅದು ಮೊದಲು ಏದೆನ್ ತೋಟದಲ್ಲಿ ಇತ್ತು. ಯೆಹೋವ ಅದನ್ನ ಮೊದಲ ದಂಪತಿಗೋಸ್ಕರ ಮಾಡಿದನು. ಯೇಸು ಹಿಂಸಾ ಕಂಬದ ಮೇಲೆ ಇದ್ದಾಗ ಪಕ್ಕದಲ್ಲಿದ್ದ ಒಬ್ಬ ಅಪರಾಧಿಗೆ ಭೂಮಿ ಪರದೈಸಾಗಿ ಬದಲಾಗುತ್ತೆ ಅಂದನು. 2 ಕೊರಿಂಥ 12:4ರಲ್ಲಿ ಇರೋ ಪರದೈಸ್ ಮುಂದೆ ಬರೋ ಪರದೈಸನ್ನ, ಪ್ರಕಟನೆ 2:7ರಲ್ಲಿ ಇರೋ ಪರದೈಸ್ ಸ್ವರ್ಗದಲ್ಲಿರೋ ಪರದೈಸನ್ನ ಸೂಚಿಸುತ್ತೆ.—ಪರಮ 4:13; ಲೂಕ 23:43.
-
ಪರ್ಶಿಯ, ಪರ್ಶಿಯನ್ನರು.
ಮೇದ್ಯರ ಬಗ್ಗೆ ಮಾತಾಡ್ತಾ ಯಾವಾಗ್ಲೂ ಪರ್ಶಿಯ ಜನ್ರ ಬಗ್ಗೆ ಹೇಳ್ತಿದ್ರು. ಹಾಗಾಗಿ ಮೇದ್ಯರು ಇವರ ಸಂಬಂಧಿಕರಾಗಿರಬೇಕು. ಆರಂಭದಲ್ಲಿ ಪರ್ಶಿಯನ್ನರು ಇರಾನಿನ ನೈಋತ್ಯ ಪ್ರಾಂತ್ಯದಲ್ಲಿ ಮಾತ್ರ ವಾಸಿಸ್ತಿದ್ರು. ಕೋರೆಷ ರಾಜನ (ಇವನ ತಂದೆ ಪರ್ಶಿಯದವನು ತಾಯಿ ಮೇದ್ಯದವಳು ಅಂತ ಕೆಲವು ಇತಿಹಾಸಕಾರರು ಹೇಳ್ತಿದ್ರು) ಆಳ್ವಿಕೆಯಲ್ಲಿ ಪರ್ಶಿಯನ್ನರು ಮೇದ್ಯರಿಗಿಂತ ಬಲಿಷ್ಠರಾದ್ರು. ಆದ್ರೂ ಅವರು ಮೇದ್ಯ-ಪರ್ಶಿಯ ಸಾಮ್ರಾಜ್ಯವಾಗಿ ಮುಂದುವರಿದ್ರು. ಕೋರೆಷ ಕ್ರಿ.ಪೂ. 539ರಲ್ಲಿ ಬಾಬೆಲ್ ಸಾಮ್ರಾಜ್ಯವನ್ನ ಸೋಲಿಸಿ ವಶಮಾಡ್ಕೊಂಡ. ಬಂದಿಗಳಾಗಿದ್ದ ಯೆಹೂದ್ಯರು ಸ್ವದೇಶಕ್ಕೆ ವಾಪಸ್ ಹೋಗೋಕೆ ಅವನು ಅನುಮತಿ ಕೊಟ್ಟ. ಪರ್ಶಿಯನ್ನರ ಸಾಮ್ರಾಜ್ಯ ಪೂರ್ವದ ಸಿಂಧೂ ನದಿಯಿಂದ ಪಶ್ಚಿಮದ ಏಜಿಯನ್ ಸಮುದ್ರದ ತನಕ ವ್ಯಾಪಿಸಿತ್ತು. ಕ್ರಿ.ಪೂ. 331ರಲ್ಲಿ ಅಲೆಗ್ಸಾಂಡರ್ ದ ಗ್ರೇಟ್ ಪರ್ಶಿಯನ ಎಜ್ರ 1:1; ದಾನಿ 5:28; 8:20)—ಪರಿಶಿಷ್ಟ ಬಿ9 ನೋಡಿ.
ಸೋಲಿಸೋ ತನಕ ಯೆಹೂದ್ಯರು ಪರ್ಶಿಯನ್ನರ ಆಳ್ವಿಕೆ ಕೈಕೆಳಗೆ ಇದ್ರು. ದಾನಿಯೇಲನ ದರ್ಶನ ಪರ್ಶಿಯ ಸಾಮ್ರಾಜ್ಯ ಬರೋದನ್ನ ಸೂಚಿಸ್ತು. ಬೈಬಲಿನಲ್ಲಿ ಎಜ್ರ, ನೆಹೆಮೀಯ, ಎಸ್ತೇರ್ ಪುಸ್ತಕದಲ್ಲಿ ಈ ಸಾಮ್ರಾಜ್ಯದ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ( -
ಪವಿತ್ರ ಡೇರೆ.
ಇಸ್ರಾಯೇಲ್ಯರು ಈಜಿಪ್ಟಿಂದ ಬಂದ ಮೇಲೆ ಆರಾಧನೆ ಮಾಡೋಕೆ ಬಳಸಿದ ಡೇರೆ. ಇದನ್ನ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ತಗೊಂಡು ಹೋಗಬಹುದಿತ್ತು. ಇದ್ರಲ್ಲಿ ಯೆಹೋವನ ಸನ್ನಿಧಿಯನ್ನ ಸೂಚಿಸೋ ಒಂದು ಒಪ್ಪಂದದ ಮಂಜೂಷ ಇರ್ತಿತ್ತು. ಅಲ್ಲಿ ಬಲಿಗಳನ್ನ ಅರ್ಪಿಸ್ತಿದ್ರು, ಆರಾಧನೆ ಮಾಡ್ತಿದ್ರು. ಇದನ್ನ “ದೇವದರ್ಶನದ ಡೇರೆ” ಅಂತಾನೂ ಕರೀತಿದ್ರು. ಇದನ್ನ ಮರದ ಹಲಗೆ ಮತ್ತು ಪರದೆಗಳಿಂದ ಮಾಡಿದ್ರು. ಈ ಪರದೆಗಳ ಮೇಲೆ ಕಸೂತಿ ಹಾಕಿದ ಕೆರೂಬಿಗಳ ಆಕಾರಗಳು ಇದ್ವು. ಇದ್ರಲ್ಲಿ ಪವಿತ್ರಸ್ಥಳ, ಅತಿ ಪವಿತ್ರ ಸ್ಥಳ ಅನ್ನೋ ಎರಡು ಭಾಗಗಳು ಇದ್ವು. (ಯೆಹೋ 18:1; ವಿಮೋ 25:9)—ಪರಿಶಿಷ್ಟ ಬಿ5 ನೋಡಿ.
-
ಪವಿತ್ರ ರಹಸ್ಯ.
ದೇವರ ಉದ್ದೇಶದ ಒಂದು ಅಂಶ. ಇದು ದೇವರಿಂದಾನೇ ಬಂದಿದೆ. ಆತನು ಅಂದ್ಕೊಂಡ ಸಮಯ ಬರೋ ತನಕ ಆ ರಹಸ್ಯವನ್ನ ತನ್ನ ಹತ್ರನೇ ಇಟ್ಕೊಳ್ತಾನೆ. ಆತನು ಆ ರಹಸ್ಯವನ್ನ ಯಾರಿಗೆ ಹೇಳಬೇಕು ಅಂದ್ಕೊಳ್ತಾನೋ ಅವ್ರಿಗೆ ಮಾತ್ರ ಹೇಳ್ತಾನೆ.—ಮಾರ್ಕ 4:11; ಕೊಲೊ 1:26.
-
ಪವಿತ್ರ ಸೇವೆ.
ದೇವರ ಆರಾಧನೆಗೆ ಸಂಬಂಧಪಟ್ಟ ಪವಿತ್ರ ಸೇವೆ ಅಥವಾ ಕೆಲಸ.—ರೋಮ 12:1; ಪ್ರಕ 7:15.
-
ಪವಿತ್ರ ಸ್ಥಳ.
ಪವಿತ್ರ ಡೇರೆಯ ಅಥವಾ ದೇವಾಲಯದ ಮೊದಲ್ನೇ ಕೋಣೆ. ಒಳಗಿನ ಕೋಣೆ ಅಂದ್ರೆ ಅತಿ ಪವಿತ್ರ ಸ್ಥಳಕ್ಕಿಂತ ಇದು ದೊಡ್ಡದು. ಪವಿತ್ರ ಡೇರೆಯ ಪವಿತ್ರ ಸ್ಥಳದಲ್ಲಿ ಚಿನ್ನದ ದೀಪಸ್ತಂಭ, ಚಿನ್ನದ ಧೂಪವೇದಿ, ಅರ್ಪಣೆ ರೊಟ್ಟಿ ಇಡೋ ಮೇಜು, ಚಿನ್ನದ ಪಾತ್ರೆಗಳು ಇದ್ವು. ದೇವಾಲಯದ ಪವಿತ್ರ ಸ್ಥಳದಲ್ಲಿ ಚಿನ್ನದ ಯಜ್ಞವೇದಿ, ಚಿನ್ನದ 10 ದೀಪಸ್ತಂಭಗಳು, ಅರ್ಪಣೆಯ ರೊಟ್ಟಿಯ 10 ಮೇಜುಗಳು ಇದ್ವು. (ವಿಮೋ 26:33; ಇಬ್ರಿ 9:2)—ಪರಿಶಿಷ್ಟ ಬಿ5, ಬಿ8 ನೋಡಿ.
-
ಪವಿತ್ರ, ಪವಿತ್ರತೆ.
ಈ ಗುಣ ಯೆಹೋವನಲ್ಲಿ ಯಾವಾಗ್ಲೂ ಇರುತ್ತೆ. ಇದು ಪರಿಶುದ್ಧವಾಗಿರೋ ಅಥವಾ ಸಂಪೂರ್ಣವಾಗಿ ನೈತಿಕವಾಗಿ ಶುದ್ಧವಾಗಿರೋ ಒಂದು ಸ್ಥಿತಿ. (ವಿಮೋ 28:36; 1ಸಮು 2:2; ಜ್ಞಾನೋ 9:10; ಯೆಶಾ 6:3) ಮನುಷ್ಯರು (ವಿಮೋ 19:6; 2ಅರ 4:9), ಪ್ರಾಣಿಗಳು (ಅರ 18:17), ವಸ್ತುಗಳು (ವಿಮೋ 28:38; 30:25; ಯಾಜ 27:14), ಸ್ಥಳಗಳು (ವಿಮೋ 3:5; ಯೆಶಾ 27:13), ಕಾಲಗಳು (ವಿಮೋ 16:23; ಯಾಜ 25:12), ಕೆಲಸಗಳು (ವಿಮೋ 36:4), ಅನ್ನೋದ್ರ ಬಗ್ಗೆ ಹೇಳುವಾಗ ಪವಿತ್ರವಾಗಿರೋ ದೇವರಿಗೋಸ್ಕರ ಪ್ರತ್ಯೇಕಿಸಿದ, ಮೀಸಲಾಗಿಟ್ಟ, ಶುದ್ಧೀಕರಿಸಿದ ಅನ್ನೋ ಅರ್ಥವನ್ನ ಹೀಬ್ರು ಪದ ಕೊಡುತ್ತೆ. ಇದು ಯೆಹೋವನ ಸೇವೆಗೆ ಮೀಸಲಾಗಿರೋ ಅಥವಾ ಪ್ರತ್ಯೇಕವಾಗಿ ಇಟ್ಟಿರೋ ಒಂದು ಸ್ಥಿತಿಯನ್ನ ಸೂಚಿಸುತ್ತೆ. ಗ್ರೀಕ್ ಪವಿತ್ರ ಗ್ರಂಥದಲ್ಲೂ ಪವಿತ್ರ ಮತ್ತು ಪವಿತ್ರತೆ ಅನ್ನೋದಕ್ಕೆ ಬಳಸಿರೋ ಪದಗಳಿಗೆ ದೇವರಿಗೋಸ್ಕರ ಮೀಸಲಾಗಿ ಇಟ್ಟಿರೋದು ಅನ್ನೋ ಅರ್ಥನೇ ಇದೆ. ಈ ಪದವನ್ನ ಒಬ್ಬ ವ್ಯಕ್ತಿಯ ನಡತೆಯಲ್ಲಿರೋ ಶುದ್ಧತೆ ಅಥವಾ ಪವಿತ್ರತೆಗೆ ಹೋಲಿಸಬಹುದು.—ಮಾರ್ಕ 6:20; 2ಕೊರಿಂ 7:1; 1ಪೇತ್ರ 1:15, 16.
-
ಪವಿತ್ರಶಕ್ತಿ.
ತನ್ನ ಇಷ್ಟವನ್ನ ನೆರವೇರಿಸೋಕೆ ದೇವರು ಉಪಯೋಗಿಸೋ ಶಕ್ತಿ. ಇದು ಕಣ್ಣಿಗೆ ಕಾಣದ ಶಕ್ತಿ. ಇದು ಪವಿತ್ರ. ಯಾಕಂದ್ರೆ ಇದು ಎಲ್ರಿಗಿಂತ ಶುದ್ಧನಾಗಿರೋ ನೀತಿವಂತನಾಗಿರೋ ಯೆಹೋವನ ಶಕ್ತಿ. ಅಷ್ಟೇ ಅಲ್ಲ ಪವಿತ್ರವಾದ ವಿಷ್ಯಗಳನ್ನ ಮಾಡೋಕೆ ಈ ಶಕ್ತಿಯನ್ನ ದೇವರು ಉಪಯೋಗಿಸ್ತಾನೆ.—ಲೂಕ 1:35; ಅಕಾ 1:8.
-
ಪಶ್ಚಾತ್ತಾಪ.
ಬೈಬಲಿನಲ್ಲಿ ಬಳಸಿರೋ ಪಶ್ಚಾತ್ತಾಪ ಅನ್ನೋ ಪದ ಸಾಮಾನ್ಯವಾಗಿ ಹಿಂದಿನ ಜೀವನದಲ್ಲಿ ಮಾಡಿದ ತಪ್ಪುಗಳನ್ನ ನೆನಸಿ ಅಥವಾ ಒಳ್ಳೇದನ್ನ ಮಾಡದೆ ಇದ್ದಿದ್ದಕ್ಕೆ ವಿಷಾದಿಸ್ತಾ ಮನಸಾರೆ ದುಃಖ ಪಡೋದನ್ನ ಸೂಚಿಸುತ್ತೆ. ನಿಜವಾಗ್ಲೂ ಪಶ್ಚಾತ್ತಾಪ ಪಡೋ ವ್ಯಕ್ತಿ ಅದನ್ನ ಕ್ರಿಯೆಯಲ್ಲಿ ತೋರಿಸ್ತಾ ಮುಂದೆಂದೂ ಆ ತಪ್ಪನ್ನ ಮಾಡಲ್ಲ.—ಮತ್ತಾ 3:8; ಅಕಾ 3:19; 2ಪೇತ್ರ 3:9.
-
ಪಸ್ಕ.
ಈಜಿಪ್ಟಿಂದ ಬಿಡುಗಡೆ ಸಿಕ್ಕಿದ್ದನ್ನ ನೆನಪಿಸ್ಕೊಳ್ಳೋಕೆ ಪ್ರತಿ ವರ್ಷ ಅಬೀಬ್ ತಿಂಗಳ (ಆಮೇಲೆ ಇದಕ್ಕೆ ನೈಸಾನ್ ತಿಂಗಳು ಅಂದ್ರು) 14ನೇ ದಿನದಂದು ಇಸ್ರಾಯೇಲ್ಯರು ಮಾಡ್ತಿದ್ದ ಹಬ್ಬ. ಆ ಹಬ್ಬದಲ್ಲಿ ಕುರಿಮರಿಯನ್ನ (ಅಥವಾ ಆಡು) ಕಡಿದು ಸುಡ್ತಿದ್ರು. ಆಮೇಲೆ ಅದನ್ನ ಕಹಿ ಸೊಪ್ಪಿನ ಜೊತೆ ಮತ್ತು ಹುಳಿಯಿಲ್ಲದ ರೊಟ್ಟಿ ಜೊತೆ ತಿಂತಿದ್ರು.—ವಿಮೋ 12:27; ಯೋಹಾ 6:4; 1ಕೊರಿಂ 5:7.
-
ಪಾನ ಅರ್ಪಣೆ.
ಯಜ್ಞವೇದಿಯಲ್ಲಿ ದ್ರಾಕ್ಷಾಮದ್ಯವನ್ನ ಸುರಿದು ಅರ್ಪಿಸೋ ಬಲಿ. ಬೇರೆ ಬಲಿಗಳ ಜೊತೆ ಇದನ್ನೂ ಅರ್ಪಿಸ್ತಿದ್ರು. ಸಹೋದರ-ಸಹೋದರಿಯರಿಗೋಸ್ಕರ ಮನಸಾರೆ ತನ್ನ ಶಕ್ತಿಯನ್ನೆಲ್ಲ ಧಾರೆ ಎರೆಯೋಕೆ ಸಿದ್ಧವಾಗಿದ್ದಾನೆ ಅನ್ನೋದನ್ನ ಸೂಚಿಸೋಕೆ ಪೌಲ ಈ ಪದವನ್ನ ಅಲಂಕಾರಿಕವಾಗಿ ಬಳಸಿದ್ದಾನೆ.—ಅರ 15:5, 7; ಫಿಲಿ 2:17.
-
ಪಾಪಪರಿಹಾರಕ ಬಲಿ.
ಬೇಕುಬೇಕಂತ ಅಲ್ಲದೆ, ಅಪರಿಪೂರ್ಣ ದೇಹದ ಬಲಹೀನತೆಯಿಂದ ಮಾಡೋ ಪಾಪಗಳ ವಿಷ್ಯದಲ್ಲಿ ಅರ್ಪಿಸೋ ಬಲಿ. ಪಾಪ ಮಾಡಿದ ವ್ಯಕ್ತಿಯ ಸ್ಥಾನಮಾನಕ್ಕೆ, ಸನ್ನಿವೇಶಕ್ಕೆ ತಕ್ಕಂತೆ ಹೋರಿಯಿಂದ ಹಿಡಿದು ಪಾರಿವಾಳದ ತನಕ ಆಯಾ ಪ್ರಾಣಿಗಳನ್ನ ಪ್ರಾಯಶ್ಚಿತ್ತವಾಗಿ ಅರ್ಪಿಸ್ತಿದ್ರು.—ಯಾಜ 4:27, 29; ಇಬ್ರಿ 10:8.
-
ಪಿಮ್.
ಇದೊಂದು ತೂಕದ ಕಲ್ಲು. ಅಷ್ಟೇ ಅಲ್ಲ, ಫಿಲಿಷ್ಟಿಯರು ಇಸ್ರಾಯೇಲ್ಯರಿಗಾಗಿ ಲೋಹದ ಆಯುಧಗಳನ್ನ ತಯಾರಿಸಿ ಕೊಡೋಕೆ ತಗೊಳ್ತಿದ್ದ ಖರ್ಚನ್ನೂ ಪಿಮ್ ಅಂತಿದ್ರು. ಇಸ್ರಾಯೇಲಲ್ಲಿ ನಡೆದ ಪುರಾತನ ವಸ್ತುಗಳ ಸಂಗ್ರಹಣೆಯಲ್ಲಿ ಈ ತರದ ಹೆಚ್ಚಿನ ಕಲ್ಲುಗಳು ಸಿಕ್ಕಿದ್ವು. ಅದರ ಸರಾಸರಿ ತೂಕ 7.8 ಗ್ರಾಂ ಆಗಿತ್ತು. ಆ ತೂಕದ ಕಲ್ಲಿನ ಮೇಲೆ ಪಿಮ್ ಅನ್ನೋ ಪದದ ಹೀಬ್ರು ವ್ಯಂಜನಾಕ್ಷರದ ಕೆತ್ತನೆ ಇತ್ತು. ಪಿಮ್ ಅಂದ್ರೆ ಶೆಕೆಲಿನ ಮೂರರ ಎರಡು ಭಾಗ ಆಗಿತ್ತು.—1ಸಮು 13:20, 21.
-
ಪಿಶಾಚ.
ಗ್ರೀಕ್ ಪವಿತ್ರ ಗ್ರಂಥದಲ್ಲಿ ಸೈತಾನನನ್ನ ಪಿಶಾಚ ಅಂತ ಕರಿದಿದ್ದಾರೆ. ಇದ್ರ ಅರ್ಥ “ಹೆಸ್ರು ಹಾಳು ಮಾಡೋನು.” ಯೆಹೋವನ, ಆತನ ಸಂದೇಶದ, ಆತನ ಪವಿತ್ರ ಹೆಸ್ರಿನ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನ ಹೇಳೋದ್ರಲ್ಲಿ, ಹೆಸ್ರು ಹಾಳು ಮಾಡೋದ್ರಲ್ಲಿ ಇವನೇ ಮೊದಲನೆಯವನು. ಇದಕ್ಕೆ ಅವನೇ ಮುಖ್ಯಸ್ಥ. ಹಾಗಾಗಿ ಅವನಿಗೆ ಈ ಹೆಸ್ರು ಬಂತು.—ಮತ್ತಾ 4:1; ಯೋಹಾ 8:44; ಪ್ರಕ 12:9.
-
ಪುನರುತ್ಥಾನ.
—ಮತ್ತೆ ಜೀವಂತ ಎದ್ದು ಬರೋದು ನೋಡಿ
-
ಪುರೋಹಿತ.
ಒಬ್ಬ ಪುರೋಹಿತ ದೇವರ ಅಧಿಕಾರದ ಪ್ರತಿನಿಧಿಯಾಗಿ ಜನ್ರ ಸೇವೆ ಮಾಡ್ತಿದ್ದ. ಅವನು ಜನ್ರಿಗೆ ದೇವರ ಬಗ್ಗೆ, ನಿಯಮಗಳ ಬಗ್ಗೆ ಹೇಳ್ತಿದ್ದ. ಪುರೋಹಿತರು ಬಲಿಗಳನ್ನ ಅರ್ಪಿಸ್ತಾ, ದೇವರಿಗೂ ಮನುಷ್ಯರಿಗೂ ಮಧ್ಯಸ್ಥರಾಗಿ ಇರ್ತಿದ್ರು ಮತ್ತು ಜನ್ರ ಪರವಾಗಿ ದೇವರ ಮುಂದೆ ಬೇಡಿಕೊಳ್ತಾ ಜನ್ರ ಪ್ರತಿನಿಧಿಗಳಾಗಿ ಕೆಲಸ ಮಾಡ್ತಿದ್ರು. ಮೋಶೆ ನಿಯಮ ಪುಸ್ತಕ ಬರೋ ಮುಂಚೆ, ಕುಟುಂಬದ ಯಜಮಾನನೇ ತನ್ನ ಕುಟುಂಬಕ್ಕೆ ಪುರೋಹಿತನಾಗಿ ಸೇವೆ ಮಾಡ್ತಿದ್ದ. ಮೋಶೆಯ ನಿಯಮ ಪುಸ್ತಕದ ಕೆಳಗೆ ಲೇವಿ ಕುಲದಲ್ಲಿರೋ ಬೇರೆ ಗಂಡಸರೆಲ್ಲ ಅವ್ರಿಗೆ ಸಹಾಯ ಮಾಡ್ತಿದ್ರು. ಹೊಸ ಒಪ್ಪಂದ ಶುರು ಆದಾಗ ಆಧ್ಯಾತ್ಮಿಕ ಇಸ್ರಾಯೇಲ್ಯರು ಪುರೋಹಿತರಾದ್ರು, ಅವರ ಮುಖ್ಯ ಪುರೋಹಿತ ಯೇಸು ಕ್ರಿಸ್ತನಾಗಿದ್ದ.—ವಿಮೋ 28:41; ಇಬ್ರಿ 9:24; ಪ್ರಕ 5:10.
-
ಪೂಜಾಕಂಬ.
ಇದು ಅಶೇರ್ ಅನ್ನೋ ಹೀಬ್ರು ಪದದಿಂದ ಬಂದಿದೆ. ಇದು (1) ಕಾನಾನ್ಯರ ಸಂತಾನ ದೇವತೆ ಅಶೇರನ್ನ ಸೂಚಿಸೋ ಪೂಜಾಕಂಬ, ಅಥವಾ (2) ಅಶೇರ್ ದೇವತೆಯ ಮೂರ್ತಿಯನ್ನ ಸೂಚಿಸುತ್ತೆ. ಈ ಕಂಬವನ್ನ ನೆಟ್ಟಗೆ ನಿಲ್ಲಿಸ್ತಿದ್ರು. ಇದರಲ್ಲಿ ಸ್ವಲ್ಪ ಭಾಗವನ್ನಾದ್ರೂ ಕಟ್ಟಿಗೆಯಿಂದ ಮಾಡ್ತಿದ್ರು. ಇದು ಕೆತ್ತಿದ ತೊಲೆ ಅಥವಾ ಮರ ಆಗಿರಬಹುದು.—ಧರ್ಮೋ 16:21; ನ್ಯಾಯ 6:26; 1ಅರ 15:13.
-
ಪೂರೀಮ್.
ಪ್ರತಿ ವರ್ಷ ಅದಾರ್ ತಿಂಗಳ 14, 15ನೇ ತಾರೀಖು ಈ ಹಬ್ಬವನ್ನ ಆಚರಿಸ್ತಿದ್ರು. ಎಸ್ತೇರ್ ರಾಣಿ ಕಾಲದಲ್ಲಿ ಯೆಹೂದ್ಯರಿಗೆ ಸಿಕ್ಕಿದ ರಕ್ಷಣೆಯನ್ನ ನೆನಪಿಸಿಕೊಳ್ಳೋಕೆ ಇದನ್ನ ಮಾಡ್ತಿದ್ರು. ಪೂರೀಮ್ ಹೀಬ್ರು ಪದ ಅಲ್ಲ. ಆ ಪದಕ್ಕೆ “ಚೀಟಿಗಳು” ಅನ್ನೋ ಅರ್ಥ ಇದೆ. ಎಲ್ಲ ಯೆಹೂದ್ಯರನ್ನ ಒಂದೇ ದಿನ ನಾಶಮಾಡೋಕೆ ಹಾಮಾನ ಪೂರ್ (ಅಂದ್ರೆ ಚೀಟಿ) ಹಾಕಿದನು. ಅದಕ್ಕೇ, ಈ ಹಬ್ಬಕ್ಕೆ ಪೂರೀಮ್ ಅಥವಾ ಚೀಟಿಗಳ ಹಬ್ಬ ಅನ್ನೋ ಹೆಸ್ರು ಬಂತು.—ಎಸ್ತೇ 3:7; 9:26.
-
ಪೇಟ.
ತಲೆಗೆ ಕಟ್ಟೋ ಬಟ್ಟೆ. ಮಹಾ ಪುರೋಹಿತ ಉತ್ತಮವಾದ ಬಟ್ಟೆಯಿಂದ ಮಾಡಿರೋ ಪೇಟ ಹಾಕ್ತಿದ್ದ. ಅದರ ಮುಂದಿನ ಭಾಗದಲ್ಲಿ ನೀಲಿ ದಾರದಿಂದ ಮಾಡಿದ ಚಿನ್ನದ ಒಂದು ತಗಡನ್ನ ಕಟ್ತಿದ್ರು. ರಾಜನ ಕಿರೀಟದ ಅಡಿಯಲ್ಲಿ ಪೇಟ ಇರ್ತಿತ್ತು. ನ್ಯಾಯ ನನ್ನ ಪೇಟ ಅಂತ ಯೋಬ ಅಲಂಕಾರಿಕವಾಗಿ ಹೇಳಿದ.—ವಿಮೋ 28:36, 37; ಯೋಬ 29:14; ಯೆಹೆ 21:26.
-
ಪೋರ್ನಿಯ.
—ಲೈಂಗಿಕ ಅನೈತಿಕತೆ ನೋಡಿ.
-
ಪ್ರಧಾನ ದೇವದೂತ.
ಅರ್ಥ “ದೇವದೂತರಲ್ಲಿ ಪ್ರಮುಖ.” ಪ್ರಧಾನ ಅನ್ನೋ ಪದಕ್ಕೆ ಮುಖ್ಯಸ್ಥ ಅನ್ನೋ ಅರ್ಥನೂ ಇದೆ. ಈ ವಿವರಣೆ ಮತ್ತು ಬೈಬಲಲ್ಲಿ ಈ ಪದ ಏಕವಚನದಲ್ಲಿ ಇರೋದು “ಪ್ರಧಾನ ದೇವದೂತ” ಒಬ್ಬನೇ ಅಂತ ತೋರಿಸುತ್ತೆ. ಆತನ ಹೆಸ್ರು ಮೀಕಾಯೇಲ ಅಂತ ಬೈಬಲ್ ಹೇಳುತ್ತೆ.—ದಾನಿ 12:1; ಯೂದ 9; ಪ್ರಕ 12:7.
-
ಪ್ರವಾದಿ.
ದೇವರ ಉದ್ದೇಶಗಳನ್ನ ಹೇಳೋ ವ್ಯಕ್ತಿ. ಪ್ರವಾದಿಗಳು ದೇವರ ಪರವಾಗಿ ಮಾತಾಡ್ತಾ ಭವಿಷ್ಯವಾಣಿಗಳನ್ನ ಹೇಳ್ತಿದ್ರು, ಯೆಹೋವನ ಬೋಧನೆಗಳನ್ನ, ಆಜ್ಞೆಗಳನ್ನ, ತೀರ್ಪುಗಳನ್ನ ಜನ್ರಿಗೆ ತಿಳಿಸ್ತಿದ್ರು.—ಆಮೋ 3:7; 2ಪೇತ್ರ 1:21.
-
ಪ್ರಾಂತ್ಯದ ಕಾರ್ಯನಿರ್ವಾಹಕರು.
ಬಾಬೆಲಿನ ಆಳ್ವಿಕೆಯಲ್ಲಿ, ಕಾನೂನು ಬಗ್ಗೆ ಚೆನ್ನಾಗಿ ಗೊತ್ತಿದ್ದ ಅಧಿಕಾರಿಗಳು. ಇವ್ರಿಗೆ ಕಾನೂನಿಗೆ ಸಂಬಂಧಪಟ್ಟ ವಿಷ್ಯಗಳ ಬಗ್ಗೆ ಸ್ವಲ್ಪಮಟ್ಟಿಗೆ ಅಧಿಕಾರ ಇತ್ತು. ರೋಮನ್ ಕಾಲದಲ್ಲಿ, ನಗರದ ಅಧಿಕಾರಿಗಳು ಸಾರ್ವಜನಿಕ ವಿಷ್ಯಗಳನ್ನ ನೋಡ್ಕೊಳ್ತಿದ್ರು. ಶಾಂತಿ ಭದ್ರತೆ ಕಾಪಾಡೋದು, ಹಣದ ವ್ಯವಹಾರಗಳನ್ನ ನೋಡ್ಕೊಳ್ಳೋದು, ಕಾನೂನಿಗೆ ವಿರುದ್ಧವಾಗಿ ನಡೆದವ್ರಿಗೆ ತೀರ್ಪು ಕೊಡೋದು, ಶಿಕ್ಷೆ ಕೊಡೋ ಆಜ್ಞೆ ಹೊರಡಿಸೋದು ಇಂಥ ಕೆಲಸಗಳನ್ನ ಇವರು ಮಾಡ್ತಿದ್ರು.—ದಾನಿ 3:2; ಅಕಾ 16:20.
-
ಪ್ರಾಂತ್ಯದ ರಾಜ್ಯಪಾಲ.
ರೋಮ್ ಹಿರೀಸಭೆ (ಸೆನೆಟ್) ಅಧಿಕಾರದ ಕೆಳಗಿದ್ದ ಒಬ್ಬ ಮುಖ್ಯ ಅಧಿಪತಿ. ಇವನಿಗೆ ನ್ಯಾಯ ತೀರಿಸೋ ಅಧಿಕಾರ ಮತ್ತು ಸೈನಿಕರ ಮೇಲೆ ಅಧಿಕಾರ ಇತ್ತು. ಇವನು ಮಾಡೋ ಕೆಲಸಗಳನ್ನ ಪರೀಕ್ಷಿಸೋ ಅಧಿಕಾರ ಹಿರೀಸಭೆಗೆ ಇತ್ತಾದ್ರೂ ಆ ಪ್ರಾಂತ್ಯದ ಮೇಲೆ ಸಂಪೂರ್ಣ ಅಧಿಕಾರ ಇವನ ಕೈಯಲ್ಲೇ ಇತ್ತು.—ಅಕಾ 13:7; 18:12.
-
ಪ್ರಾಣ.
ಹೀಬ್ರು ಪದ ನೆಫೆಶ್ ಮತ್ತು ಗ್ರೀಕ್ ಪದ ಸೈಕಿ ಅನ್ನೋದನ್ನ “ಪ್ರಾಣ” ಅಂತ ಭಾಷಾಂತರ ಮಾಡಲಾಗಿದೆ. ಬೈಬಲಲ್ಲಿ ಈ ಪದವನ್ನ ಹೇಗೆ ಭಾಷಾಂತರ ಮಾಡಿದ್ದಾರೆ ಅನ್ನೋದಕ್ಕೆ ಗಮನ ಕೊಟ್ಟಾಗ ಈ ಪದಗಳಿಗೆ (1) ಮನುಷ್ಯರು, (2) ಪ್ರಾಣಿಗಳು, (3) ವ್ಯಕ್ತಿಯ ಅಥವಾ ಪ್ರಾಣಿಗಳ ಜೀವ ಅನ್ನೋ ಅರ್ಥ ಇದೆ ಅಂತ ಗೊತ್ತಾಗುತ್ತೆ. (ಆದಿ 1:20; 2:7; ಅರ 31:28; 1ಪೇತ್ರ 3:20) ಕೆಲವು ಧರ್ಮಗ್ರಂಥಗಳಲ್ಲಿ ನೆಫೆಶ್ ಮತ್ತು ಸೈಕಿ ಪದಗಳನ್ನ “ಆತ್ಮ” ಅಂತ ಭಾಷಾಂತರ ಮಾಡಲಾಗಿದೆ. ಆದ್ರೆ ಬೈಬಲಲ್ಲಿ ಈ ಪದ ಭೂಮಿಯಲ್ಲಿರೋ ಜೀವಿಗಳಿಗೆ ಅಂದ್ರೆ ಕಣ್ಣಿಗೆ ಕಾಣೋ, ಸಾವು ಇರೋ, ಮುಟ್ಟೋಕೆ ಆಗುವಂಥ ಜೀವಿಗಳನ್ನ ಸೂಚಿಸುತ್ತೆ. ಹಾಗಾಗಿ ಮೂಲಭಾಷೆಯ ಈ ಪದಗಳನ್ನ ಹೆಚ್ಚಾಗಿ “ಜೀವನ,” “ಜೀವ,” “ಜೀವಿ,” “ವ್ಯಕ್ತಿ,” “ಪೂರ್ತಿ ಸಾಮರ್ಥ್ಯ,” ಅಥವಾ ಸರ್ವನಾಮ (ಉದಾಹರಣೆಗೆ “ನಾನು”) ಅನ್ನೋ ಅರ್ಥದಲ್ಲಿ ಬಳಸಲಾಗಿದೆ. ಕೆಲವು ವಚನಗಳಲ್ಲಿ, ಪೂರ್ಣ ಪ್ರಾಣದಿಂದ ಕೆಲಸ ಮಾಡೋದು ಅಂತ ಬಳಸಲಾಗಿದೆ. ಇದರರ್ಥ ಎಲ್ಲ ಶಕ್ತಿ, ಮನಸ್ಸಿಂದ ಕೆಲಸ ಮಾಡೋದು. (ಧರ್ಮೋ 6:5; ಮತ್ತಾ 22:37) ಇನ್ನು ಕೆಲವು ವಚನಗಳಲ್ಲಿ ಮನುಷ್ಯನ ಹಸಿವು, ಹೊಟ್ಟೆಬಾಕತನ, ಶವ ಅನ್ನೋ ಅರ್ಥದಲ್ಲೂ ಬಳಸಲಾಗಿದೆ.—ಅರ 6:6; ಜ್ಞಾನೋ 23:2; ಯೆಶಾ 56:11; ಹಗ್ಗಾ 2:13.
-
ಪ್ರಾಯಶ್ಚಿತ್ತ ದಿನ.
ಇಸ್ಯಾಯೇಲಿಗೆ ತುಂಬ ಪವಿತ್ರವಾದ ದಿನ. ಇದನ್ನ ಯೋಮ್ ಕಿಪ್ಪುರ್ (ಯೋಮ್ ಹಾಕ್ಕಿಪುರೀಮ್ ಅನ್ನೋ ಹೀಬ್ರು ಪದದಿಂದ ಬಂದಿದೆ. ಇದ್ರ ಅರ್ಥ “ಮರೆ ಮಾಡೋ ದಿನ”) ಅಂತಾನೂ ಕರಿತಾರೆ. ಎಥನಿಮ್ ತಿಂಗಳ 10ನೇ ತಾರೀಕಿನಂದು ಇದನ್ನ ಆಚರಿಸ್ತಾರೆ. ವರ್ಷದಲ್ಲಿ ಈ ಒಂದು ದಿನ ಮಾತ್ರ ಮಹಾ ಪುರೋಹಿತ ಪವಿತ್ರ ಡೇರೆಯ, ಆಲಯದ ಅತಿ ಪವಿತ್ರ ಸ್ಥಳಕ್ಕೆ ಹೋಗ್ತಿದ್ದ. ತನ್ನ, ಬೇರೆ ಲೇವಿಯರ, ಜನ್ರ ಪಾಪಗಳಿಗಾಗಿ ರಕ್ತವನ್ನ ಅಲ್ಲಿ ಅರ್ಪಿಸ್ತಿದ್ದ. ಆ ದಿನ ದೇವರ ಅರಾಧನೆಗೆ ಜನ್ರೆಲ್ಲ ಸೇರಿಬರಬೇಕಿತ್ತು ಮತ್ತು ಉಪವಾಸ ಮಾಡಬೇಕಿತ್ತು. ಅದು ಸಬ್ಬತ್ ದಿನ. ಯಾವುದೇ ಕೆಲಸ ಮಾಡಬಾರದಾಗಿತ್ತು.—ಯಾಜ 23:27, 28.
-
ಪ್ರಾಯಶ್ಚಿತ್ತ ಮುಚ್ಚಳ.
ಇದು ಒಪ್ಪಂದ ಮಂಜೂಷದ ಮುಚ್ಚಳ. ಪ್ರಾಯಶ್ಚಿತ್ತದ ದಿನ ಮಹಾ ಪುರೋಹಿತ ಇದರ ಮುಂದೆ ಪಾಪಪರಿಹಾರಕ ಬಲಿಯ ರಕ್ತವನ್ನ ಚಿಮುಕಿಸ್ತಿದ್ದನು. ಇದಕ್ಕಿರೋ ಹೀಬ್ರು ಪದ, “ಪಾಪವನ್ನ ಮುಚ್ಚಿಹಾಕು” ಅಥವಾ “ಪಾಪವನ್ನ ಅಳಿಸಿಹಾಕು” ಅನ್ನೋ ಮೂಲ ಕ್ರಿಯಾಪದದಿಂದ ಬಂದಿದೆ. ಇದನ್ನ ಗಟ್ಟಿಯಾದ ಚಿನ್ನದಿಂದ ಮಾಡಲಾಗಿತ್ತು. ಎರಡು ಮೂಲೆಯಲ್ಲಿ ಒಂದೊಂದು ಕೆರೂಬಿಯ ಕೆತ್ತನೆ ಇತ್ತು. ಕೆಲವೊಮ್ಮೆ ಇದನ್ನ “ಮುಚ್ಚಳ” ಅಂತ ಮಾತ್ರ ಹೇಳಲಾಗಿದೆ. (ವಿಮೋ 25:17-22; 1ಪೂರ್ವ 28:11; ಇಬ್ರಿ 9:5)—ಪರಿಶಿಷ್ಟ ಬಿ5 ನೋಡಿ.
-
ಪ್ರಾಯಶ್ಚಿತ್ತ.
ಹೀಬ್ರು ಗ್ರಂಥದ ಪ್ರಕಾರ ಜನ್ರು ಪಾಪಪರಿಹಾರಕ್ಕಾಗಿ ಬಲಿ ಅರ್ಪಿಸ್ತಿದ್ರು. ಇದ್ರಿಂದ ದೇವರ ಮುಂದೆ ಹೋಗೋಕೆ, ಆತನನ್ನ ಆರಾಧಿಸೋಕೆ ಆಗ್ತಿತ್ತು. ಒಬ್ಬ ವ್ಯಕ್ತಿ ಪಾಪ ಮಾಡ್ಲಿ, ಇಡೀ ಜನಾಂಗನೇ ಪಾಪ ಮಾಡ್ಲಿ ಅವರು ದೇವರ ಜೊತೆ ಶಾಂತಿ ಸಂಬಂಧಕ್ಕೆ ಬರೋಕೆ ನಿಯಮ ಪುಸ್ತಕದ ಪ್ರಕಾರ ಬಲಿ ಕೊಡ್ತಿದ್ರು. ಬಲಿಗಳನ್ನ ಮುಖ್ಯವಾಗಿ ಪ್ರತಿ ವರ್ಷ ಪ್ರಾಯಶ್ಚಿತ್ತ ದಿನ ಕೊಡ್ತಿದ್ರು. ಈ ಬಲಿಗಳು ಯೇಸುವಿನ ಬಲಿಗೆ ಗುರುತು. ಯೇಸುವಿನ ಬಲಿಯಿಂದ ಮನುಷ್ಯರ ಪಾಪಗಳಿಗೆ ಒಂದೇ ಸಲ ಯಾಜ 5:10; 23:28; ಕೊಲೊ 1:20; ಇಬ್ರಿ 9:12.
ಪೂರ್ತಿ ಪರಿಹಾರ ಸಿಕ್ತು. ಅಷ್ಟೇ ಅಲ್ಲ ಯೆಹೋವನ ಜೊತೆ ಶಾಂತಿ ಸಂಬಂಧಕ್ಕೆ ಬರೋಕೆ ಜನ್ರಿಗೆ ಅವಕಾಶ ಕೊಡ್ತು.— -
ಪ್ರೇತವ್ಯವಹಾರ.
ಸತ್ತವ್ರನ್ನ ಮಾತಾಡಿಸ್ತೀವಿ ಅಂತ ಹೇಳ್ಕೊಳ್ಳೋರು ನಿಜಕ್ಕೂ ಸತ್ತವರ ಜೊತೆ ಅಲ್ಲ, ಕೆಟ್ಟ ದೇವದೂತರ ಜೊತೆ ಸಂಪರ್ಕ ಮಾಡುತ್ತಿರುತ್ತಾರೆ. ಶರೀರ ಸತ್ತು ಹೋದಾಗ ಆತ್ಮ ಬದುಕಿ ಇರುತ್ತೆ ಅಂತ, ಆ ಆತ್ಮಕ್ಕೆ ಬದುಕಿ ಇರೋರ ಜೊತೆ ಮಾತಾಡೋಕೆ ಆಗುತ್ತೆ ಅಂತ ನಂಬ್ತಾರೆ. ಮುಖ್ಯವಾಗಿ ಅದರ ಪ್ರಭಾವಕ್ಕೆ ಬೇಗನೆ ಒಳಗಾಗೋ ವ್ಯಕ್ತಿಯ ಮೂಲಕ ಅವು ಮಾತಾಡುತ್ತವೆ ಅಂತ ಅವರು ನಂಬ್ತಾರೆ. ಪ್ರೇತವ್ಯವಹಾರಕ್ಕೆ ಬಳಸಿದ ಗ್ರೀಕ್ ಪದ ಫಾರ್ಮಾಕಿಯಾ. ಅದರ ಅಕ್ಷರಾರ್ಥ “ಡ್ರಗ್ಸ್ ಬಳಸೋದು” ಅಂತಿದೆ. ಪ್ರಾಚೀನ ಕಾಲದಲ್ಲಿ ಕ್ಷುದ್ರಪೂಜೆಗಳನ್ನ ಮಾಡಿದಾಗ ಕೆಟ್ಟ ದೇವದೂತರ ಶಕ್ತಿಯನ್ನ ಕರೆಯೋಕೆ ಮಾದಕದ್ರವ್ಯಗಳನ್ನ ಬಳಸ್ತಿದ್ರಿಂದ ಈ ಪದವನ್ನ ಮಂತ್ರತಂತ್ರಗಳಿಗೂ ಜೊಡಿಸಲಾಗಿದೆ.—ಯಾಜ 20:27; ಧರ್ಮೋ 18:10-12; 2ಅರ 21:6; ಗಲಾ 5:20; ಪ್ರಕ 21:8.
ಫ
-
ಫರಿಸಾಯರು.
ಕ್ರಿಸ್ತಶಕ ಒಂದನೇ ಶತಮಾನದಲ್ಲಿ ಯೆಹೂದಿ ಮತಕ್ಕೆ ಸೇರಿದ ಒಂದು ದೊಡ್ಡ ಗುಂಪು. ಇವರು ಪುರೋಹಿತ ವಂಶದವರಲ್ಲದಿದ್ರೂ ನಿಯಮ ಪುಸ್ತಕದ ಒಂದು ಪದನೂ ಬಿಡದೆ ಎಲ್ಲ ಪಾಲಿಸ್ತಿದ್ರು. ಬಾಯಿಮಾತಲ್ಲಿ ಮಾಡಿದ ನಿಯಮಗಳಿಗೂ ಅವರು ತುಂಬ ಪ್ರಾಮುಖ್ಯತೆ ಕೊಡ್ತಿದ್ರು. (ಮತ್ತಾ 23:23) ಗ್ರೀಕ್ ಸಂಪ್ರದಾಯ ಅವರಿಗೆ ಆಗಿಬರ್ತಿರಲಿಲ್ಲ. ನಿಯಮ ಪುಸ್ತಕದ ಪಂಡಿತರಾಗಿ, ಸಂಪ್ರದಾಯದ ವಿದ್ವಾಂಸರಾಗಿ ಅವರಿಗೆ ಜನರ ಮೇಲೆ ಸ್ವಲ್ಪಮಟ್ಟಿಗೆ ಅಧಿಕಾರ ಇತ್ತು. (ಮತ್ತಾ 23:2-6) ಅವ್ರಲ್ಲಿ ಸ್ವಲ್ಪ ಜನ ಹಿರೀಸಭೆಯ ಸದಸ್ಯರಾಗಿ ಇರ್ತಿದ್ರು. ಸಬ್ಬತ್ ಆಚರಿಸೋದು, ಸಂಪ್ರದಾಯ ಮಾಡೋದು, ಪಾಪಿಗಳ ಜೊತೆ ಮತ್ತು ತೆರಿಗೆ ವಸೂಲಿಗಾರರ ಜೊತೆ ಸಹವಾಸ ಮಾಡೋದರ ಬಗ್ಗೆ ಅವರು ಯಾವಾಗ್ಲೂ ಯೇಸುವಿನಲ್ಲಿ ತಪ್ಪು ಹುಡುಕ್ತಾ ಇರ್ತಿದ್ರು. ಅವ್ರಲ್ಲಿ ಸ್ವಲ್ಪ ಜನ ನಂತ್ರ ಕ್ರೈಸ್ತರಾದ್ರು, ಅದ್ರಲ್ಲಿ ತಾರ್ಸದ ಸೌಲ ಕೂಡ ಒಬ್ಬ.—ಮತ್ತಾ 9:11; 12:14; ಮಾರ್ಕ 7:5; ಲೂಕ 6:2; ಅಕಾ 26:5.
-
ಫರೋಹ.
ಈಜಿಪ್ಟಿನ ರಾಜರಿಗಿದ್ದ ಬಿರುದು. ಬೈಬಲಲ್ಲಿ ಐದು ಫರೋಹ ರಾಜರ ಹೆಸ್ರು ಕೊಡಲಾಗಿದೆ (ಶೀಷಕ, ಸೋ, ತಿರ್ವಾಕ, ನೆಕೊ, ಹೊಫ್ರ.) ಆದ್ರೆ ಬೇರೆ ಫರೋಹರ ಅಂದ್ರೆ ಅಬ್ರಹಾಮ್, ಮೋಶೆ, ಯೋಸೇಫ ಜೊತೆ ವ್ಯವಹರಿಸಿದ ಫರೋಹರ ಹೆಸ್ರುಗಳನ್ನ ಬೈಬಲಲ್ಲಿ ಕೊಟ್ಟಿಲ್ಲ.—ವಿಮೋ 15:4; ರೋಮ 9:17.
-
ಫಿಲಿಷ್ಟಿಯ; ಫಿಲಿಷ್ಟಿಯರು.
ಇಸ್ರಾಯೇಲಿನ ದಕ್ಷಿಣ ಕರಾವಳಿ ಪ್ರದೇಶದಲ್ಲಿದ್ದ ಪ್ರದೇಶಕ್ಕೆ ಫಿಲಿಷ್ಟಿಯ ಅನ್ನೋ ಹೆಸ್ರು ಬಂತು. ಕ್ರೇತದಿಂದ ಬಂದು ನೆಲೆಸಿದ ಜನ್ರನ್ನ ಫಿಲಿಷ್ಟಿಯರು ಅಂತ ಕರೆದ್ರು. ದಾವೀದ ಅವರನ್ನ ಸೋಲಿಸಿದನು. ಆದ್ರೆ ಅವರು ಯಾರ ಮೇಲೂ ಅವಲಂಭಿಸದೆ ಜೀವಿಸಿದ್ರು. ಇವರು ಯಾವಾಗ್ಲೂ ಇಸ್ರಾಯೇಲ್ಯರಿಗೆ ವಿರೋಧಿಗಳಾಗಿ ಇದ್ರು. (ವಿಮೋ 13:17; 1ಸಮು 17:4; ಆಮೋ 9:7)
ಬ
-
ಬತ್.
ಇದೊಂದು ದ್ರವ ಅಳತೆ. ಒಂದು ಬತ್ ಅಂದ್ರೆ ಸುಮಾರು 22ಲೀ. (5.81 ಗ್ಯಾಲನ್) ಹಿಂದಿನ ಕಾಲದ ಜನಜೀವನದ ಬಗ್ಗೆ ಅಧ್ಯಯನ ಮಾಡೋರಿಗೆ ಜಾಡಿಯ ಕೆಲವು ತುಂಡುಗಳು ಸಿಕ್ಕಿವೆ. ಅವುಗಳ ಮೇಲೆ ಬತ್ ಅಂತಿದೆ. ಬೈಬಲಲ್ಲಿ ಹೇಳಿರೋ ಹೆಚ್ಚಿನ ಒಣ ಮತ್ತು ದ್ರವ ಅಳತೆಗಳನ್ನ ಬತ್‌ನಿಂದ ಲೆಕ್ಕ ಮಾಡಲಾಗಿದೆ. (1ಅರ 7:38; ಯೆಹೆ 45:14)—ಪರಿಶಿಷ್ಟ ಬಿ14 ನೋಡಿ.
-
ಬಲಿ.
ದೇವರಿಗೆ ಧನ್ಯವಾದ ಹೇಳೋಕೆ, ತಪ್ಪನ್ನ ಸರಿಪಡಿಸೋಕೆ ಮತ್ತು ಆತನ ಜೊತೆ ಒಳ್ಳೇ ಸಂಬಂಧವನ್ನ ಬೆಳೆಸ್ಕೊಳ್ಳೋಕೆ ಸಹಾಯ ಮಾಡುತ್ತೆ. ಹೇಬೆಲನಿಂದ ಆರಂಭಿಸಿ ಮನುಷ್ಯರು ನಾನಾ ರೀತಿಯ ಬಲಿಗಳನ್ನ, ಪ್ರಾಣಿಗಳನ್ನ ಅರ್ಪಿಸ್ತಿದ್ರು. ಮೋಶೆಯ ನಿಯಮ ಪುಸ್ತಕ ಬಂದ ಮೇಲೆ ಬಲಿಗಳನ್ನ ಅರ್ಪಿಸೋದು ಕಡ್ಡಾಯ ಆಯ್ತು. ಯೇಸು ತನ್ನ ಪ್ರಾಣವನ್ನ ಬಲಿಯಾಗಿ ಕೊಟ್ಟ ಮೇಲೆ ಪ್ರಾಣಿಗಳನ್ನ ಬಲಿಯಾಗಿ ಕೊಡೋ ಅವಶ್ಯಕತೆ ಇಲ್ಲದೆ ಹೋಯ್ತು. ಆದ್ರೆ ಕ್ರೈಸ್ತರು ದೇವರಿಗೆ ಆಧ್ಯಾತ್ಮಿಕ ಬಲಿಗಳನ್ನ ಅರ್ಪಿಸ್ತಾರೆ.—ಆದಿ 4:4; ಇಬ್ರಿ 13:15, 16; 1ಯೋಹಾ 4:10.
-
ಬಾಳ.
ಕಾನಾನ್ ದೇಶದ ದೇವರು. ಬಾಳ ಆಕಾಶದ ಒಡೆಯ, ಮಳೆರಾಯ, ಸಂತಾನೋತ್ಪತ್ತಿ ಮತ್ತು ಫಲವತ್ತತೆಯ ದೇವರು ಅಂತ ಜನ ನಂಬಿದ್ರು. ಬೇರೆ ಬೇರೆ ಸ್ಥಳಗಳಲ್ಲಿದ್ದ ಚಿಕ್ಕಪುಟ್ಟ ದೇವರುಗಳಿಗೆ ಸಹ ಬಾಳ ಅಂತ ಕರಿತಿದ್ರು. ಹೀಬ್ರು ಭಾಷೆಯಲ್ಲಿ ಈ ಪದದ ಅರ್ಥ “ಯಜಮಾನ; ಒಡೆಯ.”—1ಅರ 18:21; ರೋಮ 11:4.
-
ಬಾಳ್ಜೆಬೂಬ.
ಕೆಟ್ಟ ದೇವದೂತರ ನಾಯಕ ಅಥವಾ ರಾಜನಾದ ಸೈತಾನನಿಗೆ ಕೊಟ್ಟ ಒಂದು ಹೆಸ್ರು. ಇದು ಬಹುಶಃ ಬೆಲ್ಜೆಬೂಲ ಹೆಸ್ರಿನ ಇನ್ನೊಂದು ರೂಪ ಆಗಿರಬಹುದು. ಈ ಬಾಳನನ್ನ ಎಕ್ರೋನಲ್ಲಿದ್ದ ಫಿಲಿಷ್ಟಿಯರು ಆರಾಧಿಸ್ತಿದ್ರು.—2ಅರ 1:3; ಮತ್ತಾ 12:24.
-
ಬಿಡುಗಡೆ ಬೆಲೆ.
ಜೈಲಿಂದ, ಶಿಕ್ಷೆಯಿಂದ, ಬಾಧೆಯಿಂದ, ಪಾಪದಿಂದ ಬಿಡುಗಡೆ ಮಾಡೋಕೆ ಕೊಡೋ ಬೆಲೆ. ಎಲ್ಲ ಸಮಯದಲ್ಲಿ ಇದು ದುಡ್ಡೇ ಆಗಬೇಕಂತ ಇಲ್ಲ. (ಯೆಶಾ 43:3) ಬೇರೆಬೇರೆ ಸನ್ನಿವೇಶಗಳಲ್ಲಿ ಬಿಡುಗಡೆ ಬೆಲೆ ಕೊಡೋ ಅಗತ್ಯ ಬರ್ತಿತ್ತು. ಉದಾ. ಇಸ್ರಾಯೇಲಲ್ಲಿ ಹುಟ್ಟಿದ ಮೊದಲನೇ ಗಂಡುಮಕ್ಕಳು ಮತ್ತು ಮೊದಲು ಹುಟ್ಟಿದ ಗಂಡು ಪ್ರಾಣಿಗಳು ಯೆಹೋವನಿಗೆ ಸೇರಿದ್ದಾಗಿದ್ವು. ಯೆಹೋವನ ಸೇವೆಯಲ್ಲಿ ಮಾತ್ರ ಬಳಸಬೇಕಿದ್ದ ಈ ಗಂಡುಮಕ್ಕಳನ್ನ ಅಥವಾ ಗಂಡು ಪ್ರಾಣಿಗಳನ್ನ ಬಿಡಿಸಿಕೊಳ್ಳೋಕೆ ಬಿಡುಗಡೆ ಬೆಲೆ ಕೊಡಬೇಕಿತ್ತು. (ಅರ 3:45, 46; 18:15, 16) ಒಂದುವೇಳೆ ಕಟ್ಟಿಹಾಕದ ಹೋರಿ ಯಾರನ್ನಾದ್ರೂ ಗುದ್ದಿ ಕೊಂದ್ರೆ ಮೋಶೆಯ ನಿಯಮ ಪುಸ್ತಕದ ಪ್ರಕಾರ ಮರಣ ಶಿಕ್ಷೆಯಿಂದ ತಪ್ಪಿಸಿಕೊಳ್ಳೋಕೆ ಆ ಹೋರಿಯ ಯಜಮಾನ ತನ್ನನ್ನ ಬಿಡಿಸ್ಕೊಳ್ಳೋಕೆ ಬಿಡುಗಡೆ ಬೆಲೆ ಕೊಡಬೇಕಿತ್ತು. (ವಿಮೋ 21:29, 30) ಆದ್ರೆ ಬೇಕುಬೇಕಂತ ಕೊಲೆ ಮಾಡಿದ ವ್ಯಕ್ತಿಯಿಂದ ಬಿಡುಗಡೆ ಬೆಲೆ ತೆಗೆದುಕೊಳ್ತಿರಲಿಲ್ಲ. (ಅರ 35:31) ಎಲ್ಲಕ್ಕಿಂತ ಮುಖ್ಯವಾಗಿ, ಮಾತು ಕೇಳೋ ಮನುಷ್ಯರನ್ನ ಪಾಪ ಮತ್ತು ಮರಣದಿಂದ ಬಿಡಿಸೋಕೆ ಯೇಸು ಸತ್ತು ಮಹಾತ್ಯಾಗ ಮಾಡಿ ಕೊಟ್ಟ ಬಿಡುಗಡೆ ಬೆಲೆ ಅಥವಾ ವಿಮೋಚನಾ ಮೌಲ್ಯದ ಬಗ್ಗೆ ಬೈಬಲಿನಲ್ಲಿ ಒತ್ತಿ ಹೇಳಲಾಗಿದೆ.—ಕೀರ್ತ 49:7, 8; ಮತ್ತಾ 20:28; ಎಫೆ 1:7.
-
ಬೀಸೋ ಕಲ್ಲು.
ಒಂದು ದುಂಡಗಿರೋ ಕಲ್ಲಿನ ಮೇಲೆ ಇನ್ನೊಂದು ದುಂಡಗಿರೋ ಕಲ್ಲು ಇರುತ್ತೆ. ಮೇಲೆ ಇರೋ ಕಲ್ಲನ್ನ ತಿರುಗಿಸ್ತಾ ಧಾನ್ಯವನ್ನ ಹಿಟ್ಟು ಮಾಡ್ತಿದ್ರು. ಬೈಬಲ್ ಕಾಲದಲ್ಲಿ ಹೆಚ್ಚಿನ ಮನೆಗಳಲ್ಲಿ ಸ್ತ್ರೀಯರು ಇದನ್ನ ಬಳಸ್ತಿದ್ರು. ಪ್ರತಿದಿನ ಊಟ ತಯಾರಿಸೋಕೆ ಬೀಸೋ ಕಲ್ಲು ಅಗತ್ಯ ಇರೋದ್ರಿಂದ ಅದನ್ನ ಅಥವಾ ಅದ್ರ ಮೇಲಿರೋ ಕಲ್ಲನ್ನ ಹಣಕ್ಕೋಸ್ಕರ ಅಡವು ಇಟ್ಕೊಳ್ಳೋದನ್ನ ನಿಯಮ ಪುಸ್ತಕ ನಿಷೇಧಿಸಿತು. ಇದೇ ತರ ಇರೋ ದೊಡ್ಡ ಬೀಸೋ ಕಲ್ಲನ್ನ ತಿರುಗಿಸೋಕೆ ಪ್ರಾಣಿಗಳನ್ನ ಬಳಸ್ತಿದ್ರು.—ಧರ್ಮೋ 24:6; ಮಾರ್ಕ 9:42.
-
ಬುದ್ದಲಿ.
ಆಡು ಅಥವಾ ಕುರಿಯಂತಹ ಪ್ರಾಣಿಗಳ ಪೂರ್ತಿ ಚರ್ಮದಿಂದ ತಯಾರು ಮಾಡುತ್ತಿದ್ದ ಚರ್ಮದ ಚೀಲ. ಇದನ್ನ ದ್ರಾಕ್ಷಾಮದ್ಯ ಇಡೋಕೆ ಬಳಸ್ತಿದ್ರು. ದ್ರಾಕ್ಷಾಮದ್ಯ ಹುಳಿಬಿಟ್ಟ ಹಾಗೆ ಕಾರ್ಬನ್ ಡೈ ಆಕ್ಸೈಡನ್ನ ಬಿಡ್ತಾ ಚರ್ಮದ ಚೀಲದ ಮೇಲೆ ಒತ್ತಡ ಹಾಕೋದ್ರಿಂದ ಹೊಸ ಬುದ್ದಲಿಗಳು ಆ ಒತ್ತಡ ತಾಳ್ಕೊಂಡು ದೊಡ್ಡದಾಗುತ್ತಿದ್ವು. ಆದ್ರೆ ಹಳೇ ಬುದ್ದಲಿಗಳು ಆ ಒತ್ತಡಕ್ಕೆ ಒಡೆದು ಹೋಗ್ತಿದ್ವು. ಅದಕ್ಕೆ ಹೊಸ ಮದ್ಯವನ್ನ ಹೊಸ ಬುದ್ದಲಿಯಲ್ಲೇ ಹಾಕ್ತಿದ್ರು.—ಯೆಹೋ 9:4; ಮತ್ತಾ 9:17.
-
ಬುಲ್.
ಯೆಹೂದ್ಯರು ಬಳಸ್ತಿದ್ದ ಪವಿತ್ರ ಕ್ಯಾಲೆಂಡರಿನ 8ನೇ ತಿಂಗಳು. ಬೇರೆಯವ್ರ ಕ್ಯಾಲೆಂಡರಿನ ಎರಡನೇ ತಿಂಗಳು. ಅದ್ರ ಅರ್ಥ ‘ಬೆಳೆಸು.’ ನಮ್ಮ ಕ್ಯಾಲೆಂಡರ್ ಪ್ರಕಾರ ಈ ತಿಂಗಳು ಅಕ್ಟೋಬರ್ ಮತ್ತು ನವೆಂಬರ್ ಮಧ್ಯ ಬರುತ್ತೆ. (1ಅರ 6:38)—ಪರಿಶಿಷ್ಟ ಬಿ15 ನೋಡಿ.
-
ಬೂಷ್ಟು.
ಫಂಗಸ್‌ನಿಂದ ಗಿಡಗಳಿಗೆ ಬರೋ ಕಾಯಿಲೆ. ಬೈಬಲಲ್ಲಿ ಹೇಳಿರೋ ಈ ಕಾಯಿಲೆ ಗಿಡಗಳ ಕೊಂಬೆಗಳಲ್ಲಿ, ಎಲೆಗಳಲ್ಲಿ ತುಕ್ಕಿನ ಬಣ್ಣ ಇರೋ ಫಂಗಸ್ ಇರಬಹುದು (ಪುಸಿನಿಯ ಗ್ರಾಮೀನಿಸ್.)—1ಅರ 8:37.
-
ಬೆಂಕಿ ಕೆರೆ.
ಬೆಂಕಿ ಮತ್ತು ಗಂಧಕ ಉರಿಯೋ ಒಂದು ಸಾಂಕೇತಿಕ ಜಾಗ. ಇದನ್ನ ಎರಡನೇ ಮರಣ ಅಂತಾನೂ ಕರಿತಾರೆ. ಪಶ್ಚಾತ್ತಾಪ ಪಡದ ಪಾಪಿಗಳನ್ನ, ಸೈತಾನನನ್ನ, ಮರಣವನ್ನ, ಸಮಾಧಿಯನ್ನ ಅಥವಾ ಹೇಡೀಸನ್ನ ಇದಕ್ಕೆ ಎಸೆಯಲಾಗುತ್ತೆ. ಸ್ವರ್ಗದಲ್ಲಿರೋ ಜೀವಿಗಳಿಗೆ, ಮರಣಕ್ಕೆ, ಹೇಡೀಸ್‌ಗೆ ಬೆಂಕಿಯಿಂದ ಏನೂ ಆಗಲ್ಲ. ಹಾಗಾಗಿ ಇದು ಶಾಶ್ವತ ಯಾತನೆಯನ್ನಲ್ಲ, ಶಾಶ್ವತ ನಾಶವನ್ನ ಸೂಚಿಸುತ್ತೆ.—ಪ್ರಕ 19:20; 20:14, 15; 21:8.
-
ಬೆಳಗಿನ ನಕ್ಷತ್ರ.
—ನಸುಕಿನ ನಕ್ಷತ್ರ ನೋಡಿ.
ಭ
-
ಭವಿಷ್ಯ ಹೇಳೋರು.
ಭವಿಷ್ಯದಲ್ಲಿ ಏನಾಗುತ್ತೋ ಅದನ್ನ ಹೇಳೋ ಸಾಮರ್ಥ್ಯ ಇದೆ ಅಂತ ಹೇಳ್ಕೊಳ್ಳುವವರು. ಮಂತ್ರವಾದಿಗಳನ್ನ, ಕೆಟ್ಟ ದೇವದೂತರ ಸಹಾಯದಿಂದ ಭವಿಷ್ಯ ಹೇಳೋರನ್ನ, ಜ್ಯೋತಿಷಿಗಳನ್ನ ಬೈಬಲ್ “ಭವಿಷ್ಯ ಹೇಳೋರು” ಅಂತ ಕರಿಯುತ್ತೆ.—ಯಾಜ 19:31; ಧರ್ಮೋ 18:11; ಅಕಾ 16:16.
-
ಭವಿಷ್ಯವಾಣಿ.
ದೇವರ ಶಕ್ತಿಯಿಂದ ಸಿಕ್ಕ ಸಂದೇಶ. ದೇವರ ಇಷ್ಟವನ್ನ ಬಯಲು ಮಾಡೋಕೆ ಅಥವಾ ಯೆಹೆ 37:9, 10; ದಾನಿ 9:24; ಮತ್ತಾ 13:14; 2ಪೇತ್ರ 1:20, 21.
ಎಲ್ಲರಿಗೂ ಹೇಳೋಕೆ ಭವಿಷ್ಯವಾಣಿ ಆಗ್ತಿತ್ತು.—
ಮ
-
ಮಕೆದೋನ್ಯ.
ಮಹಾ ಅಲೆಗ್ಸಾಂಡರನ ಆಳ್ವಿಕೆಯಲ್ಲಿ ತುಂಬಾ ಹೆಸರುವಾಸಿಯಾದ ಪ್ರದೇಶ. ಇದು ಗ್ರೀಸಿನ ಉತ್ತರಕ್ಕೆ ಇತ್ತು. ರೋಮನ್ನರು ಇದನ್ನ ವಶ ಮಾಡ್ಕೊಳ್ಳೋ ತನಕ ಇದು ಸ್ವತಂತ್ರ ದೇಶವಾಗಿತ್ತು. ಅಪೊಸ್ತಲ ಪೌಲ ಮೊದಲ್ನೇ ಸಲ ಯುರೋಪಿಗೆ ಹೋದಾಗ ಮಕೆದೋನ್ಯ ರೋಮ್ ಸಾಮ್ರಾಜ್ಯಕ್ಕೆ ಸೇರಿತ್ತು. ಪೌಲ ಈ ಪ್ರದೇಶವನ್ನ ಮೂರು ಸಾರಿ ಭೇಟಿ ಮಾಡಿದ. (ಅಕಾ 16:9)—ಪರಿಶಿಷ್ಟ ಬಿ13 ನೋಡಿ.
-
ಮತಾಂತರ ಆದವರು.
ಬೈಬಲಿನಲ್ಲಿ ಇದು ಯೆಹೂದಿ ಮತಕ್ಕೆ ಮತಾಂತರ ಆದವರನ್ನ ಸೂಚಿಸುತ್ತೆ. ಅವರು ಗಂಡಸರಾಗಿದ್ರೆ ಸುನ್ನತಿ ಮಾಡಿಸ್ಕೊಳ್ಳಬೇಕಿತ್ತು.—ಮತ್ತಾ 23:15; ಅಕಾ 13:43.
-
ಮತ್ತೆ ಜೀವಂತ ಎದ್ದು ಬರೋದು.
ಗ್ರೀಕ್‌ನಲ್ಲಿ ಬಳಸಿರೋ ಅನಾಸ್ಟಾಸಿಸ್ ಅನ್ನೋ ಪದಕ್ಕೆ ಅಕ್ಷರಾರ್ಥಕವಾಗಿ ಎದ್ದು ನಿಂತ್ಕೊ ಅನ್ನೋ ಅರ್ಥ ಇದೆ. ಬೈಬಲಿನಲ್ಲಿ ಬೇರೆ ಬೇರೆ ಸನ್ನಿವೇಶಗಳಲ್ಲಿ ಒಟ್ಟು ಒಂಬತ್ತು ಜನ್ರನ್ನ ಯೆಹೋವ ದೇವರು ಮತ್ತೆ ಜೀವಂತ ಎಬ್ಬಿಸಿದ್ದರ ಬಗ್ಗೆ ಇದೆ. ಅದ್ರಲ್ಲಿ ಯೇಸು ಕ್ರಿಸ್ತನನ್ನ ಎಬ್ಬಿಸಿರೋದೂ ಸೇರಿದೆ. ಈ ಅದ್ಭುತಗಳನ್ನ ಎಲೀಯ, ಎಲೀಷ, ಯೇಸು, ಪೇತ್ರ, ಪೌಲ ಮಾಡಿದ್ರು ಅಂತ ಇರೋದಾದ್ರೂ ಇದೆಲ್ಲ ಆಗಿದ್ದು ದೇವರ ಶಕ್ತಿಯಿಂದ. ‘ನೀತಿವಂತರು ಮತ್ತು ಅನೀತಿವಂತರು ಇದೇ ಭೂಮಿಯಲ್ಲಿ ಮತ್ತೆ ಬದುಕೋ ತರ ಮಾಡೋದು’ ದೇವರ ಉದ್ದೇಶದ ಮುಖ್ಯ ಭಾಗವಾಗಿದೆ. (ಅಕಾ 24:15) ಮತ್ತೆ ಜೀವಂತ ಎಬ್ಬಿಸಿ ಸ್ವರ್ಗಕ್ಕೆ ಕರೆದುಕೊಳ್ಳೋದರ ಬಗ್ಗೆನೂ ಬೈಬಲಿನಲ್ಲಿದೆ. ಅಂಥದನ್ನ ಬೈಬಲ್ ‘ಮೊದಲ್ನೇ ಸಲ ಜೀವ ಪಡ್ಕೊಂಡವರು’ ಅಂತ ಹೇಳುತ್ತೆ. ಇವರು ಯೇಸುವಿನ ಸಹೋದರರಾಗಿ ದೇವರ ಪವಿತ್ರಶಕ್ತಿಯಿಂದ ಅಭಿಷಿಕ್ತರಾಗಿ ಇರ್ತಾರೆ.—ಫಿಲಿ 3:11; ಪ್ರಕ 20:5, 6; ಯೋಹಾ 5:28, 29; 11:25.
-
ಮತ್ತೆ ಬರೋ ಕಾಲ.
ಪವಿತ್ರ ಗ್ರಂಥದ ಕ್ರೈಸ್ತ ಗ್ರೀಕ್ ಭಾಗದ ಕೆಲವೊಂದು ಕಡೆ ಈ ಪದ ಯೇಸು ಕ್ರಿಸ್ತ ರಾಜನಾಗಿ ಬರೋದನ್ನ ಸೂಚಿಸುತ್ತೆ. ಕೊನೆ ದಿನಗಳಲ್ಲಿ ಆಗುವ ಈ ಘಟನೆ ಅದೃಶ್ಯವಾಗಿರುತ್ತೆ. ಯೇಸು ಬರೋ ಈ ಕಾಲ ಅಂದ್ರೆ ಅದು ಕೇವಲ ಸ್ವಲ್ಪ ಕಾಲವನ್ನಲ್ಲ ಬದಲಿಗೆ ಧೀರ್ಘ ಕಾಲವನ್ನ ಸೂಚಿಸುತ್ತೆ.—ಮತ್ತಾ 24:3.
-
ಮಧ್ಯಸ್ಥ.
ಎರಡು ಪಕ್ಷಗಳ ಮಧ್ಯ ರಾಜಿ ಮಾಡಿಸೋಕೆ ಮಧ್ಯವರ್ತಿಯಾಗಿ ಇರೋ ವ್ಯಕ್ತಿ. ಬೈಬಲಲ್ಲಿ, ನಿಯಮ ಪುಸ್ತಕದ ಒಪ್ಪಂದಕ್ಕೆ ಮೋಶೆ ಮತ್ತು ಹೊಸ ಒಪ್ಪಂದಕ್ಕೆ ಯೇಸು ಮಧ್ಯಸ್ಥರು.—ಗಲಾ 3:19; 1ತಿಮೊ 2:5.
-
ಮನುಷ್ಯಕುಮಾರ.
ಈ ಪದ ಮತ್ತಾಯದಿಂದ ಯೋಹಾನ ಪುಸ್ತಕಗಳಲ್ಲಿ ಸುಮಾರು 80 ಸಲ ಬರುತ್ತೆ. ಈ ಬಿರುದನ್ನ ಯೇಸು ಕ್ರಿಸ್ತನಿಗೆ ಬಳಸಲಾಗಿದೆ. ಆತನು ಕೇವಲ ಮಾನವ ಶರೀರ ಧರಿಸಿದ ಸ್ವರ್ಗದ ಜೀವಿ ಅಲ್ಲ, ಬದಲಿಗೆ ಭೌತಿಕ ಶರೀರದಿಂದ ಹುಟ್ಟಿದ್ರಿಂದ ಮನುಷ್ಯನಾದನು ಅಂತ ಈ ಪದ ಸೂಚಿಸುತ್ತೆ. ದಾನಿಯೇಲ 7:13, 14ರಲ್ಲಿ ಇರೋ ಭವಿಷ್ಯವಾಣಿಯನ್ನ ಯೇಸು ನೆರವೇರಿಸ್ತಾನೆ ಅಂತ ಕೂಡ ಈ ಪದ ತೋರಿಸುತ್ತೆ. ಪವಿತ್ರ ಗ್ರಂಥದ ಹೀಬ್ರು ಭಾಗದಲ್ಲಿ ಯೆಹೆಜ್ಕೇಲನಿಗೂ, ದಾನಿಯೇಲನಿಗೂ ಈ ಹೆಸ್ರು ಬಳಸಲಾಗಿದೆ. ಅವ್ರ ಸಂದೇಶಕ್ಕೆ ಮೂಲವಾದ ದೇವರಿಗೂ, ಮಾನವರಾದ ಇವ್ರಿಗೂ ಮಧ್ಯ ಇರೋ ವ್ಯತ್ಯಾಸವನ್ನ ತೋರಿಸೋಕೆ ಅವ್ರನ್ನ ಹೀಗೆ ಕರಿಯಲಾಗ್ತಿತ್ತು.—ಯೆಹೆ 3:17; ದಾನಿ 8:17; ಮತ್ತಾ 19:28; 20:28.
-
ಮನೆದೇವರ ಮೂರ್ತಿ.
ಶಕುನ ನೋಡೋಕೆ ಉಪಯೋಗಿಸೋ ಮನೆದೇವರುಗಳ ಮೂರ್ತಿಗಳನ್ನ ಟೆರಾಫಿಮ್ ಮೂರ್ತಿಗಳು ಅಂತಿದ್ರು. (ಯೆಹೆ 21:21) ಇಂತಹ ಕೆಲವು ಮೂರ್ತಿಗಳ ಗಾತ್ರ ಮನುಷ್ಯನಷ್ಟು ಇದ್ರೆ ಇನ್ನು ಕೆಲವು ಮೂರ್ತಿಗಳು ತುಂಬಾ ಚಿಕ್ಕದಾಗಿ ಇರ್ತಿದ್ವು. (ಆದಿ 31:34; 1ಸಮು 19:13, 16) ಮೆಸಪಟೇಮ್ಯದ ಅಗೆತ ಶಾಸ್ತ್ರಜ್ಞರು ಹೇಳೋ ಪ್ರಕಾರ ಮನೆದೇವರ ಮೂರ್ತಿಗಳು ಯಾರ ಹತ್ರ ಇರ್ತಿದ್ವೋ ಅವರಿಗೆ ಆ ಇಡೀ ಕುಟುಂಬದ ಆಸ್ತಿ ಸಿಕ್ತಿತ್ತು. (ಅದಕ್ಕೇ ರಾಹೇಲಳು ಅವಳ ಅಪ್ಪನ ಹತ್ರ ಇದ್ದ ಮನೆದೇವರುಗಳ ಮೂರ್ತಿಗಳನ್ನ ಕದ್ದಿದ್ದಳು.) ಆದ್ರೆ ಇಸ್ರಾಯೇಲಿನಲ್ಲಿ ಈ ಪದ್ಧತಿ ಇರ್ಲಿಲ್ಲ. ಆದ್ರೆ ಮನೆದೇವರುಗಳ ಮೂರ್ತಿಗಳನ್ನ ನ್ಯಾಯಾಧೀಶರ ಮತ್ತು ರಾಜರ ಕಾಲದಲ್ಲಿ ಉಪಯೋಗಿಸಿದ್ದಾರೆ. ನಂಬಿಗಸ್ತ ರಾಜನಾಗಿದ್ದ ಯೋಷೀಯ ಅಂಥ ಎಲ್ಲ ಮೂರ್ತಿಗಳನ್ನ ನಾಶಮಾಡಿದನು.—ನ್ಯಾಯ 17:5; 2ಅರ 23:24; ಹೋಶೇ 3:4.
-
ಮನ್ನಾ.
ಇಸ್ರಾಯೇಲ್ಯರು 40 ವರ್ಷ ಕಾಡಲ್ಲಿದ್ದಾಗ ತಿಂದ ಆಹಾರ. ಯೆಹೋವ ಅವ್ರಿಗೆ ಇದನ್ನ ವಿಮೋ 16:13-15, 35) ಬೇರೆ ಸಂದರ್ಭಗಳಲ್ಲಿ ಇದನ್ನ “ಸ್ವರ್ಗದ ಧಾನ್ಯ” (ಕೀರ್ತ 78:24), “ಸ್ವರ್ಗದಿಂದ ಆಹಾರ” (ಕೀರ್ತ 105:40), “ದೇವದೂತರ ಆಹಾರ” (ಕೀರ್ತ 78:25) ಅಂತ ಹೇಳಿದೆ. ಯೇಸು ಕೂಡ ಮನ್ನವನ್ನ ಅಲಂಕಾರಿಕವಾಗಿ ಬಳಸಿದ್ದಾನೆ.—ಯೋಹಾ 6:49, 50.
ಕೊಟ್ಟಿದ್ದನು. ಅದು ಸಬ್ಬತ್ ದಿನ ಬಿಟ್ಟು ಪ್ರತಿದಿನ ಅದ್ಭುತವಾಗಿ ನೆಲದ ಮೇಲೆ ಬೀಳ್ತಿತ್ತು. ಅದ್ರ ಮೇಲೆ ಹಿಮದ ಪದರ ಇರ್ತಿತ್ತು. ಇಸ್ರಾಯೇಲ್ಯರು ಮೊದಲ ಸಲ ನೋಡಿದಾಗ “ಇದೇನು” ಹೀಬ್ರು ಭಾಷೆಯಲ್ಲಿ “ಮಾನ್ ಹೂ” ಅಂತ ಕೇಳಿದ್ರು. ( -
ಮರದ ಕಂಬ.
ಒಬ್ಬ ವ್ಯಕ್ತಿಯನ್ನ ನೇತುಹಾಕೋ ಒಂದು ಉದ್ದದ ಕಂಬ. ಇದನ್ನ ಕೆಲವು ದೇಶಗಳಲ್ಲಿ ಮರಣಶಿಕ್ಷೆ ವಿಧಿಸೋಕೆ, ಬೇರೆಯವರಿಗೆ ಎಚ್ಚರಿಕೆಯಾಗಿ ಇರೋಕೆ ಇಲ್ಲಾ ಎಲ್ಲರ ಮುಂದೆ ಅವಮಾನ ಮಾಡೋಕೆ ಬಳಸ್ತಿದ್ರು. ಪೈಶಾಚಿಕ ಯುದ್ಧಗಳಿಗೆ ಹೆಸ್ರುವಾಸಿಯಾದ ಅಶ್ಶೂರ್ಯರು ಬಂದಿಗಳನ್ನ ಚೂಪಾದ ಕಂಬಗಳ ಮೇಲೆ ನೇತುಹಾಕ್ತಿದ್ರು. ಆ ಕಂಬ, ಬಾಧಿತನ ಹೊಟ್ಟೆ ಮತ್ತು ಎದೆಯನ್ನ ತೂರಿಕೊಂಡು ಹೋಗ್ತಿತ್ತು. ಆದ್ರೆ, ಯೆಹೂದ್ಯರ ನಿಯಮ ಪುಸ್ತಕದ ಪ್ರಕಾರ ದೇವದೂಷಣೆ ಅಥವಾ ಮೂರ್ತಿಪೂಜೆ ಅಂತಹ ಘೋರ ಪಾಪಗಳನ್ನ ಮಾಡಿದವರಿಗೆ ಮೊದಲು ಕಲ್ಲು ಹೊಡೆದು ಸಾಯಿಸಿ ಆಮೇಲೆ ಬೇರೆಯವರಿಗೆ ಎಚ್ಚರಿಕೆಯಾಗಿ ಇರಲಿ ಅಂತ ಕಂಬಕ್ಕೆ ಇಲ್ಲಾ ಮರಕ್ಕೆ ನೇತುಹಾಕ್ತಿದ್ರು. (ಧರ್ಮೋ 21:22, 23; 2ಸಮು 21:6, 9) ರೋಮನ್ನರು ಕೆಲವೊಮ್ಮೆ ಅಪರಾಧಿಗಳನ್ನ ಕಂಬಕ್ಕೆ ನೇತುಹಾಕಿ ಹಾಗೇ ಬಿಟ್ಟುಬಿಡ್ತಿದ್ರು. ಹೀಗೆ ಅವರು ನೋವಿಂದ, ಹಸಿವಿಂದ, ಬಾಯಾರಿಕೆಯಿಂದ, ಬಿಸಿಲಿಂದ ಬಾಧೆ ಅನುಭವಿಸಿ ಸ್ವಲ್ಪ ದಿನಗಳಲ್ಲೇ ಸತ್ತುಹೋಗ್ತಿದ್ರು. ಇನ್ನೂ ಕೆಲವು ಅಪರಾಧಿಗಳ ಕೈಗಳಿಗೆ ಮತ್ತು ಕಾಲುಗಳಿಗೆ ಮೊಳೆಗಳಿಂದ ಕಂಬಕ್ಕೆ ಜಡಿತಿದ್ರು. ಯೇಸುಗೆ ಮರಣಶಿಕ್ಷೆ ಕೊಟ್ಟಾಗ ಅವರು ಹಾಗೇ ಮಾಡಿದ್ರು. (ಲೂಕ 24:20; ಯೋಹಾ 19:14-16; 20:25; ಅಕಾ 2:23, 36)—ಹಿಂಸಾ ಕಂಬ ಸಹ ನೋಡಿ.
-
ಮಲ್ಕಾಮ.
ಅಮ್ಮೋನಿಯರ ಪ್ರಧಾನ ದೇವರಾಗಿರೋ ಮೋಲೆಕ ಆಗಿರಬಹುದು. (ಚೆಫ 1:5)—ಮೋಲೆಕ ನೋಡಿ.
-
ಮಸ್ಕಿಲ್.
ಕೀರ್ತನೆ 13ನೇ ಶೀರ್ಷಿಕೆಯಲ್ಲಿರೋ ಒಂದು ಹೀಬ್ರು ಪದ. ಇದರರ್ಥ ಏನಂತ ಗೊತ್ತಿಲ್ಲ. “ಯೋಚ್ನೆ ಮಾಡೋ ತರ ಮಾಡೋ ಕವಿತೆ” ಅನ್ನೋ ಅರ್ಥ ಇರಬಹುದು. ಇದೇ ತರ ಇರೋ ಇನ್ನೊಂದು ಪದದ ಅರ್ಥ ‘ವಿವೇಚನೆಯಿಂದ ಸೇವೆ ಮಾಡು.’ ಈ ಎರಡೂ ಪದದ ಅರ್ಥ ಒಂದೇ ತರ ಇರಬಹುದು.—2ಪೂರ್ವ 30:22; ಕೀರ್ತ 32:ಶೀರ್ಷಿಕೆ.
-
ಮಹಾ ಪುರೋಹಿತ.
ಮೋಶೆಯ ನಿಯಮದ ಪ್ರಕಾರ ಇವನು ಪ್ರಧಾನ ಪುರೋಹಿತ. ದೇವರ ಮತ್ತು ಮನುಷ್ಯರ ಮಧ್ಯ ಇದ್ದ ಮಧ್ಯಸ್ಥ. ಇವನು ಬೇರೆ ಪುರೋಹಿತರನ್ನ ನೋಡ್ಕೊಳ್ತಿದ್ದ. ಅವನನ್ನ “ಮುಖ್ಯ ಪುರೋಹಿತ” ಅಂತಾನೂ ಕರಿತಿದ್ರು. (2ಪೂರ್ವ 26:20; ಎಜ್ರ 7:5) ಪವಿತ್ರ ಡೇರೆಯ ಮತ್ತು ದೇವಾಲಯದ ಅತಿ ಪವಿತ್ರ ಸ್ಥಳಕ್ಕೆ ಇವನು ಮಾತ್ರ ಹೋಗಬಹುದಿತ್ತು. ವರ್ಷಕ್ಕೊಮ್ಮೆ ಪ್ರಾಯಶ್ಚಿತ್ತ ದಿನದಂದು ಮಾತ್ರ ಇವನು ಅತಿ ಪವಿತ್ರ ಸ್ಥಳಕ್ಕೆ ಹೋಗ್ತಿದ್ದ. ಯೇಸು ಕ್ರಿಸ್ತನನ್ನ ಬೈಬಲ್ ಮಹಾ ಪುರೋಹಿತ ಅಂತ ಹೇಳುತ್ತೆ.—ಯಾಜ 16:2, 17; 21:10; ಮತ್ತಾ 26:3; ಇಬ್ರಿ 4:14.
-
ಮಹಾ ಸಂಕಟ.
ಯಾವತ್ತೂ ಬರದಂಥ ಒಂದು ಮಹಾ ಸಂಕಟ ಯೆರೂಸಲೇಮಲ್ಲಿ ಬರುತ್ತೆ ಅಂತ ಯೇಸು ಹೇಳಿದ್ದನು. ಅಷ್ಟೇ ಅಲ್ಲ ಆತನು ‘ಅಧಿಕಾರದಿಂದ ಮೋಡಗಳ ಮೇಲೆ ಬರುವಾಗ’ ಇಡೀ ಮಾನವಕುಲಕ್ಕೆ ಇದೇ ತರ “ಮಹಾ ಸಂಕಟ” ಬರುತ್ತೆ ಅಂತಾನೂ ಹೇಳಿದನು. (ಮತ್ತಾ 24:21, 29-31) ‘ದೇವರನ್ನ ತಿಳ್ಕೊಳ್ಳದವ್ರ ಮತ್ತು ನಮ್ಮ ಪ್ರಭು ಯೇಸು ಬಗ್ಗೆ ಇರೋ ಸಿಹಿಸುದ್ದಿಗೆ ತಕ್ಕ ಹಾಗೆ ನಡಿಯದವ್ರ’ ಮೇಲೆ ಮಹಾ ಸಂಕಟ ತಂದು ದೇವರು ನ್ಯಾಯವಂತ ಅಂತ ತೋರಿಸ್ಕೊಡ್ತಾನೆ ಅಂತ ಪೌಲ ಹೇಳಿದ. ‘ಕಾಡುಪ್ರಾಣಿ, ಭೂಮಿಯ ರಾಜರ ಮತ್ತು ಅವ್ರ ಸೈನಿಕರ’ ವಿರುದ್ಧ ಸ್ವರ್ಗೀಯ ಸೈನ್ಯವನ್ನ ಯೇಸು ಮುನ್ನಡೆಸೋದ್ರ ಬಗ್ಗೆ ಪ್ರಕಟನೆ 19ನೇ ಅಧ್ಯಾಯದಲ್ಲಿ ಇದೆ. (2ಥೆಸ 1:6-8; ಪ್ರಕ 19:11-21) ಮಹಾ ಸಂಕಟವನ್ನ “ದೊಡ್ಡ ಗುಂಪು” ಪಾರಾಗುತ್ತೆ ಅಂತ ಹೇಳುತ್ತೆ. (ಪ್ರಕ 7:9, 14)—ಅರ್ಮಗೆದ್ದೋನ್ ನೋಡಿ.
-
ಮಹಾಲತ್.
ಕೀರ್ತನೆ 53, 88ರ ಶೀರ್ಷಿಕೆಯಲ್ಲಿ ಇರೋ ಈ ಪದ ಸಂಗೀತಕ್ಕೆ ಸಂಬಂಧಪಟ್ಟಿದೆ. “ಸುಸ್ತಾಗೋದು, ರೋಗ ಬರೋದು” ಅನ್ನೋ ಅರ್ಥ ಕೊಡುವಂಥ ಒಂದು ಹೀಬ್ರು ಕ್ರಿಯಾಪದಕ್ಕೆ ಸಂಬಂಧ ಪಟ್ಟಿರಬಹುದು. ಇದು ತುಂಬಾ ದುಃಖ ಮತ್ತು ನಿರಾಸೆಯ ಭಾವನೆ ಇರೋ ಒಂದು ಸಂಗೀತ. ಇದೇ ತರಾನೇ ಈ ಎರಡು ಹಾಡುಗಳೂ ಇವೆ.
-
ಮಾಚಿಪತ್ರೆ.
ತುಂಬ ಕಹಿಯಾಗಿರೋ, ಘಾಟು ವಾಸನೆ ಇರೋ ವಿಧವಿಧವಾದ ಕಾಡು ಸಸ್ಯಗಳು. ಬೈಬಲಲ್ಲಿ ಪ್ರಕಟನೆ 8:11ರ ಪಾದಟಿಪ್ಪಣಿಯಲ್ಲಿರೋ “ಮಾಚಿಪತ್ರೆ” ಅನ್ನೋ ಪದ ಕಹಿಯಾದ ವಿಷಪೂರಿತ ಪದಾರ್ಥವನ್ನ ಸೂಚಿಸುತ್ತೆ.—ಧರ್ಮೋ 29:18; ಜ್ಞಾನೋ 5:4; ಯೆರೆ 9:15; ಆಮೋ 5:7 ಪಾದಟಿಪ್ಪಣಿಗಳು.
ಈ ಪದವನ್ನ ಅನೈತಿಕತೆ, ಬಂಧಿವಾಸ, ಅನ್ಯಾಯ, ಧರ್ಮಭ್ರಷ್ಟತೆಯಿಂದ ಬರೋ ಕಹಿ ಪರಿಣಾಮಗಳನ್ನ ಸೂಚಿಸೋಕೆ ಬಳಸಲಾಗಿದೆ. -
ಮಿಕ್ತಾಮ್.
6ನೇ ಕೀರ್ತನೆಯ ಶೀರ್ಷಿಕೆಯಲ್ಲಿ ಇರೋ ಹೀಬ್ರು ಪದ. (ಕೀರ್ತ 16; 56–60) ಈ ತಾಂತ್ರಿಕ ಪದದ ಅರ್ಥ ಗೊತ್ತಿಲ್ಲ. “ಕೆತ್ತಲಾದ” ಅನ್ನೋ ಪದಕ್ಕೆ ಸಂಬಂಧ ಪಟ್ಟಿರಬಹುದು ಅಂತ ಕೆಲವರು ನೆನಸ್ತಾರೆ.
-
ಮಿಡತೆ.
ಒಂದು ದೊಡ್ಡ ಸೈನ್ಯವಾಗಿ ಅಥವಾ ಗುಂಪಾಗಿ ವಲಸೆ ಹೋಗೋ ಒಂದು ಜಾತಿಯ ಕೀಟಗಳು. ಮೋಶೆ ನಿಯಮ ಪುಸ್ತಕದ ಪ್ರಕಾರ ಇದನ್ನ ತಿನ್ನಬಹುದು. ದಾರೀಲಿ ಇರೋದನ್ನೆಲ್ಲ ತಿಂದು ಬಾರಿ ಮೊತ್ತದಲ್ಲಿ ನಾಶಮಾಡೋ ದೊಡ್ಡ ಮಿಡತೆಗಳ ದಂಡನ್ನ ಬಾಧೆಯಾಗಿ ನೋಡ್ತಿದ್ರು.—ವಿಮೋ 10:14; ಮತ್ತಾ 3:4.
-
ಮಿಲ್ಕೋಮ್.
ಅಮ್ಮೋನಿಯರ ಪ್ರಧಾನ ದೇವರಾದ ಮೋಲೆಕ ಆಗಿರಬಹುದು. (1ಅರ 11:5, 7) ಸೊಲೊಮೋನ ತನ್ನ ಆಳ್ವಿಕೆ ಕೊನೇಲಿ ಈ ಸುಳ್ಳು ದೇವರಿಗಾಗಿ ಎತ್ತರದ ಸ್ಥಳಗಳನ್ನ ಕಟ್ಟಿಸಿದನು.—ಮೋಲೆಕ ನೋಡಿ.
-
ಮಿಲ್ಲೋ, ಮಿಲ್ಲೋಕೋಟೆ.
ದಾವೀದನಗರದಲ್ಲಿ ಇದ್ದ ಒಂದು ಚಿಕ್ಕ ಬೆಟ್ಟ ಅಥವಾ ಒಂದು ಕಟ್ಟಡ. ಗೋಡೆಗಳ ಸಹಾಯದಿಂದ ನಿಂತಿರೋ ತೆರೆದ ಮಾಳಿಗೆ (ಟೆರೆಸ್) ಇರಬಹುದು.—2ಸಮು 5:9; 1ಅರ 11:27.
-
ಮುಖ್ಯ ಪುರೋಹಿತ.
ಹೀಬ್ರು ಪವಿತ್ರ ಗ್ರಂಥದಲ್ಲಿ “ಮಹಾ ಪುರೋಹಿತನ” ಇನ್ನೊಂದು ಹೆಸ್ರು. ಗ್ರೀಕ್ ಪವಿತ್ರ ಗ್ರಂಥದಲ್ಲಿ “ಮುಖ್ಯ ಪುರೋಹಿತರಲ್ಲಿ” ಪ್ರಾಮುಖ್ಯವಾದ ಪುರುಷರನ್ನ ಸೂಚಿಸ್ತಿರಬೇಕು. ಇದ್ರಲ್ಲಿ ಸ್ಥಾನ ಕಳ್ಕೊಂಡಿರೋ ಮಹಾ ಪುರೋಹಿತರು, 24 ಪುರೋಹಿತ ವರ್ಗದ ಮುಖ್ಯಸ್ಥರೂ ಇರಬಹುದು.—2ಪೂರ್ವ 26:20; ಎಜ್ರ 7:5; ಮತ್ತಾ 2:4; ಮಾರ್ಕ 8:31.
-
ಮುಖ್ಯ ಪ್ರತಿನಿಧಿ.
ಇದಕ್ಕಿರೋ ಗ್ರೀಕ್ ಪದದ ಅರ್ಥ “ಮುಖ್ಯ ನಾಯಕ.” ನಂಬಿಗಸ್ತ ಮನುಷ್ಯರಿಗೆ ಪಾಪಮರಣದ ಕೈಯಿಂದ ಶಾಶ್ವತಜೀವ ಸಿಗೋ ತರ ಮಾಡೋ ಮಧ್ಯಸ್ಥ. ಈ ಮುಖ್ಯವಾದ ಕೆಲಸವನ್ನ ಮಾಡೋ ಯೇಸು ಕ್ರಿಸ್ತನನ್ನ ಈ ಪದ ಸೂಚಿಸುತ್ತೆ.—ಅಕಾ 3:15; 5:31; ಇಬ್ರಿ 2:10; 12:2.
-
ಮುಖ್ಯಸ್ಥಳ.
ಖಾಲಿ ಜಾಗ. ಇದು ಪಟ್ಟಣದ ಬಾಗಿಲ ಹತ್ರ ಇದ್ದಿರಬಹುದು. ವ್ಯಾಪಾರ-ವ್ಯವಹಾರ ಮಾಡೋಕೆ ಜನ ಅಲ್ಲಿ ಸೇರಿಬರ್ತಿದ್ರು. ದೇವರ ನಿಯಮ ಪುಸ್ತಕವನ್ನ ಓದಿ ವಿವರಿಸುವಾಗ ಕೇಳಿಸ್ಕೊಳ್ಳೋಕೆ ಕೂಡ ಬರ್ತಿದ್ರು. (ಆದಿ 23:10-18; ನೆಹೆ 8:1-3; ಯೆರೆ 5:1) ಅಷ್ಟೇ ಅಲ್ಲ, ಹಿರಿಯರು ಕೇಸುಗಳ ಬಗ್ಗೆ ಚರ್ಚೆ ಮಾಡಕ್ಕೂ ಇಲ್ಲಿ ಬರ್ತಿದ್ರು.—ರೂತ್ 4:1, 2, 11.
-
ಮುದ್ರೆ ಉಂಗುರ.
ಉಂಗುರದ ಮೇಲೆ ಅಥವಾ ಬಹುಶಃ ಕುತ್ತಿಗೆ ಮೇಲೆ ಹಾಕಿರೋ ಸರದ ಮೇಲೆ ಹಾಕಿರೋ ಮುದ್ರೆ. ಇದನ್ನ ಒಬ್ಬ ಅಧಿಕಾರಿ ಅಥವಾ ರಾಜ ತನ್ನ ಗುರುತಾಗಿ ಬಳಸ್ತಿದ್ದನು. (ಆದಿ 41:42)—ಮುದ್ರೆ ನೋಡಿ.
-
ಮುದ್ರೆ.
ಇದು ಯಜಮಾನನ ಹಕ್ಕನ್ನ, ಅಧಿಕಾರ ಅಥವಾ ಒಪ್ಪಂದವನ್ನ ಸೂಚಿಸೋ ಗುರುತನ್ನ (ಸಾಮಾನ್ಯವಾಗಿ ಜೇಡಿಮಣ್ಣು ಅಥವಾ ಮೇಣದ ಮೇಲೆ) ಹಾಕೋಕೆ ಬಳಸೋ ಸಾಧನ. ಪ್ರಾಚೀನ ಕಾಲದ ಮುದ್ರೆಗಳಲ್ಲಿ ಗಟ್ಟಿಯಾದ ವಸ್ತುಗಳ (ಕಲ್ಲು, ಆನೆದಂತ ಅಥವಾ ಮರ) ಮೇಲೆ ಅಕ್ಷರಗಳನ್ನ ಇಲ್ಲಾ ಆಕಾರಗಳನ್ನ ವಿರುದ್ಧ ದಿಕ್ಕಲ್ಲಿ ಕೆತ್ತನೆ ಮಾಡ್ತಿದ್ರು. ಆದ್ರೆ ಅಧಿಕಾರವನ್ನ, ಒಬ್ಬ ವ್ಯಕ್ತಿ ಸೊತ್ತನ್ನ, ಗುಟ್ಟಾಗಿ ಅಥವಾ ರಹಸ್ಯವಾಗಿ ಇರೋದನ್ನ ಸೂಚಿಸೋಕೆ ಮುದ್ರೆ ಅನ್ನೋ ಪದವನ್ನ ಅಲಂಕಾರಿಕವಾಗಿ ಬಳಸಲಾಗ್ತಿತ್ತು.—ವಿಮೋ 28:11; ನೆಹೆ 9:38; ಪ್ರಕ 5:1; 9:4.
-
ಮುಳ್ಳುಗೋಲು.
ತುಂಬ ಚೂಪಾದ ತುದಿ ಇರೋ ಒಂದು ಕೋಲಿನ ತರ ಇದು ಇರುತ್ತೆ. ಇದ್ರಿಂದ ರೈತರು ಪ್ರಾಣಿಗಳನ್ನ ತಿವಿತಿದ್ರು. ಬುದ್ಧಿ ಇರೋನ ಮಾತುಗಳಿಗೆ ಮುಳ್ಳುಗೋಲನ್ನ ಹೋಲಿಸಿದ್ದಾರೆ. ಆ ಮಾತುಗಳನ್ನ ಕೇಳಿಸ್ಕೊಳ್ಳುವವನನ್ನ ಅದು ಪ್ರೇರಿಸುತ್ತೆ. ಹಠಮಾರಿ ಹೋರಿ ಮುಳ್ಳುಗೋಲಿಗೆ ಪದೇಪದೇ ವಾಪಸ್ ಒದ್ದು ತನಗೇ ಹಾನಿ ಮಾಡ್ಕೊಳ್ಳುತ್ತೆ. ಇದ್ರಿಂದ “ಮುಳ್ಳಿನ ಕೋಲಿಗೆ ಒದಿತಾ” ಇರೋದು ಅನ್ನೋ ಮಾತು ಹುಟ್ಕೊಂಡಿದೆ.—ಅಕಾ 26:14; ನ್ಯಾಯ 3:31.
-
ಮೂತ್‌ಲಾಬ್ಬೆನ್.
9ನೇ ಕೀರ್ತನೆಯ ಶೀರ್ಷಿಕೆಯಲ್ಲಿ ಈ ಪದ ಇದೆ. ಇದ್ರ ಅರ್ಥ “ಮಗನ ಸಾವಿನ ಬಗ್ಗೆ” ಅಂತ ತಲೆಮಾರುಗಳಿಂದ ಜನ ಹೇಳ್ಕೊಂಡು ಬಂದಿದ್ದಾರೆ. ಇದು ಕೀರ್ತನೆಯ ಹೆಸ್ರು ಅಥವಾ
ತುಂಬ ಪ್ರಸಿದ್ಧವಾದ ಸಂಗೀತದಲ್ಲಿ ಬರೋ ಆರಂಭದ ಕೆಲವು ಪದಗಳು ಇರಬಹುದು ಅಂತ ಕೆಲವರು ಹೇಳ್ತಾರೆ. -
ಮೂರ್ತಿ, ಮೂರ್ತಿಪೂಜೆ.
ಜನ್ರು ಆರಾಧನೆಗಾಗಿ ಉಪಯೋಗಿಸೋ ನಿಜವಾದ ಅಥವಾ ಕಲ್ಪಿಸ್ಕೊಂಡು ಮಾಡಿರೋ ರೂಪವನ್ನ ಮೂರ್ತಿ ಅಂತಾರೆ. ಮೂರ್ತಿ ಮೇಲಿರೋ ಗೌರವವನ್ನ, ಪ್ರೀತಿಯನ್ನ, ಆರಾಧನೆ ಮಾಡೋದನ್ನ, ಅಡ್ಡಬೀಳೋದನ್ನ ಮೂರ್ತಿಪೂಜೆ ಅಂತಾರೆ.—ಕೀರ್ತ 115:4; ಅಕಾ 17:16; 1ಕೊರಿಂ 10:14.
-
ಮೂಲೆಗಲ್ಲು.
ಎರಡು ಗೋಡೆ ಸೇರೋ ಕಡೆ ಮೂಲೆಯಲ್ಲಿ ಈ ಕಲ್ಲನ್ನ ಇಡ್ತಿದ್ರು. ಗೋಡೆಗಳನ್ನ ಸೇರಿಸಿ ಕಟ್ಟೋಕೆ ಈ ಕಲ್ಲು ತುಂಬ ಮುಖ್ಯ. ಅಡಿಪಾಯಕ್ಕೆ ಬಳಸೋ ಮೂಲೆಗಲ್ಲೇ ಮುಖ್ಯವಾದ ಮೂಲೆಗಲ್ಲು. ಸಾರ್ವಜನಿಕ ಕಟ್ಟಡಗಳನ್ನ, ಪಟ್ಟಣದ ಗೋಡೆಗಳನ್ನ ಕಟ್ಟೋಕೆ ಗಟ್ಟಿಯಾದ ಕಲ್ಲುಗಳನ್ನೇ ಆರಿಸ್ಕೊಳ್ತಿದ್ರು. ಭೂಮಿಯನ್ನ ಸೃಷ್ಟಿಮಾಡೋ ವಿಷ್ಯದಲ್ಲಿ ಈ ಪದವನ್ನ ಅಲಂಕಾರಿಕವಾಗಿ ಬಳಸಲಾಗಿದೆ. ಯೇಸುವನ್ನ ಆಧ್ಯಾತ್ಮಿಕ ಮನೆಗೆ ಹೋಲಿಸಿರೋ ಕ್ರೈಸ್ತ ಸಭೆಯ “ಅಡಿಪಾಯದ ಮೂಲೆಗಲ್ಲು” ಅಂತ ಕರೆಯಲಾಗಿದೆ.—ಎಫೆ 2:20; ಯೋಬ 38:6.
-
ಮೆರೋದಾಕ್.
ಬಾಬೆಲ್ ನಗರದ ಪ್ರಧಾನ ದೇವರು. ಬಾಬೆಲಿನ ರಾಜನೂ ನಿಯಮದಾತನೂ ಆಗಿರೋ ಹಮ್ಮುರಾಬಿ ಬಾಬೆಲನ್ನ ಬಾಬೆಲಿನ ರಾಜಧಾನಿಯಾಗಿ ಮಾಡಿದ. ಹೀಗೆ ಮಾಡಿದ ಮೇಲೆ ಮೆರೋದಾಕ್ (ಅಥವಾ ಮಾರ್ದೂಕ) ಹೆಸರುವಾಸಿ ಆಯ್ತು. ಕೊನೆಗೆ ಇದಕ್ಕಿಂತ ಮುಂಚೆ ಇದ್ದ ತುಂಬ ದೇವರುಗಳನ್ನ ರಾಜಧಾನಿಯಿಂದ ತೆಗೆದುಹಾಕಿ ಆ ಎಲ್ಲ ಸ್ಥಾನವನ್ನ ಮೆರೋದಾಕ್ ತಗೊಳ್ತು. ಬಾಬೆಲಿನ ಮುಖ್ಯ ದೇವರಾಯ್ತು. ತುಂಬಾ ಸಮಯ ಆದ್ಮೇಲೆ ಮೆರೋದಾಕ್ (ಅಥವಾ ಮಾರ್ದೂಕ) ಅನ್ನೋ ಹೆಸ್ರಿನ ಬದ್ಲು ಬೇಲೂ (ಅಥವಾ ಯಜಮಾನ) ಅನ್ನೋ ಹೆಸ್ರು ಬಂತು. ಮೆರೋದಾಕ್‌ಗೆ ಬೆಲ್ ಅನ್ನೋ ಹೆಸ್ರು ಎಲ್ರ ಬಾಯಲ್ಲೂ ಸಾಮಾನ್ಯವಾಯ್ತು.—ಯೆರೆ 50:2.
-
ಮೆಸ್ಸೀಯ.
“ಅಭಿಷೇಕ” ಅಥವಾ “ಅಭಿಷಿಕ್ತನಾದ ವ್ಯಕ್ತಿ” ಅನ್ನೋ ಅರ್ಥ ಇರೋ ಹೀಬ್ರು ಪದದಿಂದ ಬಂದಿದೆ. ಅದಕ್ಕೆ ಗ್ರೀಕಿನ ಸರಿಸಮಾನವಾದ ಇನ್ನೊಂದು ಪದ “ಕ್ರಿಸ್ತ.”—ದಾನಿ 9:25; ಯೋಹಾ 1:41.
-
ಮೇದ್ಯ.
ಯೆಫೆತನ ಮಗನಾಗಿರೋ ಮಾದೈಯ ವಂಶದಿಂದ ಹುಟ್ಕೊಂಡ ಜನಾಂಗ. ಬೆಟ್ಟದ ಪ್ರದೇಶಗಳ ಮೇಲಿರೋ ಇರಾನೀ ಪ್ರಸ್ಥಭೂಮಿಯಲ್ಲಿ ವಾಸ ಮಾಡೋಕೆ ಶುರುಮಾಡಿದ್ರು. ಆಮೇಲೆ ಅದೇ ಮೇದ್ಯರ ದೇಶ ಆಯ್ತು. ಮೇದ್ಯರು ಬಾಬೆಲಿನವ್ರ ಜೊತೆ ಸೇರ್ಕೊಂಡು ಅಶ್ಶೂರ್ಯರನ್ನ ಸೋಲಿಸಿದ್ರು. ಆ ಸಮಯದಲ್ಲಿ ಪರ್ಶಿಯ ಮೇದ್ಯರ ಕೈಕೆಳಗಿದ್ದ ಒಂದು ರಾಜ್ಯವಾಗಿತ್ತು. ಆದ್ರೆ ಕೋರೆಷ ದಂಗೆ ಎದ್ದ. ಆಮೇಲೆ ಮೇದ್ಯ ಪರ್ಶಿಯದ ಜೊತೆ ಸೇರಿ ಮೇದೊ-ಪರ್ಶಿಯ ರಾಜ್ಯ ಆಯ್ತು. ಅದು ಕ್ರಿ.ಪೂ. 539ರಲ್ಲಿ ಹೊಸ ಬಾಬೆಲ್ ಸಾಮ್ರಾಜ್ಯವನ್ನ ವಶಮಾಡ್ಕೊಳ್ತು. ಕ್ರಿ.ಶ. 33ರಲ್ಲಿ 50ನೇ ದಿನದಂದು ಯೆರೂಸಲೇಮಲ್ಲಿ ಮೇದ್ಯರೂ ಇದ್ರು. (ದಾನಿ 5:28, 31; ಅಕಾ 2:9)—ಪರಿಶಿಷ್ಟ ಬಿ9 ನೋಡಿ.
-
ಮೇಲ್ವಿಚಾರಕ.
ಸಭೆಯನ್ನ ನೋಡ್ಕೊಳ್ತಾ ಕಾಳಜಿ ವಹಿಸೋ ಜವಾಬ್ದಾರಿ ಇರೋ ಪುರುಷ. ಎಪಿಸ್ಕೊಪೊಸ್ ಅನ್ನೋ ಗ್ರೀಕ್ ಪದಕ್ಕೆ ಸಂರಕ್ಷಣೆಯಿಂದ ಕೂಡಿದ ಮೇಲ್ವಿಚಾರಣೆ ಅನ್ನೋ ಅರ್ಥ ಇದೆ. “ಮೇಲ್ವಿಚಾರಕ” ಮತ್ತು “ಹಿರಿಯ” (ಪ್ರಸ್ಬೈಟಿರೊಸ್) ಅನ್ನೋ ಪದಗಳು ಕ್ರೈಸ್ತ ಸಭೆಯಲ್ಲಿ ಒಂದು ಸ್ಥಾನವನ್ನ ಸೂಚಿಸುತ್ತೆ. “ಹಿರಿಯ” ಅನ್ನೋ ಪದ ನೇಮಿಸಿದ ಪುರುಷನಲ್ಲಿರೋ ಗುಣಗಳನ್ನ ಸೂಚಿಸುತ್ತೆ. “ಮೇಲ್ವಿಚಾರಕ” ಅನ್ನೋ ಪದ ನೇಮಕ ಸಿಕ್ಕಿರೋ ಪುರುಷನ ಜವಾಬ್ದಾರಿಗಳನ್ನ ಸೂಚಿಸುತ್ತೆ.—ಅಕಾ 20:28; 1ತಿಮೊ 3:2-7; 1ಪೇತ್ರ 5:2.
-
ಮೈದುನ-ಅತ್ತಿಗೆ ಮದುವೆ.
ಮಗು ಇಲ್ದೆ ಒಬ್ಬ ಸತ್ತು ಹೋದ್ರೆ ಅವನ ಅಣ್ಣತಮ್ಮಂದಿರಲ್ಲಿ ಒಬ್ರು ಸತ್ತವನ ಹೆಂಡ್ತಿಯನ್ನ ಮದುವೆ ಆಗಬೇಕಿತ್ತು. ಹೀಗೆ ಸತ್ತ ತನ್ನ ಸಹೋದರನ ವಂಶ ಬೆಳೆಸಬೇಕಿತ್ತು. ಈ ಪದ್ಧತಿಯ ಹೆಸ್ರೇ ಮೈದುನ-ಅತ್ತಿಗೆ ಮದುವೆ. ಈ ಪದ್ಧತಿಯನ್ನ ಸಮಯ ಕಳೆದ ಹಾಗೆ ನಿಯಮ ಪುಸ್ತಕಕ್ಕೆ ಸೇರಿಸಲಾಯ್ತು.—ಆದಿ 38:8; ಧರ್ಮೋ 25:5.
-
ಮೈನಾ.
ಯೆಹೆಜ್ಕೇಲದಲ್ಲಿ ಇದನ್ನ ಮಾನೆ ಅಂತಾನೂ ಹೇಳಲಾಗಿದೆ. ತೂಕವನ್ನ ಬೆಲೆಯನ್ನ ಸೂಚಿಸೋ ಒಂದು ಅಳತೆ. ಒಂದು ಮೈನಾ 50 ಶೆಕೆಲ್‌ಗೆ ಸಮ. ಅಗೆತ ಶಾಸ್ತ್ರಜ್ಞರಿಗೆ ಸಿಕ್ಕಿರೋ ಮಾಹಿತಿ ಪ್ರಕಾರ ಹೀಬ್ರು ಪವಿತ್ರ ಗ್ರಂಥದಲ್ಲಿರೋ ಒಂದು ಮೈನಾ 570 ಗ್ರಾಂಗೆ ಸಮ. ಹಾಗಾದ್ರೆ ಒಂದು ಶೆಕೆಲ್ 11.4 ಗ್ರಾಂ ಅಂತ ಆಯ್ತು. ಮೊಳದಲ್ಲಿ ದೊಡ್ಡ ಅಳತೆ ಇರೋ ತರ ಇದ್ರಲ್ಲೂ ದೊಡ್ಡ ಅಳತೆ ಇರೋ ಸಾಧ್ಯತೆ ಇದೆ. ಗ್ರೀಕ್ ಪವಿತ್ರ ಗ್ರಂಥದಲ್ಲಿರೋ ಒಂದು ಮೈನಾ 100 ದ್ರಾಕ್ಮಾಗೆ ಸಮ. ಅದ್ರ ತೂಕ 340 ಗ್ರಾಂ. 60 ಮೈನಾ ಎಜ್ರ 2:69; ಲೂಕ 19:13)—ಪರಿಶಿಷ್ಟ ಬಿ14 ನೋಡಿ.
ಒಂದು ತಲಾಂತಿಗೆ ಸಮ. ( -
ಮೈಲಿ.
ದೂರವನ್ನ ಸೂಚಿಸೋ ಒಂದು ಅಳತೆ. ಮೂಲ ಗ್ರೀಕ್ ಪವಿತ್ರ ಗ್ರಂಥದಲ್ಲಿ ಇದು ಒಂದು ಸಾರಿ ಮಾತ್ರ ಬರುತ್ತೆ, ಅದು ಮತ್ತಾಯ 5:41ರಲ್ಲಿ. ಇದು ರೋಮನ್ ಮೈಲಿ ಆಗಿರಬಹುದು. ಒಂದು ರೋಮನ್ ಮೈಲಿ 1,479.5 ಮೀಟರ್ (4854 ಅಡಿ.)—ಪರಿಶಿಷ್ಟ ಬಿ14 ನೋಡಿ.
-
ಮೊದಲ ಬೆಳೆ, ಫಲ.
ಕೊಯ್ಲು ಕಾಲದ ಮೊದಲ್ನೇ ಬೆಳೆ, ಮನುಷ್ಯನ ಆದಾಯ, ಮೊದಲ ಮಕ್ಕಳು, ಪ್ರಾಣಿಗಳ ಮೊದಲ ಮರಿಗಳು. ಅದನ್ನ ತನಗೆ ಕೊಡಬೇಕು ಅಂತ ಯೆಹೋವ ಇಸ್ರಾಯೇಲ್ಯರಿಗೆ ಹೇಳಿದನು. ಇಸ್ರಾಯೇಲ್ಯರು ಒಂದು ಜನಾಂಗವಾಗಿ ಹುಳಿಯಿಲ್ಲದ ರೊಟ್ಟಿಯ ಹಬ್ಬ ಮತ್ತು 50ನೇ ದಿನ ಹಬ್ಬದ ಸಮಯದಲ್ಲಿ ಮೊದಲ ಬೆಳೆ ಅಥವಾ ಫಲವನ್ನ ದೇವರಿಗೆ ಅರ್ಪಿಸ್ತಿದ್ರು. ಕ್ರಿಸ್ತನನ್ನ, ಅಭಿಷಿಕ್ತರಾದ ಆತನ ಶಿಷ್ಯರನ್ನ ಕೂಡ ಮೊದಲ ಬೆಳೆ ಅಥವಾ ಫಲ ಅಂತ ಅಲಂಕಾರಿಕವಾಗಿ ಹೇಳಲಾಗಿದೆ.—1ಕೊರಿಂ 15:23; ಅರ 15:21; ಜ್ಞಾನೋ 3:9; ಪ್ರಕ 14:4.
-
ಮೊದಲನೇ ಮಗ.
ತಂದೆಯ ಚೊಚ್ಚಲ ಮಗ (ತಾಯಿಯ ಮೊದಲನೇ ಮಗ ಅಲ್ಲ.) ಬೈಬಲ್ ಕಾಲದಲ್ಲಿ ಅಪ್ಪ ಸತ್ತು ಹೋದ್ರೆ ಮೊದಲನೇ ಮಗನಿಗೆ ತುಂಬ ಗೌರವ ಸಿಗ್ತಿತ್ತು. ಮನೆಮಂದಿಗೆಲ್ಲ ಅವನೇ ಯಜಮಾನ.—ವಿಮೋ 11:5; 13:12; ಆದಿ 25:33; ಕೊಲೊ 1:15.
-
ಮೊಲೋಖ.
—ಮೋಲೆಕ ನೋಡಿ.
-
ಮೊಳ.
ಇದು ಅಳತೆ ಮಾಪನ. ಮೊಣಕೈಯಿಂದ ಮಧ್ಯದ ಬೆರಳಿನ ತುದಿ ತನಕ ಒಂದು ಮೊಳ. ಸಾಮಾನ್ಯವಾಗಿ ಇಸ್ರಾಯೇಲಲ್ಲಿ ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು.) ಆದ್ರೆ ಅವರು ಇದಕ್ಕಿಂತ ದೊಡ್ಡ ಮೊಳನೂ ಉಪಯೋಗಿಸ್ತಿದ್ರು. ಅದು ಮೊಳ ಉದ್ದ. ಇದ್ರಲ್ಲಿನ್ನೂ ಒಂದು ಗೇಣು ಜಾಸ್ತಿ ಅಂದ್ರೆ ಸುಮಾರು 51.8 ಸೆಂ.ಮೀ. (20.4 ಇಂಚು.) (ಆದಿ 6:15; ಲೂಕ 12:25)—ಪರಿಶಿಷ್ಟ ಬಿ14 ನೋಡಿ.
-
ಮೋಲೆಕ.
ಅಮ್ಮೋನಿಯರ ದೇವರು. ಬಹುಶಃ ಮಲ್ಕಾಮ, ಮಿಲ್ಕೋಮ್ ಮತ್ತು ಮೊಲೋಖ ಒಂದೇ ಇರಬಹುದು. ಇದು ಹೆಸ್ರಲ್ಲ, ಬಿರುದು ಇರಬಹುದು. ಮೋಶೆಯ ನಿಯಮದಲ್ಲಿ ಮೋಲೆಕನಿಗೆ ಮಕ್ಕಳನ್ನ ಬಲಿ ಕೊಡುವವ್ರಿಗೆ ಮರಣ ಶಿಕ್ಷೆ ಕೊಡಬೇಕು ಅಂತ ಆಜ್ಞೆ ಇತ್ತು.—ಯಾಜ 20:2; ಯೆರೆ 32:35; ಅಕಾ 7:43.
-
ಮೋಶೆಯ ನಿಯಮ ಪುಸ್ತಕ.
ಕ್ರಿ.ಪೂ. 1513ರಲ್ಲಿ ಸಿನಾಯಿ ಕಾಡಲ್ಲಿ ಯೆಹೋವ ಮೋಶೆ ಮೂಲಕ ಇಸ್ರಾಯೇಲ್ಯರಿಗೆ ಕೊಟ್ಟ ನಿಯಮ. ಬೈಬಲಿನ ಮೊದಲ ಐದು ಪುಸ್ತಕಗಳನ್ನ ನಿಯಮ ಅಥವಾ ಕಾನೂನು ಅಂತ ಕರಿತಾರೆ.—ಯೆಹೋ 23:6; ಲೂಕ 24:44.
ಯ
-
ಯಜ್ಞವೇದಿ, ಧೂಪವೇದಿ.
ಮಣ್ಣು, ಕಲ್ಲು, ಬಂಡೆ ಕಲ್ಲಿಂದ ಮಾಡಿದ ವೇದಿಕೆ ಅಥವಾ ಮರಕ್ಕೆ ಲೋಹ ಹೊದಿಸಿ ಮಾಡಿದ ವೇದಿಕೆ. ದೇವರನ್ನ ಆರಾಧಿಸುವಾಗ ಇದ್ರ ಮೇಲೆ ಬಲಿ ಅಥವಾ ಧೂಪ ಅರ್ಪಿಸ್ತಿದ್ರು. ಪವಿತ್ರ ಡೇರೆ ಮತ್ತು ದೇವಾಲಯದ ಮೊದಲನೇ ಕೋಣೆಯಲ್ಲಿ ಧೂಪ ಸುಡೋಕೆ ಚಿನ್ನದ ಒಂದು ಚಿಕ್ಕ ಧೂಪವೇದಿ ಇತ್ತು. ಮರದಿಂದ ಮಾಡಿದ ಈ ವೇದಿಗೆ ಚಿನ್ನದ ತಗಡು ಹೊದಿಸಲಾಗಿತ್ತು. ಹೊರಗೆ ಅಂಗಳದಲ್ಲಿ ಸರ್ವಾಂಗಹೋಮ ಬಲಿ ಅರ್ಪಿಸೋಕೆ ತಾಮ್ರದ ದೊಡ್ಡ ಯಜ್ಞವೇದಿ ಇತ್ತು. (ವಿಮೋ 27:1; 39:38, 39; ಆದಿ 8:20; 1ಅರ 6:20; 2ಪೂರ್ವ 4:1; ಲೂಕ 1:11)—ಪರಿಶಿಷ್ಟ ಬಿ5 ಮತ್ತು ಬಿ8 ನೋಡಿ.
-
ಯಜ್ಞವೇದಿಯ ಕೊಂಬುಗಳು.
ಕೆಲವು ಯಜ್ಞವೇದಿಗಳ ನಾಲ್ಕು ಮೂಲೆಗಳಲ್ಲಿ ಕೊಂಬಿನ ತರ ಹೊರಗೆ ಕಾಣೋ ಭಾಗ. (ಯಾಜ 8:15; 1ಅರ 2:28)—ಪರಿಶಿಷ್ಟ ಬಿ5, ಬಿ8 ನೋಡಿ.
-
ಯಾಕೋಬ.
ಇಸಾಕ ಮತ್ತು ರೆಬೆಕ್ಕಳ ಮಗ. ಆಮೇಲೆ ಯೆಹೋವ ದೇವರು ಯಾಕೋಬನಿಗೆ ಇಸ್ರಾಯೇಲ್ ಅಂತ ಹೆಸ್ರಿಟ್ಟನು. ಯಾಕೋಬ ಇಸ್ರಾಯೇಲಿನ ಜನ್ರ (ಇವ್ರಿಗೆ ಇಸ್ರಾಯೇಲ್ಯರು ಅಂತಾನೂ ಕರಿತಿದ್ರು, ಮುಂದಕ್ಕೆ ಇವ್ರಿಗೆ ಯೆಹೂದ್ಯರು ಅಂತ ಹೆಸ್ರು ಬಂತು) ಪೂರ್ವಜನಾದ. ಯಾಕೋಬನಿಗೆ 12 ಗಂಡು ಮಕ್ಕಳು ಇದ್ರು. ಇವ್ರಿಂದ, ಇವ್ರ ವಂಶದಿಂದ ಇಸ್ರಾಯೇಲಿನ 12 ಕುಲ ಬಂತು. ಮುಂದೆನೂ ಇಸ್ರಾಯೇಲ್ ಜನಾಂಗಕ್ಕೆ ಅಥವಾ ಇಸ್ರಾಯೇಲ್ಯರಿಗೆ ಯಾಕೋಬ ಅನ್ನೋ ಹೆಸ್ರಿಂದಾನೇ ಕರಿತಿದ್ರು.—ಆದಿ 32:28; ಮತ್ತಾ 22:32.
-
ಯಾತ್ರೆ ಗೀತೆ.
ಕೀರ್ತನೆ 120–134 ರ ಶೀರ್ಷಿಕೆ. ಈ ಪದಗಳ ಅರ್ಥದ ಬಗ್ಗೆ ಬೇರೆಬೇರೆ ಅಭಿಪ್ರಾಯಗಳಿವೆ. ಆದ್ರೆ, ಇಸ್ರಾಯೇಲಿನ ಆರಾಧಕರು ವರ್ಷದಲ್ಲಿ ಬರ್ತಿದ್ದ ಮೂರು ದೊಡ್ಡ ಹಬ್ಬಗಳನ್ನ ಆಚರಿಸೋಕೆ ಯೆಹೂದದ ಬೆಟ್ಟಗಳ ಮೇಲಿದ್ದ ಯೆರೂಸಲೇಮಿಗೆ ಹತ್ತಿ ಹೋಗುತ್ತಿದ್ದಾಗ ಸಂತೋಷದಿಂದ ಈ 15 ಕೀರ್ತನೆಗಳನ್ನ ಹಾಡ್ತಿದ್ರು ಅಂತ ತುಂಬ ಜನ ಹೇಳ್ತಾರೆ.
-
ಯೂಫ್ರೆಟಿಸ್.
ಏಷ್ಯಾದ ದಕ್ಷಿಣಪಶ್ಚಿಮ ದಿಕ್ಕಲ್ಲಿರೋ ತುಂಬ ಉದ್ದವಾದ, ಮುಖ್ಯವಾದ ನದಿ. ಮೆಸಪಟೇಮ್ಯದಲ್ಲಿ ಎರಡು ಮುಖ್ಯ ನದಿಗಳಿವೆ. ಅದ್ರಲ್ಲಿ ಒಂದು ಯೂಪ್ರೆಟಿಸ್. ಆದಿಕಾಂಡ 2:14ರಲ್ಲಿ ಮೊದಲ್ನೇ ಸಲ ಇದ್ರ ಬಗ್ಗೆ ಇದೆ. ಇದು ಏದೆನ್ ತೋಟದಲ್ಲಿದ್ದ 4 ನದಿಗಳಲ್ಲಿ ಒಂದು ನದಿ. ಇದನ್ನ “ಮಹಾನದಿ” ಅಂತಾನೂ ಹೇಳಲಾಗಿದೆ. (ಆದಿ 31:21) ಇದು ಇಸ್ರಾಯೇಲ್ಯರಿಗೆ ಸಿಕ್ಕಿದ ಪ್ರದೇಶದ ಉತ್ತರದ ಗಡಿ ಆಗಿತ್ತು. (ಆದಿ 15:18; ಪ್ರಕ 16:12)—ಪರಿಶಿಷ್ಟ ಬಿ2 ನೋಡಿ.
-
ಯೆದುತೂನ್.
ಕೀರ್ತನೆ 39, 62, 77ರ ಶೀರ್ಷಿಕೆಯಲ್ಲಿ ಇರೋ ಈ ಪದದ ಅರ್ಥ ಏನಂತ ಗೊತ್ತಿಲ್ಲ. ಇದು ಕೀರ್ತನೆಯನ್ನ ಹೇಗೆ ಹಾಡಬೇಕು ಅಥವಾ ರಚಿಸಬೇಕು ಅನ್ನೋದಕ್ಕೆ ಇರೋ ನಿರ್ದೇಶನಗಳು ಅನ್ನೋದು ಕೆಲವ್ರ ಅಭಿಪ್ರಾಯ. ಹಾಡಬೇಕಾಗಿರೋ ರೀತಿ ಅಥವಾ ನುಡಿಸಬೇಕಾದ ಸಂಗೀತ ಉಪಕರಣ ಯಾವುದು ಅಂತ ಅದು ಸೂಚಿಸ್ತಾ ಇರಬಹುದು. ಯೆದುತೂನ್ ಅನ್ನೋ ಹೆಸ್ರು ಇರೋ ಒಬ್ಬ ಲೇವಿ ಸಂಗೀತಗಾರ ಇದ್ದ. ಹಾಗಾಗಿ ಇದನ್ನ ರಚಿಸಬೇಕಾದ ರೀತಿ ಅಥವಾ ಉಪಕರಣ ಅವನಿಗೆ ಅಥವಾ ಅವನ ಮಕ್ಕಳಿಗೆ ಸಂಬಂಧ ಪಟ್ಟಿರಬಹುದು.
-
ಯೆಹೂದ.
ಯಾಕೋಬನ ಹೆಂಡತಿಯಾದ ಲೇಯಗೆ ಹುಟ್ಟಿದ 4ನೇ ಮಗ. ಯಾಕೋಬ ತೀರಿಹೋಗೋ ಮುಂಚೆ ಯೆಹೂದನ ವಂಶದಿಂದ ಶಾಶ್ವತವಾಗಿ ಆಳೋ ಒಬ್ಬ ಮಹಾನ್ ವ್ಯಕ್ತಿ ಬರ್ತಾನೆ ಅಂತ ಭವಿಷ್ಯವಾಣಿ ಹೇಳಿದ್ದ. ಯೆಹೂದನ ವಂಶದಲ್ಲೇ ಯೇಸು ಮನುಷ್ಯನಾಗಿ ಹುಟ್ಟಿದ್ದು. ಒಂದು ಕುಲದ ಹೆಸ್ರೂ ಯೆಹೂದ ಅಂತ ಇತ್ತು. ಮುಂದಕ್ಕೆ ಯೆಹೂದ ಮತ್ತು ಬೆನ್ಯಾಮೀನ ಕುಲಗಳ ರಾಜ್ಯಕ್ಕೂ ಯೆಹೂದ ಅಂತಾನೇ ಹೆಸ್ರಾಯ್ತು. ಇದನ್ನ ದಕ್ಷಿಣದ ರಾಜ್ಯ ಅಂತ ಕರಿತಿದ್ರು. ಈ ರಾಜ್ಯದಲ್ಲಿ ಪುರೋಹಿತರು, ಲೇವಿಯರು ಇದ್ರು. ಯೆರೂಸಲೇಮ್ ಮತ್ತು ದೇವಾಲಯ ಇರೋ ದಕ್ಷಿಣ ಭಾಗ ಯೆಹೂದ ರಾಜ್ಯದಲ್ಲಿತ್ತು.—ಆದಿ 29:35; 49:10; 1ಅರ 4:20; ಇಬ್ರಿ 7:14.
-
ಯೆಹೂದ್ಯ.
10 ಕುಲದ ಇಸ್ರಾಯೇಲ್ ರಾಜ್ಯ ಪತನ ಮಾಡಿದ ಮೇಲೆ ಯೆಹೂದ ಕುಲದ ವ್ಯಕ್ತಿಯನ್ನ ಸೂಚಿಸೋಕೆ ಈ ಪದ ಬಳಸಲಾಗಿದೆ. (2ಅರ 16:6) ಬಾಬೆಲಿಂದ ಬಿಡುಗಡೆ ಆದ್ಮೇಲೆ ಇಸ್ರಾಯೇಲ್ ದೇಶಕ್ಕೆ ವಾಪಸ್ ಬಂದ ಇಸ್ರಾಯೇಲಿನ ಬೇರೆಬೇರೆ ಕುಲದ ಜನ್ರನ್ನ ಯೆಹೂದ್ಯರು ಅಂತ ಹೇಳಲಾಗಿದೆ. (ಎಜ್ರ 4:12) ಆಮೇಲೆ ಇಸ್ರಾಯೇಲ್ಯರನ್ನ ಬೇರೆ ಜನ್ರಿಂದ ಭಿನ್ನರಾಗಿದ್ದಾರೆ ಅಂತ ತೋರಿಸೋಕೆ ಈ ಪದ ಉಪಯೋಗಿಸಿದ್ರು. (ಎಸ್ತೇ 3:6) ಅಷ್ಟೇ ಅಲ್ಲ ಕ್ರೈಸ್ತ ಸಭೆಯಲ್ಲಿ ಯಾರು ಯಾವ ಜಾತಿ-ಜನಾಂಗಕ್ಕೆ ಸೇರಿದ್ದಾರೆ ಅನ್ನೋದು ಮುಖ್ಯ ಅಲ್ಲ ಅಂತ ವಿವರಿಸೋಕೆ ಅಪೊಸ್ತಲ ಪೌಲ ಈ ಪದವನ್ನ ಅಲಂಕಾರಿಕವಾಗಿ ಬಳಸಿದ್ದಾನೆ.—ರೋಮ 2:28, 29; ಗಲಾ 3:28.
-
ಯೆಹೋವ.
ದೇವರ ಹೆಸ್ರಲ್ಲಿರೋ ನಾಲ್ಕು ಹೀಬ್ರು ಪದಗಳನ್ನ ಹೀಗೆ ಭಾಷಾಂತರ ಮಾಡಲಾಗಿದೆ. ಈ ಬೈಬಲಲ್ಲಿ 7,000ಕ್ಕಿಂತ ಹೆಚ್ಚು ಸಾರಿ ಈ ಹೆಸ್ರು ಇದೆ.—ಪರಿಶಿಷ್ಟ ಎ4, ಎ5 ನೋಡಿ.
ರ
-
ರಕ್ಷಾಕವಚ.
ಸೈನಿಕರು ರಕ್ಷಣೆಗಾಗಿ ಹಾಕೊಳ್ತಿದ್ದ ಶಿರಸ್ತ್ರಾಣ, ಯುದ್ಧಕವಚ, ಸೊಂಟಪಟ್ಟಿ, ಚಪ್ಪಲಿ, ಗುರಾಣಿ ಇದ್ರಲ್ಲಿ ಸೇರಿದೆ.—1ಸಮು 31:9; ಎಫೆ 6:13-17.
-
ರಥ.
ಕುದುರೆ ಎಳ್ಕೊಂಡು ಹೋಗೋ ಎರಡು ಚಕ್ರದ ಗಾಡಿ. ಇದನ್ನ ಮುಖ್ಯವಾಗಿ ಯುದ್ಧಕ್ಕೆ ಬಳಸ್ತಿದ್ರು.—ವಿಮೋ 14:23; ನ್ಯಾಯ 4:13; ಅಕಾ 8:28.
-
ರಾಜದಂಡ.
ರಾಜನಾಗಿ ಸಾಮ್ರಾಜ್ಯವನ್ನ ಆಳೋ ಅಧಿಕಾರದ ಗುರುತಾಗಿ ಬಳಸ್ತಿದ್ದ ಕೋಲು ಅಥವಾ ದಂಡ.—ಆದಿ 49:10; ಇಬ್ರಿ 1:8.
-
ರಾಹಾಬ.
ಯೋಬ, ಕೀರ್ತನೆ, ಯೆಶಾಯ ಪುಸ್ತಕದಲ್ಲಿ ಸಾಂಕೇತಿಕವಾಗಿ ಬಳಸಿದ ಪದ. (ಯೆಹೋಶುವ ಪುಸ್ತಕದಲ್ಲಿ ಇರೋ ರಾಹಾಬ ಬಗ್ಗೆ ಇಲ್ಲಿ ಮಾತಾಡ್ತಿಲ್ಲ) ಯೋಬ ಪುಸ್ತಕದಲ್ಲಿ, ಸನ್ನಿವೇಶದ ಪ್ರಕಾರ ರಾಹಾಬ ಅನ್ನೋದು ದೈತ್ಯ ಸಮುದ್ರ ಜೀವಿಯನ್ನ ಸೂಚಿಸುತ್ತೆ. ಬೇರೆ ಸನ್ನಿವೇಶಗಳಲ್ಲಿ ಈ ದೈತ್ಯ ಸಮುದ್ರ ಜೀವಿ ಈಜಿಪ್ಟನ್ನ ಸೂಚಿಸೋಕೆ ಬಳಸಲಾಗಿದೆ.—ಯೋಬ 9:13; ಕೀರ್ತ 87:4; ಯೆಶಾ 30:7; 51:9, 10.
ಲ
-
ಲಿವ್ಯಾತಾನ್.
ಸಾಮಾನ್ಯವಾಗಿ ಈ ಪ್ರಾಣಿ ಬಗ್ಗೆ ಬಂದಾಗೆಲ್ಲ ನೀರಿನ ಬಗ್ಗೆನೂ ಹೇಳಿರೋದ್ರಿಂದ ಇದು ನೀರಲ್ಲಿರೋ ಪ್ರಾಣಿ ಅಂತ ಕೆಲವರು ಹೇಳ್ತಾರೆ. ಯೋಬ 3:8 ಮತ್ತು 41:1ರಲ್ಲಿರೋ ವಚನಗಳಲ್ಲಿ ಮೊಸಳೆಯನ್ನ ಅಥವಾ ನೀರಲ್ಲಿರೋ ಬೇರೆ ದೊಡ್ಡ ಶಕ್ತಿಶಾಲಿ ಪ್ರಾಣಿಯನ್ನ ಸೂಚಿಸುತ್ತೆ. ಕೀರ್ತನೆ 104:26ರಲ್ಲಿ ಒಂದು ರೀತಿಯ ತಿಮಿಂಗಿಲ ಆಗಿರಬಹುದು. ಬೇರೆ ವಚನಗಳಲ್ಲಿ ಇದನ್ನ ಸಾಂಕೇತಿಕವಾಗಿ ಬಳಸಿರೋದ್ರಿಂದ ಅಲ್ಲಿ ಯಾವ ಪ್ರಾಣಿಯನ್ನ ಸೂಚಿಸ್ತಿದೆ ಅಂತ ಹೇಳಕ್ಕಾಗಲ್ಲ.—ಕೀರ್ತ 74:14; ಯೆಶಾ 27:1.
-
ಲೆಪ್ಟ.
ಗ್ರೀಕ್ ಪವಿತ್ರ ಗ್ರಂಥದಲ್ಲಿ ಬರೆದಿರೋ ವಿಷ್ಯಗಳು ನಡೆದಿರೋ ಸಮಯದಲ್ಲಿದ್ದ ಒಂದು ನಾಣ್ಯ. ಇದು ತಾಮ್ರ ಮತ್ತು ಹಿತ್ತಾಳೆಯಿಂದ ಮಾಡಿರೋ ತುಂಬಾ ಚಿಕ್ಕ ಯೆಹೂದಿ ನಾಣ್ಯ. (ಮಾರ್ಕ 12:42; ಲೂಕ 21:2 ಪಾದಟಿಪ್ಪಣಿಗಳು.)—ಪರಿಶಿಷ್ಟ ಬಿ14 ನೋಡಿ.
-
ಲೆಬನೋನ್ ಪರ್ವತ ಶ್ರೇಣಿ.
ಲೆಬನೋನಲ್ಲಿರೋ 2 ಪರ್ವತ ಶ್ರೇಣಿಗಳು ಅಂದ್ರೆ ಲೆಬನೋನ್ ಶ್ರೇಣಿ ಪಶ್ಚಿಮಕ್ಕೂ ಪೂರ್ವ ಲೆಬನೋನ್ ಶ್ರೇಣಿ ಪೂರ್ವಕ್ಕೂ ಇದೆ. ಇವೆರಡ್ರ ಮಧ್ಯ ಉದ್ದವಾದ ಫಲವತ್ತಾದ ಕಣಿವೆ ಇದೆ. ಲೆಬನೋನಿನ ಪರ್ವತ ಶ್ರೇಣಿ ಮೆಡಿಟರೇನಿಯನ್ ಸಮುದ್ರ ತೀರದ ಹತ್ರ ಇದೆ. ಆ ಬೆಟ್ಟಗಳು ಸುಮಾರು 1,800-2,100 ಮೀ. (6,000-7,000 ಅಡಿ) ಎತ್ರ ಇದೆ. ಹಳೇಕಾಲದಲ್ಲಿ ಲೆಬನೋನಿನಲ್ಲಿ ತುಂಬ ದೊಡ್ಡ ದೊಡ್ಡ ದೇವದಾರು ಮರಗಳು ಇದ್ವು. ಸುತ್ತಮುತ್ತ ಇರೋ ದೇಶಗಳು, ಜನ್ರು ಅದನ್ನ ತುಂಬ ಅಮೂಲ್ಯವಾಗಿ ನೋಡ್ತಿದ್ರು. (ಧರ್ಮೋ 1:7; ಕೀರ್ತ 29:6; 92:12)—ಪರಿಶಿಷ್ಟ ಬಿ7 ನೋಡಿ.
-
ಲೇಖನಿ.
ಜೇಡಿಮಣ್ಣಿನ ಅಥವಾ ಮೇಣದ ವಸ್ತುಗಳ ಮೇಲೆ ಕೆತ್ತಿ ಬರೆಯೋಕೆ ಬಳಸೋ ಉಪಕರಣ. (ಕೀರ್ತ 45:1; ಯೆಶಾ 8:1; ಯೆರೆ 8:8) ಈ ಲೇಖನಿ ಅಥವಾ ಉಳಿಯನ್ನ ಲೋಹದಿಂದ, ಗಟ್ಟಿಯಾದ ಬೇರೆ ವಸ್ತುವಿನಿಂದ ಮಾಡ್ತಿದ್ರು. ಇದನ್ನ ಬಳಸಿ ಕಲ್ಲಿನ ಮೇಲೆ, ಲೋಹದ ಮೇಲೆ ಅಕ್ಷರಗಳನ್ನ ಕೆತ್ತುತ್ತಿದ್ರು.—ಯೋಬ 19:24; ಯೆರೆ 17:1.
-
ಲೇವಿ.
ಯಾಕೋಬ ಮತ್ತು ಲೇಯಗೆ ಹುಟ್ಟಿದ ಮೂರನೇ ಮಗ. ಲೇವಿ ಹೆಸ್ರಲ್ಲಿರೋ ಕುಲವನ್ನ ಸೂಚಿಸುತ್ತೆ. ಲೇವಿಯ ಮೂರು ಗಂಡು ಮಕ್ಕಳಿಂದ ಪುರೋಹಿತ ಕೆಲಸದ ಮೂರು ಮುಖ್ಯ ವಿಭಾಗಗಳು ಆಯ್ತು. ಲೇವಿಯರು ಅನ್ನೋ ಪದ ಕೆಲವೊಮ್ಮೆ ಇಡೀ ಲೇವಿ ಕುಲವನ್ನ ಸೂಚಿಸುತ್ತೆ. ಆದ್ರೆ ಆರೋನನ ಪುರೋಹಿತ ಕುಟುಂಬವನ್ನ ಇದ್ರಲ್ಲಿ ಸೇರಿಸ್ಕೊಳ್ತಾ ಇರ್ಲಿಲ್ಲ. ಲೇವಿ ಕುಲದವ್ರಿಗೆ ದೇವರು ಮಾತು ಕೊಟ್ಟ ದೇಶವನ್ನ ಅಳತೆ ಮಾಡಿ ಆಸ್ತಿಯಾಗಿ ಕೊಡಲಿಲ್ಲ. ಆದ್ರೆ ಬೇರೆ ಕುಲಗಳಿಗೆ ಸಿಕ್ಕಿದ ಪ್ರದೇಶದ ಗಡಿ ಒಳಗೆ ಲೇವಿಯರಿಗೆ 48 ಪಟ್ಟಣಗಳು ಸಿಕ್ತು.—ಧರ್ಮೋ 10:8; 1ಪೂರ್ವ 6:1; ಇಬ್ರಿ 7:11.
-
ಲೈಂಗಿಕ ಅನೈತಿಕತೆ.
ಇದು ಪೋರ್ನಿಯ ಅನ್ನೋ ಗ್ರೀಕ್ ಪದದಿಂದ ಬಂದಿದೆ. ದೇವರ ನಿಯಮಗಳ ವಿರುದ್ಧವಾಗಿ ಮಾಡೋ ಕೆಲವು ಲೈಂಗಿಕ ಸಂಬಂಧಗಳನ್ನ ಸೂಚಿಸೋಕೆ ಈ ಪದ ಬಳಸಲಾಗಿದೆ. ವ್ಯಭಿಚಾರ, ವೇಶ್ಯಾವಾಟಿಕೆ, ಮದುವೆಯಾಗದ ಇಬ್ಬರ ಮಧ್ಯ ಇರೋ ಲೈಂಗಿಕ ಸಂಬಂಧ, ಸಲಿಂಗಕಾಮ, ಪ್ರಾಣಿಗಳ ಜೊತೆ ಸಂಭೋಗ ಇದರಲ್ಲಿ ಸೇರಿದೆ. “ಮಹಾ ಬಾಬೆಲ್” ಅಂತ ಕರೆಯೋ ಸುಳ್ಳು ಧರ್ಮ ಸಾಮ್ರಾಜ್ಯವನ್ನ ಪ್ರಕಟಣೆ ಪುಸ್ತಕದಲ್ಲಿ ವರ್ಣಿಸುವಾಗ ಲೈಂಗಿಕ ಅನೈತಿಕತೆ ಮಾಡುವ ವೇಶ್ಯೆ ಅಂತ ಕರೆದಿದೆ. ಯಾಕಂದ್ರೆ ಅವಳು ಅಧಿಕಾರಕ್ಕೋಸ್ಕರ, ದುಡ್ಡಿಗೋಸ್ಕರ ಈ ಲೋಕದಲ್ಲಿರೋ ಅಧಿಕಾರಗಳ ಜೊತೆ ಸಂಬಂಧ ಇಟ್ಕೊಂಡಳು. (ಪ್ರಕ 14:8; 17:2; 18:3; ಮತ್ತಾ 5:32; ಅಕಾ 15:29; ಗಲಾ 5:19)—ವೇಶ್ಯೆ ಸಹ ನೋಡಿ.
-
ಲೋಕದ ಅಂತ್ಯಕಾಲ.
ಸೈತಾನನ ನಿಯಂತ್ರಣದಲ್ಲಿರೋ ಈ ಲೋಕದ ವ್ಯವಸ್ಥೆಯ ಅಂದ್ರೆ ಲೋಕ ವ್ಯವಹಾರದ ಅಂತ್ಯ ಆಗೋ ಸಮಯ. ಇದೇ ಸಮಯದಲ್ಲೇ ಯೇಸು ಮತ್ತೆ ಬರೋ ಕಾಲನೂ ಬರುತ್ತೆ. ಯೇಸುವಿನ ನಿರ್ದೇಶನದ ಪ್ರಕಾರ ದೇವದೂತರು “ಕೆಟ್ಟವ್ರನ್ನ ನೀತಿವಂತರಿಂದ ಬೇರೆಮಾಡಿ” ನಾಶಮಾಡ್ತಾರೆ. (ಮತ್ತಾ 13:40-42, 49) ಯೇಸುವಿನ ಶಿಷ್ಯರಿಗೆ ಆ “ಅಂತ್ಯ” ಯಾವಾಗ ಅಂತ ತಿಳ್ಕೊಳ್ಳೋ ಆಸೆ ಇತ್ತು. (ಮತ್ತಾ 24:3) ಯೇಸು ಸ್ವರ್ಗಕ್ಕೆ ವಾಪಸ್ ಹೋಗೋ ಮುಂಚೆ ‘ಈ ಲೋಕದ ಅಂತ್ಯ ಬರೋ ತನಕ ಅವ್ರ ಜೊತೆ ಇರ್ತಿನಿ’ ಅಂತ ಮಾತು ಕೊಟ್ಟನು.—ಮತ್ತಾ 28:20.
-
ಲೋಕದ ವ್ಯವಸ್ಥೆ(ಗಳು).
ಇದರ ಗ್ರೀಕ್ ಪದ ಆಯೋನ್ ಆಗಿದೆ. ಇದು ಒಂದಾನೊಂದು ಕಾಲವನ್ನ, ಯುಗವನ್ನ, ಶಕವನ್ನ ಗುರುತಿಸೋ ಹಾಗೆ ಆಗಿನ ಘಟನೆಗಳನ್ನ ಅಥವಾ ಸ್ಥಿತಿಯನ್ನ ಸೂಚಿಸ್ತಿರೋವಾಗ ವ್ಯವಸ್ಥೆ ಅಂತ ಅನುವಾದಿಸಲಾಗಿದೆ. ಬೈಬಲ್ “ಈ ವ್ಯವಸ್ಥೆ” ಅನ್ನೋ ಪದ ಬಳಸಿದಾಗ ಅದು ಸಾಮಾನ್ಯವಾಗಿ ಲೋಕದಲ್ಲಿರೋ ಘಟನೆಗಳ ಸ್ಥಿತಿಯನ್ನ, ಲೋಕಕ್ಕೆ ಸಂಬಂಧಿಸಿದ ಜೀವನ ವಿಧಾನವನ್ನ ಸೂಚಿಸುತ್ತೆ. (2ತಿಮೊ 4:10) ನಿಯಮ ಪುಸ್ತಕದ ಒಪ್ಪಂದದ ಮೂಲಕ ದೇವರು ಒಂದು ವ್ಯವಸ್ಥೆಯನ್ನ ಆರಂಭಿಸಿದನು. ಸ್ವಲ್ಪ ಜನ ಅದನ್ನ ಇಸ್ರಾಯೇಲ್ಯರ ಶಕ ಇಲ್ಲಾ ಯೆಹೂದ್ಯರ ಶಕ ಅಂತಾರೆ. ಬಿಡುಗಡೆ ಬೆಲೆ ಮೂಲಕ, ಯೇಸು ಕ್ರಿಸ್ತನನ್ನ ಬಳಸಿ ದೇವರು ಇನ್ನೊಂದು ವ್ಯವಸ್ಥೆಯನ್ನ ಶುರುಮಾಡಿದನು. ಅದರಲ್ಲಿ ಮುಖ್ಯವಾಗಿ ಅಭಿಷಿಕ್ತ ಕ್ರೈಸ್ತರ ಸಭೆ ಇದೆ. ಅದ್ರಿಂದ ಒಂದು ಹೊಸ ಶಕ ಆರಂಭ ಆಯ್ತು. ಅಂದ್ರೆ, ನಿಮಯ ಪುಸ್ತಕ ಒಪ್ಪಂದದಲ್ಲಿ ಮುಂಚೆ ಏನೆಲ್ಲ ಸೂಚಿಸಲಾಗಿತ್ತೋ ಅವೆಲ್ಲ ನಿಜ ಆಯ್ತು. ವ್ಯವಸ್ಥೆ ಅನ್ನೋ ಪದವನ್ನ ಬಹುವಚನ ರೂಪದಲ್ಲಿ ಬಳಸಿದಾಗ ಅದು ಈ ಮುಂಚೆ ಇದ್ದ ಇಲ್ಲಾ ಮುಂದೆ ಬರಲಿರೋ ವ್ಯವಸ್ಥೆಗಳನ್ನ ಅಥವಾ ಆಗಿನ ಘಟನೆಗಳ ಸ್ಥಿತಿಯನ್ನ ಸೂಚಿಸುತ್ತೆ.—ಮತ್ತಾ 24:3; ಮಾರ್ಕ 4:19; ರೋಮ 12:2; 1ಕೊರಿಂ 10:11.
-
ಲೋಗ್.
ಬೈಬಲಲ್ಲಿ ಹೇಳಿರೋ ತುಂಬ ಚಿಕ್ಕದಾಗಿರೋ ದ್ರವ ಅಳತೆ. ಒಂದು ಲೋಗ್ ಒಂದು ಹಿನ್‌ನ 12ನೇ ಒಂದು ಭಾಗ ಅಂತ ಯೆಹೂದಿಗಳ ಟ್ಯಾಲ್ಮಡ್ ಹೇಳುತ್ತೆ. ಅದ್ರ ಪ್ರಕಾರ ಒಂದು ಲೋಗ್ 0.31 ಲೀಟರಿಗೆ ಸಮ. (ಯಾಜ 14:10)—ಪರಿಶಿಷ್ಟ ಬಿ14 ನೋಡಿ.
ವ
-
ವಚನಗಳು.
ದೇವರ ಸಂದೇಶದ ಪವಿತ್ರ ಬರಹಗಳು. ಈ ಪದಗಳು ಪವಿತ್ರ ಗ್ರಂಥದ ಕ್ರೈಸ್ತ ಗ್ರೀಕ್ ಭಾಗದಲ್ಲಿ ಮಾತ್ರ ಇದೆ.—ಲೂಕ 24:27; 2ತಿಮೊ 3:16.
-
ವಿಗ್ರಹಸ್ತಂಭ.
ನೆಟ್ಟಗೆ ನಿಲ್ಲಿಸಿದ ಕಂಬ. ಸಾಮಾನ್ಯವಾಗಿ ಕಲ್ಲಿಂದ ಮಾಡಿದ ಸ್ತಂಭ. ಇದನ್ನ ಬಾಳ ಅಥವಾ ಬೇರೆ ಸುಳ್ಳು ದೇವರುಗಳ ಗುರುತಾಗಿ ಬಳಸ್ತಿದ್ರು.—ವಿಮೋ 23:24.
-
ವಿಮೋಚನಾ ಮೌಲ್ಯ
—ಬಿಡುಗಡೆ ಬೆಲೆ ನೋಡಿ.
-
ವೇಶ್ಯೆ.
ಮದುವೆ ಬಂಧದಲ್ಲಿ ಇರದೇ ಮುಖ್ಯವಾಗಿ ದುಡ್ಡಿಗೋಸ್ಕರ ಲೈಂಗಿಕ ಸಂಬಂಧ ಇಟ್ಕೊಳ್ಳೋ ವ್ಯಕ್ತಿ. (ವೇಶ್ಯೆ ಅಂತ ಅನುವಾದ ಆಗಿರೋ ಗ್ರೀಕ್ ಪದ ಪೋರ್ನಿ, “ಮಾರಾಟ” ಅನ್ನೋ ಮೂಲಪದದಿಂದ ಬಂದಿದೆ.) ಬೈಬಲಿನಲ್ಲಿ ಪುರುಷ ವೇಶ್ಯೆಯರ ಬಗ್ಗೆ, ಸಲಿಂಗಿಗಳ ಬಗ್ಗೆ ಹೇಳಿರೋದಾದ್ರೂ ಈ ಪದ ಸಾಮಾನ್ಯವಾಗಿ ಸ್ತ್ರೀಯನ್ನ ಸೂಚಿಸುತ್ತಿತ್ತು. ಮೋಶೆಯ ನಿಯಮ ಪುಸ್ತಕ ವೇಶ್ಯಾವಾಟಿಕೆಯನ್ನ ಖಂಡಿಸ್ತು. ಅಷ್ಟೇ ಅಲ್ಲ, ಆದಾಯಕ್ಕೋಸ್ಕರ ದೇವಸ್ಥಾನದಲ್ಲಿ ವೇಶ್ಯೆಯರನ್ನ ಬಳಸ್ತಿದ್ದ ಬೇರೆ ಜನಾಂಗದವರಿಗೆ ಭಿನ್ನವಾಗಿ ಇಂಥ ಕೆಟ್ಟಕೆಲಸದಿಂದ ಬಂದ ಹಣವನ್ನೂ ಯೆಹೋವನ ಆಲಯದಲ್ಲಿ ಕಾಣಿಕೆಯಾಗಿ ಹಾಕಬಾರದಿತ್ತು. (ಧರ್ಮೋ 23:17, 18; 1ಅರ 14:24) ದೇವರನ್ನ ಆರಾಧಿಸ್ತೇವೆ ಅಂತ ಹೇಳಿಕೊಳ್ತಾ ಯಾವುದೇ ತರದ ಮೂರ್ತಿಪೂಜೆಯನ್ನ ಮಾಡುತ್ತಿದ್ದ ಜನ್ರನ್ನ, ದೇಶಗಳನ್ನ ಸೂಚಿಸೋಕೆ ಬೈಬಲ್ ಈ ಪದವನ್ನ ಅಲಂಕಾರಿಕ ಭಾಷೆಯಲ್ಲಿ ಬಳಸಿದೆ. ಉದಾಹರಣೆಗೆ, “ಮಹಾ ಬಾಬೆಲ್” ಅಂತ ಕರೆಯೋ ಸುಳ್ಳು ಧರ್ಮ ಸಾಮ್ರಾಜ್ಯವನ್ನ ಪ್ರಕಟಣೆ ಪುಸ್ತಕ ವೇಶ್ಯೆ ಅಂತ ವರ್ಣಿಸುತ್ತೆ. ಯಾಕಂದ್ರೆ ಅವಳು ಅಧಿಕಾರಕ್ಕೋಸ್ಕರ, ದುಡ್ಡಿಗೋಸ್ಕರ ಈ ಲೋಕದಲ್ಲಿರೋ ಅಧಿಕಾರಗಳ ಜೊತೆ ಸಂಬಂಧ ಇಟ್ಕೊಂಡಳು.—ಪ್ರಕ 17:1-5; 18:3; 1ಪೂರ್ವ 5:25.
-
ವ್ಯಭಿಚಾರ.
ಸಂಗಾತಿಯನ್ನ ಬಿಟ್ಟು ಬೇರೆಯವ್ರ ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ಳೋದು.—ವಿಮೋ 20:13; ಮತ್ತಾ 5:26; 19:8.
ಶ
-
ಶಾಪ.
ಒಂದು ವಸ್ತುಗೆ ಅಥವಾ ಒಬ್ಬ ವ್ಯಕ್ತಿಗೆ ಕೆಟ್ಟದು ಆಗುತ್ತೆ ಅಂತ ಹೆದರಿಸೋದು, ಹೇಳೋದು. ಇದು ಕೋಪ ಬಂದಾಗ ಬೈಯೋದು ಅಲ್ಲ. ಸಾಮಾನ್ಯವಾಗಿ ಎಲ್ರ ಮುಂದೆ ಕೆಟ್ಟದಾಗುತ್ತೆ ಅಂತ ಹೇಳೋದು. ದೇವರು ಅಥವಾ ದೇವರಿಂದ ಅಧಿಕಾರ ಪಡೆದ ವ್ಯಕ್ತಿ ಶಾಪ ಹಾಕಿದ್ರೆ ಅದು ಭವಿಷ್ಯವಾಣಿ ಆಗ್ತಿತ್ತು, ಅದು ಖಂಡಿತ ನಿಜ ಆಗ್ತಿತ್ತು.—ಆದಿ 12:3; ಅರ 22:12; ಗಲಾ 3:10.
-
ಶಾಶ್ವತ ಪ್ರೀತಿ.
ಹೆಚ್ಚಾಗಿ ಚೆಸೆದ್ ಅನ್ನೋ ಹೀಬ್ರು ಪದವನ್ನ ಈ ರೀತಿ ಭಾಷಾಂತರ ಮಾಡಿದ್ದಾರೆ. ಬದ್ಧತೆ, ಸಮಗ್ರತೆ, ನಿಷ್ಠೆ, ಆಪ್ತ ಬಾಂಧವ್ಯದಿಂದ ಹುಟ್ಟೋ ಪ್ರೀತಿಯನ್ನ ಸೂಚಿಸೋಕೆ ಇದನ್ನ ಬಳಸಲಾಗಿದೆ. ಇದು ಸಾಮಾನ್ಯವಾಗಿ ಮನುಷ್ಯರ ಮೇಲೆ ದೇವರಿಗಿರೋ ಪ್ರೀತಿಯನ್ನ ಸೂಚಿಸುತ್ತೆ. ಮನುಷ್ಯರ ಮಧ್ಯ ಕೂಡ ಈ ಪ್ರೀತಿ ಇರುತ್ತೆ.—ವಿಮೋ 34:6; ರೂತ್ 3:10.
-
ಶೀರ್ಷಿಕೆ.
ಕೆಲವು ಕೀರ್ತನೆಗಳ ಆರಂಭದಲ್ಲಿರೋ ಮಾತುಗಳು. ಅದರಲ್ಲಿ ರಚಿಸಿದವನ ಹೆಸ್ರು, ಅದರ ಮುಖ್ಯ ಸಂದೇಶ, ಸಂಗೀತಕ್ಕೆ ಸಂಬಂಧಿಸಿದ ನಿರ್ದೇಶನ ಇಲ್ಲಾ ಆ ಕೀರ್ತನೆಯ ಉಪಯೋಗ ಅಥವಾ ಉದ್ದೇಶ ಇರುತ್ತೆ.—ಕೀರ್ತನೆ 3; 4; 5; 6; 7; 30; 38; 60; 92; 102 ಶೀರ್ಷಿಕೆ ನೋಡಿ.
-
ಶುದ್ಧ.
ಬೈಬಲಲ್ಲಿ ಈ ಪದದ ಅರ್ಥ ಶಾರೀರಿಕ ಶುದ್ಧತೆ ಮಾತ್ರ ಅಲ್ಲ ನೈತಿಕವಾಗಿ ಮತ್ತು ಆರಾಧನೆ ವಿಷ್ಯದಲ್ಲಿ ಕಲೆ, ಕಳಂಕ ಇಲ್ಲದಿರೋದನ್ನ, ಮಲಿನ ಆಗದೆ ಇರೋದನ್ನ, ಗಲೀಜು ಆಗದೆ ಇರೋದನ್ನ, ಎಲ್ಲ ಅಶುದ್ಧತೆಯಿಂದ ದೂರ ಇರೋದನ್ನ, ಅಶುದ್ಧವಾಗಿದ್ರೆ ಮತ್ತೆ ಶುದ್ಧ ಆಗೋದನ್ನ ಸೂಚಿಸುತ್ತೆ. ಮೋಶೆ ನಿಯಮದ ಪುಸ್ತಕದಲ್ಲಿ ಶುದ್ಧ ಅಂದ್ರೆ ಅದ್ರಲ್ಲಿರೋ ನಿಯಮಗಳ ಪ್ರಕಾರ ತಮ್ಮನ್ನೇ ಶುದ್ಧ ಮಾಡ್ಕೊಳ್ಳೋದು.—ಯಾಜ 10:10; ಕೀರ್ತ 51:7; ಮತ್ತಾ 8:2; 1ಕೊರಿಂ 6:11.
-
ಶೆಕೆಲ್.
ಭಾರವನ್ನ, ಹಣವನ್ನ ಅಳಿಯೋಕೆ ಬಳಸ್ತಿದ್ದ ಮೂಲ ಹೀಬ್ರು ಅಳತೆ. ಇದು 11.4 ಗ್ರಾಮಿಗೆ ಸಮ. “ಪವಿತ್ರ ಶೆಕೆಲಿನ ಪ್ರಕಾರ” ಅಂತ ಬಂದಲ್ಲೆಲ್ಲ ಭಾರ ನಿರ್ಧಿಷ್ಟವಾಗಿ ಇರಬೇಕು ಅನ್ನೋದನ್ನ ಅಥವಾ ಆ ಭಾರ ದೇವಗುಡಾರದಲ್ಲಿದ್ದ ಸರಿಯಾದ ಅಳತೆ ಕಲ್ಲಿನ ಪ್ರಕಾರ ಇರಬೇಕು ಅನ್ನೋದನ್ನ ಸೂಚಿಸುತ್ತೆ. ಬಹುಶಃ ಸಾಮಾನ್ಯ ಶೆಕೆಲ್ ಅಲ್ಲದೆ ಬೇರೆ ತರದ ಇನ್ನೊಂದು ಶೆಕೆಲ್ ರಾಜಭವನದಲ್ಲಿ ಇದ್ದಿರಬೇಕು. ಅದಕ್ಕೆ ‘ರಾಜನ ಶೆಕೆಲ್’ ಅಂತಿದ್ರು.—ವಿಮೋ 30:13.
-
ಶೆಬಾಟ್.
ಬಾಬೆಲಿಂದ ವಾಪಸ್ ಬಂದ್ಮೇಲೆ ಯೆಹೂದ್ಯರು ಉಪಯೋಗಿಸ್ತಿದ್ದ ಪವಿತ್ರ ಕ್ಯಾಲೆಂಡರಿನ ಹನ್ನೊಂದನೇ ತಿಂಗಳು. ಬೇರೆಯವ್ರ ಕ್ಯಾಲೆಂಡರ್ ಪ್ರಕಾರ ಅದು 5ನೇ ತಿಂಗಳು. ನಮ್ಮ ಕ್ಯಾಲೆಂಡರ್ ಪ್ರಕಾರ ಈ ತಿಂಗಳು ಜನವರಿ ಮತ್ತು ಫೆಬ್ರವರಿ ಮಧ್ಯ ಬರುತ್ತೆ. (ಜೆಕ 1:7)—ಪರಿಶಿಷ್ಟ ಬಿ15 ನೋಡಿ.
-
ಶೆಮಿನಿತ್.
ಇದೊಂದು ಸಂಗೀತ ಪದ. ಇದಕ್ಕೆ “ಎಂಟನೇದು” ಅನ್ನೋ ಅರ್ಥ ಇದೆ. ಇದು ಸಂಗೀತದ ಕಮ್ಮಿ ಸ್ವರಮಟ್ಟವನ್ನ ಸೂಚಿಸ್ತಿರಬಹುದು. ಸಂಗೀತ ವಾದ್ಯಗಳ ವಿಷ್ಯಕ್ಕೆ ಬರೋದಾದ್ರೆ, ಈ ಪದ ಸಂಗೀತ ಶ್ರೇಣಿಯಲ್ಲಿ ಕಡಿಮೆ ಮಟ್ಟದ ಶಬ್ಧಗಳನ್ನ ಸೂಚಿಸ್ತಿರಬಹುದು. ಹಾಡುಗಳ ವಿಷ್ಯಕ್ಕೆ ಬರೋದಾದ್ರೆ, ಸಂಗೀತವನ್ನ ಕಡಿಮೆ ಶ್ರೇಣಿಯಲ್ಲಿ ಬಾರಿಸಬೇಕಂತ ಮತ್ತು ಅದಕ್ಕೆ ತಕ್ಕಂತೆ ಹಾಡಬೇಕಂತ ಈ ಪದ ಸೂಚಿಸ್ತಿರಬಹುದು.—1ಪೂರ್ವ 15:21; ಕೀರ್ತ 6:ಶೀರ್ಷಿಕೆ; 12:ಶೀರ್ಷಿಕೆ.
-
ಶೋಕಗೀತೆ.
ಸ್ನೇಹಿತ ಅಥವಾ ಆಪ್ತರು ಯಾರಾದ್ರೂ ತೀರಿಹೋದಾಗ ತುಂಬ ದುಃಖ ನೋವಿಂದ ಹಾಡು ಬರೆದು, ಸಂಗೀತ ಕೊಟ್ಟು ರಚಿಸಿರೋ ಗೀತೆ. ಇದನ್ನ ಪ್ರಲಾಪ ಅಂತಾನೂ ಕರಿತಾರೆ.—2ಸಮು 1:17; ಕೀರ್ತ 7:ಶೀರ್ಷಿಕೆ
ಷ
-
ಷಿಯೋಲ್.
“ಹೇಡೀಸ್” ಅನ್ನೋ ಗ್ರೀಕ್ ಪದಕ್ಕೆ ಸಮಾನವಾದ ಹೀಬ್ರು ಪದ. ಇದನ್ನ “ಸಮಾಧಿ” ಅಂತ ಭಾಷಾಂತರ ಮಾಡಲಾಗಿದೆ. ಇದು ಒಬ್ಬರ ಸಮಾಧಿಯನ್ನ ಸೂಚಿಸದೆ, ಮಾನವಕುಲದ ಸಾಮಾನ್ಯ ಸಮಾಧಿಯನ್ನ ಸೂಚಿಸುತ್ತೆ.—ಆದಿ 37:35; 2ಸಮು 22:6; ಅಕಾ 2:31.
ಸ
-
ಸತ್ಯ ದೇವರು.
ಹ್-ಎಲೋಹಿಮ್, ಹ್-ಎಲ್ ಅನ್ನೋ ಎರಡು ಹೀಬ್ರು ಪದಗಳನ್ನ “ಸತ್ಯ ದೇವರು” ಅಂತ ಅನುವಾದಿಸಲಾಗಿದೆ. ತುಂಬ ಕಡೆ, ಈ ಹೀಬ್ರು ಪದಗಳು ಸುಳ್ಳು ದೇವರಿಂದ ಒಬ್ಬನೇ ಒಬ್ಬ ಸತ್ಯ ದೇವರಾದ ಯೆಹೋವನನ್ನ ಪ್ರತ್ಯೇಕವಾಗಿ ತೋರಿಸುತ್ತೆ. ಅಂತಹ ಕಡೆಗಳಲ್ಲಿ “ಸತ್ಯ ದೇವರು” ಅನ್ನೋ ಮಾತು ಹೀಬ್ರುವಿನ ಪೂರ್ತಿ ಅರ್ಥವನ್ನ ತೋರಿಸಿಕೊಡುತ್ತೆ.—ಆದಿ 5:22, 24; 46:3; ಧರ್ಮೋ 4:39.
-
ಸದ್ದುಕಾಯರು.
ಯೆಹೂದಿ ಮತಕ್ಕೆ ಸೇರಿದ ಒಂದು ಪ್ರಮುಖ ಪಂಗಡ. ಸಮಾಜದಲ್ಲಿ ಪ್ರಖ್ಯಾತಿ ಪಡೆದ ಶ್ರೀಮಂತ ಜನರು, ಒಳ್ಳೇ ಹುದ್ದೆಯಲ್ಲಿದ್ದ ಪುರೋಹಿತರು ಈ ಪಂಗಡದಲ್ಲಿದ್ರು. ದೇವಾಲಯದಲ್ಲಿ ನಡೆಯುತ್ತಿದ್ದ ಎಲ್ಲ ಕಾರ್ಯ ಚಟುವಟಿಕೆಗಳ ಮೇಲೆ ಇವರಿಗೆ ಅಧಿಕಾರ ಇತ್ತು. ಫರಿಸಾಯರ ಆಚಾರವಿಚಾರಗಳನ್ನ ಮತ್ತು ಅವರು ನಂಬ್ತಿದ್ದ ವಿಷ್ಯಗಳನ್ನ ಇವರು ತಿರಸ್ಕರಿಸ್ತಿದ್ರು. ಮತ್ತೆ ಜೀವಂತ ಎದ್ದು ಬರೋದರ ಬಗ್ಗೆ, ದೇವದೂತರು ಇದ್ದಾರೆ ಅನ್ನೋದ್ರ ಬಗ್ಗೆ ಇವರಿಗೆ ನಂಬಿಕೆ ಇರಲಿಲ್ಲ. ಇವರು ಯೇಸುವನ್ನೂ ನಂಬ್ತಿರಲಿಲ್ಲ.—ಮತ್ತಾ 16:1; ಅಕಾ 23:8.
-
ಸಬ್ಬತ್.
“ವಿಶ್ರಾಂತಿ, ಕೆಲಸ ನಿಲ್ಲಿಸು” ಅನ್ನೋ ಅರ್ಥ ಕೊಡೋ ಹೀಬ್ರು ಪದದಿಂದ ಬಂದಿದೆ. ಇದು ಯೆಹೂದಿ ವಾರದ ಕೊನೇ ದಿನ (ಶುಕ್ರವಾರ ಸೂರ್ಯಾಸ್ತಮಾನದಿಂದ ಶನಿವಾರ ಸೂರ್ಯಾಸ್ತಮಾನದ ತನಕ.) ವರ್ಷದಲ್ಲಿ ಆಚರಿಸುತ್ತಿದ್ದ ಕೆಲವು ದಿನಗಳನ್ನ ಸಹ ಸಬ್ಬತ್ ದಿನ ಅಂತಿದ್ರು. ಅಷ್ಟೇ ಅಲ್ಲ, 7ನೇ ಮತ್ತು 50ನೇ ವರ್ಷಗಳನ್ನ ಸಬ್ಬತ್ ವರ್ಷಗಳು ಅಂತಿದ್ರು. ದೇವಾಲಯದಲ್ಲಿ ಮಾಡ್ತಿದ್ದ ಪುರೋಹಿತ ಸೇವೆ ಬಿಟ್ಟು ಬೇರೆ ಯಾವುದೇ ಕೆಲಸವನ್ನ ಸಬ್ಬತ್ ದಿನ ಮಾಡಬಾರದಿತ್ತು. ಸಬ್ಬತ್ ವರ್ಷದಲ್ಲಿ ಭೂಮಿಯಲ್ಲಿ ಬೆಳೆಯನ್ನ ಬೆಳೆಸಬಾರದಿತ್ತು. ಆ ವರ್ಷದಲ್ಲಿ ಸಾಲ ತೀರಿಸುವಂತೆ ಬೇರೆ ಇಬ್ರಿಯರಿಗೆ ಭಾರ ಹಾಕಬಾರದಿತ್ತು. ಮೋಶೆಯ ನಿಯಮ ಪುಸ್ತಕದ ಪ್ರಕಾರ ಸಬ್ಬತ್ ದಿನದ ನಿಯಮಗಳನ್ನ ಜನರು ಸುಲಭವಾಗಿ ಪಾಲಿಸಬಹುದಿತ್ತು. ಆದ್ರೆ, ಧರ್ಮಗುರುಗಳು ಅದಕ್ಕೆ ಹೊಸಹೊಸ ನಿಯಮಗಳನ್ನ ಸೇರಿಸ್ತಾ ಹೋದ್ರು. ಹಾಗಾಗಿ, ಯೇಸು ಸಮಯಕ್ಕೆ ಜನ್ರಿಗೆ ಆ ನಿಯಮಗಳನ್ನ ಪಾಲಿಸೋಕೆ ತುಂಬ ಕಷ್ಟ ಆಯ್ತು.—ವಿಮೋ 20:8; ಯಾಜ 25:4; ಲೂಕ 13:14-16; ಕೊಲೊ 2:16.
-
ಸಭಾಮಂದಿರ.
ಈ ಪದಕ್ಕೆ “ಒಟ್ಟುಸೇರೋದು, ಸಮಾವೇಶ” ಅನ್ನೋ ಅರ್ಥ ಇದೆ. ಆದ್ರೆ ಹೆಚ್ಚಿನ ವಚನಗಳಲ್ಲಿ, ಯೆಹೂದ್ಯರು ಗ್ರಂಥದ ಸುರುಳಿ ಓದೋಕೆ, ಉಪದೇಶ ಮಾಡೋಕೆ, ಪ್ರಕಟನೆಗಳನ್ನ ಮಾಡೋಕೆ, ಪ್ರಾರ್ಥಿಸೋಕೆ ಒಟ್ಟುಸೇರಿ ಬರ್ತಿದ್ದ ಸ್ಥಳವನ್ನ ಸೂಚಿಸೋಕೆ ಈ ಪದ ಬಳಸಿದ್ದಾರೆ. ಯೇಸು ಲೂಕ 4:16; ಅಕಾ 13:14, 15.
ದಿನಗಳಲ್ಲಿ, ಸ್ವಲ್ಪ ದೊಡ್ಡದಾಗಿರೋ ಎಲ್ಲ ಇಸ್ರಾಯೇಲ್ ಪಟ್ಟಣಗಳಲ್ಲಿ ಸಭಾಮಂದಿರ ಇರ್ತಿತ್ತು. ಆದ್ರೆ ದೊಡ್ಡದೊಡ್ಡ ಪಟ್ಟಣಗಳಲ್ಲಿ ಒಂದಕ್ಕಿಂತ ಹೆಚ್ಚು ಸಭಾಮಂದಿರಗಳು ಇರ್ತಿದ್ವು.— -
ಸಭೆ.
ಒಂದು ವಿಶೇಷ ಉದ್ದೇಶಕ್ಕಾಗಿ ಅಥವಾ ಕೆಲ್ಸಕ್ಕಾಗಿ ಜನ್ರು ಸೇರಿಬರೋದು. ಹೀಬ್ರು ಪವಿತ್ರ ಗ್ರಂಥದಲ್ಲಿ ಈ ಪದ ಇಸ್ರಾಯೇಲ್ ಜನ್ರಿಗೆ ಸೂಚಿಸ್ತಿತ್ತು. ಗ್ರೀಕ್ ಪವಿತ್ರ ಗ್ರಂಥದಲ್ಲಿ ಸಾಮಾನ್ಯವಾಗಿ ಎಲ್ಲ ಕ್ರೈಸ್ತ ಸಭೆಗಳನ್ನ ಮತ್ತು ಕೆಲವೊಮ್ಮೆ ಒಂದೊಂದು ಕ್ರೈಸ್ತ ಸಭೆಯನ್ನ ಸೂಚಿಸ್ತಿತ್ತು.—1ಅರ 8:22; ಅಕಾ 9:31; ರೋಮ 16:5.
-
ಸಮರ್ಪಣೆ ಹಬ್ಬ.
ಅಂತಿಯೋಕಸ್ ಎಪಿಫಾನೀಸ್ ಅನ್ನೋ ರಾಜ ಅಶುದ್ಧ ಮಾಡಿದ ದೇವಾಲಯವನ್ನ ಶುದ್ಧ ಮಾಡಿದ ದಿನವನ್ನ ನೆನಪಿಸ್ಕೊಳ್ಳೋಕೆ ಮಾಡ್ತಿದ್ದ ಹಬ್ಬ. ಕಿಸ್ಲೇವ್ ತಿಂಗಳ 25ರಿಂದ 8 ದಿನಗಳ ತನಕ ಈ ಆಚರಣೆ ನಡಿತಿತ್ತು.—ಯೋಹಾ 10:22.
-
ಸಮರ್ಪಣೆಯ ಪವಿತ್ರ ಚಿಹ್ನೆ.
ಹೊಳಿಯೋ ಶುದ್ಧ ಚಿನ್ನದ ತಗಡು. ಇದ್ರ ಮೇಲೆ “ಯೆಹೋವ ಪವಿತ್ರನು” ಅಂತ ಹೀಬ್ರುವಿನಲ್ಲಿ ಕೆತ್ತಿದ ಪದಗಳು ಇದ್ವು. ಈ ತಗಡು ಮಹಾ ಪುರೋಹಿತನ ಪೇಟದ ಮುಂದೆ ಇರ್ತಿತ್ತು. (ವಿಮೋ 39:30)—ಪರಿಶಿಷ್ಟ ಬಿ5 ನೋಡಿ.
-
ಸಮಾಧಾನ ಬಲಿ.
ಯೆಹೋವ ದೇವರ ಜೊತೆ ಒಳ್ಳೇ ಸಂಬಂಧ ಇರಬೇಕು ಅನ್ನೋ ಉದ್ದೇಶದಿಂದ ಕೊಡೋ ಬಲಿ. ಬಲಿ ಕೊಡೋನು, ಅವನ ಕುಟುಂಬದವರು, ಬಲಿ ಅರ್ಪಿಸೋ ಪುರೋಹಿತ, ಅಲ್ಲಿ ಸೇವೆ ಮಾಡ್ತಿದ್ದ ಬೇರೆ ಪುರೋಹಿತರೂ ಅದನ್ನ ತಿಂತಿದ್ರು. ಅದ್ರ ಕೊಬ್ಬನ್ನ ಬೆಂಕಿಯಲ್ಲಿ ಸುಟ್ಟಾಗ ಮೇಲೆ ಹೋಗೋ ಹೊಗೆಯನ್ನ ಯೆಹೋವ ಸ್ವೀಕರಿಸ್ತಿದ್ದನು. ಜೀವವನ್ನ ಪ್ರತಿನಿಧಿಸ್ತಿದ್ದ ರಕ್ತವನ್ನೂ ಆತನಿಗೆ ಕೊಡ್ತಿದ್ರು. ಇದು ಒಂದರ್ಥದಲ್ಲಿ ಪುರೋಹಿತರು, ಆರಾಧಕರು ಯೆಹೋವನ ಜೊತೆ ಕೂತು ಊಟ ಮಾಡೋ ತರ ಇರ್ತಿತ್ತು. ಇದು ಒಳ್ಳೇ ಸಂಬಂಧವನ್ನ ಸೂಚಿಸ್ತಿತ್ತು.—ಯಾಜ 7:29, 32; ಧರ್ಮೋ 27:7.
-
ಸಮಾಧಿ.
ಇದು ಮನುಷ್ಯನನ್ನ ಮಣ್ಣು ಮಾಡೋ ಜಾಗ. ಆದ್ರೆ ಬೈಬಲಲ್ಲಿ ತುಂಬ ಕಡೆ ಮನುಷ್ಯ ಸಾಯೋದಕ್ಕೆ ಇದನ್ನ ಅಲಂಕಾರಿಕವಾಗಿ ಬಳಸಲಾಗಿದೆ. ಇಂಥ ವಚನಗಳಲ್ಲಿ ಸಮಾಧಿಗೆ ಹೀಬ್ರು ಪದ “ಷಿಯೋಲ್” ಮತ್ತು ಗ್ರೀಕ್ ಪದ “ಹೇಡೀಸ್” ಅಂತ ಬಳಸಿದ್ದಾರೆ.—ಆದಿ 47:30; ಪ್ರಸಂ 9:10; ಅಕಾ 2:31.
-
ಸಮಾಧಿ.
ಸತ್ತುಹೋದ ವ್ಯಕ್ತಿಯ ಶವವನ್ನ ಇಡೋ ಜಾಗ. ನಿಮಿಯೋನ್ ಅನ್ನೋ ಗ್ರೀಕ್ ಪದವನ್ನ ಈ ತರ ಭಾಷಾಂತರ ಮಾಡಲಾಗಿದೆ. ಈ ಗ್ರೀಕ್ ಪದ “ನೆನಪಿಸೋಕೆ” ಅನ್ನೋ ಅರ್ಥ ಇರೋ ಕ್ರಿಯಾಪದದಿಂದ ಬಂದಿದೆ. ಸತ್ತೋಗಿರೋ ವ್ಯಕ್ತಿಯನ್ನ ನೆನಪಿಸ್ಕೊಳ್ತಿದ್ದಾರೆ ಅಂತ ಆ ಕ್ರಿಯಾಪದ ಸೂಚಿಸುತ್ತೆ.—ಯೋಹಾ 5:28, 29.
-
ಸಮಾರ್ಯ.
ಹತ್ತು ಕುಲಗಳ ಉತ್ತರ ರಾಜ್ಯವಾದ ಇಸ್ರಾಯೇಲ್ ಸುಮಾರು 200 ವರ್ಷಗಳ ತನಕ ರಾಜಧಾನಿಯಾಗಿ ಇತ್ತು. ಅಷ್ಟೇ ಅಲ್ಲ, ಆ ಇಡೀ ರಾಜ್ಯಕ್ಕೂ ಇದೇ ಹೆಸ್ರಿತ್ತು. ಸಮಾರ್ಯ ಅನ್ನೋ ಬೆಟ್ಟದ ಮೇಲೆನೇ ಈ ಪಟ್ಟಣವನ್ನ ಕಟ್ಟಲಾಗಿತ್ತು. ಯೇಸು ಕಾಲದಲ್ಲಿ ಸಮಾರ್ಯ ಅನ್ನೋದು ಒಂದು ಜಿಲ್ಲೆಯಾಗಿ ಇತ್ತು. ಇದರ ಉತ್ತರಕ್ಕೆ ಗಲಿಲಾಯ, ದಕ್ಷಿಣಕ್ಕೆ ಯೂದಾಯ ಇತ್ತು. ಸಾಮಾನ್ಯವಾಗಿ ಯೇಸು ಸಾರೋಕೆ ಈ ಪ್ರದೇಶಕ್ಕೆ ಹೋಗಲಿಲ್ಲವಾದ್ರೂ ಕೆಲವೊಮ್ಮೆ ಪ್ರಯಾಣ ಮಾಡ್ತಾ ಆ ಪ್ರದೇಶ ದಾಟಿಕೊಂಡು ಹೋಗುವಾಗ ಅಲ್ಲಿನ ಜನರ ಜೊತೆ ಮಾತಾಡಿದನು. ಸಮಾರ್ಯದವರು ಪವಿತ್ರಶಕ್ತಿಯನ್ನ ಪಡ್ಕೊಂಡ ಸನ್ನಿವೇಶದಲ್ಲಿ ಪೇತ್ರ ಸ್ವರ್ಗದ ಆಳ್ವಿಕೆಯ ಎರಡನೇ ಬೀಗದ ಕೈಯನ್ನ ಬಳಸಿದನು. (1ಅರ 16:24; ಯೋಹಾ 4:7; ಅಕಾ 8:14)—ಪರಿಶಿಷ್ಟ ಬಿ10 ನೋಡಿ.
-
ಸಮಾರ್ಯದವರು.
ಈ ಪದವನ್ನ ಆರಂಭದಲ್ಲಿ ಹತ್ತು ಕುಲಗಳ ಇಸ್ರಾಯೇಲ್ಯರ ಉತ್ತರ ಸಾಮ್ರಾಜ್ಯವನ್ನ ಸೂಚಿಸೋಕೆ ಬಳಸ್ತಿದ್ರು. ಆದ್ರೆ ಕ್ರಿ.ಪೂ. 740ರಲ್ಲಿ ಅಶ್ಶೂರ್ಯರು ಸಮಾರ್ಯವನ್ನ ಸೋಲಿಸಿದ ನಂತ್ರ ಈ ಪಟ್ಟಣಕ್ಕೆ ವಿದೇಶಿಯರನ್ನ ಕರ್ಕೊಂಡು ಬಂದ್ರು. ಯೇಸು ಇದ್ದ ಕಾಲದಲ್ಲಿ, ಜಾತಿ ಮತ್ತು ರಾಜಕೀಯ ವಿಷ್ಯಗಳನ್ನ ಬಿಟ್ಟು ಶೆಕೆಮ್ ಮತ್ತು ಸಮಾರ್ಯದ ಹತ್ರ ವಾಸಮಾಡ್ತಿದ್ದ ಒಂದು ಧಾರ್ಮಿಕ ಪಂಗಡದವರನ್ನ ಸಮಾರ್ಯದವರು ಅಂತ ಕರೀತಿದ್ರು. ಯೆಹೂದಿ ಪಂಗಡಕ್ಕಿಂತ ವಿಭಿನ್ನ ನಂಬಿಕೆಗಳು ಈ ಸಮಾರ್ಯದವರಿಗೆ ಇದ್ವು.—ಯೋಹಾ 8:48.
-
ಸರ್ವಾಂಗಹೋಮ ಬಲಿ.
ಪೂರ್ತಿಯಾಗಿ ದೇವರಿಗೆ ಕೊಡೋ ಬಲಿ. ಇದು ಯಜ್ಞವೇದಿ ಮೇಲೆ ಸುಡೋ ಪ್ರಾಣಿ ಬಲಿ. ಈ ಬಲಿ ಕೊಡೋ ವ್ಯಕ್ತಿ ಬಲಿ ಕೊಡೋ ಪ್ರಾಣಿಯ (ಕರು, ಟಗರು, ಗಂಡು ಆಡು, ಕಾಡು ಪಾರಿವಾಳ, ಪಾರಿವಾಳದ ಒಂದು ಮರಿಯ) ಯಾವ ಭಾಗವನ್ನೂ ಇಟ್ಕೊಬಾರದು.—ವಿಮೋ 29:18; ಯಾಜ 6:9.
-
ಸಹಾಯಕ ಸೇವಕ.
ಇದ್ರ ಗ್ರೀಕ್ ಪದ ದೀಯಾಕೊನೊಸ್. ಇದನ್ನ ಹೆಚ್ಚಾಗಿ “ಸಹಾಯಕ,” “ಸೇವಕ” ಅಂತ ಭಾಷಾಂತರ ಮಾಡಲಾಗಿದೆ. ಸಭೆಯಲ್ಲಿ ಹಿರಿಯರ ಮಂಡಲಿಗೆ ಸಹಾಯ ಮಾಡುವವ್ರಿಗೆ ಸಹಾಯಕ ಸೇವಕ ಅಂತ ಹೇಳಲಾಗಿದೆ. ಈ ಸುಯೋಗ ಸಿಗಬೇಕಾದ್ರೆ ಬೈಬಲಲ್ಲಿ ಹೇಳಿರೋ ಅರ್ಹತೆಗಳು ಇರಬೇಕು.—1ತಿಮೊ 3:8-10, 12.
-
ಸಾಂಬ್ರಾಣಿ.
ಬೋಸ್‌ವೆಲಿಯ ಜಾತಿಯ ಮರದಿಂದ ಅಥವಾ ಗಿಡದಿಂದ ತಗೊಂಡಿರೋ ಒಣಗಿದ ಅಂಟು (ಮರದ ಅಂಟು.) ಸುಟ್ಟಾಗ ಇದ್ರಿಂದ ಸುವಾಸನೆ ಬರುತ್ತೆ. ಪವಿತ್ರ ಡೇರೆಯಲ್ಲಿ, ದೇವಾಲಯದಲ್ಲಿ ಉಪಯೋಗಿಸೋ ಪವಿತ್ರ ಧೂಪ ತಯಾರಿಸುವಾಗ ಇದನ್ನೂ ಸೇರಿಸ್ಕೊಳ್ತಿದ್ರು. ಇದನ್ನ ಧಾನ್ಯಅರ್ಪಣೆ ಜೊತೆನೂ ಅರ್ಪಿಸ್ತಿದ್ರು. ಪವಿತ್ರ ಸ್ಥಳದಲ್ಲಿ ಇಟ್ಟಿರೋ ಅರ್ಪಣೆಯ ರೊಟ್ಟಿ ಮೇಲೂ ಸಾಂಬ್ರಾಣಿ ಇಡ್ತಿದ್ರು.—ವಿಮೋ 30:34-36; ಯಾಜ 2:1; 24:7; ಮತ್ತಾ 2:11.
-
ಸಾಕ್ಷಿ.
ಎರಡು ಕಲ್ಲಿನ ಹಲಗೆಗಳನ್ನ ಬರೆದು ಮೋಶೆಗೆ ಕೊಟ್ಟಿರೋ ದಶಾಜ್ಞೆಗಳಿಗೆ “ಸಾಕ್ಷಿ” ಅಂತ ಕರೀತಾರೆ.—ವಿಮೋ 31:18.
-
ಸಿದ್ಧತೆಯ ದಿನ.
ಆ ದಿನ ಯೆಹೂದಿಗಳು ಸಬ್ಬತ್ ದಿನಕ್ಕೆ ಬೇಕಾದ ಏರ್ಪಾಡುಗಳನ್ನ ಮಾಡ್ಕೊಳ್ತಿದ್ರು. ಸಿದ್ಧ ಆಗೋ ದಿನ ಶುಕ್ರವಾರ ಸೂರ್ಯಾಸ್ತಮಾನ ಆದ್ಮೇಲೆ ಮುಗಿದು ಹೋಗುತ್ತೆ. ನಂತ್ರ ಸಬ್ಬತ್ ದಿನ ಶುರು ಆಗುತ್ತೆ. ಯೆಹೂದಿಗಳು ಸಂಜೆಯಿಂದ ಸಂಜೆ ತನಕ ಒಂದು ದಿನ ಅಂತ ಪರಿಗಣಿಸ್ತಿದ್ರು.—ಮಾರ್ಕ 15:42; ಲೂಕ 23:54.
-
ಸಿರಿಯ; ಸಿರಿಯನ್ನರು.
—ಅರಾಮ್; ಅರಾಮ್ಯರು ನೋಡಿ
-
ಸಿಹಿಸುದ್ದಿ.
ಗ್ರೀಕ್ ಪವಿತ್ರ ಗ್ರಂಥದಲ್ಲಿ ದೇವರ ಆಳ್ವಿಕೆಯ ಸಿಹಿಸುದ್ದಿ ಮತ್ತು ಯೇಸು ಕ್ರಿಸ್ತನ ಮೇಲೆ ನಂಬಿಕೆ ಇಡೋದ್ರಿಂದ ಸಿಗೋ ರಕ್ಷಣೆಯ ಸಿಹಿಸುದ್ದಿ ಬಗ್ಗೆ ಹೇಳಲಾಗಿದೆ.—ಲೂಕ 4:18, 43; ಅಕಾ 5:42; ಪ್ರಕ 14:6.
-
ಸೀವಾನ್.
ಬಾಬೆಲಿನ ಬಂಧಿವಾಸದಿಂದ ವಾಪಸ್ ಬಂದ್ಮೇಲೆ ಯೆಹೂದ್ಯರು ಬಳಸ್ತಿದ್ದ ಪವಿತ್ರ ಕ್ಯಾಲೆಂಡರಿನ ಮೂರನೇ ತಿಂಗಳು. ಬೇರೆಯವ್ರ ಕ್ಯಾಲೆಂಡರ್ ಪ್ರಕಾರ ಅದು 9ನೇ ತಿಂಗಳು. ನಮ್ಮ ಕ್ಯಾಲೆಂಡರ್ ಪ್ರಕಾರ ಈ ತಿಂಗಳು ಮೇ ಮತ್ತು ಜೂನ್ ಮಧ್ಯ ಬರುತ್ತೆ. (ಎಸ್ತೇ 8:9)—ಪರಿಶಿಷ್ಟ ಬಿ15 ನೋಡಿ.
-
ಸುಗಂಧ ತೈಲ.
ಈ ತಿಳಿ ಕೆಂಪು ಬಣ್ಣದ ತೈಲ ತುಂಬ ದುಬಾರಿ. ಈ ತೈಲ ಜಟಮಾಂಸಿ (ನಾರ್ಡೊಸ್ಟಕಿಸ್ ಜಟಮಾಂಸಿ) ಸಸಿಯಿಂದ ಸಿಗುತ್ತೆ. ಇದು ತುಂಬ ದುಬಾರಿ ಆಗಿದ್ರಿಂದ ಮಾಮೂಲಿ ಎಣ್ಣೆ ಜೊತೆ ಇದನ್ನ ಸೇರಿಸ್ತಿದ್ರು. ಸ್ವಲ್ಪ ಜನ ನಕಲಿ ತೈಲ ಕೂಡ ತಯಾರಿಸ್ತಿದ್ರು. ಯೇಸು ಮೇಲೆ ಹೊಯ್ದ ತೈಲ ಅಪ್ಪಟ ಜಟಮಾಂಸಿ ತೈಲ ಅಂತ ಮಾರ್ಕ ಮತ್ತು ಯೋಹಾನ ಇಬ್ರೂ ಹೇಳಿದ್ರು.—ಮಾರ್ಕ 14:3; ಯೋಹಾ 12:3.
-
ಸುಟ್ಟ ಬತ್ತಿಗಳನ್ನ ಹಾಕೋ ಪಾತ್ರೆ.
ಚಿನ್ನ, ಬೆಳ್ಳಿ, ತಾಮ್ರದ ಪಾತ್ರೆ. ಇದನ್ನ ಪವಿತ್ರ ಡೇರೆಯಲ್ಲಿ ಮತ್ತು ದೇವಾಲಯದಲ್ಲಿ ಉಪಯೋಗಿಸ್ತಿದ್ರು. ಯಜ್ಞವೇದಿಯಿಂದ ಸುಡ್ತಿರೋ ಧೂಪವನ್ನ, ಕೆಂಡವನ್ನ ತೆಗಿಯೋಕೆ ಮತ್ತು ಚಿನ್ನದ ದೀಪಸ್ತಂಭದಿಂದ ಸುಟ್ಟ ಬತ್ತಿಗಳನ್ನ ತೆಗಿಯೋಕೆ ಇದನ್ನ ಬಳಸ್ತಿದ್ರು. ಇದನ್ನ ಧೂಪಪಾತ್ರೆ ಅಂತಾನೂ ಕರಿತಿದ್ರು.—ವಿಮೋ 37:23; 2ಪೂರ್ವ 26:19; ಇಬ್ರಿ 9:4.
-
ಸುನ್ನತಿ.
ಪುರುಷರ ಜನನಾಂಗದ ಮುಂದೊಗಲನ್ನ ತೆಗಿಯೋದು. ಇದನ್ನ ಅಬ್ರಹಾಮ ಮತ್ತು ಅವನ ವಂಶದವರು ಮಾಡ್ಲೇಬೇಕು ಅಂತ ನಿಯಮ ಇತ್ತು. ಆದ್ರೆ ಕ್ರೈಸರಿಗೆ ಈ ನಿಯಮ ಇಲ್ಲ. ಈ ಪದವನ್ನ ಕೆಲವೊಮ್ಮೆ ಅಲಂಕಾರಿಕವಾಗಿ ಉಪಯೋಗಿಸಿದ್ದಾರೆ.—ಆದಿ 17:10; 1ಕೊರಿಂ 7:19; ಫಿಲಿ 3:3.
-
ಸುರುಳಿ.
ಚರ್ಮದಿಂದ ಮಾಡಿದ ಉದ್ದ ಕಾಗದ ಅಥವಾ ಪಪೈರಸ್. ಇದ್ರಲ್ಲಿ ಒಂದು ಕಡೆ ಮಾತ್ರ ಬರೀತಿದ್ರು. ಸಾಮಾನ್ಯವಾಗಿ ಇದನ್ನ ಒಂದು ಕೋಲಿಗೆ ಸುತ್ತುತಿದ್ರು. ವಚನಗಳನ್ನ ಬರೆದಿದ್ದು, ಅದನ್ನ ನಕಲು ಮಾಡಿದ್ದು ಇಂತಹ ಸುರುಳಿಗಳಲ್ಲೇ. ಬೈಬಲ್ ಬರೆದ ಕಾಲದಲ್ಲೂ ಇಂತಹ ಪುಸ್ತಕ ರೂಪಗಳೇ ಚಾಲ್ತಿಯಲ್ಲಿ ಇದ್ವು.—ಯೆರೆ 36:4, 18, 23; ಲೂಕ 4:17-20; 2ತಿಮೊ 4:13.
-
ಸುರ್ತಿಸ್.
ಉತ್ತರ ಆಫ್ರಿಕಾದ ಲಿಬಿಯಾ ತೀರದಲ್ಲಿ ಕಡಿಮೆ ಆಳ ಇರೋ ಎರಡು ದೊಡ್ಡ ಸಿಂಧೂ ಶಾಖೆಗಳು. ಅಲೆಗಳ ಅಬ್ಬರಕ್ಕೆ ಅಲ್ಲಿರೋ ಮರಳು ತೀರಗಳು ಯಾವಾಗ್ಲೂ ತಮ್ಮ ಸ್ಥಾನವನ್ನ ಬದಲಾಯಿಸ್ತಾ ಅಪಾಯಕರವಾಗಿ ಇದ್ದಿದ್ರಿಂದ ಪ್ರಾಚೀನ ನಾವಿಕರು ಅವಕ್ಕೆ ಹೆದರುತ್ತಿದ್ದರು. (ಅಕಾ 27:17)—ಪರಿಶಿಷ್ಟ ಬಿ13 ನೋಡಿ.
-
ಸೂಚನೆ.
ಸದ್ಯದಲ್ಲಿ ಅಥವಾ ಭವಿಷ್ಯತ್ತಲ್ಲಿ ನಡೆಯುತ್ತಿದ್ದ ವಿಷ್ಯವನ್ನ ಸೂಚಿಸುತ್ತಿದ್ದ ವಸ್ತು, ಕೆಲಸ, ಆದಿ 9:12, 13; 2ಅರ 20:9; ಮತ್ತಾ 24:3; ಪ್ರಕ 1:1.
ಸನ್ನಿವೇಶ ಅಥವಾ ಅಸಾಧಾರಣ ಪ್ರದರ್ಶನ.— -
ಸೆಯಾ.
ಇದೊಂದು ಒಣ ಅಳತೆ. ಬತ್ ಅನ್ನೋ ದ್ರವ ಅಳತೆ ಆಧಾರವಾಗಿ ನೋಡಿದ್ರೆ ಇದು 7.33 ಲೀಟರಿಗೆ ಸಮ. (2ಅರ 7:1)—ಪರಿಶಿಷ್ಟ ಬಿ14 ನೋಡಿ.
-
ಸೆರಾಫಿಯರು.
ಸ್ವರ್ಗದಲ್ಲಿ ಯೆಹೋವನ ಸಿಂಹಾಸನದ ಸುತ್ತ ಇರೋ ದೇವದೂತರು. ಸೆರಾಫಿಮ್ ಅನ್ನೋ ಹೀಬ್ರು ಪದಕ್ಕೆ ಅಕ್ಷರಾರ್ಥಕವಾಗಿ “ಪ್ರಜ್ವಲಿಸುವವರು” ಅನ್ನೋ ಅರ್ಥ ಇದೆ.—ಯೆಶಾ 6:2, 6.
-
ಸೆಲಾ.
ಸಂಗೀತಕ್ಕೆ ಅಥವಾ ಮತ್ತೆ ಉಚ್ಚರಿಸೋಕೆ ಬಳಸೋ ಪದ. ಕೀರ್ತನೆ ಮತ್ತು ಹಬಕ್ಕೂಕ ಪುಸ್ತಕದಲ್ಲಿ ಈ ಪದ ನೋಡಬಹುದು. ಹಾಡುವಾಗ ಅಥವಾ ಸಂಗೀತ ನುಡಿಸುವಾಗ ಇಲ್ಲಾ ಎರಡೂ ಸಮಯದಲ್ಲಿ ಇದು ವಿರಾಮವನ್ನ ಸೂಚಿಸ್ತಿತ್ತು. ಸದ್ದಿಲ್ಲದೆ ಮನಸ್ಸಲ್ಲೇ ಧ್ಯಾನಿಸ್ತಾ ಭಾವನೆ ವ್ಯಕ್ತಪಡಿಸೋದು ಈ ವಿರಾಮದ ಉದ್ದೇಶವಾಗಿತ್ತು. ಇದನ್ನ ಗ್ರೀಕ್ ಸೆಪ್ಟೂಅಜೆಂಟಿನಲ್ಲಿ ಡಯಾಸಮ್ ಅಂತ ಅನುವಾದಿಸಿದ್ದಾರೆ. ಅದಕ್ಕೆ ಸಂಗೀತ ವಿರಾಮ ಅನ್ನೋ ಅರ್ಥ ಇದೆ.—ಕೀರ್ತ 3:4; ಹಬ 3:3.
-
ಸೈತಾನ.
ಹೀಬ್ರು ಪದದ ಅರ್ಥ “ವಿರೋಧಿ” ಅಥವಾ “ಎದುರಿಸುವವನು.” ಇವನು ದೇವರ ಮುಖ್ಯ ವಿರೋಧಿ. ಇವನಿಗೆ ಅಪವಾದಿ ಅನ್ನೋ ಹೆಸ್ರು ಕೂಡ ಇದೆ.—ಯೋಬ 1:6; ಮತ್ತಾ 4:10; ಪ್ರಕ 12:9.
-
ಸೊಲೊಮೋನನ ಮಂಟಪ.
ಯೇಸು ಕಾಲದಲ್ಲಿದ್ದ ಆಲಯದ ಹೊರಗಿನ ಪ್ರಾಕಾರದ ಪೂರ್ವಕ್ಕೆ ಮಂಟಪ ಇದ್ದ ದಾರಿ. ಇದು ಸೊಲೊಮೋನ ಕಟ್ಟಿಸಿದ ಆಲಯದ ಅವಶೇಷ ಅಂತ ತುಂಬ ಜನ ಭಾವಿಸಿದ್ರು. ‘ಚಳಿಗಾಲದಲ್ಲಿ’ ಯೇಸು ಅಲ್ಲಿ ನಡೆದಾಡಿದನು. ಆರಂಭದ ಕ್ರೈಸ್ತರು ಆರಾಧನೆಗಾಗಿ ಅಲ್ಲಿ ಸೇರಿಬರ್ತಿದ್ರು.(ಯೋಹಾ 10:22, 23; ಅಕಾ 5:12)—ಪರಿಶಿಷ್ಟ ಬಿ11 ನೋಡಿ.
-
ಸ್ತೋಯಿಕರ ಪಂಡಿತರು.
ತರ್ಕಕ್ಕೆ, ಪ್ರಕೃತಿಗೆ ತಕ್ಕಂತೆ ಜೀವಿಸೋದೇ ಸಂತೋಷ ಅಂತ ನಂಬ್ತಿದ್ದ ಒಂದು ಗ್ರೀಕ್ ಪಾಠಶಾಲೆಯ ಪಂಡಿತರು. ಅವರ ಪ್ರಕಾರ ನೋವಿಗೂ, ಸುಖಕ್ಕೂ ಸ್ಪಂದಿಸದೆ ಇರುವವನೇ ನಿಜವಾದ ಬುದ್ಧಿವಂತ ವ್ಯಕ್ತಿ.—ಅಕಾ 17:18.
-
ಸ್ಯೂಸ್.
ವಿಧವಿಧವಾದ ದೇವರುಗಳನ್ನ ಪೂಜಿಸ್ತಿದ್ದ ಗ್ರೀಕರ ಪ್ರಧಾನ ದೇವರು. ಲುಸ್ತ್ರದ ಜನರು ಬಾರ್ನಬನನ್ನ ತಪ್ಪಾಗಿ ಅರ್ಥಮಾಡ್ಕೊಂಡು ಸ್ಯೂಸ್ ದೇವರು ಅಂದ್ಕೊಂಡ್ರು. ಲುಸ್ತ್ರಕ್ಕೆ ಹತ್ರದಲ್ಲಿ ಅಗೆದಾಗ ಸಿಕ್ಕಿದ ಪ್ರಾಚೀನ ಕೆತ್ತನೆಯಲ್ಲಿ “ಸ್ಯೂಸ್ ಪುರೋಹಿತರು,” “ಸೂರ್ಯದೇವ ಸ್ಯೂಸ್” ಅನ್ನೋ ಮಾತುಗಳು ಇದ್ವು. ಮಾಲ್ಟ ಅನ್ನೋ ದ್ವೀಪದಿಂದ ಪೌಲ ಪ್ರಯಾಣಿಸಿದ ಹಡಗಿನ ಮೇಲೆ “ಸ್ಯೂಸ್ ಪುತ್ರರು” ಅನ್ನೋ ಚಿಹ್ನೆ ಇತ್ತು. ಇವರು ಕಾಸ್ಟರ್ ಮತ್ತು ಪೊಲಕ್ಸ್ ಅನ್ನೋ ಅವಳಿ ಮಕ್ಕಳಾಗಿದ್ರು.—ಅಕಾ 14:12; 28:11.
-
ಸ್ವತಂತ್ರ ದಾಸ.
ರೋಮನ್ನರ ಆಳ್ವಿಕೆಯಲ್ಲಿ ಸ್ವತಂತ್ರನಾಗಿ ಹುಟ್ಟಿ ಅಲ್ಲಿನ ಪ್ರಜೆಯಾಗಿ ಎಲ್ಲ ಹಕ್ಕುಗಳು ಸಿಕ್ಕವನೇ “ಸ್ವತಂತ್ರನು.” ಗುಲಾಮಗಿರಿಯಿಂದ ಬಿಡುಗಡೆ ಆಗಿ ಬಂದವನು ‘ಸ್ವತಂತ್ರ ದಾಸ.’ ಕಾನೂನು ಪ್ರಕಾರ ಅವನಿಗೆ ಬಿಡುಗಡೆ ಆಗಿದ್ರೆ ಅವನಿಗೆ ರೋಮನ್ ಪೌರತ್ವ ಸಿಕ್ತಿತ್ತು. ಆದ್ರೆ ಅವನಿಗೆ ರಾಜಕೀಯ ವಿಷ್ಯದಲ್ಲಿ ಒಳಗೂಡೋ ಅರ್ಹತೆ ಇರಲಿಲ್ಲ. ಹಾಗಲ್ಲದೆ ಸಾಮಾನ್ಯವಾಗಿ ಬಿಡುಗಡೆ ಆಗುವವರಿಗೆ ದಾಸತ್ವದಿಂದ ಸ್ವಾತಂತ್ರ್ಯ ಸಿಗ್ತಿತ್ತು, ಆದ್ರೆ ಅವ್ರಿಗೆ ಸಂಪೂರ್ಣ ಪೌರಹಕ್ಕುಗಳು ಸಿಗ್ತಿರಲಿಲ್ಲ.—1ಕೊರಿಂ 7:22.
-
ಸ್ವರ್ಗದ ರಾಣಿ.
ಯೆರೆಮೀಯ ಕಾಲದಲ್ಲಿ ಧರ್ಮಭ್ರಷ್ಟರಾದ ಇಸ್ರಾಯೇಲ್ಯರು ಪೂಜೆ ಮಾಡ್ತಿದ್ದ ದೇವತೆಗಿದ್ದ ಒಂದು ಬಿರುದು. ಈ ಬಿರುದು ಬಾಬೆಲಿನ ಇಷ್ತಾರ್ (ಅಸ್ಟಾರ್ಟ್) ದೇವತೆಯನ್ನ ಸೂಚಿಸುತ್ತೆ ಅಂತ ಕೆಲವರು ಹೇಳ್ತಾರೆ. ಅದಕ್ಕೂ ಮುಂಚೆ ಸುಮೇರಿಯನ್ನರು “ಸ್ವರ್ಗದ ರಾಣಿ” ಅನ್ನೋ ಅರ್ಥ ಇದ್ದ ಇನ್ನೊಬ್ಬ ದೇವತೆಯಾದ ಇನಾನ್ ದೇವತೆಯನ್ನ ಪೂಜಿಸ್ತಿದ್ರು. ಇವಳು ಸ್ವರ್ಗದ ದೇವತೆ ಮಾತ್ರ ಅಲ್ಲ, ಸಂತಾನ ಕೊಡೋ ದೇವತೆ ಅಂತ ಕೂಡ ನಂಬ್ತಿದ್ರು. ಈಜಿಪ್ಟಿನ ಒಂದು ಕೆತ್ತನೆಯಲ್ಲಿ ಅಸ್ಟಾರ್ಟ್ ದೇವತೆಯನ್ನ “ಸ್ವರ್ಗದ ರಾಣಿ” ಅಂತಾನೂ ಕರೆದಿದ್ದಾರೆ.—ಯೆರೆ 44:19.
ಹ
-
ಹಕ್ಕಲಾಯು.
ಕೊಯ್ಲು ಮಾಡುವವರು ಗೊತ್ತಿದ್ದೋ ಗೊತ್ತಿಲ್ದೆನೋ ಬಿಟ್ಟು ಹೋಗೋ ಬೆಳೆಯನ್ನ ಕೂಡಿಸೋದು. ಮೋಶೆಯ ನಿಯಮ ಪುಸ್ತಕದಲ್ಲಿ ಹೊಲದ ಮೂಲೆಯಲ್ಲಿರೋ ಬೆಳೆಯನ್ನ, ಆಲಿವ್ ಮತ್ತು ದ್ರಾಕ್ಷಿಯನ್ನ ಸಂಪೂರ್ಣವಾಗಿ ಕೊಯ್ಯಬಾರದು ಅಂತ ಹೇಳಿತ್ತು. ಕೊಯ್ಲು ಮಾಡಿದ್ಮೇಲೆ ಬಾಕಿ ಇರೋದನ್ನ ಕೂಡಿಸ್ಕೊಳ್ಳೋಕೆ ಬಡವ್ರಿಗೆ, ಕಷ್ಟದಲ್ಲಿ ಇರೋರಿಗೆ, ವಿದೇಶಿಗಳಿಗೆ, ತಂದೆ ಇಲ್ಲದ ಮಕ್ಕಳಿಗೆ, ವಿಧವೆಯರಿಗೆ ದೇವರು ಹಕ್ಕು ಕೊಟ್ಟಿದ್ದನು.—ರೂತ್ 2:7.
-
ಹತ್ತನೇ ಒಂದು ಭಾಗ.
ಧರ್ಮಕ್ಕೆ ಸಂಬಂಧಿಸಿದ ವಿಷ್ಯಗಳಿಗೋಸ್ಕರ ಕಪ್ಪವಾಗಿ ಹತ್ತರ ಒಂದು ಭಾಗವನ್ನ ಅಥವಾ ಹತ್ತು ಪ್ರತಿಶತವನ್ನ ಕೊಡ್ತಿದ್ರು. ಇದನ್ನ “ದಶಮಾಂಶ” ಅಂತ ಕೂಡ ಹೇಳ್ತಾರೆ. (ಮಲಾ 3:10; ಧರ್ಮೋ 26:12; ಮತ್ತಾ 23:23) ಮೋಶೆ ನಿಯಮ ಪುಸ್ತಕದ ಪ್ರಕಾರ, ಇಸ್ರಾಯೇಲ್ಯರು ಪ್ರತಿವರ್ಷ ತಮ್ಮ ಫಸಲಲ್ಲಿ ಹತ್ತರ ಒಂದು ಭಾಗವನ್ನ, ಅಷ್ಟೇ ಅಲ್ಲ ಪ್ರಾಣಿಗಳಲ್ಲಿ, ಆಡು ಮೇಕೆಗಳ ಹಿಂಡಿನಲ್ಲಿ ಹತ್ತರ ಒಂದು ಭಾಗವನ್ನ ಲೇವಿಯರಿಗೆ ಸಹಾಯವಾಗಿ ಕೊಡ್ತಿದ್ರು. ಲೇವಿಯರು ತಮಗೆ ಸಿಗ್ತಿದ್ದ ಹತ್ತರ ಒಂದು ಭಾಗದಲ್ಲಿ ದಶಮಾಂಶವನ್ನ ಆರೋನನ ವಂಶಕ್ಕೆ ಸೇರಿದ ಪುರೋಹಿತರಿಗೆ ಕೊಡ್ತಿದ್ರು.
-
ಹರಕೆ.
ಏನಾದ್ರೂ ಮಾಡ್ತೀನಿ ಅಂತ, ಒಂದು ಅರ್ಪಣೆ ಇಲ್ಲಾ ಕಾಣಿಕೆ ಕೊಡ್ತೀನಿ ಅಂತ, ಯಾವುದಾದ್ರೂ ಸೇವೆ ಮಾಡ್ತೀನಿ ಅಂತ, ನಿಯಮ ಪುಸ್ತಕದ ಪ್ರಕಾರ ತಪ್ಪಲ್ಲದ ಕೆಲವು ವಿಷ್ಯಗಳಿಂದ ದೂರ ಇರ್ತೀನಿ ಅಂತ ದೇವರಿಗೆ ಮಾಡೋ ಒಂದು ಮುಖ್ಯ ಪ್ರಮಾಣ. ಇದು ಆಣೆ ಇಡೋದಕ್ಕೆ ಸಮ.—ಅರ 6:2; ಪ್ರಸಂ 5:4; ಮತ್ತಾ 5:33.
-
ಹರಕೆಯ ಅರ್ಪಣೆ.
ಕೆಲವು ಹರಕೆಗಳ ಜೊತೆಗೆ ಅರ್ಪಿಸೋ ಸ್ವಇಷ್ಟದ ಅರ್ಪಣೆಗಳು.—ಯಾಜ 23:38; 1ಸಮು 1:21.
-
ಹರ್ಮಗೆದೋನ್.
ಇದಕ್ಕಿರೋ ಹೀಬ್ರು ಪದ ಹರ್‌ಮೆಘಿಧೋನ್ ಅಂದ್ರೆ “ಮೆಗಿದ್ದೋ ಬೆಟ್ಟ.” ಈ ಪದ ಸರ್ವಶಕ್ತ ದೇವರ ಮಹಾ ದಿನದಲ್ಲಿ ಆಗೋ ಯುದ್ಧಕ್ಕೆ ಸಂಬಂಧಿಸಿದೆ. ಆ ಯುದ್ಧದಲ್ಲಿ ಭೂಮಿಯಲ್ಲಿರೋ ಎಲ್ಲಾ ರಾಜರು ಸೇರಿ ಯೆಹೋವನ ವಿರುದ್ಧ ಯುದ್ಧ ಮಾಡ್ತಾರೆ. (ಪ್ರಕ 16:14, 16; 19:11-21)—ಮಹಾ ಸಂಕಟ ನೋಡಿ.
-
ಹರ್ಮೀಸ್.
ಗ್ರೀಕ್ ದೇವರ ಹೆಸ್ರು. ಸೂಸನ ಮಗ. ಇವನನ್ನ ದೇವರುಗಳ ಸಂದೇಶವಾಹಕ ನಿಪುಣ ಮಾತುಗಾರ ಅಂತ ಜನ ನಂಬಿದ್ದರು. ಹಾಗಾಗಿ ಲುಸ್ತ್ರದ ಜನ ಪೌಲನನ್ನ ಹರ್ಮಿಸ್ ಅಂತ ಅಂದ್ಕೊಂಡ್ರು.—ಅಕಾ 14:12.
-
ಹವಳ.
ಸಮುದ್ರದಲ್ಲಿರೋ ಚಿಕ್ಕಚಿಕ್ಕ ಜೀವಿಗಳ ಮೂಳೆ ಸೇರಿ ಕಲ್ಲು ತರ ಗಟ್ಟಿಯಾಗಿರೋ ಒಂದು ವಸ್ತು. ಅವು ಕೆಂಪು, ಬಿಳಿ, ಕಪ್ಪು ಬಣ್ಣಗಳಲ್ಲಿ ಸಿಗುತ್ತೆ. ಕೆಂಪು ಸಮುದ್ರದಲ್ಲಿ ಜಾಸ್ತಿ ಸಿಗುತ್ತೆ. ಬೈಬಲ್ ಕಾಲದಲ್ಲಿ ಕೆಂಪು ಹವಳ ತುಂಬ ದುಬಾರಿ. ಅದ್ರಿಂದ ಮಣಿಗಳು ಮತ್ತು ಬೇರೆ ಆಭರಣಗಳನ್ನ ಮಾಡ್ತಿದ್ರು.—ಜ್ಞಾನೋ 8:11.
-
ಹಾದರ.
—ಲೈಂಗಿಕ ಅನೈತಿಕತೆ ನೋಡಿ.
-
ಹಿಂಸಾ ಕಂಬ.
ಸ್ಟಾರೋಸ್ ಅನ್ನೋ ಗ್ರೀಕ್ ಪದದ ಅನುವಾದ. ಅದರ ಅರ್ಥ ನಿಲ್ಲಿಸಿರೋ ಸ್ತಂಭ ಅಥವಾ ಕಂಬ. ಇದೇ ತರದ ಒಂದು ಸ್ತಂಭದಲ್ಲಿ ಯೇಸುವನ್ನ ಸಾಯಿಸಿದ್ರು. ಈ ಗ್ರೀಕ್ ಪದಕ್ಕೆ ಶಿಲುಬೆ ಅನ್ನೋ ಅರ್ಥ ಇದೆ ಅಂತ ಹೇಳೋದ್ರಲ್ಲಿ ಕಿಂಚಿತ್ತೂ ಸತ್ಯವಿಲ್ಲ. ಇದು ಬರೀ ಸುಳ್ಳು. ಇದಕ್ಕೆ ಯಾವುದೇ ಪುರಾವೆ ಇಲ್ಲ. ಶತಮಾನಗಳಿಂದ ಸುಳ್ಳು ಧರ್ಮದವರು ಈ ಶಿಲುಬೆಯನ್ನ ತಮ್ಮ ಧಾರ್ಮಿಕ ಚಿಹ್ನೆಯಾಗಿ ಬಳಸ್ತಿದ್ರು. ಮೂಲ ಪದದ ಸಂಪೂರ್ಣ ಅರ್ಥವನ್ನ “ಹಿಂಸಾ ಕಂಬ” ಅನ್ನೋ ಪದ ವಿವರಿಸುತ್ತೆ. ಯಾಕಂದ್ರೆ ಯೇಸುವಿನ ಶಿಷ್ಯರು ಅನುಭವಿಸಬೇಕಾದ ಹಿಂಸೆ ಕಷ್ಟ ಅವಮಾನವನ್ನ ಸೂಚಿಸೋಕೂ ಸ್ಟಾರೋಸ್ ಅನ್ನೋ ಪದವನ್ನೇ ಬಳಸಿದ್ದಾರೆ. (ಮತ್ತಾ 16:24; ಇಬ್ರಿ 12:2)—ಕಂಬ ನೋಡಿ
-
ಹಿಗ್ಗಯಾನ್.
ಸಂಗೀತ ನಿರ್ದೇಶನದಲ್ಲಿ ಉಪಯೋಗಿಸೋ ಪದ. ಈ ಪದ ವೀಣೆ (ಹಾರ್ಪ್) ಬಾರಿಸುವಾಗ ಗಂಭೀರವಾದ, ಆಳವಾದ ರಾಗವನ್ನಾಗಲಿ ಇಲ್ಲಾಂದ್ರೆ ಧ್ಯಾನಿಸೋಕೆ ಕೊಡ್ತಿದ್ದ ವಿರಾಮ ಸಮಯವನ್ನಾಗಲಿ ಸೂಚಿಸುತ್ತೆ.—ಕೀರ್ತ 9:16.
-
ಹಿನ್.
ಇದು ಒಂದು ದ್ರವ ಅಳತೆ ಮತ್ತು ಅಳೆಯೋ ಮಾಪಕ. ಇತಿಹಾಸಗಾರ ಜೋಸಿಫಸ್ ಒಂದು ಹಿನ್ ಅಥೆನಿಯರ ಎರಡು ಕೊಸ್ ಅಳತೆಗೆ ಸಮ ಅಂತ ಹೇಳಿದ್ದಾನೆ. ಹಾಗಾಗಿ ಒಂದು ಹಿನ್ 3.67 ಲೀಟರ್‌ಗೆ ಸಮ. (ವಿಮೋ 29:40)—ಪರಿಶಿಷ್ಟ ಬಿ14 ನೋಡಿ.
-
ಹಿರಿಯರು.
ವಯಸ್ಸಾದವರು. ಅಧಿಕಾರದ ಸ್ಥಾನದಲ್ಲಿ ಇರುವವ್ರಿಗೂ ಮತ್ತು ಸಮಾಜದಲ್ಲಿ, ಜನಾಂಗದಲ್ಲಿ ಜವಾಬ್ದಾರಿಯ ಸ್ಥಾನದಲ್ಲಿ ಇರುವವ್ರಿಗೂ ಹಿರಿಯರು ಅಂತ ಬೈಬಲ್ ಹೇಳುತ್ತೆ. ಪ್ರಕಟನೆ ಪುಸ್ತಕದಲ್ಲಿ ದೇವದೂತರಿಗೂ ಈ ಪದವನ್ನ ಬಳಸಲಾಗಿದೆ. ಪ್ರೆಸ್ಬಿಟೆರೋಸ್ ಅನ್ನೋ ಗ್ರೀಕ್ ಪದವನ್ನ “ಹಿರಿಯರು” ಅಂತ ಭಾಷಾಂತರ ಮಾಡಲಾಗಿದೆ, ಇದು ಸಭೆಯಲ್ಲಿ ಮೇಲ್ವಿಚಾರಣೆ ಮಾಡುವವ್ರನ್ನ ಸೂಚಿಸುತ್ತೆ.—ವಿಮೋ 4:29; ಜ್ಞಾನೋ 31:23; 1ತಿಮೊ 5:17; ಪ್ರಕ 4:4.
-
ಹಿರೀಸಭೆ.
ಯೆರೂಸಲೇಮಲ್ಲಿರೋ ಯೆಹೂದಿಗಳ ಹೈಕೋರ್ಟ್. ಯೇಸುವಿನ ದಿನದಲ್ಲಿ, ಹಿರೀಸಭೆಯಲ್ಲಿ 71 ಸದಸ್ಯರು ಇರ್ತಿದ್ರು. ಅದ್ರಲ್ಲಿ, ಮಹಾ ಪುರೋಹಿತ, ಹಿಂದೆ ಮಹಾ ಪುರೋಹಿತರಾಗಿ ಸೇವೆ ಮಾಡ್ತಿದ್ದವರು, ಮಹಾ ಪುರೋಹಿತನ ಮಾರ್ಕ 15:1; ಅಕಾ 5:34; 23:1, 6.
ಕುಟುಂಬದವರು, ಹಿರಿಯರು, ಕುಲದ ಮುಖ್ಯಸ್ಥರು, ಕುಟುಂಬದ ಯಜಮಾನರು ಮತ್ತು ಪಂಡಿತರು ಇರ್ತಿದ್ರು.— -
ಹಿಸ್ಸೋಪ್.
ಚಿಕ್ಕ-ಚಿಕ್ಕ ತೆಳ್ಳಗಿನ ಕೊಂಬೆ, ಎಲೆಗಳಿರೋ ಒಂದು ಗಿಡ. ಶುದ್ಧೀಕರಣದ ಸಮಯದಲ್ಲಿ ರಕ್ತ ಅಥವಾ ನೀರು ಚಿಮಿಕಿಸೋಕೆ ಇದನ್ನ ಉಪಯೋಗಿಸ್ತಿದ್ರು. ಬೈಬಲಲ್ಲಿ ಬೇರೆ ಬೇರೆ ತರದ ಗಿಡಗಳಿಗೆ ಹಿಸ್ಸೋಪ್‌ನ ಹೀಬ್ರು ಮತ್ತು ಗ್ರೀಕ್ ಪದಗಳನ್ನ ಬಳಸಲಾಗಿದೆ. ಯೋಹಾನ 19:29ರಲ್ಲಿ ಹೇಳಿರೋ ಹಿಸ್ಸೋಪ್ ಗಿಡ ಮರ್ಜೋರಂ (ಸಾರ್ಗಂ ವಲ್‌ಗೇರ್) ಅನ್ನೋ ಜಾತಿಯ ಗಿಡ ಆಗಿರಬಹುದು. ಇದು ತುಂಬ ಉದ್ದ ಬೆಳೀತಾ ಇತ್ತು. ಅದಕ್ಕೇ ಯೋಹಾನ, ಹುಳಿ ರಸದಲ್ಲಿ ಈ ಕೋಲಿಗೆ ಸಿಕ್ಕಿಸಿ ಮುಳುಗಿಸಿ ತೆಗೆದ ಸ್ಪಂಜನ್ನ ಯೇಸುವಿನ ಬಾಯಿ ಹತ್ರ ಇಟ್ರು ಅಂತ ಬರೆದ.—ವಿಮೋ 12:22; ಕೀರ್ತ 51:7.
-
ಹುಳಿ.
ಹಿಟ್ಟು ಅಥವಾ ಪಾನೀಯಕ್ಕೆ ಹುಳಿ ಬರಿಸೋಕೆ ಸೇರಿಸೋ ಒಂದು ವಸ್ತು. ಇದು ಮುಂಚೆ ಮಾಡಿದ ಹಿಟ್ಟಲ್ಲಿ ಉಳಿದ ಹಿಟ್ಟು. ಹುಳಿ ಅನ್ನೋ ಪದವನ್ನ ಬೈಬಲಲ್ಲಿ ಪಾಪವನ್ನ ಅನೀತಿಯನ್ನ ಸೂಚಿಸೋಕೆ ಬಳಸಲಾಗಿದೆ. ಒಳಗೊಳಗೆ ಎಲ್ಲಾ ಕಡೆ ಅದು ತುಂಬಾ ವ್ಯಾಪಕವಾಗಿ ಬೆಳಿಯೋದನ್ನ ಸೂಚಿಸೋಕ್ಕೂ ಈ ಪದ ಉಪಯೋಗಿಸಲಾಗಿದೆ.—ವಿಮೋ 12:20; ಮತ್ತಾ 13:33; ಗಲಾ 5:9.
-
ಹುಳಿಯಿಲ್ಲದ ರೊಟ್ಟಿ ಹಬ್ಬ.
ಇಸ್ರಾಯೇಲ್ಯರ ಮೂರು ದೊಡ್ಡ ವಾರ್ಷಿಕ ಹಬ್ಬಗಳಲ್ಲಿ ಇದು ಮೊದಲ್ನೇದು. ಇದು ಪಸ್ಕಹಬ್ಬ ಆದ್ಮೇಲೆ ಅಂದ್ರೆ ನೈಸಾನ್ 15ನೇ ತಾರೀಕಿಂದ 7 ದಿನ ತನಕ ಇರ್ತಿತ್ತು. ಈಜಿಪ್ಟಿಂದ ಬಂದ ನೆನಪಿಗಾಗಿ ಹುಳಿಯಿಲ್ಲದ ರೊಟ್ಟಿಯನ್ನ ಮಾತ್ರ ತಿನ್ನಬೇಕಿತ್ತು.—ವಿಮೋ 23:15; ಮಾರ್ಕ 14:1.
-
ಹುಳಿಯಿಲ್ಲದ ರೊಟ್ಟಿ.
ಯಾವುದೇ ತರದ ಹುಳಿ ಹಾಕದೆ ಮಾಡೋ ರೊಟ್ಟಿಯನ್ನ ಇದು ಸೂಚಿಸುತ್ತೆ. ಸಾಮಾನ್ಯವಾಗಿ ಹಿಟ್ಟನ್ನ ಉಬ್ಬಿಸೋಕೆ ಆ ಕಾಲದಲ್ಲಿ ಹಿಟ್ಟಿಗೆ ಹುಳಿಯನ್ನ ಹಾಕ್ತಿದ್ರು.—ಧರ್ಮೋ 16:3; ಮಾರ್ಕ 14:12; 1ಕೊರಿಂ 5:8.
-
ಹೆರೋದ.
ಇದು ರಾಜಮನೆತನದ ಹೆಸ್ರು. ಯೆಹೂದ್ಯರನ್ನ ಆಳೋಕೆ ರೋಮ್ ಇವ್ರನ್ನ ನೇಮಿಸಿತ್ತು. ಮಹಾ ಹೆರೋದ ಯೆರೂಸಲೇಮಿನ ದೇವಾಲಯವನ್ನ ಮತ್ತೆ ಕಟ್ಟಿದ. ಯೇಸುವನ್ನ ಕೊಲ್ಲೋ ಪ್ರಯತ್ನದಲ್ಲಿ ಪುಟಾಣಿ ಮಕ್ಕಳನ್ನೆಲ್ಲ ಸಾಯಿಸಿದ. (ಮತ್ತಾ 2:16; ಲೂಕ 1:5) ಮಹಾ ಹೆರೋದ ತನ್ನ ಆಳ್ವಿಕೆ ಕೆಳಗಿದ್ದ ಪ್ರದೇಶವನ್ನ ಭಾಗ ಮಾಡಿ ತನ್ನ ಮಕ್ಕಳಾದ ಹೆರೋದ ಅರ್ಖೆಲಾಯ ಮತ್ತು ಹೆರೋದ ಅಂತಿಪ್ಪನನ್ನ ಅಧಿಪತಿಗಳಾಗಿ ಮಾಡಿದ. (ಮತ್ತಾ 2:22) ಅಂತಿಪ್ಪನಿಗೆ ಕಾಲುಭಾಗದ ಮೇಲ್ವಿಚಾರಣೆ ಕೊಟ್ಟ. ಅಂತಿಪ್ಪನನ್ನ “ರಾಜ” ಅಂತ ಕರಿತಿದ್ರು. ಕ್ರಿಸ್ತನ ಮೂರೂವರೆ ವರ್ಷದ ಸೇವೆಯಿಂದ ಹಿಡಿದು ಅಪೊಸ್ತಲರ ಕಾರ್ಯ 12ನೇ ಅಧ್ಯಾಯದಲ್ಲಿ ಹೇಳಿರೋ ಕಾಲದ ತನಕ ಇವನು ಆಳಿದ. (ಮಾರ್ಕ 6:14-17; ಲೂಕ 3:1, 19, 20; 13:31, 32; 23:6-15; ಅಕಾ 4:27; 13:1) ಆಮೇಲೆ ಮಹಾ ಹೆರೋದನ ಮೊಮ್ಮಗ ಹೆರೋದ ಒಂದನೇ ಅಗ್ರಿಪ್ಪ ಸಲ್ಪ ಸಮಯದ ತನಕ ಆಳ್ವಿಕೆ ಮಾಡಿದ. ಒಬ್ಬ ದೇವದೂತ ಅವನನ್ನ ಸಾಯಿಸಿ ಬಿಟ್ಟ. (ಅಕಾ 12:1-6, 18-23) ಇದಾದ್ಮೇಲೆ ಹೆರೋದ ಎರಡ್ನೇ ಅಗ್ರಿಪ್ಪ ಅಧಿಪತಿಯಾದ. ಯೆಹೂದ್ಯರು ರೋಮಿನ ವಿರುದ್ಧ ದಂಗೆ ಮಾಡೋ ತನಕ ಆಳಿದ.—ಅಕಾ 23:35; 25:13, 22-27; 26:1, 2, 19-32.
-
ಹೆರೋದನ ಪಕ್ಷದವರು.
ಇವ್ರಿಗೆ ಹೆರೊದ್ಯರು ಅನ್ನೋ ಹೆಸ್ರು ಕೂಡ ಇತ್ತು. ರೋಮಿನ ಅಧಿಕಾರದ ಕೆಳಗೆ ಅಧಿಪತಿಗಳಾಗಿದ್ದ ಹೆರೋದನ ರಾಜಕೀಯ ಉದ್ದೇಶಗಳನ್ನ ಬೆಂಬಲಿಸ್ತಿದ್ದ ಪಾರ್ಟಿ. ಕೆಲವು ಸದ್ದುಕಾಯರು ಈ ಪಾರ್ಟಿಯಲ್ಲಿ ಇದ್ದಿರಬಹುದು. ಪರಿಸಾಯರ ಜೊತೆ ಸೇರ್ಕೊಂಡು ಇವರು ಯೇಸುವನ್ನ ವಿರೋಧಿಸಿದ್ರು.—ಮಾರ್ಕ 3:6.
-
ಹೇಡೀಸ್.
ಇದು ಗ್ರೀಕ್ ಪದ. ಇದ್ರ ಹೀಬ್ರು ಪದ ಷಿಯೋಲ್. ಇದನ್ನ ಸಮಾಧಿ ಅಂತ ಭಾಷಾಂತರ ಮಾಡಲಾಗಿದೆ. ಮನುಷ್ಯರ ಸತ್ತ ಸ್ಥಿತಿ ಬಗ್ಗೆ ಎಲ್ಲೆಲ್ಲಿ ಹೇಳಿದ್ಯೋ ಅಲ್ಲೆಲ್ಲಾ ಇದನ್ನ ಸಮಾಧಿ ಅಂತ ಅಲಂಕಾರಿಕವಾಗಿ ಭಾಷಾಂತರ ಮಾಡಲಾಗಿದೆ.
-
ಹೊಟ್ಟು.
ಧಾನ್ಯವನ್ನ ಕಣದಲ್ಲಿ ತುಳಿದಾಗ ಮತ್ತು ತೂರಿದಾಗ ಸಿಗೋ ಹೊಟ್ಟು. ಯಾರಿಗೂ ಬೇಡವಾದ, ಇಷ್ಟವಾಗದ ವಿಷ್ಯಗಳನ್ನ ಸೂಚಿಸೋಕೆ ಇದನ್ನ ಅಲಂಕಾರಿಕವಾಗಿ ಬಳಸ್ತಾರೆ.—ಕೀರ್ತ 1:4; ಮತ್ತಾ 3:12.
-
ಹೋಮೆರ್.
ಕೋರ್ ಅಳತೆಗೆ ಸಮನಾದ ಒಂದು ಒಣ ಅಳತೆ. ಬತ್ ಅಳತೆ ಪ್ರಕಾರ ಲೆಕ್ಕ ಮಾಡಿದ್ರೆ 220 ಲೀಟರ್. (ಯಾಜ 27:16)—ಪರಿಶಿಷ್ಟ ಬಿ14 ನೋಡಿ.
-
ಹೋರೇಬ್; ಹೋರೇಬ್ ಬೆಟ್ಟ.
ಸಿನಾಯಿ ಬೆಟ್ಟದ ಸುತ್ತ ಇರೋ ಬೆಟ್ಟ-ಗುಡ್ಡದ ಪ್ರದೇಶ. ಸಿನಾಯಿ ಬೆಟ್ಟದ ಇನ್ನೊಂದು ಹೆಸ್ರು. (ವಿಮೋ 3:1; ಧರ್ಮೋ 5:2)—ಪರಿಶಿಷ್ಟ ಬಿ3 ನೋಡಿ.