ಇಸ್ರಾಯೇಲ್ಯರಲ್ಲಿ ಅನೇಕರು ಹಾಲು-ಜೇನು ಹರಿಯುವ ದೇಶವನ್ನು ಪ್ರವೇಶಿಸಲಿಲ್ಲ, ಯಾಕೆ? ಈ ನಾಟಕವು ಅವರಿಗೆ ದೇವರ ಮೇಲಿದ್ದ ನಂಬಿಕೆ ಹೇಗೆಲ್ಲ ಪರೀಕ್ಷೆಗೆ ಒಳಗಾಯಿತು ಎನ್ನುವುದರ ಮೇಲೆ ಆಧರಿಸಿದೆ. ಅವರು ಜೀವನದ ನಾಲ್ಕು ಕ್ಷೇತ್ರಗಳಲ್ಲಿ ಪರೀಕ್ಷೆ ಎದುರಿಸಿದರು. ಅವು: ಅವರ ಮನೋಭಾವ, ಸಹವಾಸ, ನೈತಿಕ ಮೌಲ್ಯಗಳು ಮತ್ತು ಆರಾಧನೆ.
ಆಸ್ತಿಪಾಸ್ತಿ, ಐಶ್ವರ್ಯವಿದ್ದರೆ ಸಂತೋಷ, ಯಶಸ್ಸು ಸಿಕ್ಕಿದೆ ಎಂದರ್ಥ ಅಂತ ಅನೇಕರು ಭಾವಿಸುತ್ತಾರೆ. ಆದರೆ ಹಣಸೊತ್ತುಗಳಿದ್ದರೆ ಶಾಶ್ವತ ಸಂತೋಷ ಸಿಗುತ್ತದಾ? ಪುರಾವೆ ಏನು ತೋರಿಸುತ್ತದೆ?