ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾಣಿಕೆ ಚಿಕ್ಕದಾದರೂ ಮನಸ್ಸೇ ದೊಡ್ಡದು

ಕಾಣಿಕೆ ಚಿಕ್ಕದಾದರೂ ಮನಸ್ಸೇ ದೊಡ್ಡದು
  1. 1. ಸಾಲಲ್ಲಿ ಕಾಯುತ್ತಾ ನಿಂತಾಕೆ

    ಕೈಯಲ್ಲಿ ತೀರಾ ಕಮ್ಮಿ ಮೌಲ್ಯದ ಕಾಣಿಕೆ.

    ನೀಡುತ್ತಿರೆ ಜನ ಬೆಳ್ಳಿ ಬಂಗಾರ

    ನೋಡುತ್ತಾನಾ ದೇವಾ ಆಕೆ ನೀಡೋ ಕಾಸನ್ನ? ಹಾ...

    (ಪಲ್ಲವಿ)

    “ಹಿಂಜರಿಬೇಡ, ತುಂಬಾ ಅಮೂಲ್ಯ

    ನೀನು ನೀಡೋ ಈ ಕಾಣಿಕೆ.

    ಸರ್ವಸ್ವ ನೀಡುವ ಮನವು ಸಾಕಲ್ವ!”‏

    ಎನ್ನುತ್ತಾನೆ ಯೆಹೋವಪ್ಪಾ.

    ‘ನೀಡು ನೀ!’

  2. 2. ಚಿನ್ನ ಬೆಳ್ಳಿ ನೀಡೋ ಆಸೆ ಮನ್ಸಲ್ಲಿ;

    ನೀಡೋಕೆ ಈಗ ಇಲ್ಲ ಬೇರೇನೂ ಆಕೆ ಕೈಯಲ್ಲಿ.

    ಖುಷೀಲಿ ಬಂದು ಮನ್ಸಾರೆ ನೀಡೋವಾಗ,

    ಸ್ವರ್ಗದಲ್ಲಿ ಆ ಸದ್ದು ಪ್ರತಿಧ್ವನಿಸಿ ಕೇಳುತ್ತಿತ್ತು.

    (ಪಲ್ಲವಿ)

    “ಹಿಂಜರಿಬೇಡ, ತುಂಬಾ ಅಮೂಲ್ಯ

    ನೀನು ನೀಡೋ ಈ ಕಾಣಿಕೆ.

    ಸರ್ವಸ್ವ ನೀಡುವ ಮನವು ಸಾಕಲ್ವ!”‏

    ಎನ್ನುತ್ತಾನೆ ಯೆಹೋವಪ್ಪಾ.

    ‘ನೀಡು ನೀ!’

    (ಅನುಪಲ್ಲವಿ)

    ಕೈಲಾದದ್ದೆಲ್ಲಾ ನೀ ನೀಡುವಾಗ,

    ಸ್ವರ್ಗದಿಂದ ಬಾಗುತ್ತಾನೆ ದೇವಾ;

    ನೋಡುತ್ತಾನೆ ನಿನ್ನ.

    (ಪಲ್ಲವಿ)

    “ಹಿಂಜರಿಬೇಡ, ತುಂಬಾ ಅಮೂಲ್ಯ

    ನೀನು ನೀಡೋ ಈ ಕಾಣಿಕೆ.

    ಸರ್ವಸ್ವ ನೀಡುವ ಮನವು ಸಾಕಲ್ವ!”‏

    ಎನ್ನುತ್ತಾನೆ ಯೆಹೋವಪ್ಪಾ.

    ‘ನೀಡು ನೀ!

    ಚಿಕ್ಕದ್ದಾದರೂ ನೀಡು ನೀ!’