ತೋರುತ್ತಾ ಈ ಪ್ರೀತಿ ಒಂದಾಗಿ ಈ ರೀತಿ
(ಪರಿಚಯ)
ಸುಂದರ ಸಮೂಹ ಇದು!
ಐಕ್ಯತೆ ಇದೆ ಎಂದೂ!
1. ನಮ್ಮ ಪ್ರೀತಿಯು ಒಂದೇ.
ನಾವು ತೋರೋ ವಿಶ್ವಾಸ ಒಂದೇ.
ನಮ್ ಸ್ನೇಹ ಭಾಷೆ ಒಂದೇ.
ನಾವ್ ತೋರೋ ಆತ್ಮೀಯ ಬಂಧ ಒಂದೇ.
(ಆದಿಪಲ್ಲವಿ)
ಏನೇ ಆದರೂ,
ಎಲ್ಲೇ ಹೋದರೂ
ಸದಾ ಹೀಗೆ ನಾವೆಲ್ಲರೂ.
(ಪಲ್ಲವಿ)
ಎಂದೆಂದೂ ಒಂದಾಗಿ ತೋರುತ್ತಲಿ ಪ್ರೀತಿ,
ಎಂದೆಂದೂ ಈ ಪ್ರೀತಿ ನಮ್ಮೆಲ್ಲರ ಸ್ಫೂರ್ತಿ.
ಎಂದೆಂದೂ ನಾವೆಲ್ಲಾ ಯೆಹೋವನ ರೀತಿ
ಪ್ರೀತಿಯನ್ನು ತೋರುತ್ತಾ ಸಾಗೋಣ, ಸಾಗೋಣ ಈ ರೀತಿ.
2. ನಾವ್ ಆಡೋ ಭಾಷೆ ನೂರು,
ನಮ್ಮ ಬಣ್ಣ ಬೇರೆ ಆದರೂ
ಒಂದೇ ಬಳ್ಳಿ ಹೂವಂತೆ
ಎಂದೆಂದೂ ನಮ್ಮಲ್ಲಿದೆ ಏಕತೆ.
(ಆದಿಪಲ್ಲವಿ)
ಏನೇ ಆದರೂ,
ಎಲ್ಲೇ ಹೋದರೂ
ಎಂದೆಂದೂ ಜೊತೆಗಾರರು.
(ಪಲ್ಲವಿ)
ಎಂದೆಂದೂ ಒಂದಾಗಿ ತೋರುತ್ತಲಿ ಪ್ರೀತಿ,
ಎಂದೆಂದೂ ಈ ಪ್ರೀತಿ ನಮ್ಮೆಲ್ಲರ ಸ್ಫೂರ್ತಿ.
ಎಂದೆಂದೂ ನಾವೆಲ್ಲಾ ಯೆಹೋವನ ರೀತಿ
ಪ್ರೀತಿಯನ್ನು ತೋರುತ್ತಾ ಸಾಗೋಣ, ಸಾಗೋಣ ಈ ರೀತಿ.
ಎಂದೆಂದೂ ನಾವೆಲ್ಲಾ ಒಂದಾಗಿ.
(ಪಲ್ಲವಿ)
ಎಂದೆಂದೂ ಒಂದಾಗಿ ತೋರುತ್ತಲಿ ಪ್ರೀತಿ,
ಎಂದೆಂದೂ ಈ ಪ್ರೀತಿ ನಮ್ಮೆಲ್ಲರ ಸ್ಫೂರ್ತಿ.
ಎಂದೆಂದೂ ನಾವೆಲ್ಲಾ ಯೆಹೋವನ ರೀತಿ
ಪ್ರೀತಿಯನ್ನು ತೋರುತ್ತಾ ಸಾಗೋಣ, ಸಾಗೋಣ ಈ ರೀತಿ.
ತೋರುತ್ತಾ ಎಂದೆಂದೂ
ಒಂದಾಗಿ ಈ ರೀತಿ.