ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರೇಮದ ಸೋನೆ ಸುರಿಸಿದ್ದು ನೀನೆ

ಪ್ರೇಮದ ಸೋನೆ ಸುರಿಸಿದ್ದು ನೀನೆ

ಡೌನ್‌ಲೋಡ್‌:

  1. 1. ದೇವ ತಂದ ಸೃಷ್ಟಿಯು ಚಂದಾ,

    ಆ ಸೃಷ್ಟಿಯಲ್ಲಿ ಪ್ರೀತಿ ಅಂದಾ.

    ಆ ಪ್ರೀತಿಯಿಂದ ಶುರುವಾದ,

    ಹೃದಯಾ ಬೆಸೆಯೋ ಈ ಬಂಧ.

    (ಪಲ್ಲವಿ)

    ಈ ಪ್ರೇಮದ ಸೋನೆ, ಸುರಿಸಿದ್ದು ನೀನೆ.

    ಕೊಟ್ಟೆ ಸಂತೋಷ ಯೆಹೋವ.

    ನಿನ್ನ ಮಾರ್ಗದಿ ಸಾಗಿ,

    ನೀತಿಗೆ ಬಾಗಿ,

    ಸಿಕ್ಕ ಈ ದಿವ್ಯ ಶ್ರೇಷ್ಠ ವರ.

    ನನ್ನ ಒಲವೇ, ನನ್ನೊಲವೇ.

    ನನ್ನ ಒಲವೇ, ನನ್ನೊಲವೇ.

  2. 2. ಈ ಹಾಡು ನಿಂದು,

    ಇದು ಮಧುರವಾಯಿತಿಂದು.

    ಪ್ರೀತಿಯ ಚಿರ ನಂಟು ಕಟ್ಟೋಣ,

    ನಾವು ಭವ್ಯ ಸ್ನೇಹ ಬೆಳೆಸೋಣ,

    ನಿತ್ಯ ನವೀನ.

    (ಪಲ್ಲವಿ)

    ಈ ಪ್ರೇಮದ ಸೋನೆ, ಸುರಿಸಿದ್ದು ನೀನೆ.

    ಕೊಟ್ಟೆ ಸಂತೋಷ ಯೆಹೋವ.

    ನಿನ್ನ ಮಾರ್ಗದಿ ಸಾಗಿ,

    ನೀತಿಗೆ ಬಾಗಿ,

    ಸಿಕ್ಕ ಈ ದಿವ್ಯ ಶ್ರೇಷ್ಠ ವರ.

    ನನ್ನ ಒಲವೇ, ನನ್ನೊಲವೇ.

    ನನ್ನೊಲವೇ, ನನ್ನೊಲವೇ.

    (ಅನುಪಲ್ಲವಿ)

    ಹೂವಿನಂತ ಬಾಳಲ್ಲಿ,

    ಎಂದೆಂದೂ ಮಂದಹಾಸವು ಮೂಡಲಿ.

    ಅಪೂರ್ವ ಸಂಗಾತಿ, ನೀನೆನ್ನ ಸ್ಫೂರ್ತಿ.

    ಎಂಥ ವಿಶ್ವಸ್ಥಳು, ರನ್ನ ನನ್ನವಳು.

    ನೋವು ನಲಿವಿನಲ್ಲೂ ಪಾಲುದಾರಳು.

    ಎಂದೆಂದೂ ನೀ ನನ್ನ ಪ್ರೀತಿಯೂ.

  3. 3. ನನ್ನ ಪ್ರಾಣ ನೀನು ಸಖಿ,

    ನಿನ್ನ ಪ್ರೇಮದಿ ನಾನು ಸುಖಿ.

    ನೀ ನನ್ನ ಬಾಳಲ್ಲಿ ಬಂದ ದಿನ,

    ನನ್ನ ಈ ಜೀವನ ಸುವರ್ಣ.

    ಎಂದೆಂದೂ...

    (ಪಲ್ಲವಿ)

    ಈ ಪ್ರೇಮದ ಸೋನೆ, ಸುರಿಸಿದ್ದು ನೀನೆ.

    ಕೊಟ್ಟೆ ಸಂತೋಷ ಯೆಹೋವ.

    ನಿನ್ನ ಮಾರ್ಗದಿ ಸಾಗಿ,

    ನೀತಿಗೆ ಬಾಗಿ,

    ಸಿಕ್ಕ ಈ ದಿವ್ಯ ಶ್ರೇಷ್ಠ ವರ.

    ನನ್ನ ಒಲವೇ.

    ನನ್ನೊಲವೇ.

    ಸಿಕ್ಕ ಈ ದಿವ್ಯ ಶ್ರೇಷ್ಠ ವರ,

    ನನ್ನ ಒಲವೇ.