ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಪ್ರೀತಿಯ ಕುಟುಂಬ

ಯೆಹೋವನ ಪ್ರೀತಿಯ ಕುಟುಂಬ
  1. 1. ಏಕಾಂತ ಹತಾಶೆ ತುಂಬಿದ

    ಬಾಳು ಬರುಡಾಯ್ತು, ನಿರಾಶೆ ಕಾಡಿತು.

    ಮನವ ಬಿಚ್ಚಿ ಮಾತನಾಡೊ ಮಿತ್ರರ,

    ಪ್ರೀತಿ ಬೆಂಬಲ ಕಾಣೋ ಹಂಬಲ.

  2. 2. ನನ್ನ ಅಪೇಕ್ಷೆ ಈಡೇರಿತು.

    ಈ ಹೊಸದಾದ ಸಂಬಂಧ ನನ್ನನ್ನು ಸೇರಿತು.

    ನನ್‌ ಸಂತೋಷಕ್ಕೀಗ ಎಲ್ಲೇ ಇಲ್ಲದೆ

    ಹಾರೋ ಹಾಗಿದೆ, ನನ್ನ ಕುಟುಂಬ ಇಲ್ಲಿದೆ.

    (ಅನುಪಲ್ಲವಿ)

    ನನ್‌ ಸ್ವಂತ ಭಾಷೆ ಆಡೋರಲ್ಲ, ಬಣ್ಣ ಒಂದಲ್ಲಾ.

    ಕರುಳಾ ಸಂಬಂಧವಾ ಮೀರೋ ಬಾಂಧವ್ಯ.

    ಎಲ್ಲೂ ನೋಡಿಲ್ಲ ನಾನು ಈ ವಾತ್ಸಲ್ಯವನ್ನು.

    ನಮ್ಮ ಈ ಬಂಧ, ಓ ಯೆಹೋವ ನಿನ್ನಿಂದ.

  3. 3. ಪ್ರೀತಿ ಆಪ್ತತೆ ನಮ್‌ ಆದ್ಯತೆ.

    ನಕ್ಷತ್ರ ಸೈನ್ಯದಂತೆ ಈ ನಮ್ಮ ಐಕ್ಯತೆ.

    ಸ್ನೇಹಕ್ಕಾಗಿ ಜೀವ ನೀಡೋ ಸಂಬಂಧ,

    ನಮ್ಮ ಈ ಬಂಧ, ಓ ಯೆಹೋವ ನಿನ್ನಿಂದ.

    (ಅನುಪಲ್ಲವಿ)

    ಎಲ್ಲೂ ನೋಡಿಲ್ಲ ನಾನು ಈ ವಾತ್ಸಲ್ಯವನ್ನು.

    ನಮ್ಮ ಈ ಬಂಧ, ಓ ಯೆಹೋವ ನಿನ್ನಿಂದ.

  4. 4. ದೇವಾ ಯೆಹೋವ ಸಮೀಪ ಸೆಳೆದು

    ಪ್ರೀತಿಯ ಮಡಿಲಲ್ಲಿ ಬಿಗಿದಪ್ಪಿಕೊಂಡನು.

    ಚಿರಕಾಲ ಬಾಳೋ ಸ್ನೇಹ ಸಂಬಂಧ,

    ನಮ್ಮ ಈ ಬಂಧ, ಓ ಯೆಹೋವ ನಿನ್ನಿಂದ.

    ನಮ್ಮ ಅನುಬಂಧ ನಿನ್ನಿಂದ.

    ನಿನ್ನಿಂದ,

    ಈ ಬಂಧ.