ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 124

ಅವರನ್ನು ಆದರದಿಂದ ಸತ್ಕರಿಸಿ

ಅವರನ್ನು ಆದರದಿಂದ ಸತ್ಕರಿಸಿ

(ಅಪೊಸ್ತಲರ ಕಾರ್ಯಗಳು 17:7)

1. ಯೆಹೋವನ ಆತಿಥ್ಯ ಹೃತ್ಪೂರ್ವಕ.

ತೋರಿಸನು ಆತ ಪಕ್ಷಪಾತವ.

ಕೊಡುತ್ತಾನೆ ಮಳೆ,

ಬಿಸಿಲು ಜನಕ್ಕೆ;

ಅನ್ನ, ತೃಪ್ತಿ ಆತನಿಂದಲೇ.

ಅನುಕರಿಸುತ್ತೇವೆ ಯೆಹೋವನ

ದೀನರಿಗೆ ಸಹಾಯ ಮಾಡುವಾಗ.

ನಮ್ಮ ಪಿತನಿಂದ ಬರುತೆ ವೇತನ,

ಹೃದ್ಯ ದಯೆ ತೋರಿಸುವಾಗ.

2. ಪ್ರತಿಫಲ ತಿಳಿಯದು ನಮಗೆ,

ನಾವು ಕೊಡುತ್ತಿರುವ ಆತಿಥ್ಯಕ್ಕೆ.

ಹೊಸಬರಾದರೂ

ಅವರು ನಮಗೆ,

ನಾವಾತಿಥ್ಯ ತೋರಿಸುತ್ತೇವೆ.

‘ಬಾ ಆಗು ಅತಿಥಿ’ ಎಂದಳು ಲುದ್ಯ.

ಅಂತೆಯೇ ನಾವು ಆತಿಥ್ಯ ತೋರೋಣ.

ನಮ್ಮ ಪಿತಗಿದೆ ತನ್ನಂತೆ ಆತಿಥ್ಯ

ಅಭ್ಯಾಸಿಗಳ ಪರಿಚಯ.