ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 120

ಆಲಿಸಿ, ಪಾಲಿಸಿ, ಹರಸಲ್ಪಡಿ

ಆಲಿಸಿ, ಪಾಲಿಸಿ, ಹರಸಲ್ಪಡಿ

(ಲೂಕ 11:28)

1. ನಮ್ಮ ಕ್ರಿಸ್ತ ಶಿಷ್ಯತನ ವ್ಯಕ್ತವೊ?

ಅದು ಬೆಳಗಿಸುತೆ ದಾರಿಯ.

ಅದನ್ನಾಲಿಸೋದು ಆಹ್ಲಾದಕರ,

ಪಾಲಿಸೋದು ಎಷ್ಟೋ ಶುಭಕರ.

(ಪಲ್ಲವಿ)

ಆಲಿಸಿ, ಪಾಲಿಸಿರಿ

ದೇವರ ಚಿತ್ತವನು.

ನೀವು ಹರಸಲ್ಪಡುವಿರಾಗ,

ಆಲಿಸಿ, ಪಾಲಿಸಿರಿ.

2. ಜೀವನ ರೀತಿ ಕಾಪಾಡುತ್ತದೆಮ್ಮ

ಬಂಡೆಯ ಮೇಲಿನ ಮನೆಯಂತೆ.

ಕ್ರಿಸ್ತನ ನುಡಿಯಂತೆ ನಡೆದರೆ

ನಮ್ಮ ಜೀವನ ಸ್ಥಿರವಾಗುತೆ.

(ಪಲ್ಲವಿ)

ಆಲಿಸಿ, ಪಾಲಿಸಿರಿ

ದೇವರ ಚಿತ್ತವನು.

ನೀವು ಹರಸಲ್ಪಡುವಿರಾಗ,

ಆಲಿಸಿ, ಪಾಲಿಸಿರಿ.

3. ನೀರ ಬಳಿಯ ಸುಸ್ಥಾಪಿತ ಮರ

ಸಕಾಲದಲ್ಲಿ ಕೊಡುತೆ ಫಲ.

ಮಕ್ಕಳಂತೆ ಆಜ್ಞೆ ಪಾಲಿಸುವಲ್ಲಿ

ಪಡೆಯುವೆವಾಗ ನಿತ್ಯಜೀವ.

(ಪಲ್ಲವಿ)

ಆಲಿಸಿ, ಪಾಲಿಸಿರಿ

ದೇವರ ಚಿತ್ತವನು.

ನೀವು ಹರಸಲ್ಪಡುವಿರಾಗ,

ಆಲಿಸಿ, ಪಾಲಿಸಿರಿ.