ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 53

ಐಕ್ಯದಿಂದ ಕೆಲಸ ಮಾಡುವುದು

ಐಕ್ಯದಿಂದ ಕೆಲಸ ಮಾಡುವುದು

(ಎಫೆಸ 4:3)

1. ತಂದಿದ್ದಾನೆ ನಮ್ಮ ದೇವ,

ತನ್ನ ಹಿಂಡಿನಲ್ಲಿ ನಮ್ಮ.

ನಮ್ಮ ಐಕ್ಯ, ಸಮಾಧಾನ

ತರುತೆ ಸಂತಸ.

ಐಕ್ಯ ನಮಗಿಷ್ಟ,

ಸಾಂಗ ತ್ಯ ಸವಿ.

ದೇವ ಸೇವೆ ಯು ವಿಪುಲ.

ಕ್ರಿಸ್ತ ಮೂಲಕ ಸಹಾಯ.

ವಿಧೇಯತೆ, ಸಾಮರಸ್ಯ,

ತೋರಿ ಸೇವಿಸೋಣ.

2. ಐಕ್ಯಮನಕ್ಕಾಗಿ ಬೇಡಿ,

ದಯಾಭಾವವ ತೋರಿಸಿ,

ಪ್ರೀತಿ, ಸ್ತುತಿಯ ಹೆಚ್ಚಿಸಿ,

ಶಾಂತಿ, ಹರ್ಷ ತನ್ನಿ.

ಶಾಂತಿ ಉತ್ತೇಜಕ,

ಹರ್ಷ ದಾಯಕ.

ಸೋದರ ಪ್ರೀತಿ ತೋರಿಸೆ,

ದಿವ್ಯ ಶಾಂತಿಯು ಸಿಗುತೆ.

ಈ ಐಕ್ಯ ಅನಂತ ಸೇವೆ

ಕೊಡುತೆ ನಮಗೆ.