ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 135

ಕಡೇ ವರೆಗೆ ತಾಳಿಕೊಳ್ಳುವುದು

ಕಡೇ ವರೆಗೆ ತಾಳಿಕೊಳ್ಳುವುದು

(ಮತ್ತಾಯ 24:13)

1. ದೇವವಾಗ್ದಾನ ಕೊಡುತೆ

ತಾಳಲು ಕಾರಣ.

ನೀವು ಕಲಿತ ವಿಷಯ

ನಡೆವುದು ನಿಶ್ಚಯ.

ಸ್ಥಿರ ನಿಲ್ಲಿ ನಂಬಿಕೇಲಿ,

ದೇವ ದಿನ ನಿಕಟ.

ಪರೀಕ್ಷೆ ನಿಮ್ಮ ತಿದ್ದುತೆ,

ತೋರಿಸಿ ಸಮಗ್ರತೆ.

2. ನಷ್ಟವಾಗದೆ ಇರಲಿ

ಮೊದಲಿದ್ದ ಪ್ರೀತಿ.

ಪರೀಕ್ಷೆ ಎಷ್ಟೇ ಬರಲಿ

ಅವನ್ನು ತಾಳಿಕೊಳ್ಳಿ.

ಯಾವ ಪರೀಕ್ಷೆ ಬಂದರೂ

ಬೇಡ ಸಂಶಯ, ಭೀತಿ.

ಯೆಹೋವ ಪಾರಾಗಿಸುವ,

ಆತನಿದ್ದಾನೆ ಬಳಿ.

3. ಕೊನೇ ತನಕ ತಾಳುವ

ಹೊಂದುವ ರಕ್ಷಣೆ.

ಜೀವದ ಪುಸ್ತಕದಲಿ,

ಅವನ ಹೆಸರಿದೆ.

ಹೀಗೆ ತಾಳುವ ಧ್ಯೇಯವು,

ಮುಟ್ಟಲಿ ತನ್ನ ಗುರಿ.

ಯಾಹು ಕೃಪೆ ಸವಿದಾಗ

ಆಗೋದು ಹರ್ಷ ಭರ್ತಿ.