ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 56

ದಯವಿಟ್ಟು ನನ್ನ ಪ್ರಾರ್ಥನೆಯನ್ನು ಲಾಲಿಸು

ದಯವಿಟ್ಟು ನನ್ನ ಪ್ರಾರ್ಥನೆಯನ್ನು ಲಾಲಿಸು

(ಕೀರ್ತನೆ 54)

1. ದಿವ್ಯ ಪಿತಾ, ಆಲಿಸೆನ್ನನ್ನು.

ನನ್ನ ದೇವಾ, ನಾ ನಿನ್ನ ಸೊತ್ತು.

ನಿನ್ನ ನಾಮ ಅದನುಪಮ.

(ಪಲ್ಲವಿ)

ಯೆಹೋವ ದೇವಾ, ಲಾಲಿಸೆನ್ನ.

2. ಈ ದಿನಕ್ಕೆ ದೇವಾ, ವಂದನೆ,

ಮಾರ್ಗದರ್ಶಿ, ಜೀವದಾತ ನೀ.

ಹರ್ಷಕರ ಪಾಲನೆ ನಿನ್ನ.

(ಪಲ್ಲವಿ)

ಯೆಹೋವ ದೇವಾ, ಲಾಲಿಸೆನ್ನ.

3. ನ್ಯಾಯಮಾರ್ಗ ನನ್ನ ಹಂಬಲ.

ಬೆಳಕಲ್ಲಿ ನೀ ನಡೆಸೆನ್ನ.

ಹೊರೆ ಹೊರಲು ನೀಡು ಬಲ.

(ಪಲ್ಲವಿ)

ಯೆಹೋವ ದೇವಾ, ಲಾಲಿಸೆನ್ನ.