ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 78

ದೀರ್ಘ ಸಹನೆ

ದೀರ್ಘ ಸಹನೆ

(ಗಲಾತ್ಯ 5:22)

1. ಯೆಹೋವ ಸರ್ವಶಕ್ತ

ಪರಿಶುದ್ಧ ನಾಮಾಸಕ್ತ.

ಆತನ ಮಹಾಪೇಕ್ಷೆ

ಅಪವಾದ ನಿವಾರಣೆ.

ಆತನ ದೀರ್ಘ ತಾಳ್ಮೆ

ಆದಿಯಿಂದ ಕಾಣುತೆ.

ತೋರಿಸಿದ್ದಾನೆ ತಾಳ್ಮೆ,

ಸುದೀರ್ಘ ಸಹನೆ.

ಸರ್ವಜನ ರಕ್ಷಣೆ,

ಇದೇ ಆತನ ಅಪೇಕ್ಷೆ.

ವ್ಯರ್ಥವಾಗದಿರುತೆ

ಈ ತಾಳ್ಮೆ, ದೀರ್ಘ ಸಹನೆ.

2. ದೀರ್ಘ ಸಹನೆ ಬೇಕು

ದಿವ್ಯ ಪಥದಲ್ಲಿರಲು.

ಹೃದಯದ ನೆಮ್ಮದಿ

ಕೊಡುತ್ತದೆ ಶಕ್ತಿಯನು.

ಜನರ ಸದ್ಗುಣವ

ನೋಡಲು ಬಯಸುತೆ,

ಸಮತೋಲನವನ್ನು

ಸಂಕಟದವೇಳೆ.

ಪವಿತ್ರಾತ್ಮ ಕೊಡುತೆ

ದೀರ್ಘ ಸಹನೆಯ ಗುಣ,

ಸಹಾಯವ ನೀಡುತೆ

ದೇವರ ಅನುಕರಿಸ.