ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 3

“ದೇವರು ಪ್ರೀತಿಯಾಗಿದ್ದಾನೆ”

“ದೇವರು ಪ್ರೀತಿಯಾಗಿದ್ದಾನೆ”

(1 ಯೋಹಾನ 4:​7, 8)

1. ಪ್ರೀತಿ ಸ್ವರೂಪಿಯ ಕರೆ:

‘ಬಾ ನಡೆ ನನ್ನ ಜೊತೆ.’

ದೇವರ, ಜನರ ಪ್ರೀತಿ

ಸತ್ಕಾರ್ಯ ಪ್ರೇರಿಸುತೆ.

ಇದು ಬಾಳಿನ ಕೀಲಿಕೈ,

ಬಾಳಿನ ಗುರಿ ಇದೇ.

ಮಾತಾಡುತೆ ನಮ್ಮ ದ್ವಾರಾ

ಪ್ರೀತಿ ಕ್ರಿಸ್ತನ ಹಾಗೆ.

2. ಸತ್ಯ ಪ್ರೇಮ ನಡೆಸುತೆ

ದಯೆ, ಪ್ರೀತಿಗಳಿಗೆ.

ನಾವು ಬೀಳೆ, ದೇವಶಕ್ತಿ

ನಮ್ಮನ್ನು ಮೇಲೆತ್ತುತೆ.

ಪ್ರೀತಿ ಮತ್ಸರರಹಿತ

ಎಲ್ಲವ ಸಹಿಸುತೆ.

ಸವಿಯೋಣ ನಿಜ ಪ್ರೀತಿ,

ಸೋದರ ಪ್ರೀತಿ ಜೊತೆ.

3. ಮುನಿಸು ದೂರವಿರಲಿ,

ವರ್ಜಿಸಿರಿ ಅದನ್ನು.

ದೇವರ ಮಾರ್ಗದರ್ಶನ

ಕಲಿಸುತೆ ಇದನ್ನು.

ದೇವರ, ನೆರೆಯವನ

ಪ್ರೀತಿಯ ಅಭ್ಯಾಸಿಸು.

ದೇವಸದೃಶ ಪ್ರೀತಿಯ

ಸದಾ ತೋರಿಸುತ್ತಿರು.