ಗೀತೆ 4
ದೇವರೊಂದಿಗೆ ಒಳ್ಳೆಯ ಹೆಸರನ್ನು ಮಾಡಿಕೊಳ್ಳುವುದು
1. ಈ ಜೀವಮಾನ, ಇದೆಮ್ಮ ಅಪೇಕ್ಷೆ.
ಮಾಡಿ ಹೆಸರು, ಪಾಲಿಸಿ ದೇವಾಜ್ಞೆ.
ದೇವೇಚ್ಛೆಯಂತೆಯೇ ನ್ಯಾಯವ ಪಾಲಿಸೆ.
ಆತನ ಹೃದ ಹರ್ಷಿಸುತೆ.
2. ಪ್ರಸಿದ್ಧ ನಾಮ ಗಳಿಸಿ ಲೋಕದಿ,
ಲೋಕ ಶ್ಲಾಘನೆ ಇಲ್ಲಿ ಸ್ವೀಕರಿಸಿ,
ಲೋಕದ ಮಿತ್ರತ್ವ ಅದು ನಿರರ್ಥಕ.
ದೇವಾನುಗ್ರಹ ಅರ್ಥಪೂರ್ಣ.
3. ನಮ್ಮ ನಾಮವ, ದೇವಸ್ಮರಣೆಗೆ
ಒಪ್ಪಿಸುತ್ತೇವೆ, ಜೀವಪುಸ್ತಕಕ್ಕೆ.
ಸತ್ಯವ ಸಾರುತ್ತ, ಆಧಾರ ನೀಡುತ್ತ,
ಇಟ್ಟು ಹೆಸರು ಸುರಕ್ಷಿತ.
(ಆದಿ. 11:4; ಜ್ಞಾನೋ. 22:1; ಮಲಾ. 3:16; ಪ್ರಕ. 20:15 ಸಹ ನೋಡಿ.)