ಗೀತೆ 6
ದೇವರ ಸೇವಕನ ಪ್ರಾರ್ಥನೆ
1. ಯೆಹೋವನೇ, ನಮ್ಮ ಪಿತನೇ,
ಘನಮಾನ ನಿನ್ನ ಹೆಸರಿಗೆ.
ನಿನ್ನ ಕರುಣೆ ಬಾಳುತ್ತದೆ,
ವಿಶ್ವಸನೀಯ, ನಿಶ್ಚಿತವೇ.
ವಿಶ್ವಾಸಾರ್ಹ, ನಿಶ್ಚಿತ,
ಬಾಳುತ್ತದೆ ಕರುಣೆ.
2. ತುಂಬೆಮ್ಮಲ್ಲಿ ಸತ್ಯಪ್ರೇಮವ,
ನಿನ್ನ ಚಿತ್ತ ಮಾಡಲು ಸಹಾಯ.
ಕುರಿ ಹುಡುಕು ಎಂಬ ಆಜ್ಞೆ
ಇಷ್ಟಕರವದು ನಮಗೆ.
ಇಷ್ಟಕರ ನಮಗೆ,
ಕುರಿ ಹುಡುಕೋ ಆಜ್ಞೆ.
3. ವಿವೇಕವ ನಮಗೆ ಕೊಡು,
ಈ ವರವ ಪ್ರೀತಿಜೊತೆ ಕೊಡು.
ಪ್ರೀತಿ ಕರುಣೆ ತೋರಿಸುತ್ತ,
ವಾಕ್ಯವ ಜನಕ್ಕೆ ಸಾರುತ್ತ.
ವಾಕ್ಯವನ್ನು ಸಾರುತ್ತ,
ತೋರಿ ಪ್ರೀತಿ, ಕರುಣೆ.
(ಕೀರ್ತ. 143:10; ಯೋಹಾ. 21:15-17; ಯಾಕೋ. 1:5 ಸಹ ನೋಡಿ.)