ಗೀತೆ 35
ದೈವಿಕ ತಾಳ್ಮೆಗಾಗಿ ಕೃತಜ್ಞತೆ
1. ಮಹಾ ಯೆಹೋವ ಸರ್ವಶಕ್ತ,
ನೀ ನ್ಯಾಯಪ್ರಿಯ ನಿಶ್ಚಯ.
ದುಷ್ಟತೆ ಭೂಮಿ ಮೇಲಿದೆ,
ಇದು ನಿನ್ನ ನೋಯಿಸುತೆ.
ನೀನಲ್ಲ ನಿಧಾನಿ ನಿಶ್ಚಯ,
ದುಷ್ಟಾಂತ್ಯ ಸನಿಹ ಖಚಿತ.
ನಮ್ಮ ನಿರೀಕ್ಷೆ ನಿನ್ನಲ್ಲೇ,
ಕೃತಜ್ಞರು ನಿನ್ನ ತಾಳ್ಮೆಗೆ.
2. ಸಹಸ್ರ ವರುಷ ನಿನಗೆ,
ಸಮಾನ ಒಂದು ದಿನಕ್ಕೆ.
ಕಾಲ ಓಡುತೆ ಅಂತ್ಯಕ್ಕೆ,
ಮುಟ್ಟೋದು ನಿಧಾನಿಸದೆ.
ನೀ ದುಷ್ಟತ್ವ ದ್ವೇಷಿಸಿದರೂ
ಹರ್ಷಿತನು ಪಾಪಿ ತಿರುಗೆ.
ನೀ ಕೊಟ್ಟ ನಿರೀಕ್ಷೆಗಾಗಿ,
ಕೃತಜ್ಞತಾ ಸ್ತುತಿ ನಿನಗೆ.
(ಲೂಕ 15:7; 2 ಪೇತ್ರ 3:8, 9 ಸಹ ನೋಡಿ.)