ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 84

“ನನಗೆ ಮನಸ್ಸುಂಟು”

“ನನಗೆ ಮನಸ್ಸುಂಟು”

(ಲೂಕ 5:13)

1. ಎಂಥ ಪ್ರೀತಿ ಕ್ರಿಸ್ತನದು!

ಬಂದನಾತ ಸ್ವರ್ಗ ಬಿಟ್ಟು.

ಜನರೊಂದಿಗಿದ್ದು

ಮಾದರಿಯಿಟ್ಟು

ನುಡಿದನು ಸತ್ಯವನು.

ಜನಕ್ಕೆ ಸಾಂತ್ವನ ಕೊಟ್ಟ,

ವಾಸಿಮಾಡಿದ ಜನರ.

ತನ್ನ ನಿಯೋಗದಂತೆ ನಡೆದು,

ಎಂದ: ‘ಉಂಟೆಂಗೆ ಮನಸ್ಸು.’

2. ಎಂಥ ಪ್ರೀತಿ ದೇವರದು!

ಆಳು ವರ್ಗದ ಏರ್ಪಾಡು.

ಜೊತೇಲಿ ಹರ್ಷದಿ

ಸೇವೆಯ ಮಾಡಿ

ದೀನಗೆ ಸಹಾಯ ಕೊಟ್ಟು.

ಸಹಾಯ ಬೇಕಿರುವವ

ನಮ್ಮ ನಿಜ ಪ್ರೀತಿ ಬಲ್ಲ.

ವಿಧವೆ, ಅನಾಥರು ಕೋರಲು,

ಹೇಳಿ: ‘ಉಂಟೆಂಗೆ ಮನಸ್ಸು.’