ಗೀತೆ 34
ನಮ್ಮ ಹೆಸರಿನ ಪ್ರಕಾರ ಜೀವಿಸುವುದು
1. ಮಹಾ ಯೆಹೋವ, ಸರ್ವಶಕ್ತ, ನಿತ್ಯ,
ನ್ಯಾಯ, ಪ್ರೀತೀಲಿ ನೀ ಅಸದೃಶ.
ಸತ್ಯದ ಬುಗ್ಗೆ, ವಿವೇಕದ ಮೂಲ,
ನೀನೆಮ್ಮ ಆಳುತ್ತೀ ಸ್ವರ್ಗದಿಂದ.
ನಿನ್ನ ಸೇವೆ ಎಷ್ಟೋ ಇಷ್ಟವೆಮಗೆ,
ರಾಜ್ಯ ಸತ್ಯವನ್ನು ಸಾರುತ್ತೇವೆ.
(ಪಲ್ಲವಿ)
ಸಾಕ್ಷಿಗಳಾಗೋ ಸುಯೋಗ ನಮ್ಮದು.
ನಮ್ಮ ಹೆಸರಂತೆ ಬಾಳುವೆವು!
2. ಪವಿತ್ರ ಸೇವೆ ನಮ್ಮ ಜೋಡಿಸುತೆ,
ಪ್ರೀತಿ, ಶಾಂತಿ ನಮ್ಮ ಕಟ್ಟುತ್ತದೆ.
ನಿನ್ನ ಮಹಿಮೆಯ ಸತ್ಯ ಬೋಧನೆ,
ಹರ್ಷದಿಂದೆಮ್ಮನ್ನು ತುಂಬಿಸುತೆ.
ನಾವು ಜ್ಞಾತರು ನಿನ್ನ ನಾಮದಿಂದ,
ವರ್ಧಿಸುವೆವು ನಿನ್ನ ಖ್ಯಾತಿಯ.
(ಪಲ್ಲವಿ)
ಸಾಕ್ಷಿಗಳಾಗೋ ಸುಯೋಗ ನಮ್ಮದು.
ನಮ್ಮ ಹೆಸರಂತೆ ಬಾಳುವೆವು!
(ಧರ್ಮೋ. 32:4; ಕೀರ್ತ. 43:3; ದಾನಿ. 2:20, 21 ಸಹ ನೋಡಿ.)