ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 69

ನಿನ್ನ ಮಾರ್ಗಗಳನ್ನು ನನಗೆ ತಿಳಿಸು

ನಿನ್ನ ಮಾರ್ಗಗಳನ್ನು ನನಗೆ ತಿಳಿಸು

(ಕೀರ್ತನೆ 25:4)

1. ಯೆಹೋವ ದೇವಾ, ಕೂಡಿ ಬಂದಿದ್ದೇವೆ

ಓಗೊಟ್ಟು ನಿನ್ನಾಮಂತ್ರಣಕೆ.

ನಿನ್ನ ವಾಕ್ಯವು ಚರಣಕ್ಕೆ ದೀಪ,

ದೈವಿಕ ಶಿಕ್ಷಣದ ಮೂಲ.

(ಪಲ್ಲವಿ)

ಕಲಿಸಪ್ಪಾ, ನಿನ್ನ ಮಾರ್ಗಗಳ,

ಆಲಿಸಲಿ ಕಿವಿ ನಿನ್ನಾಜ್ಞೆಯ.

ಸತ್ಯ ಮಾರ್ಗದಲ್ಲಿ ನಡಿಸೆನ್ನ,

ನಿನ್ನಾಜ್ಞೆ ತರಲೆನಗೆ ಹರ್ಷ.

2. ದೇವಾ, ನಿನ್ನ ವಿವೇಕವು ಅಗಮ್ಯ,

ನಿನ್ನ ತೀರ್ಪು ಆಶ್ವಾಸನೀಯ.

ನಿನ್ನ ವಾಕ್ಯವು ಸರ್ವದಾ ಸೋಜಿಗ,

ನಿನ್ನ ಹೇಳಿಕೆ ಸದಾ ಸತ್ಯ.

(ಪಲ್ಲವಿ)

ಕಲಿಸಪ್ಪಾ, ನಿನ್ನ ಮಾರ್ಗಗಳ,

ಆಲಿಸಲಿ ಕಿವಿ ನಿನ್ನಾಜ್ಞೆಯ.

ಸತ್ಯ ಮಾರ್ಗದಲ್ಲಿ ನಡಿಸೆನ್ನ,

ನಿನ್ನಾಜ್ಞೆ ತರಲೆನಗೆ ಹರ್ಷ.