ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 93

‘ನಿಮ್ಮ ಬೆಳಕು ಪ್ರಕಾಶಿಸಲಿ’

‘ನಿಮ್ಮ ಬೆಳಕು ಪ್ರಕಾಶಿಸಲಿ’

(ಮತ್ತಾಯ 5:16)

1. ‘ಬೆಳಕನ್ನು ಬೀರಿ’ ಎಂದನು ಯೇಸು,

ಬೆಳಕೆಲ್ಲರಿಗೂ ಸಿಗಲಿ ಎಂದು.

ಲಭ್ಯ ವಿವೇಕವು ಶಾಸ್ತ್ರ ಮುಖೇನ,

ಬಿಂಬಿಸೋಣ ಅದನ್ನು ಕಾರ್ಯಗಳಿಂದ.

2. ವಾರ್ತೆ ಹೃದಯವ ತಲಪುವಾಗ,

ತರುತೆ ಸಾಂತ್ವನ, ಸುನಿರೀಕ್ಷೆಯ.

ಶಾಸ್ತ್ರ ಜ್ಯೋತಿ ನಮ್ಮ ನಡೆಸುವಾಗ,

ಸುನುಡಿ ಮಾಡುತ್ತದೆ ಹೆಚ್ಚು ಉಜ್ವಲ.

3. ಸತ್ಕಾರ್ಯದ ಜ್ಯೋತಿ ಮಾತುಗಳಿಗೆ,

ಹೊಳಪು ಕೊಡುತೆ ಮುತ್ತಿನ ಹಾಗೆ.

ಹೊಳೆಯಲಿ ಅದು ಸತ್ಕಾರ್ಯದಲಿ,

ದೇವರಿಗದು ಸದಾ ಮಾನ ತರಲಿ.