ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 72

ಪ್ರೀತಿಯ ಗುಣವನ್ನು ಬೆಳೆಸುವುದು

ಪ್ರೀತಿಯ ಗುಣವನ್ನು ಬೆಳೆಸುವುದು

(1 ಕೊರಿಂಥ 13:1-8)

1. ದೇವರ ಗುಣಾನುಸರಣೆ,

ಇದೆಮ್ಮ ದೈನ್ಯದ ಪ್ರಾರ್ಥನೆ.

ಇವುಗಳಲ್ಲಿ ಶ್ರೇಷ್ಠ ಗುಣ

ಪ್ರೀತಿಯೆಂಬ ಆತ್ಮ ಫಲಾಂಶ.

ನಮ್ಮಲ್ಲಿ ಕೌಶಲವಿದ್ದೀತು,

ಪ್ರೀತಿಯ ವಿನಾ ವ್ಯರ್ಥವದು.

ವರ್ಧಿಸೆ ಬಾಳುವ ಪ್ರೀತಿಯ

ದೇವರ ಮೆಚ್ಚಿಸುವೆವಾಗ.

2. ಸಾಲದೆಮ್ಮ ಮನೋಪಯೋಗ

ಕುರಿಗಳ್ಗೆ ಬೋಧಿಸುವಾಗ.

ನಡೆನುಡಿಯ ಪ್ರೀತಿ ಬೇಕು

ಉಣಿಸುವಾಗ ವಾಕ್ಯವನು.

ಪ್ರೀತಿ ತಪ್ಪನ್ನು ಸಹಿಸುತೆ

ಭಾರದ ಹೊರೆಯ ಹೊರುತೆ.

ಹೀಗೆ ಪ್ರತಿ ಸಂಕಟದಲಿ

ಬಿದ್ದುಹೋಗದು ನಮ್ಮ ಪ್ರೀತಿ.