ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 99

ಭೂಮಿಯ ಹೊಸ ಅರಸನನ್ನು ಸ್ತುತಿಸುವುದು

ಭೂಮಿಯ ಹೊಸ ಅರಸನನ್ನು ಸ್ತುತಿಸುವುದು

(ಪ್ರಕಟನೆ 7:9)

1. ಸರ್ವ ದೇಶೀಯ ಜನಸ್ತೋಮ

ಕೂಡಿ ಬರುತ್ತಿದೆ,

ಕ್ರಿಸ್ತನೂ ಅಭಿಷಿಕ್ತರೂ

ಒಟ್ಟುಗೂಡಿಸುತ್ತಾರೆ.

ದೇವರ ರಾಜ್ಯ ಹುಟ್ಟಿದೆ;

ದೇವಚಿತ್ತ ಆಗಲಿದೆ.

ಈ ಶ್ರೇಷ್ಠ ನಿರೀಕ್ಷಾ ದೇಣಿಗೆ

ಹರ್ಷ, ಸಾಂತ್ವನ ಕೊಡುತೆ.

(ಪಲ್ಲವಿ)

ಕೊಡು ಯೆಹೋವಗೂ

ಕ್ರಿಸ್ತನಿಗೂ ಸ್ತುತಿ.

ಕೊಟ್ಟಿರ್ವ ವಿಮೋಚನೆಗಾಗಿ.

ಭೂನಿತ್ಯಜೀವ, ದೇವರ ಸೇವೆ

ನಿರೀಕ್ಷೆಗಳಿಗಾಗಿ.

2. ಆಳುವ ಕ್ರಿಸ್ತಗೆ ಜಯ,

ಇದೆಮ್ಮ ಜಯ ಘೋಷ.

ಶಾಂತಿ ಪ್ರಭು ಮಾಡಿ ದೇವಚಿತ್ತ

ರಕ್ಷಿಸೋನೆಮ್ಮ.

ಸಂತೋಷ ನಮ್ಮ ಮುಂದಿದೆ.

ಭಯಭೀತಿ ಹೋಗಲಿದೆ.

ಸತ್ತವರ ಪುನರುತ್ಥಾನ.

ಎಂಥ ಹರ್ಷೋಲ್ಲಾಸ ಕಾಲ!

(ಪಲ್ಲವಿ)

ಕೊಡು ಯೆಹೋವಗೂ

ಕ್ರಿಸ್ತನಿಗೂ ಸ್ತುತಿ.

ಕೊಟ್ಟಿರ್ವ ವಿಮೋಚನೆಗಾಗಿ.

ಭೂನಿತ್ಯಜೀವ, ದೇವರ ಸೇವೆ

ನಿರೀಕ್ಷೆಗಳಿಗಾಗಿ.