ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 45

ಮುನ್ನಡೆ!

ಮುನ್ನಡೆ!

(ಇಬ್ರಿಯ 6:1)

1. ಮುನ್ನಡೆ, ಮುನ್ನಡೆ, ಪ್ರೌಢ ಸ್ಥಿತಿಗೆ.

ಸಾಮರ್ಥ್ಯ ಗಳಿಕೆ, ಇದು ದೇವರ ಇಚ್ಛೆ.

ಸೇವೇಲಿ ಪ್ರಗತಿ ಮಾಡುತ್ತಲಿರು,

ದೇವರು ಹರಸ್ವನು.

ಸೇವೇಲಿ ಸರ್ವರ್ಗೆ ಪಾಲಿದೆ.

ಕ್ರಿಸ್ತನು ಮಾಡಿದ ಇದನ್ನೇ.

ದೇವರ ನೋಡುತ್ತ ಇರು ಬೀಳದೆ,

ಅಂಟಿಕೋ ನೀ ನೀತಿಗೆ.

2. ಮುನ್ನಡೆ, ಮುನ್ನಡೆ, ಧೈರ್ಯಗುಂದದೆ.

ನಿತ್ಯವಾರ್ತೆ ಸಾರು ಸಕಲ ಜನರಿಗೆ.

ಸ್ತುತಿಯ ಹಾಡುತ್ತ ದೇವರಾಜಗೆ,

ಹೋಗು ಮನೆಮನೆಗೆ.

ಬೆದರಿಸುವರು ದುಷ್ಟರು.

ಹಿಮ್ಮೆಟ್ಟದೆ ಸಾಕ್ಷಿಯ ನೀಡು.

ರಾಜ್ಯವಿಲ್ಲಿದೆ ಎಂಬ ಹರ್ಷವಾರ್ತೆ

ಬೋಧಿಸು ಸರ್ವರಿಗೆ.

3. ಮುನ್ನಡೆ, ಮುನ್ನಡೆ, ಪುನರ್ಭೇಟಿಗೆ,

ಕೆಲಸ ಬಹಳ, ತೋರಿಸು ಕುಶಲತೆ.

ಪವಿತ್ರ ಆತ್ಮ ಪ್ರೇರಿಸಲಿ ನಿನ್ನ,

ಪಡೆ ನೀ ದಿವ್ಯಾನಂದ.

ಕಂಡುಕೊಂಡವರ ಪ್ರೀತಿಸು.

ಹೋಗು, ಹೃದಯವ ಸ್ಪರ್ಶಿಸು.

ಪ್ರಗತಿ ಹೊಂದಲು ನೀಡು ಸಹಾಯ,

ಸತ್ಯ ಬೆಳಗೋದಾಗ.