ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 51

ಯೆಹೋವನಿಗೆ ಅಂಟಿಕೊಳ್ಳುತ್ತೇವೆ

ಯೆಹೋವನಿಗೆ ಅಂಟಿಕೊಳ್ಳುತ್ತೇವೆ

(ಯೆಹೋಶುವ 23:8)

1. ಪರಮ ಪ್ರಭು ಯೆಹೋವ ಸ್ತುತಿಗೆ ಅರ್ಹ.

ಆತನ ನ್ಯಾಯ ಅದೆ ಷ್ಟೋ ಅವಿಚಲಿತ.

ಸುಳ್ಳಾಗದೆಂದಿ ಗೂ ಆತನ ವಚನ.

ಅಂಟಿಕೊಳ್ಳುವೆವು ನಾವಾತಗೆ ಸದಾ.

ಆತನಾಳ್ವಿಕೆ ತರೋ ದು ಪ್ರಯೋಜನ.

2. ದೇವ ಸಿಂಹಾಸನ ಸತ್ಯ, ನ್ಯಾಯಾಧಾರಿತ.

ಆತನ ನಿವಾಸ ಮಹಿಮೆಯಿಂದಾವೃತ.

ಆತನ ಕರೆಗೆ ದೀನ ಪ್ರವಹಿಸಿ,

ಅಂಟಿಕೊಳ್ಳುತ್ತಾನೆ ಆಜ್ಞೆಯ ಪಾಲಿಸಿ.

ಯೆಹೋವ ಅರ್ಹ ಆರಾಧನೆಗೆ ಖಾತ್ರಿ.

3. ಉನ್ನತ ಆಕಾಶ ಆತನಿಗೆ ಸಾಲದು.

ಇಲ್ಲ ಆತನನ್ನು ಎದುರಿಸುವ ಶ ತ್ರು.

ಆತ ಈಡೇರಿಸ್ವನು ವಚನಗಳ.

ಅಂಟಿಕೊಳ್ಳುವ ಮಾಡಿ ಯೆಹೋವ ಚಿತ್ತ,

ಆಗಲಿ ನಮ್ಮ ಭಕ್ತಿ ಹೆಚ್ಚೆಚ್ಚು ದೃಢ.