ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 67

ಯೆಹೋವನಿಗೆ ಪ್ರತಿ ದಿನವೂ ಪ್ರಾರ್ಥಿಸಿರಿ

ಯೆಹೋವನಿಗೆ ಪ್ರತಿ ದಿನವೂ ಪ್ರಾರ್ಥಿಸಿರಿ

(1 ಥೆಸಲೊನೀಕ 5:17)

1. ಪ್ರಾರ್ಥಿಸಿ ಯೆಹೋವ ಕೇಳುಗಗೆ.

ಆ ಸುಯೋಗ ನಮಗಿದೆ ಖರೆ.

ಮಾತಾಡೋಣ ನಮ್ಮ ಮನಬಿಚ್ಚಿ,

ಸದಾ ಆತನನ್ನು ಆಶ್ರಯಿಸಿ.

ಪ್ರಾರ್ಥಿಸಿ ಪ್ರತಿ ದಿನ.

2. ಪ್ರಾರ್ಥಿಸಿ ಕೃತಜ್ಞತೆ ತೋರಿಸಿ,

ಆತನ ಕ್ಷಮಾಪಣೆಯ ಕೋರಿ.

ಮಾಡೋಣ ಪಾಪದ ನಿವೇದನೆ.

ಆತ ಬಲ್ಲ ನಮ್ಮ ದುರ್ಬಲತೆ.

ಪ್ರಾರ್ಥಿಸಿ ಪ್ರತಿ ದಿನ.

3. ಪ್ರಾರ್ಥಿಸಿ ಸಂಕಟದ ಸಮಯ.

ನಮ್ಮ ಪಿತನಿದ್ದಾನೆ ಸನಿಹ.

ಆತನ ರಕ್ಷಣೆ ಪಡೆಯುತ್ತಾ

ಆತನಲ್ಲಿಡೋಣ ಭರವಸ.

ಪ್ರಾರ್ಥಿಸಿ ಪ್ರತಿ ದಿನ.