ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 27

ಯೆಹೋವನ ಪಕ್ಷವಹಿಸು!

ಯೆಹೋವನ ಪಕ್ಷವಹಿಸು!

(ವಿಮೋಚನಕಾಂಡ 32:26)

1. ನಮ್ಮ ಹೃದವೊಮ್ಮೆ ಭ್ರಾಂತಿಯಿಂದ,

ಸೆರೆಯಲ್ಲಿತ್ತು ಮಿಥ್ಯಾಧರ್ಮದ.

ದೇವರಾಜ್ಯ ವಾರ್ತೆ ತಿಳಿದಾಗ,

ಹರ್ಷಿಸಿತು ಹೃದಯ.

(ಪಲ್ಲವಿ)

ಯೆಹೋವ ಪಕ್ಷದಿ

ನೀ ನಿಂತುಕೊಳ್ಳು.

ನಿನ್ನ ಕೈಯನ್ನಾತ

ಬಿಡನೆಂದಿಗೂ.

ವಿಮೋಚನೆ, ಶಾಂತಿ

ಸಾರುತ್ತಲಿರು.

ಕ್ರಿಸ್ತನ ಆಳ್ವಿಕೆ

ವರ್ಧಿಸುವುದು.

2. ರಾಜ್ಯ ಸೇವೇಲಿ ಹರ್ಷಿಸುತ್ತೇವೆ,

ಸತ್ಯದ ಬೀಜವ ಬಿತ್ತುತ್ತೇವೆ.

ಆತನ ಸದ್ಗುಣ ಸ್ತುತಿಸುತ್ತ,

ಕೊಡುವೆವು ಸಹಾಯ.

(ಪಲ್ಲವಿ)

ಯೆಹೋವ ಪಕ್ಷದಿ

ನೀ ನಿಂತುಕೊಳ್ಳು.

ನಿನ್ನ ಕೈಯನ್ನಾತ

ಬಿಡನೆಂದಿಗೂ.

ವಿಮೋಚನೆ, ಶಾಂತಿ

ಸಾರುತ್ತಲಿರು.

ಕ್ರಿಸ್ತನ ಆಳ್ವಿಕೆ

ವರ್ಧಿಸುವುದು.

3. ಪಿಶಾಚಗೆ ನಾವೆಂದೂ ಅಂಜೆವು,

ಯೆಹೋವ ರಕ್ಷಿಸುವ ನಮ್ಮನ್ನು.

ವಿರೋಧಿ ಸಂಖ್ಯೆಯು ಹೆಚ್ಚಿದ್ದರೂ

ದೇವರೆಮ್ಮ ಬಲವು.

(ಪಲ್ಲವಿ)

ಯೆಹೋವ ಪಕ್ಷದಿ

ನೀ ನಿಂತುಕೊಳ್ಳು.

ನಿನ್ನ ಕೈಯನ್ನಾತ

ಬಿಡನೆಂದಿಗೂ.

ವಿಮೋಚನೆ, ಶಾಂತಿ

ಸಾರುತ್ತಲಿರು.

ಕ್ರಿಸ್ತನ ಆಳ್ವಿಕೆ

ವರ್ಧಿಸುವುದು.